ಮಾದಕ ವ್ಯಸನಗಳಿಗೆ ಸೋಲಬೇಡಿ: ನ್ಯಾ| ದಾಕ್ಷಾಯಿಣಿ
Team Udayavani, Jul 23, 2017, 11:54 AM IST
ಕಲಘಟಗಿ: ಉಜ್ವಲ ಭವಿಷ್ಯ ನಿರ್ಮಿಸುವ ವಿದ್ಯಾರ್ಥಿ ಜೀವನದಲ್ಲಿ ಮಾದಕ ವ್ಯಸನಗಳಿಗೆ ಮನಸೋಲದೆ ರಾಷ್ಟ್ರ ನಿರ್ಮಾಣದ ಕಾಯಕದತ್ತ ಸಾಗಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶೆ ದಾಕ್ಷಾಯಿಣಿ ಜಿ.ಕೆ. ಕಿವಿಮಾತು ಹೇಳಿದರು. ದಾಸ್ತಿಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ಆವರಣಗಳಲ್ಲಿ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು ತಮ್ಮ ಮೋಜಿಗೋಸ್ಕರ ರ್ಯಾಗಿಂಗ್ ಮಾಡುವುದು ಕಾನೂನುಬಾಹಿರ. ಕುತೂಹಲಕ್ಕಾಗಿ ಮಾದಕ ವಸ್ತುಗಳನ್ನು ಬಳಸುವ ಯುವ ಜನಾಂಗ ನಂತರದ ದಿನಗಳಲ್ಲಿ ವ್ಯಸನಗಳಿಗೆ ಆಧೀನರಾಗಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಾರೆ.
ಯುವಸಮೂಹ ವ್ಯಸನ ತಡೆಗಟ್ಟುವಲ್ಲಿ ಸಹಕರಿಸಬೇಕೆಂದರು. ಕಿರಿಯ ದಿವಾಣಿ ನ್ಯಾಯಾ ಧೀಶ ಗಿರಿಗೌಡ ಬಿ. ಮಾತನಾಡಿ, ಮಾದಕ ವಸ್ತುಗಳ ಸೇವನೆಗೆ ಅಂಟಿಕೊಂಡಿರುವ ಪ್ರಕರಣಗಳಿಗೂ ಅಪಘಾತ ಮತ್ತು ಅಪರಾಧಗಳ ಪ್ರಮಾಣ-ತೀವ್ರತೆಗೂ ನೇರ ಸಂಬಂಧವಿದೆ. ಯುವ ಜನತೆ ಒಳ್ಳೆಯ ವಿಚಾರಗಳಿಂದ ಸುಂದರ ಸಮಾಜ ನಿರ್ಮಿಸುವತ್ತ ಯೋಚಿಸಬೇಕು ಎಂದರು.
ಮಾನಸಿಕ ಆರೋಗ್ಯ ತಜ್ಞ ಡಾ| ಶಿವಶಂಕರ ಪೋಳ ಉಪನ್ಯಾಸ ನೀಡಿ, ಸಂತೋಷಕ್ಕೆ ಆಲ್ಕೋಹಾಲ್ ಸೇವನೆಯೊಂದೇ ಮಾರ್ಗವಲ್ಲ. ಮಾನವ ತಾನು ಅನುಭವಿಸುವ ಸಂತೋಷ ಮತ್ತು ದುಃಖ ಎರಡರ ಆಚರಣೆಗೂ ಮದ್ಯಪಾನಕ್ಕೆ ಶರಣಾಗುತ್ತಿರುವುದು ವಿಷಾದನೀಯ. ಮದ್ಯ ವ್ಯಸನ ಬಿಡಿಸಲು ಆಪ್ತ ಸಮಾಲೋಚನೆಯೇ ಬಹುಮುಖ್ಯ ಮಾರ್ಗವಾಗಿದೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ದೊಡ್ಡಗೌಡ್ರ, ವಕೀಲರ ಸಂಘದ ನೂತನ ಅಧ್ಯಕ್ಷ ಎಸ್.ಜೆ. ಸುಂಕದ, ತಾಲೂಕಾ ಆರೋಗ್ಯಾ ಧಿಕಾರಿ ಡಾ| ಪಿ.ವಿ. ಕಾಡರಕೊಪ್ಪ ಹಾಗೂ ತಾಲೂಕಾ ಆರೋಗ್ಯ ಶಿಕ್ಷಣಾ ಧಿಕಾರಿ ಭರತ ಬಹುರೂಪಿ ಮಾತನಾಡಿದರು. ಪಿಎಸ್‌ಐ ಪರಮೇಶ್ವರ ಕವಟಗಿ ಉಪನ್ಯಾಸ ನೀಡಿದರು. ಪ್ರಾಚಾರ್ಯ ಗಂಗಾಧರ ಗುಮ್ಮಗೋಳಮಠ ಅಧ್ಯಕ್ಷತೆ ವಹಿಸಿದ್ದರು.
ನ್ಯಾಯವಾದಿ ಬಿ.ವಿ.ಪಾಟೀಲ, ಎಂ.ಎಸ್. ಧನಿಗೊಂಡ, ವಿ.ಬಿ. ಶಿವನಗೌಡ್ರ, ಡಾ| ಫರ್ಜಾನಾ ಪಠಾಣ, ಪ್ರೊ| ಬಿ.ಎಸ್. ಶಿರಿಯಪ್ಪಗೌಡ್ರ, ಡಾ| ಗಿರೀಶ ದೇಸೂರ, ಪ್ರೊ| ಶೈಲಜಾ ಹುದ್ದಾರ, ಪ್ರೊ| ಪ್ರೀತಿ ಪಾಟೀಲ, ಪ್ರೊ| ಭಾರತಿ ದಂಡಿನ್, ಪ್ರೊ| ಸುಜಾತಾ ತಲ್ಲೂರ ಇತರರಿದ್ದರು. ನ್ಯಾಯವಾದಿ ಕೆ.ಬಿ. ಗುಡಿಹಾಳ ನಿರೂಪಿಸಿದರು. ಡಾ|ಜಯಾನಂದ ಹಟ್ಟಿ ಸ್ವಾಗತಿಸಿದರು. ಡಾ| ಬಸವರಾಜೇಶ್ವರಿ ಪಾಟೀಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.