ಮಣಿಪಾಲ: ಸೋನಿಯಾ ಕ್ಲಿನಿಕ್ ರಕ್ತದಾನ ಶಿಬಿರ ಉದ್ಘಾಟನೆ
Team Udayavani, Jul 26, 2017, 5:25 AM IST
ಉಡುಪಿ: ಡಾ| ಎ.ಪದ್ಮಾ ರಾವ್ ಅವರ ಸ್ಮರಣಾರ್ಥ ಸೋನಿಯಾ ಕ್ಲಿನಿಕ್ ಮತ್ತು ಮಣಿಪಾಲ ನರ್ಸಿಂಗ್ ಹೋಮ್, ಎಸ್‌ಕೆಡಿಆರ್‌ಡಿಪಿ ಪ್ರಾಯೋಜಿತ ಕೀರ್ತಿ ಒಕ್ಕೂಟ, ರೋಟರಿ ಕ್ಲಬ್ ಉಡುಪಿ-ಮಣಿಪಾಲ ಹಾಗೂ ಉಡುಪಿ ಜಿಲ್ಲಾಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಮಣಿಪಾಲದ ಸೋನಿಯಾ ಕ್ಲಿನಿಕ್‌ನಲ್ಲಿ 5ನೇ ವರ್ಷದ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಕೆಎಂಸಿ ಮಣಿಪಾಲದ ಮಾಜಿ ಡೀನ್ ಡಾ| ಕೃಷ್ಣ ರಾವ್ ಅವರು ಶಿಬಿರ ಉದ್ಘಾಟಿಸಿದರು. ಕೆಎಂಸಿ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಡಾ| ಶಮಿ ಶಾಸಿŒ ಅವರು ರಕ್ತದಾನದ ಪೂರೈಕೆ ಮತ್ತು ಬೇಡಿಕೆಗಳ ಮಾಹಿತಿಯನ್ನು ನೀಡಿದರು. ರಕ್ತದಾನಿಗಳಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಶಿಬಿರದಲ್ಲಿ 70 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಸೋನಿಯಾ ಕ್ಲಿನಿಕ್‌ನ ವೈದ್ಯರುಗಳಾದ ಡಾ| ಗಿರಿಜಾ, ಡಾ| ಗೌರಿ, ಡಾ| ಶುಭಗೀತಾ, ಡಾ| ರಾಮಕೃಷ್ಣ, ಉಡುಪಿ-ಮಣಿಪಾಲ ರೋಟರಿ ಅಧ್ಯಕ್ಷೆ ಗೀತಾ ಕೌಶಿಕ್, ಜಿಲ್ಲಾ ರಕ್ತನಿಧಿ ವಿಭಾಗದ ಡಾ| ಶಶಿಧರ್, ಎಸ್‌ಕೆಡಿಆರ್‌ಡಿಪಿ ಕೀರ್ತಿ ಒಕ್ಕೂಟದ ಅಧ್ಯಕ್ಷೆ ಸತೀಶ್ ಕುಮಾರ್ ಮಂಚಿ, ಮಾಜಿ ಅಧ್ಯಕ್ಷ ರಮೇಶ್ ಕಾಮತ್, ಗಿರಿಜಾ ಕಾಮತ್, ಸೇವಾ ಪ್ರತಿನಿಧಿ ಚಂದ್ರಕಲಾ ಉಪಸ್ಥಿತರಿದ್ದರು.
ಡಾ| ಗಿರಿಜಾ ಸ್ವಾಗತಿಸಿದರು. ಗಿರಿಜಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಕಾಮತ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.