ಶಾರುಖ್ ಅನಂತರ ಬಚ್ಚನ್ ಕುಟುಂಬಕ್ಕೂ ನೋಟಿಸ್
Team Udayavani, Jul 23, 2017, 8:20 AM IST
ಮುಂಬಯಿ: ವಿದೇಶ ವಿನಿಮಯಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ ಜಾರಿ ನಿರ್ದೇಶನಾಲಯ (ಇ.ಡಿ.)ದಿಂದ ಸಮನ್ಸ್ ಪಡೆಯುವುದಕ್ಕೆ ತಿಂಗಳ ಮೊದಲೇ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕುಟುಂಬದ ಎಲ್ಲ ಸದಸ್ಯರು ಹಾಗೂ ಅಜಯ್ ದೇವ್ಗನ್ ಅವರಿಂದಲೂ ವಿದೇಶ ವಿನಿಮಯದ ಮಾಹಿತಿ ಕೋರಿ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದ್ದ ವಿಷಯ ಬಹಿರಂಗಗೊಂಡಿದೆ.
ಬಿಗ್-ಬಿ ಅಮಿತಾಭ್ ಬಚ್ಚನ್, ಪತ್ನಿ ಜಯಾ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್ ಹಾಗೂ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರಿಗೆ ವಿದೇಶ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ನೋಟಿಸ್ ನೀಡಿರುವ ಜಾರಿ ನಿರ್ದೇಶ ನಾಲಯ, ಕಳೆದ 13 ವರ್ಷಗಳಲ್ಲಿ ಅವರು ದೇಶದ ಗಡಿಯಾಚೆಗೆ ನಡೆಸಿದ ಹಣಕಾಸು ವ್ಯವಹಾರ, ಹೂಡಿಕೆಗಳ ಕುರಿತು ಮಾಹಿತಿ ನೀಡುವಂತೆ ತಿಳಿಸಿದೆ. ಆರ್ಬಿಐ 2004ರಲ್ಲಿ ಲಿಬರಲೈಸ್ಡ್ ರೆಮಿಟೆನ್ಸ್ ಸ್ಕೀಮ್ (ಎಲ್ಆರ್ಎಸ್) ಜಾರಿಗೊಳಿಸಿದ ಅನಂತರದ ವ್ಯವಹಾರಗಳ ಮಾಹಿತಿ ನೀಡಿಲ್ಲ. ಹೀಗಾಗಿ ಬಚ್ಚನ್ ಕುಟುಂಬವನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.