ಸುಧಾ ಮನದಾಳ : ಕ್ಯಾಟಲ್ ಕ್ಲಾಸ್ ಎಂದು ಕರೆದಿದ್ದಳು!
Team Udayavani, Jul 25, 2017, 6:25 AM IST
ಹೊಸದಿಲ್ಲಿ: ‘ನೀನೇಕೆ ಇಲ್ಲಿ ನಿಂತಿದ್ದೀ? ಇದು ಬ್ಯುಸಿನೆಸ್ ಕ್ಲಾಸ್‌ನ ಕ್ಯೂ, ಅದೋ ಅಲ್ಲಿದೆ ನೋಡು, ಅದು ಎಕಾನಮಿ ಕ್ಲಾಸ್‌ನ ಕ್ಯೂ. ನೀನು ಅಲ್ಲಿ ಹೋಗಿ ನಿಂತುಕೋ,’ ಲಂಡನ್‌ನ ಹೀತ್ರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬ್ಯುಸಿನೆಸ್ ಕ್ಲಾಸ್‌ನ ಪಾಳಿಯಲ್ಲಿ ನಿಂತಿದ್ದ ‘ಶ್ರೀಮಂತ’ ಮಹಿಳೆಯೊಬ್ಬರು, ಕನ್ನಡತಿ ಸುಧಾ ಮೂರ್ತಿ ಅವರಿಗೆ ಹೇಳಿದ ಮಾತಿದು.
ಇನ್ಫೋಸಿಸ್ ಸಹಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಹಾಗೂ ಇನ್ಫೋಸಿಸ್ ಫೌಂಡೇಷನ್‌ನ ಮಖ್ಯಸ್ಥರಾಗಿರುವ ಸುಧಾ ಮೂರ್ತಿ ಎಂದಿನಂತೆ ಅಂದೂ ಸಲ್ವಾರ್, ಕಮೀಜ್ ರೀತಿಯ ಸರಳಾತಿಸರಳ ಉಡುಪು ಧರಿಸಿದ್ದರು. ಹೈ-ಫೈ ಧಿರಿಸು ತೊಟ್ಟು, ದುಬಾರಿ ಹೈ-ಹೀಲ್ಸ್ ಹಾಕಿ, ಕೈಲಿ ‘ಗುಚ್ಚಿ’ ಬ್ಯಾಗ್ ಹಿಡಿದು ನಿಂತಿದ್ದ ಮಹಿಳೆಗೆ, ಸಾಧಾರಣ ಉಡುಗೆಯ ಸುಧಾ ಮುರ್ತಿ ತಮ್ಮೊಂದಿಗೆ ಬ್ಯುಸಿನೆಸ್ ಕ್ಲಾಸ್‌ನ ಸಾಲಿನಲ್ಲಿ ನಿಂತದ್ದು ಹಿಡಿಸಲಿಲ್ಲವೇನೋ? ಮಾತನಾಡುವ ಭರದಲ್ಲಿ ‘ಕ್ಯಾಟಲ್-ಕ್ಲಾಸ್ ಪರ್ಸನ್’ (ಕೆಳ ವರ್ಗದ ಜನ) ಅಂದು ಬಿಟ್ಟರು. ಅದುವರೆಗೆ ಸುಮ್ಮನಿದ್ದ ಸುಧಾ ಮೂರ್ತಿ, ಆ ಮಾತು ಕೇಳಿದ್ದೇ ತಡ ಮಹಿಳೆಗೆ ತಕ್ಕ ಉತ್ತರ ನೀಡಲು ಮುಂದಾದರು.
ಹೊಸ ಪುಸ್ತಕ ‘ತ್ರೀ ತೌಸಂಡ್ ಸ್ಟಿಚಸ್’ನಲ್ಲಿ ತಮ್ಮ ಬದುಕಿನಲ್ಲಿ ಆಗಿಹೋದ ಈ ರೀತಿಯ ವೈಯಕ್ತಿಕ ಅನುಭವಗಳಿಗೆ 66ರ ಹರೆಯದ ಸುಧಾ ಮೂರ್ತಿ ಅಕ್ಷರ ರೂಪ ನೀಡಿದ್ದಾರೆ. ಆ ಮಹಿಳೆಯ ಆ ರೀತಿಯ ವರ್ತನೆಗೆ ಹಾಗೂ ‘ಕ್ಲಾಸ್; ವರ್ಗೀಕರಣಕ್ಕೆ ನನ್ನ ಬಟ್ಟೆ ಕಾರಣ ಅಂತ ನನಗೆ ನಂತರ ಗೊತ್ತಾಯಿತು,’ ಎನ್ನುತ್ತಾರೆ ಸುಧಾ ಮೂರ್ತಿ. ಮತ್ತೂಂದು ವಿಶೇಷವೆಂದರೆ, ಮಾರನೇ ದಿನ ಆಕೆ ಬಂದಿದ್ದ ಕಾರ್ಯಕ್ರಮದಲ್ಲಿ ನಾನೇ ಮುಖ್ಯ ಅತಿಥಿ ಆಗಿ ವೇದಿಕೆಯಲ್ಲಿ ಕುಳಿತಿದ್ದೆ. ಅದನ್ನು ನೋಡಿ ಆಕೆ ಪೆಚ್ಚಾದಳು ಎಂದೂ ಸುಧಾ ಅವರು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI court; ಕಸ್ಟಡಿ ಸಾ*ವು ಪ್ರಕರಣ: ಹಿಮಾಚಲ ಐಜಿ ಸೇರಿ 7 ಮಂದಿ ಪೊಲೀಸರಿಗೆ ಶಿಕ್ಷೆ
Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ
Suffocation: ಚಳಿಗೆಂದು ಹಾಕಿದ ಬೆಂಕಿ… ಬೆಳಗಾಗುವಷ್ಟರಲ್ಲಿ ದಂಪತಿಯ ಜೀವವೇ ಹೋಗಿತ್ತು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.