ವಿರೋಧದ ನಡುವೆ ಇ-ಪಾವತಿಗೆ ಚಾಲನೆ
Team Udayavani, Jul 25, 2017, 12:07 PM IST
ಹುಬ್ಬಳ್ಳಿ: ಇಲ್ಲಿಯ ಅಮರಗೋಳದ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಜು.24ರಿಂದ ಇ-ಪಾವತಿ ಜಾರಿಯಾಗಿದ್ದು, ವರ್ತಕರು ಮಾತ್ರ ವಿವಿಧ ಕಾರಣಗಳೊಂದಿಗೆ ಇದನ್ನು ವಿರೋಧಿಸಿ ಯಾವುದೇ ಖರೀದಿ ಮಾಡದೇ ವಹಿವಾಟಿನಿಂದ ದೂರ ಉಳಿದರು.
ಸರಕಾರದ ಆದೇಶದಂತೆ ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಸೋಮವಾರದಿಂದ ಇ-ಪಾವತಿ ಕಾರ್ಯಾರಂಭಿಸಲಾಗಿದೆ. ಇದಕ್ಕೆ ಇಲ್ಲಿನ ವರ್ತಕರು ಅಸಹಕಾರ ವ್ಯಕ್ತಪಡಿಸಿದ್ದು ಅಲ್ಲದೆ ಜು.27ರಿಂದ ವಹಿವಾಟು ಬಂದ್ ಮಾಡಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಎಪಿಎಂಸಿಯ ಆಡಳಿತ ಮಂಡಳಿ ಸರಕಾರದ ಸೂಚನೆಯಂತೆ ಮಾರುಕಟ್ಟೆಗೆ ರೈತರು ತರುವ ಉತ್ಪನ್ನಗಳನ್ನು ಖರೀದಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ.
ಸುಲಲಿತವಾಗಿ ಇ-ಪಾವತಿ ವ್ಯವಸ್ಥೆ ಜಾರಿ ಸಂಬಂಧ ಕೃಷಿ ಮಾರುಕಟ್ಟೆ ನಿರ್ದೇಶಕ ಜಿ.ಎನ್. ಶಿವಮೂರ್ತಿ, ಹೆಚ್ಚುವರಿ ನಿರ್ದೇಶಕ ಆರ್. ಎನ್. ಚಾಮರಾಜು ಅವರು ರವಿವಾರ ನಗರದ ಎಪಿಎಂಸಿಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದರು.
ಸೋಮವಾರ ಎಪಿಎಂಸಿ ಕಾರ್ಯದರ್ಶಿ ಎಚ್.ಸಿ. ಗಜೇಂದ್ರ ಅವರು ಎಪಿಎಂಸಿ ಅಧ್ಯಕ್ಷ, ಸದಸ್ಯರೊಂದಿಗೆ ಚರ್ಚೆ ನಡೆಸಿ ಇ-ಪಾವತಿ ಸಮರ್ಪಕ ಜಾರಿಗೆಗೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇ- ಪಾವತಿ ಜಾರಿಗಾಗಿ ರಾಜ್ಯದ ವಿವಿಧ ಭಾಗಗಳ ಎಪಿಎಂಸಿಗಳಿಂದ ಅಂದಾಜು 30ಕ್ಕೂ ಅಧಿಕ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜನೆ ಮೇರೆಗೆ ಕರೆಯಿಸಿಕೊಳ್ಳಲಾಗಿದ್ದು, ಯಾವುದೇ ಸಮಸ್ಯೆಯಿಲ್ಲ. ಹೊಸ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.
ಹುಬ್ಬಳ್ಳಿ ಎಪಿಎಂಸಿಯಿಂದಲೇ ರೈತರ ಕೃಷಿ ಉತ್ಪನ್ನಗಳನ್ನು ಇ ಟೆಂಡರ್ ಮೂಲಕ ಖರೀದಿಸುವಂತೆ ರಿಲಾಯನ್ಸ್ ಹಾಗೂ ಬಿಗ್ ಬಜಾರ್ ಕಂಪನಿಯ ಅಧಿಕಾರಿಗಳನ್ನು ಕೋರಲಾಗಿದ್ದು, ಅದಕ್ಕವರು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ ಎಂದು ಗಜೇಂದ್ರ ತಿಳಿಸಿದರು.
ಖರೀದಿಗೆ ಟಿಎಪಿಸಿಎಂ ನೇಮಕ: ಎಪಿಎಂಸಿಗೆ ರೈತರು ತರುವ ಉತ್ಪನ್ನಗಳನ್ನು ಖರೀದಿಸಲು ವರ್ತಕರು ಹಿಂದೇಟು ಮಾಡಿದರೆ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಖರೀದಿ ಸಂಸ್ಥೆಯಾಗಿ ನೇಮಿಸಿಕೊಳ್ಳಲು ಸರಕಾರ ಸೂಚಿಸಿದೆ.
ಅದರಂತೆ ಹುಬ್ಬಳ್ಳಿ ಎಪಿಎಂಸಿಯಲ್ಲಿ ಮಾರ್ಕೆಟಿಂಗ್ ಫೆಡರೇಶನ್ ಮುಖಾಂತರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘವನ್ನು ನೇಮಿಸಲಾಗಿದೆ. ಈ ಸಂಘದ ಮೂಲಕ ಸೋಮವಾರ ಹೆಸರು, ಸೋಯಾಬಿನ್ ಖರೀದಿ ಮಾಡಲಾಗಿದೆ ಎಂದು ಸಹಕಾರ ಸಂಘಗಳಿಂದ ಎಪಿಎಂಸಿಗೆ ಆಯ್ಕೆಯಾಗಿರುವ ರಘುನಾಥ ಕೆಂಪಲಿಂಗನಗೌಡರ ತಿಳಿಸಿದರು.
ವರ್ತಕರ ಆಕ್ಷೇಪ: ಒಮ್ಮೇಲೆ ಇ-ಪಾವತಿ ವ್ಯವಸ್ಥೆ ಜಾರಿ ಮಾಡಿರುವುದರಿಂದ ವರ್ತಕರಿಗೆ ತುಂಬಾ ಅನಾನುಕೂಲವಾಗಿದೆ. ರೈತರಿಂದ ಉತ್ಪನ್ನ ಖರೀದಿಸಿದ ಮೇಲೆ ಒಂದೇ ದಿನದಲ್ಲಿ ಅವರಿಗೆ ಹಣ ಪಾವತಿ ಮಾಡಲು ಎಲ್ಲಿಂದ ಇಡಿಗಂಟು ತರಬೇಕು. ಇ-ಪಾವತಿ ಜಾರಿ ಮಾಡುವುದಾದರೆ ಜಿಎಸ್‌ಟಿ ರೀತಿ ರಾಜ್ಯಾದ್ಯಂತ ಜಾರಿಗೊಳಿಸಲಿ.
ಅದನ್ನು ಬಿಟ್ಟು ಸರಕಾರವು ತನ್ನ ಪ್ರಯೋಗವನ್ನು ನಮ್ಮ ಮೇಲಷ್ಟೆ ಯಾಕೆ ಮಾಡಬೇಕು. ಈ ಭಾಗದ ರೈತರು ಬೇರೆ ಬೇರೆ ಎಪಿಎಂಸಿಗಳಿಗೆ ಹೋಗುತ್ತಾರೆ. ಆಗ ನಮಗಷ್ಟೇ ದೊಡ್ಡ ಹೊಡೆತ ಬೀಳುತ್ತದೆ. ಇದು ಸರಕಾರದ ನೀತಿಯೂ ಅಲ್ಲವೆಂದು ವರ್ತಕರ ಕ್ಷೇತ್ರದ ಚನ್ನಬಸಪ್ಪ ಹೊಸಮನಿ, ಎಪಿಎಂಸಿ ನಿರ್ದೇಶಕ ಸುರೇಶ ಕಿರೇಸೂರ ಹೇಳಿದರು.
ಇ-ಪಾವತಿ ಜಾಗೃತಿಗೆ ತಂಡ ರಚನೆ: ಇ-ಪಾವತಿ ಜಾರಿ ಕುರಿತು ರೈತರಿಗೆ ಮಾಹಿತಿ ನೀಡಲು ಹಾಗೂ ಅವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಪಿಎಂಸಿ ಆಡಳಿತ ಮಂಡಳಿಯು ಏಳು ತಂಡಗಳನ್ನು ರಚಿಸಿದೆ. ಪ್ರತಿ ತಂಡದಲ್ಲಿ ಉಪ ನಿರ್ದೇಶಕ ಸೇರಿದಂತೆ ಐದು ಜನರು ಇರುತ್ತಾರೆ. ಒಂದೊಂದು ತಂಡವು ಆಯಾ ಕ್ಷೇತ್ರದ ಎಪಿಎಂಸಿ ಸದಸ್ಯರ ನೇತೃತ್ವದಲ್ಲಿ 2 ಕ್ಷೇತ್ರಗಳಲ್ಲಿ ಸಂಚರಿಸಿ ಜಾಗೃತಿ ಮೂಡಲಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಕಾಂಗ್ರೆಸ್ ನಾಯಕರಿಂದ 29 ಸಾವಿರ ಎಕರೆ ವಕ್ಫ್ ಆಸ್ತಿ ಕಬಳಿಕೆ: ಪ್ರಹ್ಲಾದ್ ಜೋಶಿ
Hubballi: ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಅನ್ನುವ ಸಂಶಯವಿದೆ… : ಸಂಸದ ಕಾರಜೋಳ
Waqf Land Row: ರೈತರ ಜಮೀನು ವಶಕ್ಕೆ ಆದೇಶಿಸಿದ ಅಧಿಕಾರಿಗಳನ್ನು ವಜಾ ಮಾಡಿ: ರವಿಕುಮಾರ್
Karnataka Politics: ಬಿಜೆಪಿಯ ಅನೇಕ ಶಾಸಕರು ಕಾಂಗ್ರೆಸ್ ಸೇರಲು ಚಿಂತನೆ… ಲಕ್ಷ್ಮಣ ಸವದಿ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Maha Election; ಕಾಂಗ್ರೆಸ್ ಸಂವಿಧಾನ ಬದಲಾಯಿಸಿ ನಮ್ಮನ್ನು ದೂರುತ್ತಿದೆ: ನಿತಿನ್ ಗಡ್ಕರಿ
Arrested: ಲೈಜಾಲ್, ಹಾರ್ಪಿಕ್ ನಕಲಿ ಉತ್ಪನ್ನ ತಯಾರು: ಇಬ್ಬರ ಬಂಧನ
Mahalingpur: 2020ರ ಪುರಸಭೆ ಗಲಾಟೆ ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ
Kambala Result: ಪಣಪಿಲ ಜಯ-ವಿಜಯ ಜೋಡುಕರೆ ಕಂಬಳ ಕೂಟದ ಫಲಿತಾಂಶ
Delhi Ganesh: ಹಿರಿಯ ನಟ ಡೆಲ್ಲಿ ಗಣೇಶ್ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.