ಕೊರಗ ಕುಟುಂಬಕ್ಕೆ ನಿವೇಶನ: ಶಾಸಕರ ಕ್ಷಿಪ್ರ ಸ್ಪಂದನ
Team Udayavani, Jul 23, 2017, 8:45 AM IST
ಬೆಳ್ತಂಗಡಿ: ಕಲ್ಮಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಜಿರಡ್ಕದಲ್ಲಿ ಅಕೇಶಿಯಾ ಕಾಡಿನಲ್ಲಿ ಟರ್ಪಾಲು ಟೆಂಟ್ ಹಾಕಿ ವಾಸಿಸುತ್ತಿದ್ದ ಕೊರಗ, ಮೊಗೇರ, ಮಲೆಕುಡಿಯ ಕುಟುಂಬದ ಐದೂ ಮಂದಿಗೆ ಸೋಮವಾರ ಶಾಸಕ ಕೆ. ವಸಂತ ಬಂಗೇರ ಅವರು ನಿವೇಶನ ಮಂಜೂರಾತಿ ಪತ್ರ ಹಸ್ತಾಂತ ರಿಸಲಿದ್ದಾರೆ.
ಉದಯವಾಣಿ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟ ವಾದುದನ್ನು ಗಮನಿಸಿ ತತ್ಕ್ಷಣ ಸಂಬಂಧಪಟ್ಟವರನ್ನು ಕರೆಸಿದ ಶಾಸಕರು ಅವರಿಗೆ ಇಂದೇ ನಿವೇಶನ ಸಿದ್ಧಪಡಿಸಿ ಕೊಡಬೇಕೆಂದು ತಾಕೀತು ಮಾಡಿದರು.
1 ವಾರದಲ್ಲಿ ಪ್ರತಿ ಮನೆಯವರಿಗೂ ತಲಾ 2 ಲಕ್ಷ ರೂ.ಗಳಂತೆ ಅನುದಾನ ಮಂಜೂರು ಮಾಡಿಸಿ ಮನೆ ಕಟ್ಟಲು
ಸಹಕಾರ ನೀಡುವುದಾಗಿ ಉದಯವಾಣಿಗೆ ಪ್ರತಿಕ್ರಿಯಿಸಿದರು. ಪತ್ರಿಕೆಯಲ್ಲಿ ಈ ಕುರಿತು ಕಾಳಜಿಯಿಂದ ವರದಿ ಪ್ರಕಟಿಸಿದ್ದಕ್ಕೆ ಪತ್ರಿಕೆಯನ್ನು ಅಭಿನಂದಿಸಿದರು. ಪತ್ರಿಕಾ ವರದಿ ಓದಿದ ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತನಾಗಿದ್ದೇನೆ ಎಂದರು.
ಉಜಿರೆ ಧರ್ಮಸ್ಥಳ ರಸ್ತೆ ಅಥವಾ ಉಜಿರೆ ಚಾರ್ಮಾಡಿ ರಸ್ತೆಯಿಂದ ಸಮಾನವಾಗಿ 3 ಕಿ.ಮೀ. ದೂರದಲ್ಲಿ. ಕಲ್ಮಂಜ ಗ್ರಾ.ಪಂ. ಸರಹದ್ದಿನ ಪಜಿರಡ್ಕ ಎಂಬಲ್ಲಿ ಸರಕಾರಿ ಕಾಡಿನಲ್ಲಿ ಸೂರಿನ ಆಸರೆಯ ನಿರೀಕ್ಷೆಯಲ್ಲಿ ಕೊರಗುತ್ತಿದ್ದ ಕುಟುಂಬಗಳ ಬಗ್ಗೆ ಉದಯವಾಣಿ ವರದಿ ಮಾಡಿತ್ತು. ಇವರಿಗೆ ಸರಕಾರದ ಮನೆ, ನಿವೇಶನ, ಶೌಚಾಲಯ, ಪಡಿತರ ಚೀಟಿ, ಚುನಾವಣಾ ಗುರುತುಪತ್ರ ಸಿಕ್ಕಿಲ್ಲ. ಆಧಾರ್ ಕಾರ್ಡು ಬಿಟ್ಟರೆ ಬೇರೇನಿಲ್ಲ. ಸುಶೀಲಾ, ದೇವಕಿ, ಥಾಮಸ್, ಲಕ್ಷ್ಮೀ ಮಲೆಕುಡಿಯ, ಕಮಲ ಮೊಗೇರ ಅವರ ಮನೆಗಳಿವೆ. ಶಾಸಕರ ತತ್ಕ್ಷಣದ ಸ್ಪಂದನೆ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ. ಆದರೆ ಒಬ್ಬೇ ಒಬ್ಬ ಅಧಿಕಾರಿ ಘಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿಲ್ಲ. ಈ ಮೊದಲೇ ದಲಿತರ ಕುಂದು ಕೊರತೆ ಸಭೆಯಲ್ಲಿ ಪ್ರಸ್ತಾಪವಾದಾಗಲೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಉದಯವಾಣಿ ವರದಿ ಬಳಿಕವೇ ಇವರ ಕೂಗಿಗೆ ಕೊರಳು ದೊರೆತದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್ನ ಬಾತ್ರೂಮ್ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.