ಸಫಾಯಿಗಳಿಗೆ ಕಿರುಕುಳ ಕೊಟ್ಟರೆ ಸಹಿಸಲ್ಲ


Team Udayavani, Jul 25, 2017, 12:07 PM IST

hub6.jpg

ಧಾರವಾಡ: ಜಿಲ್ಲೆಯ ಸಫಾಯಿ ಕರ್ಮಚಾರಿಗಳಿಗೆ ಕಿರುಕುಳ ನೀಡುವಂತಹ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ ಹಿರೇಮನಿ ಅ ಧಿಕಾರಿಗಳಿಗೆ ಸೂಚನೆ ನೀಡಿದರು. 

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಫಾಯಿ ಕಾರ್ಮಿಕರ ಕಲ್ಯಾಣ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿ, ಜೀವನಮಟ್ಟ, ಸೇವೆ, ಭವಿಷ್ಯ ನಿಧಿ ವಿಷಯಗಳ ಕುರಿತಂತೆ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಗುತ್ತಿಗೆದಾರರಿಂದ ಆಗುತ್ತಿರುವ ಕಿರುಕುಳ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಇಂಥವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಒಂದು ವೇಳೆ ಗುತ್ತಿಗೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಿರ್ಲಕ್ಷé ಮಾಡಿದರೆ ಅಧಿಕಾರಿಗಳ ವಿರುದ್ಧವೇ ಆಯೋಗದಿಂದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಲ್ಲೆಯ ಪಟ್ಟಣ ಪಂಚಾಯ್ತಿಗಳು, ಪುರಸಭೆಗಳು, ಮಹಾನಗರ ಪಾಲಿಕೆ, ಕರ್ನಾಟಕ ವಿಶ್ವವಿದ್ಯಾಲಯ, ಕಿಮ್ಸ್‌ ಹಾಗೂ ಡಿಮಾನ್ಸ್‌ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಗುತ್ತಿಗೆ ಹಾಗೂ ಕಾಯಂ ನೇಮಕಾತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 194 ಕುಟುಂಬ ಸೇರಿದಂತೆ ಒಟ್ಟು 8824 ಸಫಾಯಿ ಕರ್ಮಚಾರಿಗಳಿದ್ದಾರೆ. 

ಆದರೆ ಅವರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಗುತ್ತಿಗೆದಾರರು ಮತ್ತು ಅ ಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಅಥವಾ ಅವರ ಪ್ರಭಾವಕ್ಕೆ ಒಳಗಾಗಿ ಸಫಾಯಿ ಕರ್ಮಚಾರಿಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ಲಿಖೀತ ದೂರುಗಳು ಬಂದಿವೆ. ಹೀಗಾಗಿ ಸಫಾಯಿ ಕರ್ಮಚಾರಿಗಳಿಗೆ ಕಿರುಕುಳ ನಿಡುವಂಥ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಎಂ.ಎನ್‌. ಜೋಶಿ ಅವರೊಂದಿಗೆ ಕವಿವಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳ ನೇಮಕಾತಿ, ವೇತನ ಭತ್ಯೆ, ಇಎಸ್‌ಐ, ಸಂಚಿತ ನಿಧಿ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಚರ್ಚಿಸಿದರು. ಅಲ್ಲದೇ ಈ ಕುರಿತಂತೆ ತಕ್ಷಣ ಆಯೋಗಕ್ಕೆ ವರ ದಿ ನೀಡುವಂತೆ ಕವಿವಿ ಕುಲಸಚಿವರಿಗೆ ಸದಸ್ಯ ಜಗದೀಶ ಹಿರೇಮನಿ ಸೂಚಿಸಿದರು. 

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಅಳ್ನಾವರ, ಕುಂದಗೋಳ, ನವಲಗುಂದ ಸೇರಿದಂತೆ ವಿವಿಧ ಪುರಸಭೆ, ಪಟ್ಟಣ ಪಂಚಾಯ್ತಿಯ ಅ ಧಿಕಾರಿಗಳು ತಾವು ಕೈಗೊಂಡ ಕಾರ್ಯಗಳ ಬಗ್ಗೆ ವಿವರಿಸಿದರು. ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ, ಎಸ್‌ಪಿ ಜಿ. ಸಂಗೀತಾ, ಪಾಲಿಕೆ ಆಯುಕ್ತ ಮೇಜರ ಸಿದ್ದಲಿಂಗಯ್ಯ ಹಿರೇಮಠ, ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ವಿಜಯ ಗುಂಟ್ರಾಳ, ಲಕ್ಷ್ಮಣ ಬಕ್ಕಾಯಿ ಇದ್ದರು.  

ಟಾಪ್ ನ್ಯೂಸ್

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

4

Dr G Parameshwar: ಸೆನ್‌ ಠಾಣೆಗಳಿಗೂ ಎಸ್ಪಿ ಕೇಡರ್‌: ಗೃಹ ಸಚಿವ

ಸ್ಥಾನಮಾನ ಸಿಗದಿದ್ದವರಿಂದ ಪಕ್ಷ ವಿರೋಧಿ ಹೇಳಿಕೆ: ಜಿಟಿಡಿ ವಿರುದ್ದ ಜೋಶಿ ಕಿಡಿ

Hubli: ಸ್ಥಾನಮಾನ ಸಿಗದಿದ್ದವರಿಂದ ಪಕ್ಷ ವಿರೋಧಿ ಹೇಳಿಕೆ: ಜಿಟಿಡಿ ವಿರುದ್ದ ಜೋಶಿ ಕಿಡಿ

ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ… ನಾವು ಆ ರೀತಿ ರಾಜಕಾರಣ ಮಾಡಲ್ಲ: ಜಿ. ಪರಮೇಶ್ವರ್

ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ… ನಾವು ಆ ರೀತಿ ರಾಜಕಾರಣ ಮಾಡಲ್ಲ: ಜಿ. ಪರಮೇಶ್ವರ್

8

Alnavar: ಸ್ನಾನಕ್ಕೆಂದು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

11(1)

Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.