ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ವನಮಹೋತ್ಸವ
Team Udayavani, Jul 25, 2017, 8:00 AM IST
ಗೋಣಕೊಪ್ಪಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರಾಜಪೇಟೆ ಎ., ಬಿ. ಒಕ್ಕೂಟ ಗೋಣಿಕೊಪ್ಪ, ಗ್ರಾಮ ಪಂ. ಮತ್ತು ಪ್ರಾಥಮಿಕ ಶಾಲೆ ಆಶ್ರಯದಲ್ಲಿ ವನಮಹೋತ್ಸವ ದಿನವನ್ನು ಆಚರಿಸಲಾಯಿತು.
ಶಾಲೆಯ ಆವರಣದಲ್ಲಿ ಹಾಗೂ ಮೈದಾನದ ಸುತ್ತ ನೇರಳೆ, ಹಲಸು, ಮಾವು, ಜಮ್ಮುನೇರಳೆ, ರಾಮ ಫಲ, ನೆಲ್ಲಿ ಸೇರಿದಂತೆ ವಿವಿಧ ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ಜಾಗೃತಿಗೆ ಮುಂದಾದರು.
ಕಾರ್ಯಕ್ರಮಕ್ಕೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಚಾಲನೆ ನೀಡಿದರು. ಅನಂತರ ಮಾತನಾಡಿದ ಅವರು, ಮರ ಕಡಿಯುವ ಮೊದಲು ಒಂದು ಗಿಡವನ್ನು ನೆಡಬೇಕು ಎಂದು ಸಲಹೆ ನೀಡದರು. ಪರಿಸರ ಸಮತೋಲನಕ್ಕೆ ಮರಗಳು ಅವಶ್ಯ. ಬಿಡುವಿನ ಸಮಯದಲ್ಲಿ ಗಿಡ ನೆಡುವ ಹವ್ಯಾಸ ಬೆಳೆಸಿಕೊಂಡು ಅರಣ್ಯವನ್ನು ರಕ್ಷಿಸಬೇಕು. ಹೆಚ್ಚು ಮರಗಳನ್ನು ಬೆಳೆಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಸದಸ್ಯರಾದ ಮುರುಗ, ಸೋಮಣ್ಣ, ರತಿ ಅಚ್ಚಪ್ಪ, ರಾಮಕೃಷ್ಣ, ಸುರೇಶ್ ರೈ ಮತ್ತು ಧರ್ಮಸ್ಥಳ ಗ್ರಾಮಾಣಾಭಿವೃದ್ದಿ ಸಂಘದ ಅಧ್ಯಕ್ಷೆ ಪ್ರಭಾವತಿ, ಕಾರ್ಯದರ್ಶಿ ಮಂಜುಳಾ, ಮೇಲ್ವಿಚಾರಕಿ ಚೇತನಾ ಮತ್ತು ಪಧಾದಿಕಾರಿಗಳಾದ ವಿಮಲಾ, ಸರಿತಾ, ಮುಖ್ಯೋಪಾಧ್ಯಾಯ ಶಶಿಕಲಾ, ಕಲಾ ಶಿಕ್ಷಕ ಬಿ.ಆರ್. ಸತೀಶ್, ದೈಹಿಕ ಶಿಕ್ಷಣ ಶಿಕ್ಷಕ, ರಾಮಾನಂದ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.