ಬಸ್ಸಲ್ಲಿ ಕಂಡೆ, ಸೂಪರ್‌ಮ್ಯಾನ್!
Team Udayavani, Jul 25, 2017, 10:13 AM IST
“ಇವತ್ತು ಭೀಮನ ಅಮವಾಸ್ಯೆ. ನಾನು ನನ್ನ ಗಂಡನಿಗೆ ಒಳ್ಳೇದಾಗ್ಲಿ ಅಂತ ಕೇಳ್ಕೊಳ್ಳೋದ್ರ ಜೊತೆಗೆ ಒಳ್ಳೇ ಅಳಿಯ ಸಿಗ್ಲಿ ಅಂತ ಕೂಡ ಬೇಡ್ಕೊಳ್ತೀನಿ. ನೀನೂ ಹಾಗೆ ಒಳ್ಳೆ ಗಂಡ ಸಿಗ್ಲಿ ಅಂತ ಬೇಡ್ಕೋ’ ಅಂದ್ರು…
“ಬೇಗ ಏಳು. ಕಾಲೇಜಿಗೆ ಲೇಟ್ ಆಯ್ತು ದೇವಸ್ಥಾನಕ್ಕೆ ಬೇರೆ ಹೋಗ್ಬೇಕು’ ಅಂತ ಅಮ್ಮ ಒಂದೇ ಸಮನೆ ಸುಪ್ರಭಾತ ಹೇಳ್ತಾ ಇದ್ಲು. ಅಂತೂ ಅವಳ ಸುಪ್ರಭಾತ ಕೇಳ್ಳೋಕಾಗೆª ಎದ್ದು ರೆಡಿಯಾಗಿ ಹೊರಟೆ. ಅಪ್ಪ, ಅಮ್ಮ, ನಾನು ಮೂವರೂ ದೇವಸ್ಥಾನಕ್ಕೆ ಹೋದ್ವಿ. ಅಮ್ಮ ಸ್ಟ್ರಿಕ್ಟ್ ಆಗಿ ಆರ್ಡರ್ ಮಾಡಿದ್ಲು: “ದೇವಸ್ಥಾನಕ್ಕೆ ಬಂದ ಮೇಲೆ ಪೂಜೆ ಮುಗಿಸ್ಕೊಂಡೇ ಹೋಗ್ಬೇಕು, ವಿಶೇಷ ಪೂಜೆ ಇದೆ’ ಎಂದು. ಹಾಗೇ ದೇಗುಲದಲ್ಲಿ ಪ್ರದಕ್ಷಿಣೆ ಹಾಕ್ತಾ ಇದ್ದೆ. ಆಗ ಒಬ್ರು ಆಂಟಿ “ಏನ್ ವಿಶೇಷ ಪುಟ್ಟಿ? ಇವತ್ತು ನೀನು ಬಂದಿದ್ದೀಯಾ? ಏನಾದ್ರೂ ಸ್ಪೆಷಲ್ ಅಪ್ಲಿಕೇಷನ್ ಹಾಕಿದ್ದೀಯಾ?’ ಅಂತ ಕೇಳಿದ್ರು. ನನಗೆ ಏನೂ ಅರ್ಥ ಆಗಲಿಲ್ಲ. ಸುಮ್ನೆ ಒಂದು ಸ್ಮೈಲ್ ಮಾಡಿ ಮುಂದೆ ಬಂದೆ. ಆಮೇಲೆ ಅಮ್ಮ “ಇವತ್ತು ಭೀಮನ ಅಮವಾಸ್ಯೆ. ನಾನು ನನ್ನ ಗಂಡನಿಗೆ ಒಳ್ಳೇದಾಗ್ಲಿ ಅಂತ ಕೇಳ್ಕೊàಳ್ಳೋದ್ರ ಜೊತೆಗೆ ಒಳ್ಳೇ ಅಳಿಯ ಸಿಗಲಿ ಅಂತಲೂ ಬೇಡ್ಕೊಳ್ತೀನಿ. ನೀನೂ ಹಾಗೆ ಒಳ್ಳೆ ಗಂಡ ಸಿಗಲಿ ಅಂತ ಬೇಡ್ಕೊ’ ಅಂದ್ರು. ಆಗ ನನಗೆ ಆ ಆಂಟಿ ಯಾಕೆ ಹಾಗೆ ಕೇಳಿದ್ರು ಅಂತ ಅರ್ಥ ಆಯ್ತು.
ಮೊದಲೇ ಮದುವೆ, ಪೂಜೆ, ದೇವಸ್ಥಾನ ಅಂದ್ರೆ ದೂರ ನಿಲ್ಲೋ ನನಗೆ ಅಂದು ದೇಗುಲಕ್ಕೆ ಕರೊಡ್ಹೊàಗಿ ಆಂಟಿ ಹತ್ರಾ ಕಮೆಂಟ್ ಹೊಡೆಸಿಕೊಳ್ಳೋ ಹಾಗೆ ಮಾಡಿದ್ರು ನಮ್ಮಮ್ಮ. ಅದೇ ಸಿಟ್ಟಿನಲ್ಲಿ ಬಸ್‌ಸ್ಟಾಂಡ್‌ಗೆ ಬಂದ್ರೆ ಒಂದು ಬಸ್ ಕೂಡಾ ನಿಲ್ಲಿಸ್ತಾ ಇರಲಿಲ್ಲ. ಅಂತೂ ಕೊನೆಗೆ ಒಂದು ಬಸ್ ನಿಲ್ತು. ಸಿಂಗಲ್ ಡೋರ್ ಬೇರೆ. ಬಸ್ ತುಂಬಾ ಪೋಲಿ ಹುಡುಗರೇ ತುಂಬೊಡಿದ್ರು. ಈ ರಶ್‌ನಲ್ಲಿ ಹೇಗೆ ಹತ್ತಬೇಕು ಅಂತ ಯೋಚಿಸ್ತಾ ಇದ್ದೆ. ಅದೇ ಹೊತ್ತಿಗೆ ಒಬ್ಬ ಹುಡುಗ ಓಡಿ ಬಂದು “ಬಸ್ ನಿಲ್ಸಿದ್ದಾರೆ. ಬೇಗ ಹತ್ರಿ. ಇಲ್ಲಾ ಅಂದ್ರೆ ಇದೂ ಇಲ್ಲ’ ಅಂತ ಹೇಳಿ ಕೈ ಹಿಡಿದು ಹತ್ತಿಸ್ಕೊಂಡ. ಕಾಲೇಜಿಗೆ ಲೇಟಾಗಿದ್ದೂ ಅಲ್ಲದೆ, ಬಸ್ಸಲ್ಲಿ ಮೆಟ್ಟಿಲ ಮೇಲೇ ನಿಂತಿದ್ದ ಹುಡುಗರ ತಿನ್ನುವಂಥ ನೋಟ, ಅಮ್ಮನ ಮೇಲಿನ ಕೋಪ, ಇದೆಲ್ಲದರ ಮಧ್ಯೆ ಆ ಹುಡುಗನ ಕಾಳಜಿ ನೋಡಿ ಒಂದೇ ಸಲ ಸೈಲೆಂಟ್ ಆಗೊದೆ. ತುದಿ ಮೆಟ್ಟಿಲ ಮೇಲೆ ಆ ಪೋಲಿ ಹುಡ್ಗರ ಮಧ್ಯೆ ಹೇಗಪ್ಪ ನಿಂತ್ಕೊಳ್ಳೋದು? ಅಂತ ಯೋಚಿಸ್ತಾ ಇದ್ದ ನನಗೆ ಆತ ಸ್ವಲ್ಪವೂ ತೊಂದರೆ ಆಗದಿದ್ದ ಹಾಗೆ, ಪೋಲಿ ಹುಡುಗರು ಕಮೆಂಟ್ ಮಾಡದ ಹಾಗೆ ನಿನ್ ಜೊತೆ ನಾನಿದ್ದೀನಿ ಅನ್ನೋ ಥರ ನಿಂತ್ಕೊಂಡಿದ್ದ. ಸೂಪರ್‌ಮ್ಯಾನ್ ಅಂತ ಇದ್ದರೆ, ಅಲ್ಲೆಲ್ಲೋ ಅಮೆರಿಕದಲ್ಲಿ ಇಲ್ಲ… ಇವನೇ ಇದ್ದಿರಬಹುದು ಎಂದವು ನನ್ನ ಕಂಗಳು. ಅದೇ ಹೊತ್ತಿಗೆ ಕಾಲೇಜ್ ಬಂದಿದ್ದೇ ತಿಳಿಯಲಿಲ್ಲ. ಅವನು ಸರಸರ ಅಂತ ಬಸ್ ಇಳಿದು ಎಲ್ಲಿ ಮಾಯವಾದನೋ? ತಿಳಿಯಲಿಲ್ಲ. ಆದ್ರೆ ನಾನ್ ಮಾತ್ರ ಅವನನ್ನೇ ನೆನಪಿಸಿಕೊಂಡು ಕಾಲೇಜಿಗೆ ಹೋದೆ. ಅವನ ಮುಖ, ಮಾತುಗಳೇ ಕಣ್ಣ ಮುಂದೆ ಬರ್ತಾ ಇತ್ತು.
ನನ್ನ ಫ್ರೆಂಡ್ಸ್ ಬೇರೆ “ಭೀಮನ ಅಮವಾಸ್ಯೆ ಹವಾ ಜೋರಾಗಿದೆ ಕಣೇ ಅಂತ ರೇಗ್ಸಿದ್ದೇ ರೇಗ್ಸಿದ್ದು. ಆದ್ರೆ ನನಗೆ ಮಾತ್ರ ಅವನನ್ನು ಮರೆಯೋಕೆ ಆಗ್ತಿರ್ಲಿಲ್ಲ. ಅದಾದ ನಂತರ ಒಂದು ದಿನವೂ ಆತನನ್ನು ನೋಡಲಿಲ್ಲ. ಭೀಮನ ಅಮವಾಸ್ಯೆ ದಿನ ಬೇಡ್ಕೊಂಡ್ರೆ ಒಳ್ಳೆ ಗಂಡ ಸಿಕ್ತಾನೋ, ಇಲ್ವೋ? ಆದರೆ, ಒಂದು ಕ್ಷಣ ನಮ್ಮ ಜೀವನದಲ್ಲಿ ಬರೋ ವಿಶೇಷ ವ್ಯಕ್ತಿ ಅವನ ಹಾಗಿದ್ದಿದ್ರೆ ಎಷ್ಟು ಚೆನ್ನಾಗಿರುತ್ತೆ ಅಂತ ಆ ದಿನ ಅನ್ಸಿದ್ದಂತೂ ನಿಜ.
ಸುಮಾ ಹೆಗಡೆ ತ್ಯಾಗ್ಲಿ, ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.