ನಾಗನಿಗೇಕೆ ಪೂಜೆ? ಭಾವ ಬಂಧ ಬೆಸೆಯುವ ನಾಗರಪಂಚಮಿ

Team Udayavani, Jul 26, 2017, 6:05 AM IST

naga-panchami.jpg

ನಾಳೆ ನಾಗರ ಪಂಚಮಿಯ ಸಡಗರ. ಹಾವುಗಳು ಅಂಕುಡೊಂಕಾಗಿ ಸಾಗುವಂತೆ ಮಹಿಳೆಯ ಮನಸ್ಸು ಕೂಡ ಹಾಗೆಯೇ ಚಲಿಸುವಂಥದ್ದು. ಅದಕ್ಕೇ ಸ್ತ್ರೀಗೆ ನಾಗನ ಮೇಲೆ ವಿಶೇಷ ಭಕ್ತಿ… 

ಆಷಾಡ ಮಾಸ ಕಳೆದು ಶ್ರಾವಣ ಬಂತೆಂದರೆ ಹಬ್ಬಗಳದ್ದೇ ಸಾಲು  ಸಾಲು. ಅದರಲ್ಲಿ ಆರಂಭದ ಸಂಭ್ರಮವೇ “ನಾಗರಪಂಚಮಿ’ಯದ್ದು. ಕುಟುಂಬದ ನೆಮ್ಮದಿ, ಆರೋಗ್ಯ, ಸಂತಾನ ಲಾಭ ಮೊದಲಾದ ಉದ್ದೇಶದಿಂದ ನಾಗರಪಂಚಮಿಗೆ ಸ್ತ್ರೀಯರು ಹೆಚ್ಚು ಆದ್ಯತೆ ನೀಡುತ್ತಾರೆ. ವರ್ಷ ಋತುವಿನ ಶ್ರಾವಣ ಮಾಸದ ತುಂತುರು ಹನಿಯಿಂದ ಭೂಮಿ ತಾಯಿಯು ತನ್ನ  ದಾಹವನ್ನು ತೀರಿಸಿಕೊಂಡು, ಮೈ ತುಂಬಾ ಹಸಿರನ್ನುಟ್ಟ ಸುಂದರಿಯಂತೆ ಈ  ಹಬ್ಬಕ್ಕೆ ಸಿಂಗಾರಗೊಂಡಿರುತ್ತದೆ.

ಹಾವುಗಳು ಅಂಕುಡೊಂಕಾಗಿ ಸಾಗುವಂತೆ ಮಹಿಳೆಯ ಮನಸ್ಸು ಕೂಡ ಹಾಗೆಯೇ ಚಲಿಸುವಂಥದ್ದು. ಅದಕ್ಕೇ ಆಕೆಗೆ ನಾಗನ ಮೇಲೆ ಭಕ್ತಿಯೂ ಅಧಿಕ. ಅಂದು ನಾಗನ ಆರಾಧನೆಗೆ ಹುತ್ತದ ಮಣ್ಣು, ಹುಲಿಕಡ್ಡಿ, ಹುಣಸೆಕಾಯಿ, ಅರಳು, ತಂಬಿಟ್ಟು, ಅಕ್ಕಿಹಿಟ್ಟು, ಎಳ್ಳುಂಡೆ ಮುಂತಾದುವುಗಳ ತಯಾರಿ ಜೋರಾಗಿಯೇ ಸಾಗುತ್ತದೆ. ಹುಲಿಕಡ್ಡಿಯಿಂದ ಚಿಕ್ಕದಾಗಿ ಚಪ್ಪರವನ್ನು ನಿರ್ಮಿಸಿ, ಅದರಡಿಯಲ್ಲಿ ಹುತ್ತದ ಮಣ್ಣಿನಿಂದ ತಯಾರಿಸಿದಂಥ ನಾಗನನ್ನು ಪ್ರತಿಷ್ಠಾಪಿಸಿ, ಹಸಿ ಅಕ್ಕಿಹಿಟ್ಟಿನಿಂದ ಸಿದ್ಧಪಡಿಸಿದ ತೊಟ್ಟಿಲಿನಂಥ ಬಟ್ಟಲನ್ನು ಇಟ್ಟು ಅರಿಶಿನದಲ್ಲಿ ನೆನೆಸಿ ತೆಗೆದಂಥ ಹಳದಿ ಗೆಜ್ಜೆ ವಸ್ತ್ರಗಳನ್ನು ನಾಗಪ್ಪನಿಗೆ ಅರ್ಪಿಸುವುದು ವಾಡಿಕೆ. ಇದನ್ನು ಚಾಚೂ ತಪ್ಪದೇ ಮಾಡುವ ಕಾಯಕ ಮನೆಯೊಡತಿಯದ್ದು. 

ನಾಗರಪಂಚಮಿ ಬಾಂಧವ್ಯವನ್ನೂ ಬೆಸೆಯುವ ಹಬ್ಬ. ಪ್ರೀತಿಯ ತಂಗಿಗೆ ಅಣ್ಣನು ಉಡುಗೊರೆ ನೀಡಲು ಇದೊಂದು ಸುಸಂದರ್ಭ. ಅಣ್ಣ ತನ್ನ ಕೈಯಲ್ಲಾದ ಉಡುಗೊರೆಯನ್ನು ಕೊಟ್ಟು, ತಂಗಿಯ ಮೊಗದ ಖುಷಿಯಲ್ಲಿ ಕಂಡು ಹಿಗ್ಗುತ್ತಾನೆ. ಇಬ್ಬರ ಸಂಬಂಧ ಇನ್ನಷ್ಟು ಗಟ್ಟಿಯಾಗುವುದು ಈ ಉಡುಗೊರೆಯ ವಿಶೇಷ.

ಸರ್ಪರಾಜನೇ ಸಂಜೀವಿನಿ ತಂದ!
ಹಿಂದೆ ಪಾಂಡ್ಯ ದೇಶದಲ್ಲಿ ವೇದಶರ್ಮನೆಂಬ ಬ್ರಾಹ್ಮಣನಿದ್ದನು. ಆತನಿಗೆ ಎಂಟು ಗಂಡುಮಕ್ಕಳು ಹಾಗೂ ಒಬ್ಬಳೇ ಮಗಳು. ಅವಳ ಹೆಸರು ಸುಶೀಲೆ. ಒಮ್ಮೆ ಗರುಡ ರಾಜನಿಗೆ ಹೆದರಿ ನಾಗರ ಹಾವೊಂದು ಸುಶೀಲೆಯ ಮನೆಯನ್ನು ಹೊಕ್ಕಿತು. ಸದ್ಗುಣೆಯಾದ ಸುಶೀಲೆ ಆ ಹಾವನ್ನು ಸಲಹಿದಳು. ಸಂತುಷ್ಟಗೊಂಡ ಹಾವು ಪ್ರತಿದಿನ ಒಂದು ತೂಕ ಚಿನ್ನ ತಂದುಕೊಡುತ್ತಿತ್ತು. ಇದರಿಂದ ಮನೆಯ ಬಡತನ ನಿರ್ಮೂಲವಾಯಿತು. ದುರದೃಷ್ಟವಶಾತ್‌ ಸುಶೀಲೆಯ ಅಣ್ಣಂದಿರಿಗೆ ಹಾವಿನ ವಿಚಾರ ತಿಳಿದು, ಅದನ್ನು ಕೊಲ್ಲಲು ಮುಂದಾಗುತ್ತಾರೆ. ರೋಷಗೊಂಡ ಹಾವು ಎಲ್ಲರನ್ನೂ ಕಚ್ಚಿಬಿಡುತ್ತದೆ.

ಇದರಿಂದ ನೊಂದ ಸುಶೀಲೆ, ಶ್ರೀಮನ್ನಾರಾಯಣನ ಮೊರೆ ಹೋಗುತ್ತಾಳೆ. “ಸರ್ಪರಾಜನೇ, ಸಂಜೀವಿನಿ ರಸ ತಂದು ಬ್ರಾಹ್ಮಣನ ಮಕ್ಕಳನ್ನು ಬದುಕಿಸು’ ಎಂದು ನಾರಾಯಣನ ಸೂಚನೆ ಮೇರೆಗೆ ನಾಗರಾಜನು ಬ್ರಾಹ್ಮಣನ ಪುತ್ರರನ್ನು ಬದುಕಿಸಿ, ಆ ಕನ್ಯೆಗೆ ಅಪರಿಮಿತ ಸಂಪತ್ತು ಕೊಟ್ಟನಂತೆ. ಅಂದಿನಿಂದಲೂ ನಾಗಪೂಜೆಗೆ ವಿಶೇಷ ಮಹತ್ವ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿವಸ ನಾಗ ಪೂಜೆ ಮಾಡಿದರೆ ಸರ್ವಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

– ಭಾಗ್ಯ ನಂಜುಂಡಸ್ವಾಮಿ

ಟಾಪ್ ನ್ಯೂಸ್

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

County Championship: Umpires objected to Shakib Hasan’s bowling style

County Championship: ಶಕಿಬ್‌ ಹಸನ್‌ ಬೌಲಿಂಗ್‌ ಶೈಲಿ ಬಗ್ಗೆ ಅಂಪೈರ್‌ ಗಳ ಆಕ್ಷೇಪ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ

ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.