ಗುತ್ತಿಗೆ ಪದ್ಧತಿ ಕೈಬಿಡಲು ಆಗ್ರಹ
Team Udayavani, Jul 26, 2017, 2:06 PM IST
ರಾಯಚೂರು: ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆಯ ಸಿ ಮತ್ತು ಡಿ ಗ್ರೂಪ್ ನೌಕರರ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಬೇಕು ಹಾಗೂ ಹೈಕೋರ್ಟ್ ನೀಡಿದ ಆದೇಶದ ಪ್ರಕಾರ ಕಾರ್ಮಿಕರನ್ನು ಸೇವೆಯಲ್ಲಿ ಮುಂದುವರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕ ಸಂಘದ (ಟಿಯುಸಿಐ ಸಂಯೋಜಿತ) ಸದಸ್ಯರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಧರಣಿ ಕುಳಿತ ಕಾರ್ಮಿಕರು ಜಿಪಂ ಸಿಇಒಗೆ ಮನವಿ ಸಲ್ಲಿಸಿದರು. ಈ ಎರಡು ಇಲಾಖೆ ಅಧಿಕಾರಿಗಳು ಹೊರಗುತ್ತಿಗೆ ಏಜೆನ್ಸಿಗಳಿಗೆ ನೌಕರರನ್ನು ಸರಬರಾಜು ಮಾಡಲು ಅಧಿಸೂಚನೆ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಸೇವೆಯಲ್ಲಿರುವ ಕಾರ್ಮಿಕರಿಗೆ ತೊಂದರೆ ನೀಡಲಾಗುತ್ತಿದೆ. ವಸತಿ ನಿಲಯಗಳಲ್ಲಿ 15ರಿಂದ 20 ವರ್ಷಗಳಿಂದ ಕಾರ್ಮಿಕರು
ದುಡಿಯುತ್ತಿದ್ದಾರೆ. ಇವರ್ಯಾರು ಹೊರಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿಲ್ಲ. ಇವರನ್ನು ಯಾವುದೇ ಹೊರಗುತ್ತಿಗೆ ಏಜೆನ್ಸಿ ಸರಬರಾಜು ಮಾಡಿಲ್ಲ. ಈ ವಿಚಾರದಲ್ಲಿ ಕಲಬುರಗಿ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದು, ಹೊರಗುತ್ತಿಗೆಗೆ ಸಂಬಂಧಿಸಿ ಹೊರಡಿಸಿದ ಅಧಿಸೂಚನೆಗೆ ಜೂ.27ರಂದು ತಡೆ ನೀಡಿದೆ. ಮುಖ್ಯವಾಗಿ ಈಗಿರುವ ಕಾರ್ಮಿಕರಿಗೆ ತೊಂದರೆ ನೀಡದಂತೆ ಉಲ್ಲೇಖೀಸಿದೆ. ಆದರೆ, ಅಧಿಕಾರಿಗಳ ನಡೆಯಿಂದ ಕಾರ್ಮಿಕರು ಅತಂತ್ರಕ್ಕೆ ಸಿಲುಕಿದ್ದು, ಹೊರಗುತ್ತಿಗೆ ಅನುಷ್ಠಾನವಾದರೆ ಕಾರ್ಮಿಕರು ಸೇವಾ ಹಿರಿತನ ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಸರ್ಕಾರ ಹೊರಗುತ್ತಿಗೆ ಪದ್ಧತಿ ಅನುಷ್ಠಾನಗೊಳಿಸುವ ಮೂಲಕ 173 ವಸತಿ ನಿಲಯಗಳ 1,300ಕ್ಕೂ ಅಧಿಕ ಕಾರ್ಮಿಕರನ್ನು ಅತಂತ್ರಕ್ಕೆ ದೂಡುತ್ತಿದೆ. ಸರ್ಕಾರ ಕೂಡಲೇ ಅ ಧಿಸೂಚನೆ ಹಿಂಪಡೆಯಬೇಕು. ಹೊರಗುತ್ತಿಗೆ ಟೆಂಡರ್ ಕೂಡಲೇ ಕೈಬಿಟ್ಟು ಹಾಲಿ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಸಮಾನ ದುಡಿಮೆಗೆ ಸಮಾನ ವೇತನ, ಬಾಕಿ ವೇತನ
ಪಾವತಿ, 12 ತಿಂಗಳ ವೇತನ ಪಡೆದು ಕಾರ್ಮಿಕರಿಗೆ ಮಾತ್ರ ಒಂಭತ್ತು ತಿಂಗಳ ವೇತನ ನೀಡುವ ಅಧಿಕಾರಿಗಳನ್ನು ಅಮಾನತು ಮಾಡುವುದು ಸೇರಿ ಕಾರ್ಮಿಕರಿಗಾಗುತ್ತಿರುವ ಅನ್ಯಾಯ ತಡೆಗಟ್ಟುವಂತೆ ಒತ್ತಾಯಿಸಿದರು.
ಸಂಘಟನೆ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಕಾರ್ಮಿಕ ಸಂಘದ ಅಧ್ಯಕ್ಷ ಜಿ.ಅಮರೇಶ, ಪ್ರಧಾನ ಕಾರ್ಯದರ್ಶಿ ಕೈಸರ್ ಅಹ್ಮದ್, ರಂಗನಾಥ, ತಿಮ್ಮಣ್ಣ, ಹುಸೇನಪ್ಪ, ಬಸವರಾಜ, ಲಾಳೇಸಾಬ, ರಾಮಯ್ಯ, ಶಿವಯ್ಯ, ಲತಾ ಸೇರಿ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ
Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು
Udupi: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಹಗುರವಾಗಿ ಪರಿಗಣಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಪತ್ನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ!
Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.