ಅಧಿಕಾರಿಗಳಿಗಾಗಿ ವಿಶ್ವ ಕೂಟದಿಂದ ಅಥ್ಲೀಟ್ಸ್‌ಗಳ ಕೈಬಿಟ್ಟ ಎಎಫ್ಐ?
Team Udayavani, Jul 27, 2017, 8:15 AM IST
ನವದೆಹಲಿ: ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ಗೆ ಅರ್ಹತೆ ಪಡೆದಿದ್ದ ಭಾರತದ ಮೂವರು ಅಥ್ಲೀಟ್‌ಗಳು ಅನರ್ಹರಾಗಿದ್ದಾರೆ!
ಸ್ಟೀಪಲ್‌ಚೆಸ್ ಸ್ಪರ್ಧಿ ಸುಧಾ ಸಿಂಗ್, 1500 ಮೀ. ಓಟಗಾರ್ತಿ ಪಿ.ಯು.ಚಿತ್ರಾ ಹಾಗೂ ಪುರುಷರ 1500 ಮೀ. ಓಟಗಾರ ಅಜಯ್ ಕುಮಾರ್ ಸರೋಜ್ ಅನರ್ಹಗೊಂಡವರು.
ಇದಕ್ಕಿದ್ದಂತೆ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ (ಎಎಫ್ಐ) ಇಂತಹದೊಂದು ಹೇಳಿಕೆ ನೀಡಿರುವು ದು ಭಾರೀ ವಿವಾದಕ್ಕೆ ಕಾರಣವಾಗಿದೆ.ಭುವನೇಶ್ವರದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಕೂಟದಲ್ಲಿ ಈ ಮೂವರು ಸ್ಪರ್ಧಿಗಳು ತಲಾ ಚಿನ್ನದ ಪದಕ ಗೆದ್ದು ವಿಶ್ವ ಕೂಟಕ್ಕೆ ಅರ್ಹತೆ ಪಡೆದಿದ್ದರು. ಸದ್ಯ ಇವರು ವಿಶ್ವ ಚಾಂಪಿಯನ್ ಶಿಪ್‌ಅರ್ಹತಾ ಸಮಯ ದಲ್ಲಿ ಓಡಿಲ್ಲ ಎನ್ನುವ ಕಾರಣಕ್ಕೆ ಇವರಿಗೆ ಅವಕಾಶ ನಿರಾಕರಿಸಲಾಗಿದೆ.
ಎಎಫ್ಐನಿಂದ ಒಟ್ಟಾರೆ 24 ಮಂದಿ ಅಥ್ಲೀಟ್ ಗಳ ತಂಡ ಪ್ರಕಟಿಸಲಾಗಿದೆ. ಜತೆಗೆ ತಂಡದ ಜತೆಗೆ ಹೋಗುವ ಕೆಲ ಪ್ರಭಾವಿ ಅಧಿಕಾರಿಗಳು ಕೂಡ ಹೋಗುತ್ತಿದ್ದಾರೆ. ಇಂತಿಷ್ಟು ಜನರಿಗೆ ಅವಕಾಶ ಎನ್ನುವ ನಿಯಮವಿದೆ. ಹೀಗಾಗಿ
ಮೂವರು ಅಥ್ಲೀಟ್‌ಗಳನ್ನು ಕೈಬಿಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈ ಬಗ್ಗೆ ಸುಧಾ ಸಿಂಗ್ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೂಬ್ಬ ಅಥ್ಲೀಟ್ ಕೇರಳದ ಪಿ.ಯು.ಚಿತ್ರಾ ಕೋಟ್ ಮರೆಹೋಗಲು ತೀರ್ಮಾನಿಸಿದ್ದಾರೆ.
ಎಎಫ್ಐ ಹೇಳುವುದೇನು?: ವಿಶ್ವಚಾಂಪಿ ಯನ್ ಶಿಪ್‌ನಲ್ಲಿ ಪಾಲ್ಗೊಳ್ಳಲು ಇರುವ ಅರ್ಹತಾ ಸಮಯದಲ್ಲಿ ಅಥ್ಲೀಟ್‌ಗಳು ಗುರಿಮುಟ್ಟಿಲ್ಲ. ಹೀಗಾಗಿ ಅವಕಾಶ ನೀಡಿಲ್ಲ. ಸುಧಾಸಿಂಗ್ 9 ನಿಮಿಷ, 59.47 ಸೆಕೆಂಡ್‌ಗೆ ಗುರಿ ಮುಟ್ಟಿ ಚಿನ್ನ ಗೆದ್ದಿದ್ದಾರೆ. ಆದರೆ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತಾ ಸಮಯ 9 ನಿಮಿಷ,42 ಸೆಕೆಂಡ್ ಆಗಿದೆ. ಅದೇ ರೀತಿ ಯಾಗಿ ಚಿತ್ರಾ ಮತ್ತು ಅಜಯ್ ಕೂಡ ನಿಗದಿತ ಸಮಯದಲ್ಲಿ ಗುರಿ ಮುಟ್ಟಿಲ್ಲ ಎಂದು ಎಎಫ್ಐ ತಿಳಿಸಿದೆ.
ಅಥ್ಲೀಟ್‌ಗಳು ಹೇಳುವುದೇನು?
ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನಗೆದ್ದ ವರಿಗೆ ವಿಶ್ವ ಚಾಂಪಿಯನ್‌ಶಿಪ್‌ಗೆ ನೇರ ಅರ್ಹತೆ ನೀಡಲಾಗುತ್ತದೆ. ಜಿ.ಲಕ್ಷ್ಮಣನ್ ಸೇರಿದಂತೆ ಆಯ್ಕೆಯಾಗಿರುವ ಕೆಲವು ಅಥ್ಲೀಟ್‌ಗಳು ವಿಶ್ವಚಾಂಪಿಯನ್‌ಶಿಪ್‌ನ ಅರ್ಹತಾ ಸಮಯವನ್ನು ರೀಚ್ ಆಗಿಲ್ಲ. ಆದರೂ ಅವಕಾಶ ನೀಡಿಲ್ಲವೇ? ಎಂದು ಪ್ರಶ್ನಿಸಿದ್ದಾರೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ
Syed Modi International: ಫೇವರಿಟ್ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ
Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.