ರೈತರಿಗೀಗ ಬೆಳೆನಾಶದ ಆತಂಕ!
Team Udayavani, Jul 27, 2017, 10:04 AM IST
ಚಿಕ್ಕಮಗಳೂರು: ಈ ಬಾರಿಯೂ ಮುಂಗಾರು ಮಳೆ ವಿಫಲವಾಗಿದ್ದು, ಬಯಲು ಭಾಗದಲ್ಲಿ ಕೆರೆಕಟ್ಟೆಗಳು ತುಂಬದೆ ಬಿತ್ತಿದ ಬೆಳೆಗಳು ಸಂಪೂರ್ಣ ನಾಶವಾಗುವ ಸ್ಥಿತಿ ತಲುಪಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದೆಯಾದರೂ ವಾಡಿಕೆ ಮಳೆ ಆಗಿಲ್ಲ. ಆದರೆ ಬಯಲು ಪ್ರದೇಶಗಳಲ್ಲಿ ಮಾತ್ರ ಮಳೆ ಸಂಪೂರ್ಣ ಕೈಕೊಟ್ಟಿದೆ.
ಮಲೆನಾಡು ತಾಲೂಕುಗಳಾದ ಮೂಡಿಗೆರೆ, ನ.ರಾ.ಪುರ, ಕೊಪ್ಪ, ಶೃಂಗೇರಿ ಭಾಗದಲ್ಲಿ 3-4 ದಿನ ಸತತವಾಗಿ ಮಳೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಕೆರೆಕಟ್ಟುಗಳು ಭರ್ತಿಯಾಗಿವೆ. ಹಳ್ಳಕೊಳ್ಳಗಳು, ತುಂಗಾ, ಭದ್ರಾ, ಹೇಮಾವತಿ ನದಿಗಳು ಕೂಡ ಒಂದೆರಡು ದಿನ ಉಕ್ಕಿ ಹರಿದವು. ಈಗ ಮಳೆ ಸಂಪೂರ್ಣ ಕಡಿಮೆಯಾಗಿದೆ. ಅಲ್ಲಿಲ್ಲಿ ಉದುರು ಮಳೆಯಾಗುತ್ತಿದ್ದು ಬಯಲು ಭಾಗದ ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲೂಕುಗಳ ಮೇಲೆ ಬರದ ಬರೆ ಮಾಸುವ ಮುನ್ನವೇ ಮತ್ತೆ ಅದರ ಕರಿನೆರಳು ಕಾಣಲಾರಂಭಿಸಿದೆ.
ಚಿಕ್ಕಮಗಳೂರು ತಾಲೂಕಿನ ಗಿರಿಶ್ರೇಣಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾದರೆ ಸಾಕು ಕಡೂರು ತಾಲೂಕಿನ
ಮದಗದ ಕೆರೆ ತುಂಬುತ್ತದೆ. ಈ ವರ್ಷವೂ ಕೂಡ ಕೆರೆಯಲ್ಲಿ ಸಾಕಷ್ಟು ನೀರು ತುಂಬಿದೆ. ಸಖರಾಯ ಪಟ್ಟಣದ ಅಯ್ಯನ ಕೆರೆ ಕೂಡ ಇತ್ತೀಚೆನ ಮಳೆಯಿಂದ ಮೈದುಂಬಿಕೊಂಡಿದೆ. ಆದರೆ, ಉಳಿದ ಬಹುತೇಕ ಕೆರೆಗಳು ಈ ಬಾರಿ ತುಂಬುವ ಲಕ್ಷಣಗಳು ಕಾಣುತ್ತಿಲ್ಲ. ಚಿಕ್ಕಮಗಳೂರು ತಾಲೂಕಿನ ಹಲವು ಕೆರೆಗಳಲ್ಲಿ ಗೇಣುದ್ದ ನೀರು ನಿಂತಿರುವುದನ್ನು ಕಾಣಬಹುದು.
ಆಗದ ಬಿತ್ತನೆ: ಕಡೂರು ತಾಲೂಕಿನ ಯಗಟಿ, ಸಿಂಗಟಗೆರೆ, ಪಂಚನಹಳ್ಳಿ, ಗಿರಿಯಾಪುರ, ಬೀರೂರು ಭಾಗದಲ್ಲಿ
ಉದುರು ಮಳೆಯಾಗಿದ್ದು ಬರದ ಛಾಯೆ ಇನ್ನೂ ಅಲ್ಲಿ ಮರೆಯಾಗಿಲ್ಲ. ಕೆಲ ರೈತರು ಭೂಮಿ ಹದ ಮಾಡಿಕೊಂಡು ಬಿತ್ತನೆಗಾಗಿ ಕಾದಿದ್ದಾರೆ. ಬೋರ್ ಇದ್ದವರು ಬೆಳೆ ಬಿತ್ತನೆ ಮಾಡಿದ್ದಾರೆ. ಕಳೆದ ಬಾರಿ ಕಡೂರು ಮತ್ತು ತರೀಕೆರೆ ತಾಲೂಕಿನ 4 ಹೋಬಳಿಗಳಲ್ಲಿ ಈರುಳ್ಳಿ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದರು. ಆದರೆ, ಹವಾಮಾನ ವೈಪ್ಯರಿತ್ಯದಿಂದ ಬೆಳೆ
ಕೈಕೊಟ್ಟ ಪರಿಣಾಮ ಬೆಳೆ ನಷ್ಟ ಅನುಭವಿಸಿದ್ದು ಈ ಬಾರಿ ತುಂತುರು ಮಳೆ ನೆಚ್ಚಿಕೊಂಡು ಈರುಳ್ಳಿ ಬಿತ್ತನೆ ಮಾಡುವ ಸಾಹಸಕ್ಕೆ ಕೈಹಾಕಿಲ್ಲ. ಚಿಕ್ಕಮಗಳೂರು ತಾಲೂಕಿನ ಅಂಬಳೆ, ಲಕ್ಯಾ, ಕಸಬಾ ಹೋಬಳಿಗಳಲ್ಲಿ ಕೆಲವರು ಆಲೂಗೆಡ್ಡೆ ಬಿತ್ತನೆ ಮಾಡಿದ್ದು ಸಾಧಾರಣವಾಗಿ ಬಿದ್ದ ಮಳೆ ಆಲೂಗಡ್ಡೆಗೆ ಪೂರಕ ವಾತಾವರಣ ಸೃಷ್ಟಿಸಿದೆ. ಕೆಲವರ
ಬೆಳೆ ನೀರಿಲ್ಲದೆ ಹೂ ಬಿಡಲು ಮೀನ ಮೇಷ ಎಣಿಸುತ್ತಿದೆ. ಕಳಸಾಪುರ ಭಾಗದಲ್ಲಿ ಕಳೆದ ವರ್ಷದ ಬರಗಾಲಕ್ಕೂ ಈಗಿನ ಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲ. ಒಣಗಿದ ಅಡಕೆ ಮತ್ತು ತೆಂಗಿನ ತೋಟಗಳು, ಹಾಳುಬಿಟ್ಟಿರುವ ಹೊಲಗದ್ದೆಗಳು, ಬೆಳೆ ನಷ್ಟ ಹೊಂದಿ ಮನೆಗೆ ಬೀಗ ಹಾಕಿ ಊರು ತೊರೆದಿರುವ ರೈತರ ಮನೆಗಳು, ಒಣಗಿ ಬಿರುಕುಬಿಟ್ಟಿರುವ ಕೆರೆಯಂಗಳ, ಮೇವು ನೀರಿಗಾಗಿ ಹಪಹಪಿಸುತ್ತಿರುವ ಬಡಕಲು ಜಾನುವಾರುಗಳನ್ನು ಇಂದಿಗೂ ಕಾಣಬಹುದಾಗಿದೆ. ಅಲ್ಲಿ ಮಳೆಯ ದರ್ಶನವೇ ಆಗಿಲ್ಲ. ಆಗಿದ್ದರೂ ತುಂತುರು ಮಾತ್ರ. ಕಳಸಾಪುರ, ಮಾಗಡಿ, ದೊಡ್ಡಕೆರೆಗಳು ಒಣಗಿ ಆಟದ ಮೈದಾನಗಳಾಗಿದ್ದು ಬರದ ಭೀಕರತೆಯನ್ನು ಹೇಳುತ್ತಿವೆ.
ವಾಡಿಕೆಗಿಂತ ಕಡಿಮೆ ಮಳೆ: ಜಿಲ್ಲೆಯಲ್ಲಿ ಜು.25ರ ಅಂತ್ಯದವರೆಗೆ ವಾಡಿಕೆಗಿಂತಲೂ ಶೇ.21.1ರಷ್ಟು ಕಡಿಮೆ ಮಳೆಯಾಗಿದೆ. ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕನ್ನು ಹೊರತುಪಡಿಸಿದರೆ ಉಳಿದ ಎಲ್ಲ ತಾಲೂಕುಗಳಲ್ಲಿಯೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿಯೂ ಕೆಲವು ಹೋಬಳಿಗಳಲ್ಲಿ ಹೆಚ್ಚಾಗಿ ಮಳೆಯಗಿದ್ದರೆ, ಅಂಬಳೆ ಮತ್ತು ಲಕ್ಯಾ ಹೋಬಳಿಗಳಲ್ಲಿ ಬಾರೀ ಕಡಿಮೆ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಜು.25ರವರೆಗೆ ವಾಡಿಕೆ ಮಳೆ 435 ಮಿ.ಮೀ.ಗೆ ಎದುರಾಗಿ 469.8 ಮಿ.ಮೀ. ಮಳೆಯಾಗಿದೆ. ಅದೇ ರೀತಿ ಕಡೂರು ತಾಲೂಕಿನಲ್ಲಿ 243 ಕ್ಕೆ 152.7, ಕೊಪ್ಪ ತಾಲೂಕು 1615 ಕ್ಕೆ 1160.4, ಮೂಡಿಗೆರೆ 1277 ಗೆ 1336.1, ನರಸಿಂಹರಾಜಪುರ 890 ಕ್ಕೆ 575.4, ಶೃಂಗೇರಿ 2070ಕ್ಕೆ 1515.6, ತರೀಕೆರೆ 423 ಕ್ಕೆ 275.5 ಮಿ.ಮೀ. ಮಳೆಯಾಗಿದ್ದರೆ ಒಟ್ಟಾರೆ ಜಿಲ್ಲೆಯಲ್ಲಿ 6953 ಮಿ.ಮೀ.ಗೆ ಎದುರಾಗಿ 5485.5 ಮಿ.ಮೀ. ಮಳೆಯಾಗಿದೆ.
ಎಸ್.ಕೆ.ಲಕ್ಷ್ಮೀಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ
Kottigehara: ಔಷಧಿ ಸಿಂಪಡಣೆ ವೇಳೆ ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು
Chikkamagaluru: ಹಾಸನಾಂಬೆ ದರ್ಶನಕ್ಕೆ ಹೊರಟ್ಟಿದ್ದ ದಂಪತಿಯ ಕಾರು ಕೆರೆಗೆ; ಮಹಿಳೆ ಸಾವು
MUST WATCH
ಹೊಸ ಸೇರ್ಪಡೆ
New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
Ranchi: ಹೇಮಂತ್ ಸೊರೇನ್ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ
Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ
Goddess Lakshmi: ಲಕ್ಷ್ಮೀ ಆರಾಧನೆಯ ಪರ್ವ ಸಮಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.