ಮಳೆನೀರು ಕೊಯ್ಲು ಜಾಗೃತಿ ಮೂಡಲಿ: ದೇವರಾಜ ರೆಡ್ಡಿ
Team Udayavani, Jul 25, 2017, 1:10 PM IST
ಚಿತ್ರದುರ್ಗ: ಮಳೆನೀರು ಕೊಯ್ಲು ಮಾಡುವ ಮೂಲಕ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಲತಜ್ಞ ದೇವರಾಜ ರೆಡ್ಡಿ ಹೇಳಿದರು.
ನಗರದ ವಾಸವಿ ವಿದ್ಯಾಸಂಸ್ಥೆ, ಚೆನ್ನೈನ ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರ, ಬೆಂಗಳೂರಿನ ವಿಪ್ರೋ ಅರ್ಥಿಯನ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಜ್ಞಾನ ಶಿಕ್ಷಕರಿಗೆ ಸೋಮವಾರ ಹಮ್ಮಿಕೊಂಡಿದ್ದ ಜೀವ ವೈವಿಧ್ಯ ಸ್ಥಿರತೆ ಹಾಗೂ ನೀರಿನ ಪ್ರಾಮುಖ್ಯತೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷಕ ಎಚ್. ನಾಗೇಂದ್ರಪ್ಪ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರಿಗೂ ಸುಸ್ಥಿರ ಶಿಕ್ಷಣ ಅಗತ್ಯ. ಮನುಷ್ಯ ಸ್ವಾರ್ಥಕ್ಕಾಗಿ ಗಿಡ ಮರ ಕಡಿದು ಕಾಡುಗಳನ್ನು
ನಾಶಪಡಿಸುತ್ತಿರುವುದರಿಂದ ಮಳೆ ಇಲ್ಲದೆ ನೀರಿನ ಅಭಾವ ತಲೆದೋರಿದೆ. ಆದ್ದರಿಂದ ಪ್ರತಿ ಶಾಲೆಯಲ್ಲೂ ಗಿಡ ಬೆಳೆಸುವ ಅರಿವನ್ನು ಮಕ್ಕಳಲ್ಲಿ ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಕರೆ ನೀಡದರು.
ಕರಾವಿಪ ಜಿಲ್ಲಾ ಸಮಿತಿ ಅಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ ಮಾತನಾಡಿ, ತರಬೇತಿ ಕೊಡುವುದರಲ್ಲಿಯೂ ಲೋಪವಾಗುತ್ತಿರುವುದರಿಂದ ಹೆಚ್ಚಿನ ಪ್ರಾಜೆಕ್ಟ್ಗಳನ್ನು ಮಕ್ಕಳು ಸಲ್ಲಿಸಲು ಆಗುತ್ತಿಲ್ಲ. ತರಬೇತಿಯಲ್ಲಿ ಪಡೆಯುವ ಮಾಹಿತಿಯನ್ನು ಶಿಕ್ಷಕರು ಮಕ್ಕಳ ಮನಸ್ಸಿಗೆ ನಾಟುವಂತೆ ತಿಳಿಸಿ ಗುಣಾತ್ಮಕ ಪ್ರಾಜೆಕ್ಟ್ಗಳನ್ನು ಸಿದ್ಧಪಡಿಸಿ ರಾಷ್ಟ್ರಮಟ್ಟದಲ್ಲಿ ಬಹುಮಾನ ಗಳಿಸುವಂತಾಗಬೇಕು ಎಂದು ಆಶಿಸಿದರು. ಬೆಂಗಳೂರಿನ ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರದ ಯೋಜನಾಧಿಕಾರಿ ರವಿಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರು ಇಲ್ಲಿ ಪಡೆಯುವ ತರಬೇತಿಯ ಮೂಲಕ ಮಕ್ಕಳಲ್ಲಿ ಜೀವವೈವಿಧ್ಯ ಹಾಗೂ ನೀರಿನ ಪ್ರಾಮುಖ್ಯತೆ ಕುರಿತು ತಿಳಿಸಬೇಕು. ನೀರು ಸ್ಥಿರತೆ ಮತ್ತು ಜೀವ ವೈವಿಧ್ಯ ಸ್ಥಿರತೆ ಪ್ರಾಜೆಕ್ಟ್ಗೆ ಕಳೆದ ವರ್ಷ ತುಮಕೂರಿನ ಗುರುಕುಲ ಶಾಲೆ ಆಯ್ಕೆಯಾಗಿ 1 ಲಕ್ಷ ರೂ. ಬಹುಮಾನ ಪಡೆಯಿತು. ಅದರಂತೆ ಚಿತ್ರದುರ್ಗದವರೂ ಪಡೆಯಲು ಪ್ರಯತ್ನ ಮಾಡಬೇಕೆಂದರು.
ಮಧುಗಿರಿ ವಿಜ್ಞಾನ ಕೇಂದ್ರದ ಅಧ್ಯಕ್ಷ ರಾಮಕೃಷ್ಣಪ್ಪ ಇದ್ದರು. ಕರಾವಿಪ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಚ್.ಎಸ್.ಟಿ. ಸ್ವಾಮಿ
ಸ್ವಾಗತಿಸಿದರು. ಹನುಮಂತಪ್ಪ ನಿರೂಪಿಸಿದರು. ಮಂಜುನಾಥ್ ವಂದಿಸಿದರು. ಅರಳಿಮರವಿರುವಲ್ಲಿ ನೀರಿರುವುದು ತಪ್ಪು ಕಲ್ಪನೆ
ಮಳೆನೀರನ್ನು ಭೂಮಿಯಲ್ಲಿ ಇಂಗಿಸದ ಕಾರಣ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಪ್ರತಿಯೊಂದು ಮನೆಯಲ್ಲೂ ಮಳೆನೀರು ಸಂಗ್ರಹ ಮಾಡಿಕೊಂಡಾಗ 2-3 ವರ್ಷಗಳವರೆಗೆ ಕುಡಿಯಲು ಬಳಸಬಹುದು. ಅರಳಿಮರ,
ಹುತ್ತಗಳು ಇರುವ ಕಡೆ ನೀರು ಸಿಗುತ್ತದೆಎಂಬ ನಂಬಿಕೆ ಇದೆ. ಆದರೆ ಭೂವಿಜ್ಞಾನಿಗಳ ಪ್ರಕಾರ ಇದು ನಿಜವಲ್ಲ. ಕೆರೆ ಕಟ್ಟೆ ತುಂಬಿದರೆ
ಅಂತರ್ಜಲ ಹೆಚ್ಚಲಿದೆ ಎಂಬ ಭಾವನೆ ಇದೆ. ಆದರೆ ಸುತ್ತಮುತ್ತ ಎಲ್ಲಿಯಾದರೂ ಕೊಳವೆಬಾವಿ ಕೊರೆದರೆ ನೀರೇ ಬರುವುದಿಲ್ಲ
ಎಂದು ದೇವರಾಜ ರೆಡ್ಡಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.