ಹಿಂದೂ ಜನಜಾಗೃತಿ ಸಮಿತಿ ಪ್ರತಿಭಟನೆ
Team Udayavani, Jul 24, 2017, 7:20 AM IST
ಉಡುಪಿ: ಅಮರನಾಥ ಯಾತ್ರೆ ಸಂದರ್ಭ ಮತಾಂಧ ಭಯೋತ್ಪಾದಕರ ದಾಳಿ, ರಾಜ್ಯದಲ್ಲಿ ಹಿಂದೂ ನೇತಾರರ ಸರಣಿ ಹತ್ಯೆಯನ್ನು ವಿರೋಧಿಸಿ ಸರ್ವಿಸ್ ಬಸ್‌ಸ್ಟಾಂಡ್ ಬಳಿ ಶನಿವಾರ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಹಿಂದೂ ಜನಜಾಗೃತಿ ಸಮಿತಿಯ ವಿಜಯ ಕುಮಾರ್, ಶ್ರೀರಾಮಸೇನೆಯ ಜಿಲ್ಲಾ ವಕ್ತಾರ ಜಯರಾಮ ಅಂಬೇಕಲ್ಲು, ಹಿಂದೂ ವಿಧಿಜ್ಞ ಪರಿಷತ್ ನ್ಯಾಯವಾದಿ ದಿನೇಶ್ ನಾಯಕ್ ಉಪಸ್ಥಿತರಿದ್ದರು.
ಜಿಹಾದಿ ಭಯೋತ್ಪಾದಕರು ರಾಜ್ಯದಲ್ಲಿ ಕಳೆದ 2 ವರ್ಷದಲ್ಲಿ 24 ಹಿಂದೂ ನಾಯಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಧ್ಯೇಯದಿಂದ ಯೋಜನಾಬದ್ಧವಾಗಿ ದಕ್ಷಿಣ ಭಾರತದಲ್ಲಿ ಹಿಂದೂ ನಾಯಕರನ್ನು ಗುರಿ ಮಾಡಿ ಹತ್ಯೆ ಮಾಡಲಾಗುತ್ತಿದೆ. ಇದಕ್ಕಾಗಿ ಪಕ್ಕದ ಕೇರಳದಲ್ಲಿ ತರಬೇತಿಯನ್ನು ನಿಷೇಧಿತ ಸಂಘಟನೆಯಿಂದ ನೀಡಲಾಗುತ್ತದೆ. ರಾಜ್ಯ ಸರಕಾರವೇ ರಾಜ್ಯದ ಮತಾಂಧ ಸಂಘಟನೆ ಮೇಲೆ ಇದ್ದ 175 ಅಪರಾಧದ ಪ್ರಕರಣಗಳನ್ನು ಕ್ಯಾಬಿನೆಟ್‌ನಲ್ಲಿ ಹಿಂಪಡೆಯಿತು. ಇದಕ್ಕೆ ಸ್ವತಃ ಪೊಲೀಸ್ ಇಲಾಖೆ ವಿರೋಧ ವ್ಯಕ್ತ ಪಡಿಸಿತ್ತು.
ನಿಷ್ಪಕ್ಷವಾಗಿ ತನಿಖೆ ಮಾಡಲು ಬಿಡುತ್ತಿಲ್ಲ. ಬದಲಾಗಿ ಅವರಿಗೆ ಕಿರುಕುಳ, ಎತ್ತಂಗಡಿ ಮೂಲಕ ತನಿಖೆಗೆ ಅಡ್ಡಿಪಡಿಸುತ್ತಿದೆ. ಇದರ ಪರಿಣಾಮವಾಗಿ ಅನೇಕ ಹಿಂದೂ ನಾಯಕರ ಹತ್ಯೆ ನಡೆಯುತ್ತಿದೆ. ಬಂಟ್ವಾಳದಲ್ಲಿ ಇತ್ತೀಚಿಗೆ ಶರತ್ ಮಡಿವಾಳರ ಕೊಲೆ ನಡೆದಿದೆ ಎಂದು ದಿನೇಶ್ ನಾಯಕ್ ಹೇಳಿದರು.
ಮುಖ್ಯಮಂತ್ರಿಗಳ ಕಾರ್ಯಕ್ರಮವು ಶರತ್ ಹತ್ಯೆ ಘಟನೆ ನಡೆದ ಸ್ಥಳದಿಂದ 8 ಕಿ.ಮೀ. ದೂರದಲ್ಲಿ ನಡೆದಿತ್ತು. ಆದರೂ ಮುಖ್ಯಮಂತ್ರಿಗಳು ಶರತ್ ಮಡಿವಾಳರ ಮನೆಗೆ ಭೇಟಿ ನೀಡಲಿಲ್ಲ. ಇಷ್ಟೇ ಅಲ್ಲದೇ ಶರತ್‌ನ ಮೃತ ವಾರ್ತೆಯನ್ನು ಒಂದು ದಿನ ತಡವಾಗಿ ಮನೆಯವರಿಗೆ ತಿಳಿಸಲಾಯಿತು ಎಂದು ಜಯರಾಮ ಅಂಬೇಕಲ್ಲು ಹೇಳಿದರು.
ಅಮರನಾಥ ಯಾತ್ರಿಗಳ ಮೇಲೆ ಆಕ್ರಮಣ ಮಾಡುವ ಧೈರ್ಯವನ್ನು ಮಾಡದಿರಲು ಪಾಕಿಸ್ಥಾನ ಹಾಗೂ ಕಾಶ್ಮೀರದ ಉಗ್ರರಿಗೆ ಪಾಠ ಕಲಿಸಬೇಕು ಎಂದು ವಿಜಯಕುಮಾರ್ ಆಗ್ರಹಿಸಿದರು. ಪವಿತ್ರಾ ಕುಡ್ವಾ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.