ಸಂಯೋಜನೆಯಾಗಲಿವೆ ಎಂಜಿನಿಯರಿಂಗ್‌ ವಿಷಯಗಳು 


Team Udayavani, Jul 24, 2017, 11:42 AM IST

engeeneering-matters.jpg

ಯಲಹಂಕ: “ಎಂಜಿನಿಯರಿಂಗ್‌ನ ವಿವಿಧ ವಿಭಾಗಗಳ ನಡುವೆ ಇರುವ ತಡೆಗೋಡೆಗಳನ್ನು ಕೆಡವುವ ಕಾಲ ಸನ್ನಿಹಿತವಾಗಿದೆ. ಹೊಸದಾಗಿ ಆವಿರ್ಭವವಾಗುತ್ತಿರುವ ಸಂಶೋಧನೆಗಳು ಬಹುಶಾಸ್ತ್ರೀಯ ಅಧ್ಯಯನಗಳನ್ನಾಧರಿಸಿವೆ,’ ಎಂದು ಭಾರತೀಯ ವಿಜಾnನ ಸಂಸ್ಥೆಯ ವೈಮಾನಿಕ ತಂತ್ರಜಾnನ ವಿಭಾಗದ ಅಧ್ಯಕ್ಷ ಹಾಗೂ ಪ್ರಾಧ್ಯಾಪಕ ಪ್ರೊ. ಎಸ್‌. ಗೋಪಾಲಕೃಷ್ಣನ್‌ ಅಭಿಪ್ರಾಯಪಟ್ಟಿದ್ದಾರೆ. 

ಸಿವಿಲ್‌, ಏರೊನಾಟಿಕಲ್‌ ಹಾಗೂ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಕ್ಷೇತ್ರಗಳಲ್ಲಿ ಆವಿರ್ಭವಗೊಳ್ಳುತ್ತಿರುವ ನವನವೀನ ಸಂಶೋಧನೆಗಳ ಕುರಿತು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, “ವಿದ್ಯಾರ್ಥಿಗಳು, ಬೋಧಕರು ಹಾಗೂ ಸಂಶೋಧಕರು ತಂತಮ್ಮ ಅಧ್ಯಯನದ ವಿಷಯಗಳಿಗಷ್ಟೇ ಸೀಮಿತಗೊಳ್ಳುವ ಮನಸ್ಥಿತಿಯಿಂದ ಹೊರಬರಬೇಕು.

ಪ್ರತಿಯೊಂದು ವಿಷಯವೂ ತನ್ನದೇ ಆದ ಮಹತ್ವ ಹೊಂದಿರುತ್ತದೆ. ಈ ಮಹತ್ವ ಪ್ರಕಟಗೊಳ್ಳುವುದು ಬಹು ಶಾಸ್ತ್ರೀಯ ಅಧ್ಯಯನ ಹಾಗೂ ಸಂಶೋಧನೆಗಳಿಗೆ ಪ್ರಾತಿನಿಧ್ಯ ನೀಡುವ ವೇದಿಕೆಗಳಲ್ಲಿ ಮಾತ್ರ. ಪರಸ್ಪರ ಕೊಡುಕೊಳ್ಳುವಿಕೆಯಿಂದ ಜನೋಪಯೋಗಿ ತಂತ್ರಜ್ಞಾನದ ಅಭಿವೃದ್ಧಿ ಸಾಧ್ಯ ಎಂಬುದನ್ನು ನಾವು ಅರಿಯಬೇಕು’, ಎಂದರು

ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್‌.ಆರ್‌. ಶೆಟ್ಟಿ ಮಾತನಾಡಿ, “ತಂತ್ರಜ್ಞಾನದ ವಿವಿಧ ವಿಭಾಗಗಳು ತಮ್ಮ ಜ್ಞಾನಗಳನ್ನು ಪರಸ್ಪರ ಹಂಚಿಕೊಳ್ಳುವ ಅನಿವಾರ್ಯತೆ ಒದಗಿದೆ. ಸವಾಲುಗಳನ್ನು ಎದುರಿಸಲು ಸಂಘಟಿತ ಪ್ರಯತ್ನ ಅವಶ್ಯ. ಆಗಲೇ ಮನಕುಲದ ಒಳತಿಗೆ ಬೇಕಾದ ಸೌಲಭ್ಯಗಳು ಸೃಷ್ಟಿಸಲ್ಪಡುತ್ತವೆ,’ ಎಂದರು.
 
ದೇಶ ವಿದೇಶಗಳಿಂದ ಬಂದಿದ್ದ ಒಟ್ಟು 56 ವಿದ್ವಾಂಸರರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಅಧಿವೇಶನದಲ್ಲಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ರತಿಷ್ಠಿತ ಪತ್ರಿಕೆ “ಮ್ಯಾಕ್‌ಗ್ರಾಹಿಲ್‌ ಎಜುಕೇಷನ್‌’ ಹೊರತಂದಿರುವ ಪ್ರಬಂಧಗಳ ಹೊತ್ತಗೆಯನ್ನು ಪ್ರೊ. ಎನ್‌.ಆರ್‌. ಶೆಟ್ಟಿ ಬಿಡುಗಡೆ ಮಾಡಿದರು. 

ರಕ್ಷಣಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಎಲ್‌.ಎಂ. ಪಟ್ನಾಯಕ್‌ ಹಾಗೂ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಸುಧಾರಾವ್‌, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್‌.ಸಿ. ನಾಗರಾಜ್‌, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಏರೋನಾಟಿಕಲ್‌ ಎಂಜಿನಿಯರಿಂಗ್‌ ಮುಖ್ಯಸ್ಥ ಪ್ರೊ. ಎಸ್‌. ವೆಂಕಟೇಶ್ವರನ್‌  ಹಾಜರಿದ್ದರು.

ಟಾಪ್ ನ್ಯೂಸ್

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.