ಮೇಡ್‌ ಇನ್‌ ಚೀನ ಸರಕು, ನಿಷೇಧ ಸಾಧ್ಯವೇ?


Team Udayavani, Jul 27, 2017, 7:25 AM IST

27-ankan-1.jpg

ಭಾರತ ಚೀನಕ್ಕೆ ಸರಿಸಾಟಿಯಾಗಿ (ಇನ್ನೂಒಂದು ಕೈ ಮೇಲೆಯೇ ಎನ್ನಬಹುದು) ರಾಕೆಟ್‌ಗಳು, ಉಪಗ್ರಹಗಳು, ಯುದ್ಧ ವಿಮಾನಗಳು, ಕ್ಷಿಪಣಿಗಳನ್ನು ತಯಾರಿಸಿ ಜಗತ್ತಿನ ಮುಂಚೂಣಿ ರಾಷ್ಟ್ರಗಳ ಮಧ್ಯೆ ನಾವೇನೂ ಕಮ್ಮಿ ಇಲ್ಲ
ಎಂಬುದನ್ನು ತೋರಿಸಿಕೊಟ್ಟಿದೆ. ಇಂತಹ ರಾಷ್ಟ್ರಕ್ಕೆ ಮೊಬೈಲ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌, ಪ್ಲಾಸ್ಟಿಕ್‌ ವಸ್ತು ಮತ್ತು ಆಟಿಕೆಗಳನ್ನು ತಯಾರಿಸುವುದು ಒಂದು ಸವಾಲೇನು?

ಚೀನ ಸಿಕ್ಕಿಂ ಗಡಿಯಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣ ಮಾಡಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಯುದ್ಧಭೀತಿಯನ್ನು ಉಂಟು ಮಾಡಿದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಚೀನ ಉತ್ಪಾದಿಸಿದ ಮತ್ತು ರಫ್ತು ಮಾಡಿದ ವಸ್ತುಗಳನ್ನು ಸಂಪೂರ್ಣವಾಗಿ ಧಿಕ್ಕರಿಸುವಂತೆ ಹಲವು ಭಾವೇವೇಶದ ಮನವಿಗಳು ಓಡಾಡುತ್ತಿವೆ. ಆದರೆ ಅದು ಎಷ್ಟರಮಟ್ಟಿಗೆ ಕಾರ್ಯಸಿಂಧು ಎಂಬುದನ್ನು ನಾವು ಪರಿಶೀಲಿಸಬೇಕಿದೆ.

ರಾಷ್ಟ್ರಪ್ರೇಮ, ಸ್ವದೇಶೀ ಜಾಗೃತಿ ಹಾಗೂ ಚೀನದ ವ್ಯಾವಹಾರಿಕ ನಿರಂಕುಶ ಪ್ರಭುತ್ವ ಮುರಿಯಲು ಆ ದೇಶದಲ್ಲಿ
ತಯಾರಾದ ವಸ್ತುಗಳನ್ನು ನಿಷೇಧಿಸಬೇಕೆಂಬುದು ಒಳ್ಳೆಯ ಅಂಶವೇ! ಹಾಗೆಂದ ಮಾತ್ರಕ್ಕೆ ರಾತೋರಾತ್ರಿ ಮೇಡ್‌ಇನ್‌ ಚೀನ ಸರಕುಗಳನ್ನು ಸಂಪೂರ್ಣವಾಗಿ ಬಾಯ್‌ಕಾಟ್‌ ಮಾಡಲು ಸಾಧ್ಯವಿಲ್ಲ. ಭಾರತ ಸರಕಾರವೇ ಚೀನ ವಸ್ತುಗಳ ಬ್ಲಾಂಕೆಟ್‌ ಬ್ಯಾನ್‌ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅದಕ್ಕೆ ಕಾರಣವೂ ಇದೆ. ಈಗಿರುವ ಜಾಗತಿಕ ವ್ಯಾಪಾರ ಒಪ್ಪಂದಗಳ ಪ್ರಕಾರ ಚೀನ ಸರಕುಗಳನ್ನು ಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ. ಈಗಿರುವಂತೆಯೇ ಮತ್ತು ಹೆಚ್ಚು ಆ್ಯಂಟಿ-ಡಂಪಿಂಗ್‌ ಸೆಸ್‌/ ತೆರಿಗೆ ವಿಧಿಸಬಹುದೇ ಹೊರತು ಅವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ.

ಎರಡನೆಯದಾಗಿ ಭಾರತದ ಬಹುತೇಕ ಸಗಟು ವ್ಯಾಪಾರಸ್ಥರು ಚೀನದಲ್ಲಿ ತಯಾರಾದ ವಸ್ತುಗಳನ್ನೇ ಅವಲಂಬಿಸಿದ್ದಾರೆ. ಕೋಟ್ಯಂತರ ರೂಪಾಯಿಗಳ ಮಾಲನ್ನು ತಮ್ಮ ದಾಸ್ತಾನಿನಲ್ಲಿ ಇಟ್ಟುಕೊಂಡಿದ್ದಾರೆ. ಏಕಾಏಕಿ ಚೀನ ಮೇಡ್‌ ವಸ್ತುಗಳನ್ನು ಧಿಕ್ಕರಿಸುವುದರಿಂದ ದಾಸ್ತಾನಿರುವ ಸರಕುಗಳು ಮಾರುಕಟ್ಟೆ ಮೌಲ್ಯ ಕಳೆದುಕೊಂಡು ಅವರು ನಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆಯೇ ಹೊರತು ಚೀನ ಆರ್ಥಿಕತೆಯ ಮೇಲಲ್ಲ.

ಮೂರನೆಯದಾಗಿ ಭಾರತ-ಮತ್ತು ಚೀನ ನಡುವಿನ ವ್ಯಾಪಾರ ವಹಿವಾಟು ಪ್ರಪಂಚದ ಅತಿದೊಡ್ಡ  ವ್ಯವಹಾರಗಳಲ್ಲೊಂದು ಎಂಬ ಖ್ಯಾತಿ ಪಡೆದಿದೆ. ಈ ವಹಿವಾಟಿನ ಮೊತ್ತ ವಾರ್ಷಿಕ 70 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೀರುತ್ತದೆ. ಚೀನ ತನ್ನ ಒಟ್ಟಾರೆ ಅಮದಿನ ಶೇ. 0.8ರಷ್ಟನ್ನು ಮಾತ್ರ ಭಾರತದಿಂದ ಅಮದು ಮಾಡಿಕೊಂಡರೆ ಭಾರತ ಶೇ. 12.4ರಷ್ಟು ಸರಕುಗಳನ್ನು ಚೀನದಿಂದ ಉತ್ಪನ್ನ ಮಾಡಿಕೊಳ್ಳುತ್ತದೆ. ಎಲೆಕ್ಟ್ರಾನಿಕ್‌ ಉಪಕರಣಗಳು (19) ಸ್ಟೀಲ್‌ (4), ಸಾವಯವ ರಾಸಾಯನಿಕಗಳು (3.5) ರಸಗೊಬ್ಬರಗಳು (6 ), ಪ್ಲಾಸ್ಟಿಕ್‌ (2) ವಾಹನಗಳು (1) ಯಂತ್ರೋಪಕರಣಗಳು (11) ಔಷಧೀಯ ಸಲಕರಣೆ (2), ಪೀಠೊಪಕರಣಗಳು ಮತ್ತು ವಿದ್ಯುತ್‌ ಸಾಮಾಗ್ರಿಗಳು (1) (ಎಲ್ಲ ಬಿಲಿಯ ಡಾಲರ್‌ಗಳಲ್ಲಿ) ಮುಂತಾದ ಪ್ರಮುಖ ಅಗತ್ಯಗಳಿಗೆ ಚೀನವನ್ನೇ ಅವಲಂಬಿಸಿದೆ. ಭಾರತ ಚೀನದಿಂದ 61 ಬಿಲಿಯ ಅಮೆರಿಕನ್‌ ಡಾಲರ್‌ನಷ್ಟು ಮೌಲ್ಯದ ಸರಕುಗಳನ್ನು ಅಮದು ಮಾಡಿಕೊಂಡರೆ ಚೀನಗೆ ಕೇವಲ 7 ಬಿಲಿಯ ಡಾಲರ್‌ನಷ್ಟು ಮೌಲ್ಯದ ಸರಕುಗಳನ್ನು ರಫ್ತು ಮಾಡುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಹೆಚ್ಚು ಬೆಲೆಗೆ ದೂರದಿಂದ ತನ್ನ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿಕೊಳ್ಳಲು ಹೊರಟರೆ ಚೀನಕ್ಕಿಂತ ಅದು ಭಾರತದ ಆರ್ಥಿಕತೆಗೇ ದೊಡ್ಡ ಹೊಡೆತ ನೀಡುವುದು ನಿಶ್ಚಯ ಎಂದು ಅರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.

ಸ್ಮಾರ್ಟ್‌ಫೋನ್‌ಗಳ ಕ್ಷೇತ್ರದಲ್ಲಂತೂ ಭಾರತದಲ್ಲಿ ಚೀನದ್ದೇ ಆಧಿಪತ್ಯ. ಹಲವು ಎಂಎನ್‌ಸಿ ಕಂಪೆನಿಗಳು ಚೀನದ ಸಹಭಾಗಿತ್ವದಲ್ಲೇ ಈ ಫೋನ್‌ಗಳ ತಯಾರಿಕೆ ಮತ್ತು ಸರಬರಾಜಿನಲ್ಲಿ ತೊಡಗಿವೆ. ಈ ಉದ್ಯಮ ಭಾರತಕ್ಕೆ ಗಣನೀಯ ಪ್ರಮಾಣದ ತೆರಿಗೆ ನೀಡುತ್ತಿರುವುದರಿಂದ ಇವುಗಳ ನಿಷೇಧ ಮತ್ತೆ ಭಾರತದ ಆರ್ಥಿಕತೆಯ ಮೇಲೇ ದುಷ್ಪರಿಣಾಮ ಬೀರುತ್ತದೆ. 

ಹಾಗಿದ್ದರೆ ಭಾರತದಲ್ಲಿ ಚೀನ ವಸ್ತುಗಳನ್ನು ನಿಷೇಧಿಸಲು ಸಾಧ್ಯವೇ ಇಲ್ಲವೇ? ನಾವು ಹೀಗೇ ಅವಲಂಬಿತರಾಗಿರಬೇಕೇ
ಎಂಬ ಪ್ರಶ್ನೆ ಮೂಡುತ್ತದೆ. ಖಂಡಿತಾ ಇಲ್ಲ. ನಾವು ಚೀನದ ಕಪಿಮುಷ್ಠಿಯಿಂದ ಹೊರಬಂದು ಸ್ವಾಭಿಮಾನಿಗಳಾಗಿ
ಬದುಕಬಹುದು. ಪೂರಾ ನಿಷೇಧ ತತ್‌ಕ್ಷಣಕ್ಕೆ ಸಾಧ್ಯವಿಲ್ಲವಾದರೂ ನಿಯಂತ್ರಣ ಖಂಡಿತಾ ಸಾಧ್ಯ. ಆದರೆ ಅದಕ್ಕೆ ಪ್ರತಿ ದೇಶವಾಸಿಗಳ ಬದ್ಧತೆ, ಸರಕಾರಗಳ ಇಚ್ಛಾಶಕ್ತಿ ಮುಖ್ಯವಾಗುತ್ತದೆ. ಇಷ್ಟು ವರ್ಷ ನಮ್ಮನ್ನ ಆಳಿದವರು ಭಾರತದ ಸ್ವಾವಲಂಬನೆ ಬಗ್ಗೆ ಯೋಚಿಸಿಯೇ ಇಲ್ಲವೇನೋ ಎನಿಸುತ್ತದೆ. ದುರಂತವೆಂದರೆ ನಮ್ಮ ದೇಶದಲ್ಲಿ ಅಗಾಧ ಪ್ರಮಾಣದಲ್ಲಿ ಸಿಗುವ ಕಚ್ಚಾ ವಸ್ತುಗಳನ್ನು ಚೀನಗೆ ಕಳಿಸಿ ಅವರಿಂದ ಸಿದ್ಧಪಡಿಸಿದ ವಸ್ತುಗಳನ್ನು ಕೊಳ್ಳುತ್ತಿದ್ದೇವೆ.
ಇದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ಕಬ್ಬಿಣದ ಅದಿರನ್ನು ನಾವು ಚೀನಗೆ ಕಳಿಸಿ ಅಲ್ಲಿಂದ ಅವರು ಉತ್ಪಾದಿಸಿದ ಸ್ಟೀಲನ್ನು ಅಮದು ಮಾಡಿಕೊಳ್ಳುತ್ತೇವೆ. ರಾಸಾಯನಿಕ ಗೊಬ್ಬರ ಮತ್ತು ಸಿದ್ಧ ಉಡುಪುಗಳ(ವಿಶೇಷವಾಗಿ ರೇಷ್ಮೆ) ವಿಷಯದಲ್ಲೂ ಹೀಗೇ ಆಗಿದೆ. ನಮ್ಮ ರಾಜಕೀಯ ಪಕ್ಷಗಳು ಮತ್ತು ಸರಕಾರದ ಧೋರಣೆ, ದೂರದರ್ಶಿತ್ವ ಇಲ್ಲದ ಆಡಳಿತ, ನಿಷ್ಕ್ರಿಯತೆಯಿಂದ ನಾವು ಈ ಸ್ಥಿತಿ ತಲುಪಿದ್ದೇವೆ.

ಭಾರತ ಚೀನಗೆ ಸರಿಸಾಟಿಯಾಗಿ(ಇನ್ನೂ ಒಂದು ಕೈ ಮೇಲೆ ಎನ್ನಬಹುದು) ರಾಕೆಟ್‌ಗಳು, ಉಪಗ್ರಹಗಳು, 
ಯುದ್ಧವಿಮಾನಗಳು, ಕ್ಷಿಪಣಿಗಳನ್ನು ತಯಾರಿಸಿ ಜಗತ್ತಿನ ಅಗ್ರರಾಷ್ಟ್ರಗಳ ಮಧ್ಯೆ ನಾವೇನೂ ಕಮ್ಮಿ ಇಲ್ಲ ಎಂಬುದನ್ನು
ತೋರಿಸಿಕೊಟ್ಟಿದೆ. ಇಂತಹ ರಾಷ್ಟ್ರಕ್ಕೆ ಮೊಬೈಲ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌, ಪ್ಲಾಸ್ಟಿಕ್‌ ವಸ್ತು, ಆಟಿಕೆಗಳನ್ನು ತಯಾರಿಸುವುದು ಒಂದು ಸವಾಲೇನು? ಚೀನ ತನ್ನ ಕಳಪೆ ವಸ್ತುಗಳನ್ನು ತಂದು ಸುರಿಯಲು ಭಾರತವನ್ನು ಡಸ್ಟ್‌ಬಿನ್‌ ಮಾಡಿಕೊಂಡಿದೆ. ತಾನು ಅತಿ ಕಡಿಮೆ ಕೂಲಿ ಕೊಟ್ಟು ತಯಾರಿಸುವ ವಸ್ತುಗಳನ್ನು ಅದು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಂದು ಸುರಿದು ಇಲ್ಲಿ ತನಗೆ ಪ್ರತಿಸ್ಪರ್ಧಿಯೇ ಇಲ್ಲದಂತೆ ನೋಡಿಕೊಂಡಿದೆ. ಮೇಡ್‌ ಇನ್‌ ಚೀನ ಗುಣಮಟ್ಟದಲ್ಲಿ ಕಳಪೆ ಎಂಬುದು ಸರ್ವೇ ಸಾಮಾನ್ಯ ಸಂಗತಿ. ಅದರೂ ಅದು ಭಾರತದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವರವಾಗಿದೆ ಎಂಬುದು ಸುಳ್ಳಲ್ಲ. ಅತಿ ಕಡಿಮೆ ಬೆಲೆ ಹಾಗೂ ಸಮಯದಲ್ಲಿ ಚೀನ ಇಲ್ಲಿನ ಮಧ್ಯಮ ವರ್ಗದ ಜನರ ಜೀವನ ಶೈಲಿಯನ್ನೇ ಬದಲಾಯಿಸಿದೆ. ಇದು ಭಾರತದ ಆರ್ಥಿಕತೆಗೂ ಸಹಾಯ ಮಾಡಿದೆ. ಇಲ್ಲಿನ ವಹಿವಾಟಿನ ಹಣ ಭಾರತ ಸರಕಾರದ ಯೋಜನೆಗಳಲ್ಲಿ, ಬಾಂಡ್‌ಗಳಲ್ಲಿ ತೊಡಗಿಸಲಾಗುತ್ತದೆ. ಅಥವಾ ಇಲ್ಲಿನ ವ್ಯವಹಾರಗಳಲ್ಲೇ ಮರು ಬಂಡವಾಳವಾಗಿ ಬಳಕೆಯಾಗಿ ವಿದೇಶಿ ವಿನಿಮಯ ಹೆಚ್ಚಿಸುವ ಮೂಲಕ ಭಾರತದ ರಫ್ತು ವ್ಯವಹಾರವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಿದೆ. 

ಹಾಗಿದ್ದರೆ ಮೇಡ್‌ ಇನ್‌ ಚೀನ ವಸ್ತುಗಳನ್ನು ನಿಯಂತ್ರಿಸಲು ನಾವೇನು ಮಾಡಬಹುದು?

ದಿನನಿತ್ಯದ ಅಗತ್ಯದ ವಸ್ತುಗಳಿಂದ (ಔಷಧಿ, ಆಹಾರ, ಆಟಿಕೆ ಇತ್ಯಾದಿ) ಚೀನ ತಯಾರಿಸಿದ ವಸ್ತುಗಳನ್ನು ಸಂಪೂರ್ಣ ದೂರ ಇಡುವುದು. ಫೋನ್‌, ಲ್ಯಾಪ್‌ಟಾಪ್‌ನಂತಹ ವಸ್ತುಗಳನ್ನು ನಾವು ಅಪರೂಪಕ್ಕೆ ಕೊಳ್ಳುತ್ತೇವೆ, ಹಾಗಾಗಿ ಅಂತಹ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಕೊಳ್ಳುವಾಗ ದುಬಾರಿ ಆದರೂ ಪರವಾಗಿಲ್ಲ, ಸ್ವದೇಶಿ ನಿರ್ಮಿತ ವಸ್ತುಗಳನ್ನೇ ಕೊಳ್ಳುವುದು. ಅಥವಾ ಜಪಾನ್‌, ಕೊರಿಯಾ, ತೈವಾನ್‌ ನಿರ್ಮಿತ ಬ್ರ್ಯಾಂಡ್‌ಗಳನ್ನು ಪರ್ಯಾಯವಾಗಿ ಆಯ್ಕೆ ಮಾಡುವುದು.

ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು. 
ತಯಾರಿಕಾ ವಲಯಕ್ಕೆ ಹೆಚ್ಚು ಸೌಲಭ್ಯ, ಪ್ಯಾಕೇಜ್‌ ಮತ್ತು ರಿಯಾಯಿತಿಗಳನ್ನು ಘೋಷಿಸುವುದು. ರೀಟೈಲರ್‌ಗಳ ಮೇಲೆ ಹೆಚ್ಚು ನಿಯಂತ್ರಣ ಹೇರಿ ಹೋಲ್‌ಸೇಲ್‌ ಮಾರಾಟ ವಲಯಕ್ಕೆ ಹೆಚ್ಚು ಸ್ವಾಯತ್ತೆ ನೀಡುವುದು. ಚೀನ ಪ್ಲಾಸ್ಟಿಕ್‌ ಮತ್ತು ಇತರೆ ವಸ್ತುಗಳು ಮರುಬಳಕೆ ಮಾಡಲು ಬರುವುದಿಲ್ಲ,. ಇಂತಹ ವಸ್ತುಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದು.

ಚೀನ ಕಂಪೆನಿಗಳೊಂದಿಗಿನ ಸಹಭಾಗಿತ್ವ, ವ್ಯಾಪಾರ ಒಪ್ಪಂದಗಳನ್ನು ನಿಯಂತ್ರಿಸುವುದು. ಹಿಂದೆ ಪೆಪ್ಸಿ, ಕೋಲಾ
ನಿಷೇಧದ ಅನಂತರ ಮರಳಿ ಭಾರತ ಪ್ರವೇಶಿಸಿದಾಗ ಉದ್ಯಮಿ ಚೌಹಾನ್‌ ಗೋಲ್ಡ್‌ಸ್ಪಾಟ್‌, ಲಿಮ್ಕಾ ಮತ್ತು ಥಮ್ಸ್‌ಅಪ್‌ಗ್ಳನ್ನು ಕೊಕೋಕೋಲಾಗೆ ಮತ್ತು ಪಂಡೇಲಾ ಅವರು ತಮ್ಮ ಡ್ನೂಕ್‌ ಲೆಮನೇಡ್‌ ಮತ್ತು ಮ್ಯಾಂಗೋಲಾಗಳನ್ನು ಪೆಪ್ಸಿಗೆ ಮಾರಿದ್ದರು. ಇಂತಹ ಪರಿಸ್ಥಿತಿ ಮರುಕಳಿಸಬಾರದು. 

ಮೊಬೈಲ್‌ ಫೋನ್‌ ಮತ್ತು ಇತರೆ ಎಲೆಕ್ಟ್ರಾನಿಕ್‌ ಉಪಕರಣಗಳ ಕ್ಷೇತ್ರದಲ್ಲಿ ಚೀನದ ಪಾರಮ್ಯ ಮುರಿಯಲು ಭಾರತ ಸಮಾನ ಮನಸ್ಕ ದೇಶಗಳೊಂದಿಗೆ(ಜಪಾನ್‌, ತೈವಾನ್‌ ಇತರ ರಾಷ್ಟ್ರಗಳು) ಒಪ್ಪಂದ ಮಾಡಿಕೊಂಡು ಈ ಉಪಕರಣಗಳನ್ನು ಜಂಟಿಯಾಗಿ ಉತ್ಪಾದಿಸಿ ಚೀನ ಬೆಲೆಗೇ ಕೊಡುವಂತಾಗಬೇಕು.

ಚೀನದ ತಂತ್ರಜ್ಞಾನ ಮತ್ತು ತಂತ್ರಾಂಶಕ್ಕೆ ಸಮಾನವಾದ ತಂತ್ರಾಂಶ ಮತ್ತು ಅಪ್ಲಿಕೇಶನ್‌ಗಳಿರುವ ಮೊಬೈಲ್‌ಗ‌ಳನ್ನು
ಅಭಿವೃದ್ಧಿಪಡಿಸಿ ಅದನ್ನು ಈಗಿರುವ ಚೀನ ಸೆಟ್‌ಗಳೊಂದಿಗೆ ಒಂದು ನಿರ್ದಿಷ್ಟ ಬೆಲೆಗೆ ಬದಲಾಯಿಸಿಕೊಳ್ಳುವ ಯೋಜನೆ
ಮಾಡಬೇಕು. ಈಚೆಗೆ ರಿಲಯನ್ಸ್‌ ಕಂಪೆನಿ ರೂ.1500 ಠೇವಣಿ ಪಡೆದು ಗ್ರಾಹಕರಿಗೆ ಉಚಿತ ಫೋನ್‌ ನೀಡುವ ಯೋಜನೆ ಆರಂಭಿಸಿದೆ. ಉಚಿತವಲ್ಲದಿದ್ದರೂ ಸ್ಪರ್ಧಾತ್ಮಕ ಬೆಲೆಗೆ ಇಂತಹ ಫೋನ್‌ಗಳು ಬಡ ಮತ್ತು ಮಧ್ಯಮ ವರ್ಗದವರಿಗೆ ಸಿಕ್ಕರೆ ಚೀನ ವಸ್ತುಗಳ ಮೇಲಿನ ಆಕರ್ಷಣೆ ತಾನಾಗೇ ಕಡಿಮೆಯಾಗುತ್ತದೆ. ಚೀನ ಮೇಡ್‌ ಎಂದೊಡನೆ ಅದು ಕರಕುಶಲ ಮಾನವ ಸಂಪನ್ಮೂಲವನ್ನು ನಾಶಗೊಳಿಸಿ ಯಂತ್ರನಿರ್ಮಿತ ಕಳಪೆ ವಸ್ತುವಿನ ದಬ್ಟಾಳಿಕೆಯ ಹೇರಿಕೆ ಎಂಬುದು ಮನಸ್ಸಿಗೆ ಬಂದರೆ ಆಗ ಆ ವಸ್ತುಗಳೊಂದಿಗೆ ನಮ್ಮ ನಂಟು, ಭಾವನಾತ್ಮಕ ಸಂಬಂಧ ಕಡಿದುಕೊಳ್ಳಲು ಸಾಧ್ಯ. 

ಅಂದಹಾಗೆ, ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಮೇಕ್‌ ಇನ್‌ ಇಂಡಿಯಾ ಸಪ್ತಾಹದ ಉದ್ಘಾಟನೆಗೆ ಮುಂಬಯಿಗೆ
ಹೋದಾಗ ಅಲ್ಲಿ ಎರಡು ಕಂಪೆನಿಗಳಿಗೆ ಭೂಮಿ ಮಂಜೂರು ಪತ್ರ ನೀಡಿದ್ದರು. ಆ ಎರಡು ಕಂಪೆನಿಗಳೆಂದರೆ ಕಿಂಗ್‌ಫಾ ಮತ್ತು ಲೆಸ್ಸೋ (ಪ್ಲಾಸ್ಟಿಕ್‌ ಪೈಪ್‌ ತಯಾರಿಸುವ ಕಂಪೆನಿಗಳು). ಇವು ಯಾವ ದೇಶಕ್ಕೆ ಸೇರಿದ್ದೆಂದು ಊಹಿಸಬಲ್ಲಿರಾ? ನಿಮ್ಮ ಊಹೆ ಸರಿ.ಈ ಎರಡೂ ಕಂಪೆ‌ನಿಗಳು ಚೀನಕ್ಕೆ ಸೇರಿದ್ದು !

ತುರುವೇಕೆರೆ ಪ್ರಸಾದ್‌

ಟಾಪ್ ನ್ಯೂಸ್

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?

Jaipur: 13 ಮಂದಿಯನ್ನು ಬಲಿ ಪಡೆದ ದುರಂತದಲ್ಲಿ LPG ಟ್ಯಾಂಕರ್ ಚಾಲಕ ಬದುಕುಳಿದಿದ್ದೇ ರೋಚಕ

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು

Tollywood: ಸಂಧ್ಯಾ ಥಿಯೇಟರ್‌ ಕಾಲ್ತುಳಿತ ಪ್ರಕರಣ; ಅಲ್ಲು ಅರ್ಜುನ್‌ ಬೌನ್ಸರ್‌ ಬಂಧನ

Tollywood: ಸಂಧ್ಯಾ ಥಿಯೇಟರ್‌ ಕಾಲ್ತುಳಿತ ಪ್ರಕರಣ; ಅಲ್ಲು ಅರ್ಜುನ್‌ ಬೌನ್ಸರ್‌ ಬಂಧನ

4-mng-2

Mangaluru: ಹೆಲಿಕಾಪ್ಟರ್ ಸಂಚಾರ: ಸ್ಥಳ ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?

Jaipur: 13 ಮಂದಿಯನ್ನು ಬಲಿ ಪಡೆದ ದುರಂತದಲ್ಲಿ LPG ಟ್ಯಾಂಕರ್ ಚಾಲಕ ಬದುಕುಳಿದಿದ್ದೇ ರೋಚಕ

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.