ನಾಲ್ವರು ಮನೆಗಳ್ಳರ ಬಂಧನ
Team Udayavani, Jul 27, 2017, 10:17 AM IST
ಶಿವಮೊಗ್ಗ: ನಾಲ್ವರು ಮನೆಗಳ್ಳರನ್ನು ಬಂಧಿಸಿರುವ ಶಿವಮೊಗ್ಗ ಪೊಲೀಸರು ಸುಮಾರು 25 ಲಕ್ಷ ರೂ. ಮೌಲ್ಯದ 970ಗ್ರಾಂ. ಚಿನ್ನಾಭರಣ ಹಾಗೂ ಕಾರು ವಶಪಡಿಸಿಕೊಂಡಿದ್ದಾರೆ.
ಮಲವಗೊಪ್ಪದಲ್ಲಿ ಅನುಮಾನಾಸ್ಪದವಾಗಿ ಕಾರಿನಲ್ಲಿ ಓಡಾಡುತ್ತಿದ್ದ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ತಿರುಪತಿ ಹಳ್ಳಿಯ ಜನಾರ್ಧನ ಎಂಬುವನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ವಿವಿಧ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಅಭಿನವ ಖರೆ ಮಾತನಾಡಿ, ಆರೋಪಿಯು ತುಂಗಾ ನಗರ ಠಾಣೆಯ 2, ವಿನೋಬನಗರ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣೆಯ ತಲಾ ಒಂದು ಪ್ರಕರಣ ನಡೆಸಿರುವುದಾಗಿ ತನಿಖೆ ವೇಳೆ
ಒಪ್ಪಿಕೊಂಡಿದ್ದಾನೆ ಎಂದರು.
ಜನಾರ್ಧನ ವಿವಿಧೆಡೆ ಕಳವು ಮಾಡಿದ ಚಿನ್ನಾಭರಣಗಳನ್ನು ಅರಸೀಕೆರೆ ಖಾಸಗಿ ಫೈನಾನ್ಸ್‌ನಲ್ಲಿ ಅಡ ಇಟ್ಟಿದ್ದ. ಮತ್ತೆ ಕೆಲವು ಆಭರಣಗಳನ್ನು ತನ್ನ ಸ್ವಗ್ರಾಮದ ಜಮೀನಿನಲ್ಲಿ ಬೋರ್‌ವೆಲ್ ಮೋಟಾರ್ ಬಾಕ್ಸ್‌ನಲ್ಲಿ ಬಚ್ಚಿಟ್ಟಿದ್ದ. ಆತನನ್ನು
ಕೂಲಂಕಶವಾಗಿ ವಿಚಾರಣೆ ನಡೆಸಿ 21 ಲಕ್ಷ ರೂ. ಬೆಲೆಯ 810 ಗ್ರಾಂ. ಚಿನ್ನಾಭರಣ, 3 ಲಕ್ಷ ರೂ. ಮೌಲ್ಯದ ಒಂದು ಷವರ್ಲೆ ಕಾರನ್ನು ವಶಕ್ಕೆ ಪಡೆಯಲಾಗಿದೆ. ಹಾಸನ ಗೋಲ್ಡ್ ಕಂಪೆನಿಗೆ ಮಾರಾಟ ಮಾಡಿದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವುದು ಬಾಕಿ ಇದೆ ಎಂದು ತಿಳಿಸಿದರು.
ಅದೇ ರೀತಿ ಕೋಟೆ ಸಿಪಿಐ ಮತ್ತು ಸಿಬ್ಬಂದಿ ಲಷ್ಕರ್ ಮೊಹಲ್ಲಾದ ತಿರುಪಳಯ್ಯನ ಕೇರಿಯಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಎರದಕೆರೆ ಗ್ರಾಮದ ತಿಮ್ಮಯ್ಯ (55), ಶಿವಮೊಗ್ಗ ಎನ್.ಟಿ. ರಸ್ತೆಯ ಆರುಗಂ (64) ಮತ್ತು ಕುಂಬಾರ ಗುಂಡಿಯ ಶಂಕರ (36)ಎಂಬುವರನ್ನು ಬಂಧಿಸಿ 4 ಲಕ್ಷ ರೂ. ಮೌಲ್ಯದ 160 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ದೊಡ್ಡ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವರು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಪ್ರಕರಣ ಪತ್ತೆಗೆ ಎಎಸ್ಪಿ ಮುತ್ತುರಾಜ್ ನಿರ್ದೇಶನದಲ್ಲಿ ಡಿವೈಎಸ್ಪಿ ಮಂಜುನಾಥ್, ಗ್ರಾಮಾಂತರ ಸಿಪಿಐ ಮಹಾಂತೇಶ್ ಬಿ. ಹೊಳಿ, ಕೋಟೆ ಸಿಪಿಐ ಕೆ. ಚಂದ್ರಪ್ಪ, ಪಿಎಸ್‌ಐ ಸುನಿಲ್‌ಕುಮಾರ್, ತುಂಗಾ ನಗರ ಠಾಣೆ ಪಿಎಸ್‌ಐ ಗಿರೀಶ್ ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಈ ನಾಲ್ವರು ಕಳವು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.