ದಿಲೀಪ್ ಪತ್ನಿ ಕಾವ್ಯಾ ಮಾಧವನ್ ವಿಚಾರಣೆ
Team Udayavani, Jul 27, 2017, 7:25 AM IST
ಕೊಚ್ಚಿ : ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಅವರನ್ನು ಪೊಲೀಸರು ನಿನ್ನೆ ಆಲುವಾದಲ್ಲಿರುವ ಮನೆಯಲ್ಲೇ ವಿಚಾರಣೆ ಗುರಿಪಡಿಸಿದ್ದಾರೆ. ಎಡಿಜಿಪಿ ಬ. ಸಂಧ್ಯಾ ನೇತೃತ್ವದ ತನಿಖಾ ತಂಡ ಸುಮಾರು ಎರಡು ತಾಸು ಕಾವ್ಯಾ ಮಾಧವನ್‌ರನ್ನು ಪ್ರಶ್ನಿಸಿದೆ.ಇದೇ ವೇಳೆ ಕಾವ್ಯಾ ಮಾಧವನ್ ತಾಯಿ ಶ್ಯಾಮಲಾ ಅವರನ್ನೂ ಪ್ರಶ್ನಿಸಲಾಗಿದೆ ಎಂಬ ವದಂತಿಯಿದೆ. ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ.
ಕಾವ್ಯಾ ಮಾಧವನ್ ವಿಚಾರಣೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಬಹಿರಂಗಪಡಿಸುತ್ತಿಲ್ಲ. ಅವರನ್ನು ವಿಚಾರಣೆಗೆ ಗುರಿಪಡಿಸುವ ವಿಷಯ ವನ್ನೂ ರಹಸ್ಯವಾಗಿಡಲಾಗಿತ್ತು. ಆಲುವಾ ಪೊಲೀಸ್ ಅಧೀಕ್ಷಕ ಎ. ವಿ. ಜಾರ್ಜ್ ಪೊಲೀಸರು ನಿನ್ನೆ ಮನೆಯಲ್ಲೇ ವಿಚಾರಣೆ ನಡೆಸಿರುವುದನ್ನು ದೃಢಪಡಿಸಿದ್ದಾರೆ.
ಕಾವ್ಯಾ ಮಾಧವನ್‌ರನ್ನು ವಿಚಾರಣೆ ಗೊಳಪಡಿಸಲಾಗಿದೆ. ಆದರೆ ಇನ್ನೊಮ್ಮೆ ಅವರನ್ನು ಪ್ರಶ್ನಿಸುವ ಸಾಧ್ಯತೆಯನ್ನು ಈಗಲೇ ಹೇಳಲಿಕ್ಕಾಗದು. ತನಿಖೆ ಮುಂದುವರಿದಂತೆ ಪರಿಸ್ಥಿತಿಗೆ ಹೊಂದಿ ಕೊಂಡು ವಿವಿಧ ವ್ಯಕ್ತಿಗಳನ್ನು ಪ್ರಶ್ನಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಜಾರ್ಜ್ ಹೇಳಿದ್ದಾರೆ.
ನಟಿಗೆ ಲೈಂಗಿಕ ಕಿರುಕುಳ ನೀಡಿದ ದೃಶ್ಯವನ್ನು ಚಿತ್ರೀಕರಿಸಿಕೊಂಡಿರುವ ಮೊಬೈಲ್ ಫೋನ್ ಮತ್ತು ದೃಶ್ಯಗಳಿರುವ ಮೆಮೊರಿ ಕಾರ್ಡನ್ನು ಮುಖ್ಯ ಆರೋಪಿ ಪಲ್ಸರ್ ಸುನಿ ನಟ ದಿಲೀಪ್‌ಗೆ ತೀರಾ ಆತ್ಮೀಯರಾಗಿರುವವರಿಗೆ ಹಸ್ತಾಂತರಿಸಿ ದ್ದಾನೆ ಎಂಬ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಪೊಲೀಸರು ಕುಟುಂಬದ ಸದಸ್ಯರನ್ನು ಪ್ರಶ್ನಿಸಿದ್ದಾರೆ.
ಕಳೆದ ನವಂಬರ್‌ನಲ್ಲಿ ದಿಲೀಪ್ ಮತ್ತು ಕಾವ್ಯಾ ಮಾಧವನ್ ಮದುವೆಯಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ.
ಜೈಲಿನಿಂದ ದಿಲೀಪ್‌ಗೆ ಬರೆದ ಪತ್ರದಲ್ಲಿ ಸುನಿ ಮೊಬೈಲ್ ಫೋನ್ ಮತ್ತು ಮೆಮೊರಿ ಕಾರ್ಡ್ ಹಸ್ತಾಂತರಿಸಿರುವ ವಿಷಯ ತಿಳಿಸಿದ್ದಾನೆ. ನಿರ್ದಿಷ್ಟವಾಗಿ ಯಾರಿಗೆ ಕೊಟ್ಟಿದ್ದೇನೆ ಎನ್ನುವುದನ್ನು ಬಾಯಿ ಬಿಟ್ಟಿಲ್ಲ.
ಆದರೆ ಪ್ರತಿ ಸಲ ಮಾಧ್ಯಮದವರು ಎದುರಾದಾಗ ಇನ್ನೂ ಕೆಲವು ಪ್ರಭಾವಿ ವ್ಯಕ್ತಿಗಳು ಬಲೆಗೆ ಬೀಳಲಿದ್ದಾರೆ ಎಂದು ಸುನಿ ಹೇಳುತ್ತಿರುವುದು ಈ ಪ್ರಕರಣ ಇನ್ನಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ. ದಿಲೀಪ್ ಜು. 10ರಂದು ಸೆರೆಯಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕೊಚ್ಚಿಯಲ್ಲಿರುವ ಕಾವ್ಯಾ ಮಾಲಕತ್ವದ ಲಕ್ಷ್ಯಾ ಬೂಟಿಕ್‌ಗೆ ಪಲ್ಸರ್ ಸುನಿ ಭೇಟಿ ನೀಡಿರುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಸಿಕ್ಕಿದೆ. ಲಕ್ಷ್ಯಾದಲ್ಲಿ ಮೆಮೊರಿ ಕಾರ್ಡ್ ಹಸ್ತಾಂತರಿಸಿದ್ದೇನೆ ಎಂದು ಸುನಿ ಹೇಳಿದ್ದ. ಇದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಕಾವ್ಯಾ ಮಾಧವನ್‌ರನ್ನು ಪ್ರಶ್ನಿಸಲಾಗಿದೆ ಎನ್ನಲಾಗಿದೆ.
ಆದರೆ ವಿಚಾರಣೆ ವೇಳೆ ಸುನಿ ಯಾರೆಂದು ನನಗೆ ಗೊತ್ತಿಲ್ಲ ಮತ್ತು ಅವನು ಲಕ್ಷ್ಯಾಕ್ಕೆ ಭೇಟಿ ನೀಡಿರುವ ಸಂಗತಿಯೂ ಗೊತ್ತಿಲ್ಲ ಎಂದು ಕಾವ್ಯಾ ಹೇಳಿದ್ದಾರೆ.
ನಟಿಯ ಅಪಹರಣದ ಸಂಚು ಹಾಗೂ ಕೊಟೇಶನ್ ಇತ್ಯಾದಿ ವಿಷಯ ಗಳೆಲ್ಲ ನನಗೆ ತಿಳಿದಿಲ್ಲ. ಇಡೀ ಪ್ರಕರಣ ದಲ್ಲಿ ನಾನು ಯಾವುದೇ ಪಾತ್ರ ವಹಿಸಿಲ್ಲ ಎಂದು ಕಾವ್ಯಾ ತನಿಖಾ ತಂಡಕ್ಕೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.