ಗಾಲೆ ಟೆಸ್ಟ್‌: ಬೃಹತ್‌ ಮೊತ್ತ ಪೇರಿಸಿದ ಭಾರತ 


Team Udayavani, Jul 27, 2017, 6:10 AM IST

AP7_26_2017_000061A.jpg

ಗಾಲೆ: ಆರಂಭಿಕ ಶಿಖರ್‌ ಧವನ್‌ ಅವರ ಜೀವನಶ್ರೇಷ್ಠ 190 ರನ್‌ ಮತ್ತು ಚೇತೇಶ್ವರ ಪೂಜಾರ ಅವರ ಅಜೇಯ 144 ರನ್‌ ನೆರವಿನಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್‌ನ ಮೊದಲ ದಿನ 3 ವಿಕೆಟಿಗೆ 399 ರನ್ನುಗಳ ಬೃಹತ್‌ ಮೊತ್ತ ಪೇರಿಸಿದೆ.

ಮೊದಲ ಆಯ್ಕೆಯ ಆರಂಭಿಕ ಮುರಳಿ ವಿಜಯ್‌ ಗಾಯದಿಂದಾಗಿ ಹೊರಬಿದ್ದ ಬಳಿಕ ತಂಡಕ್ಕೆ ಮರಳಿದ್ದ ಶಿಖರ್‌ ಧವನ್‌ ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಸುದುಪಯೋಗಪಡಿಸಿಕೊಂಡರು. ಏಕದಿನ ಶೈಲಿಯಲ್ಲಿ ಬ್ಯಾಟಿಂಗ್‌ ವೈಭವ ಪ್ರದರ್ಶಿಸಿದ 168 ಎಸೆತಗಳಲ್ಲಿ 190 ರನ್‌ ಸಿಡಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಇದು ಅವರ ಐದನೇ ಟೆಸ್ಟ್‌ ಶತಕವಾಗಿದೆ.

ಧವನ್‌ಗೆ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದ ಇನ್‌ಫಾರ್ಮ್ ಚೇತೇಶ್ವರ ಪೂಜಾರ 144 ರನ್‌ ಸಿಡಿಸಿ ಅಜೇಯರಾಗಿ ಉಳಿದಿದ್ದಾರೆ. ಅವರಿಬ್ಬರ ಸಾಹಸದ ಬ್ಯಾಟಿಂಗಿನಿಂದಾಗಿ ಭಾರತ ವಿದೇಶದಲ್ಲಿ ನಡೆದ ಟೆಸ್ಟ್‌ನ ಮೊದಲ ದಿನ ತನ್ನ ಗರಿಷ್ಠ ಮೊತ್ತ ಪೇರಿಸಿದೆ. ಇದು ಶ್ರೀಲಂಕಾದಲ್ಲಿ ಪ್ರವಾಸಿ ತಂಡವೊಂದು ಮೊದಲ ದಿನ ಪೇರಿಸಿದ ಗರಿಷ್ಠ ಮೊತ್ತ ಕೂಡ ಆಗಿದೆ.  ಈ ಹಿಂದೆ ಈ ಸಾಧನೆ ವೆಸ್ಟ್‌ಇಂಡೀಸ್‌ ಹೆಸರಲ್ಲಿತ್ತು. 

ವೆಲ್ಟಿಂಗ್ಟನ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ 9 ವಿಕೆಟಿಗೆ 375 ರನ್‌  ಪೇರಿಸಿದ್ದು ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು. ಧವನ್‌ ಮತ್ತು ಪೂಜಾರ ದ್ವಿತೀಯ ವಿಕೆಟಿಗೆ 253 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಟೀವರೆಗೆ ಆಡಿದ ಅವರಿಬ್ಬರು ಲಂಕಾ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಅಂತಿಮ ಅವಧಿಯಲ್ಲಿ ಪೂಜಾರ ಮತ್ತು ಅಜಿಂಕ್ಯ ರಹಾನೆ ಮತ್ತೆ ಶತಕದ ಜತೆಯಾಟದಲ್ಲಿ ಪಾಲ್ಗೊಂಡು ಭಾರತವನ್ನು ಆಧರಿಸಿದರು. ಧವನ್‌ ಮತ್ತು ಪೂಜಾರ ಅವರ ಆಕರ್ಷಕ ಶತಕದಿಂದಾಗಿ ಭಾರತದ ಉದ್ದೇಶ ಸಫ‌ಲಗೊಂಡಿದೆ.

ಸ್ಪಿನ್ನರ್‌ಗಳ ಸಹಿತ ನುವಾನ್‌ ಪ್ರದೀಪ್‌ ಅವರನ್ನು ಬಿಟ್ಟು ಉಳಿದ ಎಲ್ಲ ಲಂಕಾ ಬೌಲರ್‌ಗಳ ದಾಳಿಯನ್ನು ಚಚ್ಚಿದ ಧವನ್‌ ಕೇವಲ 168 ಎಸೆತಗಳಲ್ಲಿ 190 ರನ್‌ ಸಿಡಿಸಿದರು. 31 ಬೌಂಡರಿ ಬಾರಿಸಿ ಸಂಭ್ರಮಿಸಿದರು. ಇದು ಅವರ ಜೀವನಶ್ರೇಷ್ಠ ನಿರ್ವಹಣೆಯಾಗಿದೆ. 187 ರನ್‌ ಗಳಿಸಿದ್ದು ಈ ಹಿಂದಿನ ಶ್ರೇಷ್ಠ ನಿರ್ವಹಣೆಯಾಗಿತ್ತು. 2013ರಲ್ಲಿ  ಮೊಹಾಲಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಈ ಮೊತ್ತ ಹೊಡೆದಿದ್ದರು. 110 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ್ದ ಅವರು 147 ಎಸೆಗಳಲ್ಲಿ 150 ರನ್‌ ಮಾಡಿದ್ದರು. 31 ರನ್‌ ಗಳಿಸಿದ ವೇಳೆ ಧವನ್‌ ಜೀವದಾನ ಪಡೆದಿದ್ದರು. ಅಸೇಲ ಗುಣರತ್ನೆ ದ್ವಿತೀಯ ಸ್ಲಿಪ್‌ನಲ್ಲಿ ಕ್ಯಾಚ್‌ ಕೈಚೆಲ್ಲಿದ್ದರು.

ಭರ್ಜರಿ ಫಾರ್ಮ್ನಲ್ಲಿರುವ ಪೂಜಾರ ತಾಳ್ಮೆಯ ಆಟವಾಡಿ ತಂಡವನ್ನು ಆಧರಿಸಿದರು. ಧವನ್‌ ಮತ್ತು ಪೂಜಾರ ಜತೆಯಾಟ ಮುರಿದ ಬಳಿಕ ನಾಯಕ ವಿರಾಟ್‌ ಕೊಹ್ಲಿ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ವಿಫ‌ಲರಾದರೂ ಪೂಜಾರ ಗಟ್ಟಿಯಾಗಿ ನಿಂತು ಇನ್ನಷ್ಟು ಕುಸಿತ ಆಗದಂತೆ ನೋಡಿಕೊಂಡರು. ಅಜಿಂಕ್ಯ ರಹಾನೆ ಮುರಿಯದ ನಾಲ್ಕನೇ ವಿಕೆಟಿಗೆ ಈಗಾಗಲೇ 113 ರನ್‌ ಪೇರಿಸಲು ನೆರವಾದ ಪೂಜಾರ ದ್ವಿಶತಕದತ್ತ ದಾಪುಗಾಲು ಹಾಕಿದ್ದಾರೆ. ದ್ವಿತೀಯ ದಿನ ತಂಡದ ಮೊತ್ತವನ್ನು ಇನ್ನಷ್ಟು ಏರಿಸುವ ವಿಶ್ವಾಸದಲ್ಲಿದ್ದಾರೆ. 247 ಎಸೆತ ಎದುರಿಸಿದ ಅವರು 12 ಬೌಂಡರಿ ಬಾರಿಸಿದ್ದಾರೆ. ಧವನ್‌ ಅವರ ಆಟವನ್ನು ಗಮನಿಸಿದರೆ ಪೂಜಾರ ಅವರ ಆಟ ನಿಧಾನಗತಿಯಲ್ಲಿತ್ತು. ಇದು ಅವರ 12ನೇ ಟೆಸ್ಟ್‌ ಶತಕವಾಗಿದೆ.

ಗುಣರತ್ನೆಗೆ ಗಾಯ
ಧವನ್‌ ನೀಡಿದ ಕ್ಯಾಚನ್ನು ಪಡೆಯುವ ಯತ್ನದ ವೇಳೆ ದ್ವಿತೀಯ ಸ್ಲಿಪ್‌ನಲ್ಲಿದ್ದ ಅಸೇಲ ಗುಣರತ್ನೆ ಅವರ ಎಡ ಹೆಬ್ಬರಳಿಗೆ ಗಾಯವಾಗಿದೆ. ಇದರಿಂದ ಅವರು ಮೈದಾನ ತೊರೆಯಬೇಕಾಯಿತು. ಅವರು ಟೆಸ್ಟ್‌ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಹಾರ್ದಿಕ್‌, ಗುಣತಿಲಕ ಪಾದಾರ್ಪಣೆ
ಭಾರತ ಪರ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮತ್ತು ಶ್ರೀಲಂಕಾದ ದನುಷ್ಕ ಗುಣತಿಲಕ ಈ ಪಂದ್ಯದ ಮೂಲಕ ಟೆಸ್ಟ್‌ಗೆ ಪಾದಾರ್ಪಣೆಗೈದಿದ್ದಾರೆ.

ಶ್ರೀಲಂಕಾ ಪರ ನುವಾನ್‌ ಪ್ರದೀಪ್‌ ಮಾತ್ರ ಯಶಸ್ವಿ ಬೌಲರ್‌ ಎನಿಸಿಕೊಂಡಿದ್ದಾರೆ. ಐದು ಮಂದಿ ದಾಳಿ ನಡೆಸಿದ್ದರೂ ಪ್ರದೀಪ್‌ ಮಾತ್ರ ವಿಕೆಟ್‌ ಪಡೆಯಲು ಯಶಸ್ವಿಯಾಗಿದ್ದಾರೆ. ಉರುಳಿದ ಮೂರು ವಿಕೆಟನ್ನು ಪ್ರದೀಪ್‌ ಪಡೆದಿದ್ದಾರೆ. ಅವರು ತನ್ನ 18 ಓವರ್‌ಗಳ ದಾಳಿಯಲ್ಲಿ ಕೇವಲ 64 ರನ್‌ ಬಿಟ್ಟುಕೊಟ್ಟಿದ್ದರು.

ಸ್ಕೋರುಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌

ಶಿಖರ್‌ ಧವನ್‌    ಸಿ ಮ್ಯಾಥ್ಯೂಸ್‌ ಬಿ ಪ್ರದೀಪ್‌    190
ಅಭಿನವ್‌ ಮುಕುಂದ್‌    ಸಿ ಡಿಕ್ವೆಲ್ಲ ಬಿ ಪ್ರದೀಪ್‌    12
ಚೇತೇಶ್ವರ ಪೂಜಾರ    ಔಟಾಗದೆ    144
ವಿರಾಟ್‌ ಕೊಹ್ಲಿ    ಸಿ ಡಿಕ್ವೆಲ್ಲ ಬಿ ಪ್ರದೀಪ್‌    3
ಅಜಿಂಕ್ಯ ರಹಾನೆ    ಔಟಾಗದೆ    39
ಇತರ:        11
ಒಟ್ಟು (ಮೂರು ವಿಕೆಟಿಗೆ)    399
ವಿಕೆಟ್‌ ಪತನ: 1-27, 2-280, 3-286
ಬೌಲಿಂಗ್‌:
ನುವಾನ್‌ ಪ್ರದೀಪ್‌        18-1-64-3
ಲಹಿರು ಕುಮಾರ        16-0-95-0
ದಿಲುÅವಾನ್‌ ಪೆರೆರ        25-1-103-0
ರಂಗನ ಹೆರಾತ್‌        24-4-92-0
ದನುಷ್ಕ ಗುಣತಿಲಕ        7-0-41-0

ಎಕ್ಸ್‌ಟ್ರಾ ಇನ್ನಿಂಗ್ಸ್‌
ಗಾಲೆಯಲ್ಲಿ ಶಿಖರ್‌ ಧವನ್‌ ಊಟ ಮತ್ತು ಟೀ ವಿರಾಮದ ನಡುವಣ ಅವಧಿಯಲ್ಲಿ 126 ರನ್‌ ಪೇರಿಸಿರುವುದು ಭಾರತೀಯ ಆಟಗಾರನೊಬ್ಬ ಒಂದು ಅವಧಿಯ ಆಟದ ವೇಳೆ ಪೇರಿಸಲ್ಪಟ್ಟ ಎರಡನೇ ಗರಿಷ್ಠ ಮೊತ್ತವಾಗಿದೆ. ವೀರೇಂದ್ರ ಸೆಹವಾಗ್‌ ಈ ಹಿಂದೆ 2009ರಲ್ಲಿ ಬ್ರಬೋರ್ನ್ನಲ್ಲಿ ಶ್ರೀಲಂಕಾ ವಿರುದ್ಧ ಅಂತಿಮ ಅವಧಿಯ ಆಟದ ವೇಳೆ 133 ರನ್‌ ಪೇರಿಸಿದ್ದು ಗರಿಷ್ಠ ಮೊತ್ತವಾಗಿದೆ. ಇಲ್ಲಿ ಧವನ್‌ ಊಟದ ಬಳಿಕ 64 ರಿಂದ ಆಟ ಆರಂಭಿಸಿ ಟೀ ವೇಳೆಗೆ 190 ರನ್‌ ಗಳಿಸಿದ್ದರು.

ಮಧ್ಯದ ಅವಧಿಯಲ್ಲಿ ಧವನ್‌ ಅವರಿಗಿಂತ ಹೆಚ್ಚಿನ ಮೊತ್ತವನ್ನು ಮೂವರು ಕ್ರಿಕೆಟಿಗರು ಹೊಡೆದಿದ್ದಾರೆ. 173 ರನ್‌ ಗಳಿಸಿದ ಡೆನಿಸ್‌ ಕಾಂಪ್ಟನ್‌ ಗರಿಷ್ಠ ಮೊತ್ತ ಹೊಡೆದ ದಾಖಲೆ ಹೊಂದಿದ್ದಾರೆ. 1954ರಲ್ಲಿ ಟ್ರೆಂಟ್‌ಬ್ರಿಡ್ಜ್ನಲ್ಲಿ ಪಾಕಿಸ್ಥಾನ ವಿರುದ್ಧ ಅವರು ಈ ಮೊತ್ತ ಹೊಡೆದಿದ್ದರು. ಭಾರತ ಪರ ಈ ಹಿಂದಿನ ಗರಿಷ್ಠ ಮೊತ್ತ 110 ರನ್‌ ಹೊಡೆದ ಪಾಲಿ ಉಮ್ರಿಗಾರ್‌ ಹೆಸರಲ್ಲಿದೆ.

168 ಎಸೆತಗಳಲ್ಲಿ 190 ರನ್‌ ಸಿಡಿಸಿದ ಧವನ್‌ 113.09 ಸ್ಟ್ರೆ çಕ್‌ರೇಟ್‌ ಹೊಂದಿದ್ದಾರೆ. 150 ಪ್ಲಸ್‌ ರನ್‌ ಗಳಿಸಿ ವೇಳೆ ಇದು ಭಾರತ ಪರ ಎರಡನೇ ಗರಿಷ್ಠ ಸಾಧನೆಯಾಗಿದೆ. ಸೆಹವಾಗ್‌ 293 ರನ್‌ ಹೊಡೆದ ವೇಳೆ 115.35 ಸ್ಟ್ರೆ çಕ್‌ರೇಟ್‌ ಹೊಂದಿದ್ದರು.

ಧವನ್‌ ಅವರ ಈ ಹಿಂದಿನ ಗರಿಷ್ಠ ಮೊತ್ತ 187 ರನ್‌ ಆಗಿದೆ. 2012-13ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಈ ಮೊತ್ತ ಹೊಡೆದಿದ್ದರು. ಇದು ಅವರ ಐದನೇ ಶತಕ ಮತ್ತು ಮೂರನೇ 150 ಪ್ಲಸ್‌ ಮೊತ್ತವಾಗಿದೆ.

ಟೆಸ್ಟ್‌ನಲ್ಲಿ 190ರ ಆಸುಪಾಸಿನಲ್ಲಿ ಔಟಾದ ಐದನೇ ಆಟಗಾರ ಧವನ್‌ ಆಗಿದ್ದಾರೆ. ಕಳೆದ ವರ್ಷ ಚೆನ್ನೈಯಲ್ಲಿ ಇಂಗ್ಲೆಂಡ್‌ ವಿರುದ್ಧ ಕೆಎಲ್‌ ರಾಹುಲ್‌ 199 ರನ್ನಿಗೆ ಔಟಾಗಿದ್ದರು.

ಶ್ರೀಲಂಕಾ ವಿರುದ್ಧ ಧವನ್‌ 4 ಶತಕ ಹೊಡೆದಿದ್ದಾರೆ. ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಅವರು ಎರಡು ಶತಕ ಹೊಡೆದಿದ್ದರೆ ಏಕದಿನ ಪಂದ್ಯವೊಂದರಲ್ಲಿ 125 ರನ್‌ ಬಾರಿಸಿದ್ದರು.

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

highcourt

ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್‌ ಸೂಚನೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.