ಕ್ಲಾಸ್‌ ಬಂಕ್‌, ಜಾಲಿ ರೈಡ್‌ 

Team Udayavani, Jul 28, 2017, 7:00 AM IST

maxresdefault-(1).jpg

ಮೊನ್ನೆ ಕ್ಲಾಸ್‌ಗೆ ಹೋಗಿ ಕೂತರೆ ಅದೇಕೋ ಪಾಠ ಕೇಳಲು ಮೂಡೇ ಬರಿರ್ಲಿಲ್ಲ. ಮೊದಲ ಕ್ಲಾಸ್‌ ಫ‌ುಲ್‌ ನಿದ್ರೆ ಮಾಡೋ ಎಲ್ಲಾ ಲಕ್ಷಣ ಎದ್ದು ಕಾಣಾ ಇತ್ತು. ಇನ್ನೇನು ಮೊದಲ ಕ್ಲಾಸು ಮುಗೀತಾ ಬಂತು ಅನ್ನೋ ಹಾಗೇನೇ ಮುಂದುಗಡೆ ಕುಳಿತಿದ್ದ ಗುರು ತಿರುಗಿ, “ನಿದ್ರೆ ಬಂದು ಸಾಯ್ತಿದೆ. ಹಾಗೇ ಒಂದು ರೌಂಡ್‌ ಶಿಶಿಲ ಸೌತಡ್ಕ ಕಡೆ ಹೋಗ್‌ ಬರೋಣ’ ಎಂದ. ಅದೇನೋ ಗೊತ್ತಿಲ್ಲ ನೋಡಿ ಫ್ರೆಂಡ್ಸ್‌ ಎಲ್ಲರಿಗೂ ಒಟ್ಟಿಗೆ ಕ್ಲಾಸ್‌ ಬೋರ್‌ ಆಗೋದು ಮಾಮೂಲಿ. ನಾವ್‌ ಬೇಕೂ ಅಂತ ಬಂಕ್‌ ಮಾಡಿದ ಕ್ಲಾಸ್‌ಗಳಿಗಿಂತ ಸ್ನೇಹಿತರಿಗೆ ಬೇಜಾರು ಅಂತ ಅವರು ಎಳೆದುಕೊಂಡು ಹೊರಗಡೆ ಹೋದ ಕ್ಲಾಸ್‌ಗಳೇ ಜಾಸ್ತಿ ಇವೆ. ಮೊನ್ನೆಯೂ ಹಾಗೇ ಆಯ್ತು. ಗುರುರಾಜ್‌ ಕರೆದ ಅಂತ ನಾವೆಲ್ಲ ಬಂಕ್‌ ಮಾಡಿದ್ವಿ. ಹಾಗೆ ಹೀಗೆ ಅನ್ನೋ ಅಷ್ಟರಲ್ಲಿ ನಮ್ಮ ನಾಲ್ಕು ಜನರ ಎರಡು ಬೈಕ್‌ ತಯಾರಾಗಿಬಿಟ್ಟಿದ್ದವು. 
ಸೀದಾ ಹೊರಟಿದ್ದು ನಮ್ಮ ಸವಾರಿ ಸೌತಡ್ಕ, ಶಿಶಿಲ ಕಡೆಗೆ. ಧರ್ಮಸ್ಥಳದಲ್ಲಿ ಪೆಟ್ರೋಲ್‌ ಹಾಕಿಸಿಕೊಂಡು ಜರ್ಕಿನ್‌ ಏರಿಸಿಕೊಂಡು ಸುರಿಯುವ ಮಳೆಯಲ್ಲಿ ನಾವು ಹೊರಟೆವು. “ಧೋ’ ಎಂದು ಸುರಿಯುವ ಮಳೆಯನ್ನು ಕಂಡು, “ಒಮ್ಮೆ ಬೇಕಿತ್ತಾ ಈ ಹುಚ್ಚು ಸಾಹಸ?’ ಅನ್ನಿಸದೇ ಇರಲಿಲ್ಲ. ಆದರೂ ಹಠಬಿಡಲು ಮನಸ್ಸು ಕೂಡ ತಯಾರಿರಲಿಲ್ಲ. 

ಧರ್ಮಸ್ಥಳದಿಂದ ಸೌತಡ್ಕ ಹೋಗುವ ರಸ್ತೆ ಪ್ರಾಯಶಃ ಡಾಂಬರು ಕಾಣದೆ ದಶಕಗಳೇ ಕಂಡಿದೆ. ರಸ್ತೆಯ ತುಂಬಾ ಎರಡೆರಡಡಿ ಹೊಂಡಗಳು. ಜೋರು ಮಳೆಯಿಂದ ಹೊಂಡದಲ್ಲಿ ನೀರು ತುಂಬಿದ್ದ ಕಾರಣ ಹೊಂಡ ಎಷ್ಟು ದೊಡ್ಡದಿದೆ ಎಂಬುದೂ ತಿಳಿಯುತ್ತಿರಲಿಲ್ಲ. ಬೈಕಿನ ಚಕ್ರ ಹೋಗಿ ಹೊಂಡದಲ್ಲಿ ಇಳಿದಾಗಲೇ ಹೊಂಡದ ಗಾತ್ರ ಬೆನ್ನಿಗೆ ಬಿದ್ದ ಪೆಟ್ಟಿನಿಂದ ತಿಳಿಯುತಿತ್ತು. ಹೀಗೆ ಸೌತ‌ಡ್ಕ ಸೇರಿ ಗಣೇಶನ ದರ್ಶನ ಮಾಡಿ “ಇನ್ಮೆàಲೆ ಕ್ಲಾಸ್‌ ಬೋರ್‌ ಹೊಡೆಸಿ ನಿನ್ನತ್ರ ಕರೆಸಿಕೊಳ್ಬೇಡ್ವಪ್ಪ’ ಅಂತ ಹೇಳಿ ವಾಪಾಸು ಹೊರಟೆವು.

ಮಧ್ಯಾಹ್ನ ಬಿಸಿ ಬಿಸಿ ನೀರಿನ ಸ್ನಾನ ಮಾಡಿ, ಬೆಳಗ್ಗಿನಿಂದ ಏನೂ ನಡೆದೇ ಇಲ್ವೇನೋ ಎಂಬಂತೆ ಕ್ಲಾಸ್‌ ಹೊಕ್ಕೆವು. ನಾವು ಹೋಗಿ ಬಂದು ಒಂದು ವಾರವಾದರೂ ಅದಕ್ಕೆ ಸಾಕ್ಷಿಯಾಗಿ ಉಳಿದುಕೊಂಡಿರುವುದು ಶೀತ ಮತ್ತು ಕ್ಲಾಸ್‌ ಬೋರ್‌ ಆಗದಂತೆ ನೋಡಿಕೊಳ್ಳುವ ಕೆಮ್ಮು ಮಾತ್ರ.

ರೋಹಿತ್‌ ಬಾಸ್ರಿ
ಪತ್ರಿಕೋದ್ಯಮ ವಿಭಾಗ
ಎಸ್‌ಡಿಎಮ್‌ ಕಾಲೇಜು, ಉಜಿರೆ

ಟಾಪ್ ನ್ಯೂಸ್

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1(1

Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್‌ ದೀಪಗಳಿಂದ ಶೃಂಗಾರ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.