ನಾಯಕರ ಸ್ವಾರ್ಥಕ್ಕೆ ದಲಿತ ಚಳವಳಿ ಬಲಿ
Team Udayavani, Jul 23, 2017, 11:20 AM IST
ಬೆಂಗಳೂರು: ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಕಾರ್ಯರೂಪಕ್ಕೆ ತರಲು ಹುಟ್ಟಿಕೊಂಡ ದಲಿತ ಚಳವಳಿ ವಿಘಟನೆಗೆ ಸಿದ್ಧಾಂತ ಅಲ್ಲ, ನಾಯಕರ ಸ್ವಾರ್ಥ ಕಾರಣ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಅಭಿಪ್ರಾಯಪಟ್ಟಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಶನಿವಾರ ಬೆಂಗಳೂರು ಕೃಷಿ ವಿವಿ ಆವರಣದ ಬಿ-5 ವೇದಿಕೆಯಲ್ಲಿ ಆಯೋಜಿಸಿದ್ದ “ಅಂಬೇಡ್ಕರ್ ವಾದ ಮತ್ತು ಕರ್ನಾಟಕದಲ್ಲಿ ದಲಿತ ಚಳವಳಿ ಯಶೋಗಾಥೆ’ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ಅವರು, ದಲಿತ ಸಂಘಟನೆಗಳ ನಾಯಕರ ಸ್ವಾರ್ಥ ಮತ್ತು ವೈಯಕ್ತಿಕ ವಿಚಾರಗಳ ಕಾರಣಕ್ಕಾಗಿ ದಲಿತ ಚಳವಳಿ ಒಡೆದು ಹೋಯಿತು ಎಂದರು.
ದಲಿತ ಮುಖಂಡ ಎನ್. ಮುನಿಸ್ವಾಮಿ ಮಾತನಾಡಿ, ಅಂಬೇಡ್ಕರ್ ವಾದವನ್ನು ಮುನ್ನಡೆಸುತ್ತಿರುವವರನ್ನು ಇಂದು ಮನುವಾದ ನಿಯಂತ್ರಿಸುತ್ತಿದೆ. ಅಂಬೇಡ್ಕರ ವಾದಿಗಳಿಗೆ ಮನುವಾದ ಅರ್ಥ ಮಾಡಿಕೊಳ್ಳಲು ಈಗಲೂ ಆಗಿಲ್ಲ. ಮನುವಾದ ಅರ್ಥ ಮಾಡಿಕೊಳ್ಳದೇ ಅಂಬೇಡ್ಕರವಾದ ಕಾರ್ಯರೂಪಕ್ಕೆ ತರುವುದು ಕಷ್ಟ ಎಂದರು.
ದಸಂಸ (ಸಮತವಾದ) ರಾಜ್ಯ ಸಂಚಾಲಕ ಮೋಹನ್‌ರಾಜ್ ಮಾತನಾಡಿ, ಎಪ್ಪತ್ತರ ದಶಕದ ನಂತರ ಅಂಬೇಡ್ಕರ್ ಆಶಯಗಳನ್ನು ಅಂತರಾಳದಲ್ಲಿ ಇಟ್ಟುಕೊಳ್ಳಲು ದಲಿತ ಚಳವಳಿ ಸೋತು ಹೋಗಿದೆ ಎಂದರು. ಗೋಷ್ಠಿಯಲ್ಲಿ ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಡಿ.ಜಿ. ಸಾಗರ್, ಇಂದಿರಾ ಕೃಷ್ಣಪ್ಪ, ಎನ್. ಮೂರ್ತಿ ಮತ್ತಿತರರು ವಿಷಯ ಮಂಡಿಸಿದರು. ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು.
ಭಾರತ ವಿಚಿತ್ರ ಸನ್ನಿವೇಶದಲ್ಲಿದ್ದು, ಅಂಬಾನಿ ಮತ್ತು ದೇಶದ ಬಡ ರೈತ ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಆರ್ಥಿಕತೆ ಅಳೆಯಲಾಗುತ್ತಿದೆ.
-ಶ್ರೀರಾಮರೆಡ್ಡಿ, ಸಿಪಿಐ ನಾಯಕ .
ರಾಜ್ಯದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಿದಾಗ ಸುಪ್ರೀಂಕೋರ್ಟ್ ಅದನ್ನು ತಳ್ಳಿ ಹಾಕಿತು ಅದೇ ರೀತಿ ಗ್ರಾಮೀಣ ಕೃಪಾಂಕವನ್ನೂ ತೆಗೆದು ಹಾಕಿ ಎಲ್ಲರೂ ಸಮಾನರು ಎಂದು ಹೇಳಿತು. ಆದರೆ, ಸಾಮಾಜಿಕ ನ್ಯಾಯ ಬರಬೇಕಾದರೆ, ಹಳ್ಳಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಬಡ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕಾಗಿರುವುದು ಸಂಸತ್ತಿನ ಜವಾಬ್ದಾರಿ. ಸಂಸತ್ತು ಆ ಕೆಲಸ ಮಾಡುವ ಬದಲು ಕೋರ್ಟ್‌ಗೆ ಹೆದರಿ ಸುಮ್ಮನಾಗಿದೆ.
-ಬಿ.ಎಲ್.ಶಂಕರ್ ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
MUST WATCH
ಹೊಸ ಸೇರ್ಪಡೆ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.