ಗ್ರಾಮವಿಕಾಸ ಯೋಜನೆಗೆ ಕಿತ್ನೂರ್ ಆಯ್ಕೆ
Team Udayavani, Jul 27, 2017, 9:43 AM IST
ಹಗರಿಬೊಮ್ಮನಹಳ್ಳಿ: ತಾಲೂಕಿನ ತೆಲುಗೋಳಿ ಗ್ರಾಮಕ್ಕೆ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ
ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 3ಕೋಟಿ ರೂ ಅನುದಾನ ಒದಗಿದ್ದು, ನಿವೇಶನ ಗುರುತುಪಡಿಸುವ ವಿಷಯಕ್ಕೆ
ಸಂಬಂಧಿಸಿದಂತೆ ಗ್ರಾಮಸ್ಥರ ಗುಂಪುಗಳ ನಡುವೆ ಭಿನ್ನಾಭಿಪ್ರಾಯವಿದ್ದ ಕಾರಣ ಶಾಸಕ ಭೀಮಾ ನಾಯ್ಕ ಗ್ರಾಮಸ್ಥರನ್ನು ಮನವೊಲಿಸಲು ಪ್ರಯತ್ನಿಸಿದರು.
ಒಂದು ಗುಂಪಿನ ಜನರು ತಿಪ್ಪೆಗಳನ್ನು ತೆಗೆದು ಹಾಸ್ಟೆಲ್ ಮಾಡುವುದು ಬೇಡ. ಗ್ರಾಮದ ಟಿಬಿಪಿ ಪ್ರದೇಶದಲ್ಲಿ ಸರಕಾರದ ಭೂಮಿಯಲ್ಲಿ ನಿರ್ಮಾಣ ಮಾಡಿ ಎಂದು ಶಾಸಕರನ್ನು ಮನವೊಲಿಸಿದರು. ಶಾಸಕರು ಪ್ರತಿಕ್ರಿಯಿಸಿ ಗ್ರಾಮಸ್ಥರೇ ನಿವೇಶನ ಗುರುತಿಸಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ, ನೀವು ತೋರಿಸಿದ ಸರಕಾರಿ
ಜಾಗದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು ಎಂದರು.
ನಂತರ ಮುತೂರು ಗ್ರಾಪಂ ವ್ಯಾಪ್ತಿಯ ಕಿತ್ನೂರ್ ಗ್ರಾಮಸ್ಥರು ಗ್ರಾಪಂ ಚುನಾವಣೆಯನ್ನು 6 ಬಾರಿ ಬಹಿಷ್ಕರಿಸಿದ
ಹಿನ್ನೆಲೆಯಲ್ಲಿ, ಮುಖಂಡರನ್ನು ಬಂಡೇ ರಂಗನಾಥೇಶ್ವರ ದೇವಸ್ಥಾನದ ಸಭಾ ಮಂಟಪಕ್ಕೆ ಕರೆಸಿ ಚರ್ಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುತೂರು ಗ್ರಾಮದಲ್ಲಿರುವ ಗ್ರಾಪಂ ಕಚೇರಿಯನ್ನು ಎಲ್ಲಾ ಗ್ರಾಮಗಳಿಗೆ ಮಧ್ಯ ಆಗುವಂತೆ ನೂತನ ಕಚೇರಿ ನಿರ್ಮಾಣ ಮಾಡಲಾಗುವುದು. ಗ್ರಾ.ಪಂ.ಗೆ ಕಿತ್ನೂರ್ ಮುತೂರು ಗ್ರಾಪಂ ಎಂದು ನಾಮಕರಣ ಮಾಡಲಾಗುವುದು. ಕಿತೂ°ರು ಗ್ರಾಮಸ್ಥರು ಗ್ರಾಮದ ಜನತೆಯೊಂದಿಗೆ ಚರ್ಚಿಸಿ ತೀರ್ಮಾನ ಹೇಳುತ್ತಾರೆ ಎಂದು ತಿಳಿಸಿದರು. ಗ್ರಾಮದ ಕೆಲವರು ಗ್ರಾಪಂ ಕಚೇರಿಯನ್ನು ಕಿತೂ°ರು ಗ್ರಾಮದಲ್ಲಿಯೇ ಮಾಡಿ ಎಂದು ಶಾಸಕರನ್ನು ಒತ್ತಾಯಿಸಿದರು.
ಇದಕ್ಕೂ ಮುನ್ನ ಶಾಸಕರು ಕಿತ್ನೂರ್ ಗ್ರಾಮದಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ, ಕಿತೂ°ರು ಗ್ರಾಮಕ್ಕೆ ಗ್ರಾಮ ವಿಕಾಸ ಯೋಜನೆಯಡಿ 1ಕೋಟಿ ರೂ.ಅನುದಾನದಡಿ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು. ಹಿನ್ನೀರಿನ ರಭಸ ಹೆಚ್ಚುತ್ತಿದ್ದು ತಂಬ್ರಹಳ್ಳಿ ಏತನೀರಾವರಿ ರೀಪೇರಿ ಕೆಲಸ ಸೇರಿ ಇತರೆ ಕಾಮಗಾರಿಗಳಿಗೆ 50ಲಕ್ಷ ರೂಅನುದಾನ ನೀಡಲಾಗಿದೆ. ಮುತೂರು, ಕಿತೂ°ರು, ರಾಮೇಶ್ವರ ಬಂಡಿ ಸೇರಿ ಒಟ್ಟು 5 ಗ್ರಾಮಗಳಲ್ಲಿ 1.20 ಕೋಟಿ ರೂ. ಅಂದಾಜು ಮೊತ್ತದಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಲಾಗುವುದು. ತಂಬ್ರಹಳ್ಳಿ ಉತ್ತರ ಭಾಗದಿಂದ ಬಂಡೇ ರಂಗನಾಥನ ತೇರು ಬೀದಿಯವರೆಗೆ ರಸ್ತೆ ನಿರ್ಮಾಣ ಮಾಡಲು 1 ಕೋಟಿ ರೂ.ಅಂದಾಜು ಮೊತ್ತ ನೀಡಲಾಗಿದೆ. ಯಾತ್ರಿ ನಿವಾಸ ನಿರ್ಮಿಸಲು ಕೋಟಿ ರೂ.ಅನುದಾನ ಕೋರಿ ಪ್ರಸ್ತಾವನೆ
ಸಲ್ಲಿಸಲಾಗಿದೆ. ತಂಬ್ರಹಳ್ಳಿ ಗ್ರಾಪಂ ಕಚೇರಿಯ ಮೇಲ್ಮಹಡಿ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗುವುದು.
ಗ್ರಾಮಕ್ಕೆ ಬಸವ ವಸತಿ ಯೋಜನೆಯಡಿ 60 ಮನೆಗಳನ್ನು ನೀಡಲಾಗಿದೆ. ಗ್ರಾಮದ ಕೂಲಿ ಕಾರ್ಮಿಕರು ನರೇಗಾ ಮಾನವ ದಿನಗಳನ್ನು ಹೆಚ್ಚಿಸಲು ಶಾಸಕರನ್ನು ಒತ್ತಾಯಿಸಿದಾಗ, ಶಾಸಕರು ನರೇಗಾ ನಿರ್ದೇಶಕ ವಿಶ್ವನಾಥರಿಗೆ ಕೂಲಿ ಕಾರ್ಮಿಕರಿಗೆ ಹೆಚ್ಚು ಕೆಲಸ ನೀಡಿ, ಕಾರ್ಮಿಕರ ಕೂಲಿ ಮೊತ್ತವನ್ನು ಕೂಡಲೇ ಪಾವತಿಸಿ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ತಂಬ್ರಹಳ್ಳಿ ಗ್ರಾಪಂ ಅಧ್ಯಕ್ಷೆ ಗೌಸಿಯಾಬೇಗಂ, ತಾಪಂ ಸದಸ್ಯರಾದ
ಪಿ.ಕೊಟ್ರೇಶ್, ಪಾಂಡು ನಾಯ್ಕ, ಎಪಿಎಂಸಿ ಅಧ್ಯಕ್ಷ ಅಳವಂಡಿ ವೀರಣ್ಣ, ನಿರ್ದೇಶಕಿ ವಸಂತಮ್ಮ, ಗ್ರಾಪಂ ಸದಸ್ಯರಾದ ಗೌರಜ್ಜನವರ ಗಿರೀಶ, ಕೊರವರ ಯಮನೂರಪ್ಪ, ಶ್ರೀನಿವಾಸ, ಹನುಮಂತಮ್ಮ, ಮಡಿವಾಳ ಕೊಟ್ರೇಶ,
ಗ್ರಾಪಂ ಮಾಜಿ ಅಧ್ಯಕ್ಷ ಬಣಕಾರ ಕೊಟ್ರೇಶ, ಗೌರಜ್ಜನವರ ಬಸವರಾಜಪ್ಪ, ರೋಗಾಣಿ ಪ್ರಕಾಶ್, ಕಿತೂ°ರು ಗ್ರಾಮದ
ಮುಖಂಡರಾದ ಚಂದ್ರಶೇಖರ ಪಾಟೀಲ್, ಉಮೇಶ, ಸಿದ್ದಣ್ಣ, ಮಾರುತೇಶ, ಹನುಮಂತಪ್ಪ, ದುರುಗಪ್ಪ, ಚೌಟಿ ನಾಗರಾಜ, ಹೇಮಣ್ಣ, ತಹಶೀಲ್ದಾರ್ ಆನಂದಪ್ಪ ನಾಯಕ, ಪಿಡಬ್ಲೂಡಿ ಸಹಾಯಕ ನಿರ್ದೇಶಕ ಪ್ರಭಾಕರ ಶೆಟ್ರಾ, ದೇವೆಂದ್ರನಾಯ್ಕ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.