2021: ಭಾರತದಲ್ಲಿ ಪುರುಷರ ವಿಶ್ವ ಬಾಕ್ಸಿಂಗ್
Team Udayavani, Jul 26, 2017, 7:30 AM IST
ಹೊಸದಿಲ್ಲಿ: ದೇಶದ ಬಾಕ್ಸಿಂಗ್ ಪ್ರಿಯರಿಗೊಂದು ಸಂತಸದ ಸುದ್ದಿ. 2021 ರಲ್ಲಿ ನಡೆಯಲಿರುವ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗೆ ಭಾರತ ಆತಿಥ್ಯ ವಹಿಸಲಿದೆ.
ಭಾರತ ಮೆಗಾ ವಿಶ್ವ ಬಾಕ್ಸಿಂಗ್ ಕೂಟವೊಂದರ ಭಾರತ ಆತಿಥ್ಯ ವಹಿ ಸುತ್ತಿರುವುದು ಇದೇ ಮೊದಲು ಎಂಬುದು ವಿಶೇಷ. ಈ ವಿಷಯವನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ಮಂಗಳವಾರ ಮಾಸ್ಕೋದಲ್ಲಿ ನಡೆದ 2 ದಿನಗಳ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಕಟಿಸಿದೆ.
ಮೊದಲ ಬಾರಿ ಆತಿಥ್ಯ
2006ರಲ್ಲಿ ಮಹಿಳಾ ಬಾಕ್ಸಿಂಗ್ ಕೂಟವನ್ನು ಭಾರತ ಯಶಸ್ವಿಯಾಗಿ ಆಯೋಜಿಸಿತ್ತು. ಆದರೆ ಪುರುಷರ ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತ ಇದುವರೆಗೆ ಆತಿಥ್ಯ ವಹಿಸಿರಲಿಲ್ಲ. 1990ರಲ್ಲಿ ಭಾರತ ಮುಂಬಯಿಯಲ್ಲಿ ವಿಶ್ವ ಕಪ್ ಕೂಟವನ್ನು ಆಯೋ ಜಿಸಿತ್ತು. ಅನಂತರ ಭಾರತದ ಆತಿಥ್ಯದಲ್ಲಿ ನಡೆದ ದೊಡ್ಡ ಕೂಟವೆಂದರೆ 2010ರಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್. ಇದು ಹೊಸದಿಲ್ಲಿಯಲ್ಲಿ ನಡೆದಿತ್ತು. ಭಾರತ ಅತ್ಯಂತ ಯಶಸ್ವಿಯಾಗಿ ಈ ಕೂಟವನ್ನು ಆಯೋಜಿಸಿತ್ತು ಎನ್ನುವುದು ಗಮನಾರ್ಹ ಸಂಗತಿ.
2019ರಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್ ಕೂಟಕ್ಕೆ ಸೋಚಿ ಆತಿಥ್ಯ ವಹಿಸುತ್ತಿದೆ. ಇದಾದ ಬಳಿಕ ನಡೆಯ ಲಿರುವ ಕೂಟಕ್ಕೆ ಭಾರತ ಆತಿಥ್ಯ ವಹಿ ಸಲಿದೆ ಎನ್ನುವುದನ್ನು ಪ್ರಕಟಿಸುವುದಕ್ಕೆ ಸಂತಸವಾಗುತ್ತಿದೆ. ಭಾರತದಲ್ಲಿ ಈ ಕೂಟ ನಡೆಸುವುದರಿಂದ ಕ್ರೀಡೆಗೆ ಹೆಚ್ಚು ಉತ್ತೇಜನ ಸಿಗಲಿದೆ ಎಂದು ಎಐಬಿಎ ಅಧ್ಯಕ್ಷ ಚಿಂಗ್ ಕೂ ವು ಹೇಳಿದರು.
ಗ್ರೇಟ್ ನ್ಯೂಸ್: ಕ್ರೀಡಾ ಸಚಿವ
ಭಾರತಕ್ಕೆ ವಿಶ್ವ ಬಾಕ್ಸಿಂಗ್ ಆತಿಥ್ಯ ಭಾಗ್ಯ ಸಿಗುತ್ತಿದ್ದಂತೆ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಟ್ವೀಟ್ ಮಾಡಿದ್ದಾರೆ. ಗ್ರೇಟ್ ನ್ಯೂಸ್…ಬಾಕ್ಸಿಂಗ್ ಪ್ರೇಮಿಗಳಿಗೆ ಹಾಗೂ ಆಟಗಾರರಿಗೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮಹತ್ವದ ಕೂಟಗಳನ್ನು ಒಂದರ ಹಿಂದೆ ಒಂದರಂತೆ ಆಯೋಜಿಸುತ್ತಿದ್ದೇವೆ. ಎಐಬಿಎ ಅಧ್ಯಕ್ಷರು ಇಂತಹದೊಂದು ಮಹತ್ವದ ತೀರ್ಮಾನ ನಮಗಾಗಿ ತೆಗೆದು ಕೊಂಡಿದ್ದಾರೆ ಎಂದು ಭಾರತೀಯ ಬಾಕ್ಸಿಂಗ್ ಒಕ್ಕೂಟ ಅಜಯ್ ಸಿಂಗ್ ತಿಳಿಸಿದ್ದಾರೆ.
ಅಮಾನತಾಗಿದ್ದ ಭಾರತ
2012ರಲ್ಲಿ ನೀತಿ ಸಂಹಿತೆ ರೂಪಿಸದೆ ಅರಾಜಕತೆ ಸೃಷ್ಟಿಸಿದ ಹಿನ್ನೆಲೆಯಲ್ಲಿ ಎಐಬಿಎ ಭಾರತೀಯ ಬಾಕ್ಸಿಂಗ್ ಒಕ್ಕೂಟವನ್ನು ಅಮಾನತು ಮಾಡಿತ್ತು. ಹೊಸದಾಗಿ ಚುನಾವಣೆ ನಡೆಸುವವರೆಗೆ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಭಾರತೀಯ ಬಾಕ್ಸರ್‌ಗಳು ಹಲವು ಕೂಟಗಳಲ್ಲಿ ಒಲಿಂಪಿಕ್ಸ್ ಧ್ವಜದಡಿ ಸ್ಪರ್ಧಿಸಬೇಕಾಗಿ ಬಂದಿತ್ತು. ಕಳೆದ ವರ್ಷವಷ್ಟೇ ಚುನಾವಣೆ ನಡೆದು ಪಾರದರ್ಶಕ ಆಡಳಿತ ತೋರಿಸಿದ ಅನಂತರ ಎಐಬಿಎ ಅಮಾನತು ಹಿಂದಕ್ಕೆ ತೆಗೆದುಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rohit Sharma; ಸಿಡ್ನಿ ಟೆಸ್ಟ್ ಬಳಿಕ ರೋಹಿತ್ ವಿದಾಯ?
Team India; 2025 ಭಾರತ ಆಡುವುದು ಹತ್ತೇ ಟೆಸ್ಟ್
Women’s ODI rankings; 5ನೇ ಸ್ಥಾನಕ್ಕೆ ಏರಿದ ದೀಪ್ತಿ ಶರ್ಮ
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Team India: ಇಂಗ್ಲೆಂಡ್ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್ ಗೆ ನಾಯಕತ್ವದ ಹೊಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು
Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ
EPF ನಿಧಿ ವಂಚನೆ: ರಾಬಿನ್ ಉತಪ್ಪ ವಿರುದ್ದದ ವಾರಂಟ್‌ಗೆ ಹೈಕೋರ್ಟ್ ತಡೆ
Bengaluru: ರಂಗೇರಿದ ರಾತ್ರಿಯಲ್ಲಿ ಹೊಸ ವರ್ಷದ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.