ಪ್ರೌಢಶಾಲೆಗಳಲ್ಲಿ ಮಲಯಾಳ ಬೋಧನೆ:ಕನ್ನಡ ವಿದ್ಯಾರ್ಥಿಗಳಿಗೆ ಸಂಕಷ್ಟ


Team Udayavani, Jul 24, 2017, 8:35 AM IST

kas-kannada.gif

ಕಾಸರಗೋಡು: ಹಿರಿಯ ಪ್ರೌಢಶಾಲೆಗಳಲ್ಲಿ ಅಧಿಕೃತ ಶಿಕ್ಷಣ ಮಾಧ್ಯಮ ಇಂಗ್ಲಿಷ್‌ ಆಗಿದ್ದರೂ ಕಾಸರಗೋಡು ಜಿಲ್ಲೆಯ ಹೆಚ್ಚಿನ ಶಿಕ್ಷಕರು ಮಲಯಾಳದಲ್ಲಿ ಬೋಧಿಸುತ್ತಿರುವುದರಿಂದ ಭಾಷಾಅಲ್ಪಸಂಖ್ಯಾಕ ಕನ್ನಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ.

ಕಾಸರಗೋಡಿನ ಸರಕಾರಿ ಹೈಯರ್‌ ಸೆಕೆಂಡರಿ (ಪ್ಲಸ್‌ ಟು) ಶಾಲೆಗಳಲ್ಲಿ ನೇಮಕಗೊಳ್ಳುತ್ತಿರುವ ಹೆಚ್ಚಿನ ಶಿಕ್ಷಕರಿಗೆ ಕನ್ನಡ ತಿಳಿದಿಲ್ಲ. ಬೆರಳೆಣಿಕೆಯಲ್ಲಿರುವ ಕನ್ನಡಿಗ ಶಿಕ್ಷಕರು ಇಂಗ್ಲಿನಲ್ಲಿ ಬೋಧಿಸುತ್ತಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿರುವ ಮಲಯಾಳಿ ಶಿಕ್ಷಕರು ಇಂಗ್ಲಿಷಿನ ಬದಲು ಮಲಯಾಳದಲ್ಲಿ ಕಲಿಸುತ್ತಿದ್ದಾರೆ.

ಇದರಿಂದ ಮಲಯಾಳ ತಿಳಿಯದ ಕನ್ನಡ ವಿದ್ಯಾರ್ಥಿಗಳಿಗೆ ಪಾಠವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಮಾತ್ರವಲ್ಲ, ಮಲಯಾಳದಲ್ಲಿ ಪಾಠ ಕೇಳುವ ಕನ್ನಡ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಇಂಗ್ಲಿಷ್‌ ಅಥವಾ ಕನ್ನಡದಲ್ಲಿ ಉತ್ತರಿಸಬೇಕಾಗುವುದರಿಂದ ಪಾರಿಭಾಷಿಕ ಪದಗಳ ವಿಷಯದಲ್ಲಿ ಗೊಂದಲವಾಗುತ್ತಿದೆ. ಇದು ವಿಜ್ಞಾನ, ಗಣಿತದಂತಹ ವಿಷಯಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ.  ಇಂಗ್ಲಿಷ್‌, ಹಿಂದಿ, ಸಂಸ್ಕೃತದಂತಹ ವಿಷಯಗಳನ್ನು ಆಯಾ ಭಾಷೆಗಳಲ್ಲಿ ಬೋಧಿಸಬೇಕೆಂಬ ನಿಯಮವಿದ್ದರೂ ಅದನ್ನು ಪಾಲಿಸದೆ ಮಲಯಾಳದಲ್ಲಿ ಬೋಧಿಸ ಲಾಗುತ್ತಿದೆ.

ಪ್ರಾಥಮಿಕ,ಪ್ರೌಢಶಾಲೆಗಳಲ್ಲೂ ಇದೇ ಕತೆ ಕನ್ನಡಿಗರ ಹೋರಾಟದ ಫಲವಾಗಿ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿಜ್ಞಾನ, ಸಮಾವಿಜ್ಞಾನ, ಗಣಿತ ಮೊದಲಾದ ವಿಷಯಗಳನ್ನು ಬೋಧಿಸುವ ಶಿಕ್ಷಕರು ಹತ್ತನೇ ತರಗತಿಯವರೆಗೆ ಕನ್ನಡವನ್ನು ಕಲಿತವರಾಗಿರಬೇಕೆಂದು ನಿಯಮವನ್ನು ರೂಪಿಸಲಾಗಿದೆ. ಆದರೆ ಇಂಗ್ಲಿಷ್‌, ಹಿಂದಿ, ಸಂಸ್ಕೃತ ಮೊದಲಾದಭಾಷಾ ವಿಷಯಗಳ ಬೋಧಕರಿಗೆ ಈ  ನಿಯಮ ಅನ್ವಯವಾಗುವುದಿಲ್ಲ. ಕಾರಣವೇನೆಂದರೆ ಭಾಷಾ ವಿಷಯಗಳನ್ನು ಆಯಾಭಾಷೆಗಳಲ್ಲಿ ಬೋಧಿಸಬೇಕೆಂಬುದು ಸರಕಾರದ ಶಿಕ್ಷಣ ನೀತಿ. ಇದರಿಂದ ಭಾಷಾ ವಿಷಯಗಳ ಬೋಧನೆಗೆ ಕನ್ನಡ, ಮಲಯಾಳವೆಂಬ ಮಾಧ್ಯಮದ ಭೇದವಿಲ್ಲ ಎಂದು ಅಧಿಕಾರಿಗಳ ಸಮಜಾಯಿಸಿಕೆ. 

ಶಾಲೆಗಳಲ್ಲಿ ಭಾಷಾವಿಷಯಗಳನ್ನು ಅದೇ ಭಾಷೆಗಳಲ್ಲಿ ಬೋಧಿಸಲಾಗುವುದೆ ಎಂದು ಮಾಹಿತಿ ಹಕ್ಕು ಪ್ರಕಾರ ಪ್ರಶ್ನೆ ಕೇಳಿದರೆ ಹೌದು ಎಂಬ ಉತ್ತರ ದೊರೆಯುತ್ತದೆ. ಆದರೆ ವಾಸ್ತವವೇ ಬೇರೆ. ಕನ್ನಡ ವಿದ್ಯಾರ್ಥಿಗಳಿಗೆ ಸಂಸ್ಕೃತ, ಹಿಂದಿ, ಇಂಗ್ಲಿಷ್‌ ಕಲಿಸಲು ನೇಮಕಗೊಳ್ಳುತ್ತಿರುವ ಮಲಯಾಳ ಶಿಕ್ಷಕರು ಮಲಯಾಳದಲ್ಲಿ ಕಲಿಸುವುದು ಕಂಡುಬರುತ್ತದೆ. ಇದರಿಂದ ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ ಕನ್ನಡ ವಿದ್ಯಾರ್ಥಿಗಳ ಪರಿಸ್ಥಿತಿ.

ಆದರೆ ಇದು ಅನ್ಯಾಯವೆಂದು ಯಾರಿಗೂ ತೋರುವುದಿಲ್ಲ. ಭಾಷಾ ಶಿಕ್ಷಕರು ಅದೇ ಭಾಷೆಗಳಲ್ಲಿ ಬೋಧಿಸಬೇಕೆಂಬ ನಿಯಮ ಪಾಲನೆಯಾಗುವಂತೆ ವಿದ್ಯಾಧಿಕಾರಿಗಳಾಗಲಿ ಮುಖ್ಯೋಪಾಧ್ಯಾಯರಾಗಲಿ ಶಿಕ್ಷಕ- ರಕ್ಷಕ ಸಂಘಟನೆಗಳಾಗಲೀ ಪ್ರಯತ್ನಿಸುವುದಿಲ್ಲ. ಆದರೆ ಒಂದೊಮ್ಮೆ ಇಂಗ್ಲಿಷ್‌ ಮೊದಲಾದ ಭಾಷಾ ವಿಷಯಗಳನ್ನು ಕಲಿಸಲು ನೇಮಕವಾಗುವ ಕನ್ನಡಿಗ ಶಿಕ್ಷಕರು ಮಲಯಾಳ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬೋಧಿಸಿದರೆ ಆ ಶಿಕ್ಷಕರ ಪರಿಸ್ಥಿತಿ ಏನಾಗಬಹುದು? ಎಂಬುದು ಊಹನಾತೀತ.

ಸಂಸ್ಕೃತ ಕಲಿಸಲು ಮಲಯಾಳ ಅಧ್ಯಾಪಕರು ನೇಮಕಗೊಂಡ ಶಾಲೆಗಳಲ್ಲಿ ಕನ್ನಡ ವಿದ್ಯಾರ್ಥಿಗಳು ಪ್ರಥಮ ಭಾಷೆಯಾಗಿ ಸಂಸ್ಕೃತದ ಬದಲು ಕನ್ನಡವನ್ನು ಆರಿಸಿಕೊಂಡು ಮಲಯಾಳದ ಬಲವಂತ ಮಾಘಸ್ನಾನದಿಂದ ಪಾರಾಗಬಹುದು. ಆದರೆ ಇಂಗ್ಲಿಷ್‌, ಹಿಂದಿ ಯಂತಹ ಕಡ್ಡಾಯ ವಿಷಯಗಳಲ್ಲಿ ಏನು ಮಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ.

ಭಾಷಾ ವಿಷಯಗಳನ್ನು ಅದೇ ಭಾಷೆಗಳಲ್ಲಿ ಕಲಿಸಬೇಕೆಂಬ ನಿಯಮವನ್ನು ಪಾಲಿಸಲು ಸಾಧ್ಯವಾಗದಿದ್ದರೆ ಕನ್ನಡ ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಕಲಿಸಲು ಕನ್ನಡ ತಿಳಿದ ಅಧ್ಯಾಪಕರನ್ನೇ ನೇಮಿಸ ಬೇಕಾದುದು ನ್ಯಾಯೋಚಿತ.ಕನ್ನಡಿಗರದ್ದೂ ತಪ್ಪಿದೆ: ಕನ್ನಡಿಗರು ಆಡಳಿತ ವ್ಯವಸ್ಥಾಪಕರಾದ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಹಿರಿಯ ಪ್ರೌಢಶಾಲೆಗಳಲ್ಲಿ ಭಾಷಾ ವಿಷಯ ಹಾಗೂ ಇತರ ವಿಷಯಗಳನ್ನು ಬೋಧಿಸಲು ಕನ್ನಡವೇ ತಿಳಿಯದ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಕಾಂಚಣದ ಪ್ರೇಮದೆದುರು ಕನ್ನಡಾಭಿಮಾನ ಮರೆಯಾಗುತ್ತದೆ. ಇದರ ವಿರುದ್ಧ ಸಾಮಾಜಿಕ ಜಾಗೃತಿ ಮೂಡಬೇಕು. ಅರ್ಹರಾದ ಕನ್ನಡಿಗ ಶಿಕ್ಷಕರಿದ್ದೂ ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಹೆತ್ತವರು ಸೇರಿಸಬಾರದು. ಹಾಗೆಯೇ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ. ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಶಿಕ್ಷಣ ದೊರೆಯುವಂತೆ ಸರಕಾರ ನಿಯಮ ರೂಪಿಸಬೇಕು. ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ತಿಳಿದ ಶಿಕ್ಷಕರಿಂದ ಕನ್ನಡದಲ್ಲೇ ಶಿಕ್ಷಣ ದೊರೆತರೆ ಮಾತ್ರ ಮಾತೃ ಭಾಷೆಯಲ್ಲಿ ಶಿಕ್ಷಣ ಎಂಬ ಧ್ಯೇಯ ನಿಜ ಅರ್ಥದಲ್ಲಿ ಸಾಕಾರಗೊಳ್ಳಬಹುದು.

ಟಾಪ್ ನ್ಯೂಸ್

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.