ಅನುರಾಗದ ಅನುರೀತಾ


Team Udayavani, Jul 28, 2017, 6:35 AM IST

JHA.jpg

ಗ್ಯಾಂಗ್‌ ಆಫ್ ವಾಸೇಪುರ್‌ ಚಿತ್ರದ ಮೂಲಕ ಅನುರಾಗ್‌ ಕಶ್ಯಪ್‌ ಪರಿಚಯಿಸಿದ ನಟಿ ಅನುರೀತಾ ಝಾ. ಗ್ಯಾಂಗ್‌ ಆಫ್ ವಾಸೇಪುರ್‌ನ ಎರಡೂ ಭಾಗಗಳಲ್ಲೂ ನಟಿಸಿದ ಹಿರಿಮೆ ಅವಳದ್ದು. ಚಿಕ್ಕ ಪಾತ್ರವೇ ಆಗಿದ್ದರೂ ಅದನ್ನೇ ಚೊಕ್ಕವಾಗಿ ನಿಭಾಯಿಸಿ ನಿರ್ದೇಶಕರ ಮಾತ್ರವಲ್ಲದೆ ಜನರ ಮೆಚ್ಚುಗೆಯನ್ನು ಗಳಿಸಿದವಳು ಅನುರೀತಾ. ಇದರ ಫ‌ಲವಾಗಿ ಕಶ್ಯಪ್‌ನ ಮುಂದಿನ ಸಿನೆಮಾ ಜುಗ್ನಿಯಲ್ಲಿ ಪ್ರಮುಖ ಪಾತ್ರವೇ ಸಿಕ್ಕಿತು. ಆದರೆ ಈ ಚಿತ್ರವೂ ಬಾಕ್ಸಾಫೀಸಿನಲ್ಲಿ ಗೆಲ್ಲಲಿಲ್ಲ. 

ಹೀಗಾಗಿ ಅನುರೀತಾಳ ಬಾಲಿವುಡ್‌ ಪಯಣಕ್ಕೆ ಅಲ್ಲೊಂದು ಅಲ್ಪವಿರಾಮ ಸಿಕ್ಕಿತು. ಕೆಲ ಸಮಯದ ಬಳಿಕ ಇದೀಗ ಬಾರಾತ್‌ ಕಂಪೆನಿ ಎಂಬ ಕಾಮೆಡಿ ಚಿತ್ರದ ಮೂಲಕ ಮತ್ತೂಮ್ಮೆ ಪರೀಕ್ಷೆ ಮಾಡಿಕೊಳ್ಳಲಿದ್ದಾಳೆ ಅನುರೀತಾ. ಮೈಥಿಳಿ ಭಾಷೆಯ ಒಂದು ಸಿನೆಮಾವೂ ಸೇರಿದಂತೆ ಅನುರೀತಾ ಈವರೆಗೆ ನಟಿಸಿರುವುದು ಒಟ್ಟು ನಾಲ್ಕು ಸಿನೆಮಾಗಳಲ್ಲಿ ಮಾತ್ರ. 

ಮೂರ್‍ನಾಲ್ಕು ಕಿರುಚಿತ್ರಗಳು, ಒಂದೈದು ನಾಟಕಗಳು, ಆಗೊಮ್ಮೆ ಹೀಗೊಮ್ಮೆ ಜಾಹೀರಾತು ಚಿತ್ರಗಳು ಇಲ್ಲಿಗೆ ಮುಗಿಯುತ್ತದೆ ಅವಳ ಬಣ್ಣದ ಸಂಗ. ಹೆಚ್ಚು  ಚಿತ್ರಗಳು ಸಿಗದಿರಲು ಕಾರಣ ಪಾತ್ರ ವೈವಿಧ್ಯಮಯವಾಗಿರಬೇಕೆಂಬ ಅವಳ ಕಂಡೀಶನ್‌. ಈ ವಿಚಾರದಲ್ಲಿ ಅವಳು ಅಮೀರ್‌ ಖಾನ್‌ನನ್ನು ತನ್ನ ಆದರ್ಶ ನಟನೆಂದು ಭಾವಿಸಿಕೊಂಡಿದ್ದಾಳೆ. 
“ವರ್ಷಕ್ಕೆ ಒಂದೇ ಆದರೂ ಪರವಾಗಿಲ್ಲ , ಚಿತ್ರದಿಂದ ಚಿತ್ರಕ್ಕೆ ಪಾತ್ರದಲ್ಲಿ ವೈವಿಧ್ಯವಿರಬೇಕು. ಒಂದೇ ರೀತಿಯ ಪಾತ್ರ ಮಾಡಿ ಹತ್ತರಲ್ಲಿ ಹನ್ನೊಂದಾಗುವುದಕ್ಕಿಂತ ಅಪರೂಪಕ್ಕೊಂದು ಪಾತ್ರ ಸಿಕ್ಕಿದರೂ ಅದರಲ್ಲೇ ಮಿಂಚುವುದರಲ್ಲಿ ಥ್ರಿಲ್‌ ಇದೆ ಎನ್ನುವುದು ಅನುರೀತಾಳ ಫಿಲಾಸಫಿ. ಹೀಗಾಗಿ, ಬಂದ ಒಂದಷ್ಟು ಪಾತ್ರಗಳನ್ನು ಅವಳು ತಿರಸ್ಕರಿಸಿದ್ದಾಳೆ. ಬಾರಾತ್‌ ಕಂಪೆನಿಯ ಬಳಿಕವಾದರೂ ಬಾಲಿವುಡ್‌ನ‌ಲ್ಲಿ ತನ್ನ ಹೆಸರು ಪರಿಚಿತವಾಗಬಹುದು ಎಂಬ ಅಭಿಲಾಷೆ ಅವಳದ್ದು. 

ಅಂದ ಹಾಗೆ, ಅನುರೀತಾ ಬಿಹಾರದ ಬೆಡಗಿ. ಆದರೆ ಬಾಲ್ಯ ಮತ್ತು ಯೌವನವನ್ನು ಕಳೆದದ್ದು ರಾಜಸ್ಥಾನ ಮತ್ತು ದಿಲ್ಲಿಯಲ್ಲಿ. ತಂದೆಗೆ ಮಗಳು ಡಾಕ್ಟರ್‌ ಆಗಬೇಕೆಂಬ ಆಸೆ ಇದ್ದರೂ ಅನುರೀತಾ ಆರಿಸಿಕೊಂಡದ್ದು ಬಣ್ಣದ ಲೋಕವನ್ನು. ಆರಂಭದಲ್ಲಿ ಮೋಡೆಲ್‌ ಆಗಿದ್ದಳು. ಈ ಸಂದರ್ಭದಲ್ಲಿ ಮನೀಷ್‌ ಮಲ್ಹೋತ್ರ ಸೇರಿದಂತೆ ದೇಶದ ಪ್ರಮುಖ ಡಿಸೈನರ್‌ಗಳ ಉಡುಪು ಧರಿಸಿ ಕ್ಯಾಟ್‌ವಾಕ್‌ ಮಾಡಿದ್ದಾಳೆ. ಈಗಲೂ ಮಾಡೆಲಿಂಗ್‌ ಮಾಡಲು ಕೈತುಂಬ ಅವಕಾಶಗಳಿವೆಯಂತೆ. ಹಣದ ಸಮಸ್ಯೆ ಎದುರಾದಾಗಲೆಲ್ಲ ಅನುರೀತಾ ಕ್ಯಾಟ್‌ವಾಕ್‌ ಮಾಡಲು ಹೊರಡುತ್ತಾಳೆ. ಬಾಲಿವುಡ್‌ನ‌ಲ್ಲಿ ಗಾಡ್‌ಫಾದರ್‌ ಇಲ್ಲದೆ ಮುಂದೆ ಸಾಗುವುದು ಕಷ್ಟ ಎನ್ನುವುದು ಅವಳು ಅನುಭವದಿಂದ ಕಂಡುಕೊಂಡಿರುವ ಸತ್ಯ. ಆದರೂ ತನ್ನ ಪ್ರತಿಭೆಗೂ ಒಂದಲ್ಲ ಒಂದು ದಿನ ನ್ಯಾಯ  ಸಿಕ್ಕೀತು ಎಂಬ ನಿರೀಕ್ಷೆಯಲ್ಲಿದ್ದಾಳೆ. 

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.