“ಕಾಂತಿ’ಕಾರಿ ಪರಿಣೀತಿ, 15 ನಿಮಿಷದಲ್ಲಿ ರೆಡಿ ಆಗುವ ಚೋಪ್ರಾ!
Team Udayavani, Jul 26, 2017, 6:20 AM IST
ಕನ್ನಡಿಯ ಮುಂದೆ ಗಂಟೆಗಟ್ಟಲೆ ನಿಂತು ಸಿಂಗಾರಗೊಂಡರೆ, ಸೌಂದರ್ಯವತಿ ಆಗೋದಿಲ್ಲ ಅನ್ನೋದು ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಪ್ರತಿಪಾದನೆ. ಕ್ವಿಕ್ ಆಗಿ ರೆಡಿಯಾಗುವ ನಟಿಯರ ಪೈಕಿ ಪರಿಣೀತಿಗೆ ಮೊದಲನೇ ಸ್ಥಾನವೆಂದು “ಫೆಮಿನಾ’ ಮ್ಯಾಗಜಿನ್ ಗುರುತಿಸಿದೆ. ಮುಖದ ಅಂದಕ್ಕೆ ಈ ನಟಿ ದಿನದಲ್ಲಿ ನೀಡುವುದು ಕೇವಲ ಹದಿನೈದೇ ನಿಮಿಷ…
– ಪರಿಣೀತಿ ಮೊದಲು ಆರಂಭಿಸುವುದು, ಒಳ್ಳೆಯ ಫೇಸ್‌ವಾಶ್ ಮೂಲಕ. ಮುಖದಲ್ಲಿನ ಧೂಳು, ಕಲ್ಮಶ, ಬೆವರುಗಳನ್ನೆಲ್ಲ ದೂರ ಮಾಡಲು ಇದು ನೆರವಾಗುತ್ತೆ. ಕುತ್ತಿಗೆಯ ತನಕವೂ ಫೇಸ್‌ವಾಶ್ ಅಪ್ಲೆ„ ಮಾಡಿಕೊಳ್ಳುತ್ತಾರೆ.
– ನಂತರ ಇವರು ಗುಣಮಟ್ಟದ ಮಾಯಿಶುcರೈಸರ್ ಅನ್ನು ಮುಖಕ್ಕೆ ಅಪ್ಲೆ„ ಮಾಡಿಕೊಳ್ಳುತ್ತಾರೆ. ಈ ಮಾಯಿಶುcರೈಸರ್‌ಗಳು ತುಸು ದುಬಾರಿ ಎನಿಸಿದರೂ, ಚರ್ಮದ ಆಳದ ವರೆಗೆ ಪ್ರಭಾವ ಬೀರಿ, ಮೃದು ಚರ್ಮವನ್ನು ದಯಪಾಲಿಸುತ್ತವೆ.
– ಪರಿಣೀತಿ ಹೆಚ್ಚಾಗಿ ನೈಸರ್ಗಿಕ ಉತ್ಪನ್ನಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಆಲೋವೆರಾ ಅಚ್ಚುಮೆಚ್ಚು. ಇದರಲ್ಲಿನ ಎ,ಬಿ, ಸಿ ಮತ್ತು ಇ ವಿಟಮಿನ್ಸ್‌ಗಳು ಕಾಂತಿಯನ್ನು ಇಮ್ಮಡಿಗೊಳಿಸುವುದರಿಂದ, ಅಲೋವೆರಾ ರಸವನ್ನು ಮುಖಕ್ಕೆ ಲೇಪಿಸಲು ಇವರು ಎಂದೂ ಮರೆಯುವುದಿಲ್ಲ.
– ಲಿಪ್ ಬಾಮ್ ಅನ್ನು ಬ್ಯಾಗಿನಲ್ಲಿಟ್ಟುಕೊಳ್ಳದೆ ಪರಿಣೀತಿ ಚೋಪ್ರಾ ಹೊರಗೆ ಕಾಲಿಡೋದಿಲ್ಲ. ತುಟಿಯನ್ನು ಸದಾ ತೇವವಾಗಿಟ್ಟು, ಚಳಿಗೆ, ದೇಹದ ಉಷ್ಣಕ್ಕೆ ತುಟಿ ಒಡೆಯದೇ ಇರುವಂತೆ ಲಿಪ್ ಬಾಮ್ ನೋಡಿಕೊಳ್ಳುತ್ತದೆ.
– ಉಳಿದಂತೆ ಹೆಚ್ಚೆಚ್ಚು ನೀರು ಕುಡಿಯುವುದರಿಂದ ಚರ್ಮ ಹೊಳಪೇರುತ್ತದೆ. 8 ತಾಸು ನಿದ್ರಿಸುವುದರಿಂದ, ಕಣ್ಣುಗಳು ಕಾಂತಿಯುಕ್ತವಾಗುತ್ತವೆ ಎನ್ನುವುದು ಈ ನಟಿ ಕಂಡುಕೊಂಡ ಅನುಭವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.