ಪಾಕ್ ಉಗ್ರಗಾಮಿಗೆ 7ವರ್ಷ ಕಠಿಣ ಜೈಲು ಶಿಕ್ಷೆ
Team Udayavani, Jul 26, 2017, 11:52 AM IST
ಬೆಂಗಳೂರು: 2006ರಲ್ಲಿ ಮೈಸೂರಿನಲ್ಲಿ ಸಿಕ್ಕಿಬಿದ್ದಿದ್ದ ಪಾಕ್ ಮೂಲದ ಉಗ್ರನೊಬ್ಬನಿಗೆ ಹಣ ದುರ್ಬಳಕೆ ತಡೆ ಕಾಯಿದೆ (ಪಿಎಂಎಲ್‌ಎ) ಪ್ರಕರಣದಲ್ಲಿ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಸಿಟಿಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ. ಒಂದು ವೇಳೆ ಅಪರಾಧಿ ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ 6 ತಿಂಗಳ ಕಾಲ ಜೈಲು ಶಿಕ್ಷೆ ಪೂರೈಸಬೇಕು.
ಜೊತೆಗೆ ಜಾರಿ ನಿರ್ದೇಶನಾಲಯ ಉಲ್ಲೇಖೀಸಿದ್ದ 44,174 ಅಕ್ರಮ ಹಣಕ್ಕೆ ಬಡ್ಡಿ ಸೇರಿ ಒಟ್ಟು 90.470 ರೂಪಾಯಿ ದಂಡ ಪಾವತಿಸಬೇಕು ಎಂದು ಸಿಟಿಸಿವಿಲ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಸವರಾಜ್ ಎಸ್ ಸಪ್ಪಣ್ಣನವರ್ ತೀರ್ಪು ನೀಡಿದ್ದಾರೆ. ಮೈಸೂರಿನಲ್ಲಿ ಉಗ್ರರು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಸುಳಿವು ಆಧರಿಸಿ 2006 ನವೆಂಬರ್ 26ರ ರಾತ್ರಿ ಆರೋಪಿಗಳ ಪತ್ತೆಗೆ ಪೊಲೀಸರು ಮೈಸೂರಿನ ವಿಜಯನಗರದ ರಿಂಗ್ ರೋಡ್‌ನಲ್ಲಿ ಹೊಂಚು ಹಾಕಿದ್ದರು.
ಈ ವೇಳೆ ಅದೇ ಮಾರ್ಗವಾಗಿ ಬೈಕ್‌ನಲ್ಲಿ ಬಂದ ಫಹಾದ್ ಹೈ ಹಾಗೂ ಆತನ ಸ್ನೇಹಿತ ಮೊಹಮದ್ ಅಲಿ ಹುಸೇನ್ ಎಂಬುವವರನ್ನು ತಡೆಗಟ್ಟಿ ವಿಚಾರಣೆಗೊಳಪಡಿಸಿ ಐಡಿ ಕಾರ್ಡ್ ತೋರಿಸುವಂತೆ ಪೊಲೀಸರು ತಾಕೀತು ಮಾಡಿದಾಗ ಅಲಿಹುಸೇನ್ ತನ್ನ ಬ್ಯಾಗ್‌ನಲ್ಲಿದ್ದ ಗನ್ ತೆಗೆದು ಪೊಲೀಸರತ್ತ ಗುಂಡು ಹಾರಿಸಲು ಮುಂದಾಗಿದ್ದ. ಈ ವೇಳೆ ಪೊಲೀಸರು ಪ್ರತಿದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ವಿಚಾರಣೆ ವೇಳೆ ಬಯಲಾಗಿತ್ತು ಸ್ಫೋಟಕ ಮಾಹಿತಿ!: ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಸ್ಫೋಟಕ ಮಾಹಿತಿ ಲಭ್ಯವಾಗಿತ್ತು. ಪಾಕ್ ಮೂಲದ ನಿಷೇಧಿತ ಉಗ್ರ ಸಂಘಟನೆ ಆಲ್ ಬಾದ್ರಾ ಸದಸ್ಯರಾಗಿದ್ದ ಇಬ್ಬರೂ, ಉಗ್ರ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ಭಾರತ ಪ್ರವೇಶಿಸಿ ಮೈಸೂರಿನ ಉದಯಗಿರಿ ಸಮೀಪ ರಾಜೀವ್‌ನಗರದಲ್ಲಿ ವಾಸಿಸುತ್ತಿದ್ದರು ಎಂಬ ಸಂಗತಿ ಹೊರಬಿದ್ದಿತ್ತು. ಅಲ್ಲದೆ ಬಂಧಿತರಿಂದ ಎಕೆ.47 ರೈಫಲ್, ಪಿಸ್ತೂಲ್. ಜೀವಂತ ಗುಂಡುಗಳು ಹಾಗೂ ಸ್ಯಾಟ್‌ಲೆçಟ್ ಫೋನ್‌ಗಳನ್ನು ಪೊಲೀಸರು ಜಫ್ತಿ ಮಾಡಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.