ಡ್ರಗ್ ಮಾಫಿಯಾ: ಮೆನೇಜರ್ ಬಂಧನದ ಸುದ್ದಿ ತಿಳಿದು ನಟಿ ಕಾಜಲ್ ಗೆ ಶಾಕ್
Team Udayavani, Jul 26, 2017, 4:55 PM IST
ಹೈದರಾಬಾದ್: ಕೆಲ ದಿನಗಳ ಹಿಂದೆ ಟಾಲಿವುಡ್ ನಲ್ಲಿ ಡ್ರಗ್ ಮಾಫಿಯಾದ ತಲ್ಲಣ ಸೃಷ್ಟಿಯಾಗಿತ್ತು. ಇದೀಗ ಅದರ ಜೊತೆಯಲ್ಲೇ ಮಾದಕ ಅಕ್ರಮ ದಂಧೆಯ ಕಾರಣಕ್ಕಾಗಿ ನಟಿ ಕಾಜಲ್ ಅಗರ್ ವಾಲ್ ಮ್ಯಾನೇಜರ್ ಬಂಧನಕ್ಕೊಳಗಾಗಿದ್ದಾರೆ.
ನಟಿ ಕಾಜಲ್ ಅವರ ಮೆನೇಜರ್ ಪುಟ್ಕರ್ ರಾನ್ಸನ್ ಜೋಸೆಫ್ ಬಗ್ಗೆ ನಿಗಾ ಇಟ್ಟಿದ್ದ ಪೊಲೀಸರು ಆತನನ್ನು ಬಂಧಿಸಿ ಮಾದಕ ಜಾಲದ ರಹಸ್ಯವನ್ನೇ ಬೇಧಿಸಿದ್ದಾರೆ.
ಜಾನಿ ಜೋಸೆಫ್ ಎಂದೂ ಕರೆಸಿಕೊಳ್ಳುತ್ತಿರುವ ಅವರ ಮನೆ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ ಸಂದರ್ಭದಲ್ಲಿ ಗಾಂಜಾ ಸಂಗ್ರಹ ಪತ್ತೆಯಾಗಿದೆ. ಡ್ರಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವ ಎಸ್ ಐಟಿ ಅಧಿಕಾರಿಗಳು ಜಾನಿ ಜೋಸೆಫ್ ನನ್ನೂ ಬಂಧಿಸಿದರು.
ಸಿನಿಮಾ ಲೋಕದ ಗಣ್ಯರನ್ನು ವಿಚಾರಣೆಗೆ ಗುರಿಪಡಿಸಿದ ಸಂದರ್ಭದಲ್ಲಿ ಡ್ರಗ್ ಮಾಫಿಯಾಗೂ ರಾನ್ಸನ್ ಜೋಸೆಫ್ ಗೂ ನಂಟಿರುವ ಸುಳಿವು ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ನ ಮಣಿಕೊಂಡ ಏರಿಯಾದಲ್ಲಿರುವ ರಾನ್ಸನ್ ಜೋಸೆಫ್ ಗೆ ಸೇರಿದ ಪ್ಲಾಟನ್ನು ಸರ್ಚ್ ಮಾಡಿದ ಅಧಿಕಾರಿಗಳು, ಈ ವ್ಯಕ್ತಿ ಎಷ್ಟು ಸಮಯದಿಂದ ಈ ಮಾದಕ ಜಾಲದ ಜೊತೆ ನಂಟು ಹೊಂದಿದ್ದಾರೆ ಎಂಬವುದನ್ನು ಬೇಧಿಸುವ ಪ್ರಯತ್ನದಲ್ಲೂ ತೊಡಗಿದ್ದಾರೆ.
ಈ ನಡುವೆ ರಾನ್ಸನ್ ಜೋಸೆಫ್ ಬಂಧನದ ಮೂಲಕ ಟಾಲಿವುಡ್ ನಲ್ಲಿನ ಡ್ರಗ್ ಪುರಾಣದಲ್ಲಿ ಬಂಧಿತರ ಸಂಖ್ಯೆ 19 ಕ್ಕೆ ಏರಿದಂತಾಗಿದೆ.
ಈ ಮಧ್ಯೆ, ತಮ್ಮ ಮೆನೇಜರ್ ಬಂಧನದ ಸುದ್ದಿ ತಿಳಿದು ತನಗೆ ಶಾಕ್ ಆಗಿದೆ ಎಂದು ನಟಿ ಕಾಜಲ್ ಹೇಳಿದ್ದಾರೆ. ಸಮಾಜಕ್ಕೆ ಹಾನಿ ಮಾಡುವ ಜನ ನನಗೆ ಇಷ್ಟವಾಗಲ್ಲ. ಅಂತವರನ್ನು ನಾನು ಬೆಂಬಲಿಸುವುದಿಲ್ಲ ಎಂದು ಕಾಜಲ್ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.