ಭೂಮಿ ಮೇಲೆಯೇ ಇದೆ ನರಕದ ಬಾಗಿಲು!


Team Udayavani, Jul 27, 2017, 7:25 AM IST

narakada-bagilu.jpg

“ಒಳ್ಳೆಯವರು ಸ್ವರ್ಗಕ್ಕೆ ಹೋಗುತ್ತಾರೆ. ಕೆಟ್ಟವರು ನರಕಕ್ಕೆ’- ಮನೆಯಲ್ಲಿ ಗುರುಹಿರಿಯರಿದ್ದರೆ ಖಂಡಿತವಾಗಿ ಒಮ್ಮೆಯಾದರೂ ಈ ಮಾತನ್ನು ಅವರಿಂದ ಮಕ್ಕಳು ಹೇಳಿಸಿಕೊಂಡಿರುತ್ತಾರೆ. ನಿಜಕ್ಕೂ ಸ್ವರ್ಗ ಮತ್ತು ನರಕ ಇದೆಯೇ ಎಂಬುದನ್ನು ಖಡಾಖಂಡಿತವಾಗಿ ಹೇಳಬಲ್ಲವರು ಸಿಗಲಿಕ್ಕಿಲ್ಲ. ಆದರೆ ಹಾಗೊಂದು ನಂಬಿಕೆಯಂತೂ ನಮ್ಮ ನಡುವೆ ಇದೆ. ರಷ್ಯಾದ ಕಾರಕಂ ಮರುಬೂಮಿಯ ಮಧ್ಯೆ ಒಂದು ಭೂಮಿಯಾಳಕ್ಕೆ ಕೊರೆದ ಗುಂಡಿಯಿದೆ. ಅದನ್ನು ನರಕದ ಬಾಗಿಲು ಎಂದೇ ಕರೆಯಲಾಗುತ್ತದೆ. ಕಳೆದ 45 ವರ್ಷಗಳಿಂದ ಅಲ್ಲಿ ಹೊತ್ತಿರುವ ಬೆಂಕಿ ಉರಿಯುತ್ತಲೇ ಇದೆ.

ಇದು ಹೇಗಾಯ್ತು?
1971ರಲ್ಲಿ ದರ್ವಾಜ ಗ್ರಾಮದ ಸಮೀಪದ ಕಾರಕಂ ಜಿಲ್ಲೆಯಲ್ಲಿ ಸೋವಿಯತ್‌ ಭೂವಿಜ್ಞಾನಿಗಳು ನೈಸರ್ಗಿಕ ಅನಿಲದಿಂದ ತುಂಬಿದ್ದ ಗುಹೆಯನ್ನು ಕೊರೆಯಲು ಆರಂಭಿಸಿದರು. ಹೀಗೆ ಕೊರೆಯುತ್ತಿರುವ ಸಂದರ್ಭದಲ್ಲಿ ಅವರು ಬಳಸುತ್ತಿದ್ದ ಉಪಕರಣಗಳು ಒಂದು ದೊಡ್ಡ ಹೊಂಡಕ್ಕೆ ಬಂದು ಬಿತ್ತು. ಇಲ್ಲಿ ಯಾರಿಗೂ ಗಾಯವಾಗಿರಲಿಲ್ಲ. ಆದರೆ ಆ ಹೊಂಡದಿಂದ ಅನಿಲ ಹೊರಬರಲು ಶುರುವಾಗಿತ್ತು. ಅದು ವಿಷಕಾರಿ ಅನಿಲವಾಗಿರಬಹುದು ಎಂಬ ಭೀತಿ ವಿಜ್ಞಾನಿಗಳಲ್ಲಿ ಮನೆ ಮಾಡಿತ್ತು. ಸಾಮಾನ್ಯವಾಗಿ ಈ ರೀತಿಯ ಪರಿಸ್ಥಿತಿ ಎದುರಾದಾಗ, ಪರಿಹಾರವಾಗಿ ಅಂಥ ಗುಂಡಿಗೆ ಬೆಂಕಿ ಹಾಕಿಬಿಡುತ್ತಾರೆ. ಇಲ್ಲೂ ವಿಜ್ಞಾನಿಗಳು ಮಾಡಿದ್ದು ಅದನ್ನೇ. ಕೆಲ ದಿನಗಳಲ್ಲೇ ಬೆಂಕಿ ನಂದಿ ವಿಷಕಾರಿ ಅನಿಲ ಹೊರಬರುವುದು ನಿಲ್ಲುತ್ತದೆ ಎಂದುಕೊಂಡರೆ ಇಲ್ಲಾಗಿದ್ದೇ ಬೇರೆ. ಭೂವಿಜ್ಞಾನಿಗಳು ಎಷ್ಟೇ ಹರಸಾಹಸಪಟ್ಟರೂ ಬೆಂಕಿ ನಂದಲೇ ಇಲ್ಲ. ಅವರ ನಿರೀಕ್ಷೆ ಸುಳ್ಳಾಗಿತ್ತು. ವಾರಗಳು, ತಿಂಗಳುಗಳು, ವರುಷಗಳು ಕಳೆದರೂ ಅದು ಇಂದಿನವರೆಗೂ ಉರಿಯುತ್ತಲೇ ಇದೆ. 

ಕಾಡುವ ಕುತೂಹಲ
ಈ ಅಗ್ನಿಕುಳಿ ಇನ್ನೂ ಎಷ್ಟು ಕಾಲ ಉರಿಯಲಿದೆ, ಮುಂದೆ ಯಾವತ್ತಾದರೂ ಈ ಅಗ್ನಿಯ ಹೊಂಡವು ಮುಚ್ಚಿಹೋಗುವುದೇ? ಇಲ್ಲಿ ಹೊರಬರುತ್ತಿರುವ ಅನಿಲವನ್ನು ಸಂಪನ್ಮೂಲವಾಗಿ ಬಳಸಬಹುದೇ? ಇವ್ಯಾವ ಪ್ರಶ್ನೆಗಳಿಗೂ ಉತ್ತರ ಯಾರಿಗೂ ತಿಳಿದಿಲ್ಲ. ಆದರೆ ಈ ಪ್ರದೇಶ ಮಾತ್ರ ಅಂದಿನಿಂದಲೂ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಜಗತ್ತಿನಾದ್ಯಂತ ಪ್ರವಾಸಿಗರು ಇಲ್ಲಿ ಭೇಟಿ ಕೊಟ್ಟು ನರಕದ ಬಾಗಿಲಿನ ದರ್ಶನ ಪಡೆಯುತ್ತಾರೆ. ಟರ್ಕ್‌ಮೆನಿಸ್ತಾನದ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ 2004ರಲ್ಲಿಯೇ ಕಾರಕಂ ಸುತ್ತಮುತ್ತಲಿನ ನಿವಾಸಿಗಳನ್ನು ಸ್ಥಳಾಂತರಿಸಿತ್ತು. 

 ನೀವು ಹಗಲಿನಲ್ಲಿ ಈ ಅಗ್ನಿಕುಳಿ ಮೈದಾನದ ರೀತಿಯಲ್ಲಿ ಗೋಚರಿಸುತ್ತದೆ. ಆದರೆ ಅದರ ಸಮೀಪಕ್ಕೆ ಬಂದಂತೆ ಸಾವಿರಾರು ಅಗ್ನಿಯ ಜ್ವಾಲೆಗಳು ಕುಳಿಯಲ್ಲಿ ಉರಿಯುತ್ತಿರುವುದನ್ನು ಕಾಣಬಹುದು. ಈ ಅನಿಲ ಹೊಂಡದಿಂದ ಹೊರ ಬರುವಾಗ ಭೂಮಿ ಉಬ್ಬುತ್ತದೆ. ಭೂಮಿಯನ್ನು ಸೀಳಿಕೊಂಡು ಅನಿಲ ಹೊರಹೊಮ್ಮುತ್ತದೆ. ಈ ಅಗ್ನಿಕುಳಿಯನ್ನು ನೋಡಲು ಸಂಜೆ ಸಮಯವೇ ಪ್ರಶಸ್ತ.

ಹೆಸರಿನ ಹಿನ್ನೆಲೆ
ಈ ಗುಂಡಿಗೆ “ನರಕದ ಬಾಗಿಲು’ ಎಂಬ ಹೆಸರು ಬರಲು ಕಾರಣ ಪುರಾಣ. ಚೀನೀ, ಗ್ರೀಕ್‌- ರೋಮನ್‌ ಪುರಾಣಗಳಲ್ಲಿ ಬರುವ ನರಕದ ವರ್ಣನೆಗೂ ಈ ಗುಂಡಿಯಲ್ಲಿ ಕಾಣಬರುವ ದೃಶ್ಯಕ್ಕೂ ಸಾಮ್ಯತೆ ಇರುವುದರಿಂದಲೇ ಆ ಹೆಸರು ಬಂದಿದೆ.

– ಸೌಮ್ಯಶ್ರೀ

ಟಾಪ್ ನ್ಯೂಸ್

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

13

ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Australian Open:  ಹಿಂದೆ ಸರಿದ ಸಿಮೋನಾ ಹಾಲೆಪ್‌

Australian Open: ಹಿಂದೆ ಸರಿದ ಸಿಮೋನಾ ಹಾಲೆಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.