ಡ್ರಾಮಾ ಜೂನಿಯರ್ಸ್2ರಲ್ಲಿ ಮಿಂಚುತ್ತಿರುವ ಮುಳ್ಳೇರಿಯದ ಅನೂಪ್ ಶರ್ಮಾ
Team Udayavani, Jul 28, 2017, 7:45 AM IST
ಮುಳ್ಳೇರಿಯ: ಕನ್ನಡಿಗರ ಮನಸೂರೆಗೊಂಡಿರುವ ಝೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ -2ಕ್ಕೆ ಮುಳ್ಳೇರಿಯದ ಪುಟಾಣಿ ಅನೂಪ್ ರಮಣ್ ಶರ್ಮಾ (11) ಮೂವತ್ತು ಮಂದಿಯಲ್ಲಿ ಒಬ್ಬನಾಗಿ ಆಯ್ಕೆಗೊಂಡು ಇದೀಗ ಗಮರ್ನಾಹ ಪ್ರದರ್ಶನ ನೀಡುತ್ತಿದ್ದಾನೆ. ಎರಡನೇ ಸೀಸನ್ ಶನಿವಾರದಿಂದ ಆರಂಭಗೊಂಡಿದ್ದು, ಪ್ರತಿ ಶನಿವಾರ ಮತ್ತು ರವಿವಾರ ರಾತ್ರಿ 9ರಿಂದ 10.30ರ ವರೆಗೆ ಪ್ರಸಾರವಾಗುತ್ತಿದೆ.
ಕೇರಳ ರಾಜ್ಯದಲ್ಲಿರುವ ಗಡಿನಾಡು ಕಾಸರಗೋಡಿನ ಕನ್ನಡಿಗರಿಗೆ ಕನ್ನಡದ ಬಾಲಕ ಹೆಮ್ಮೆ ತಂದಿದ್ದಾನೆ. ಗಡಿನಾಡಿನಲ್ಲಿ ಕನ್ನಡದ ದಮನಕ್ಕಾಗಿ ಕೇರಳ ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಇವನ ಸಾಧನೆಯು ಕಾಸರಗೋಡಿನ ಕನ್ನಡಿಗರಿಗೆ ಅಭಿಮಾನದ ಸಂಕೇತ ವಾಗಿದೆ. ಸೀಸನ್2ರಲ್ಲಿ ಕರ್ನಾಟಕದ ಅನೇಕ ಕಡೆ ಅಡಿಷನ್‌ಗಳು ನಡೆದು ಸುಮಾರು 25 ಸಾವಿರಕ್ಕಿಂತಲೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆಸಿದ ಅಡಿಶನ್‌ನಲ್ಲಿ ಆಯ್ಕೆಗೊಂಡ ಬಳಿಕ ನಡೆದ ಮೆಗಾ ಅಡಿಶನ್‌ನಲ್ಲಿಯೂ ಉತ್ತಮ ನಟನೆಯ ಚಾತುರ್ಯದಿಂದ ಎಲ್ಲರ ಮನ ಸೆಳೆದಿರುವ ಈ ಪುಟಾಣಿ ಇದೀಗ ಬೆಂಗಳೂರಿನಲ್ಲಿ ಜರಗಿದ ಮೆಗಾ ಆಡಿಷನ್‌ನಲ್ಲಿ ತನ್ನ ಚುರುಕಿನ ನಟನೆ ಮತ್ತು ಮಾತಿನ ಕೌಶಲದಿಂದ ಪದಕ ಗಳಿಸಿ ಆಯ್ಕೆಯಾಗಿ ಇದೀಗ ನಡೆಯುತ್ತಿರುವ ಡ್ರಾಮಾ ಜೂನಿಯರ್ಸ್ ಶೂಟ್‌ನಲ್ಲಿ ಬ್ಯುಸಿಯಾಗಿದ್ದಾನೆ. ಈ ಬಾರಿಯ ಡ್ರಾಮಾ ಜ್ಯೂನಿಯರ್ಸ್ ಸೀಸನ್ ಮೇಲೆ ಹೆಚ್ಚಿನ ನಿರೀಕ್ಷೆಯಿದ್ದು, ವೀಕ್ಷಕರಿಗೆ ನೂತನ ಜಗತ್ತನ್ನು ಪರಿಚಯಿಸುವಲ್ಲಿ ಸಿದ್ಧತೆಗಳನ್ನು ನಡೆಸುತ್ತಿದೆ.
ಪೊಲೀಸ್ ಅಧಿಕಾರಿಯಾಗಿ ಗಮನಸೆಳೆದ
ಮಂಗಳೂರಿನಲ್ಲಿ ನಡೆಸಿದ ಅಡಿಷನ್‌ನಲ್ಲಿ ಐಪಿಎಸ್ ಪೋಲಿಸ್ ಅ ಧಿಕಾರಿಯಾಗಿ ನಟಿಸಿದ ಡ್ರಾಮಾ ಮತ್ತು ಮೆಗಾ ಅಡಿಶನ್‌ನಲ್ಲಿ ಕಾನ್‌ಸ್ಟೆಬಲ್ ಭೀಮಣ್ಣ ಎಂಬ ಪಾತ್ರವನ್ನು ಅದ್ಭುತವಾಗಿ ಮಾಡಿ ತೀರ್ಪುಗಾರರ ಗಮನ ಸೆಳೆದಿದ್ದಾನೆ. ತನ್ನ ಸ್ವ ಆಸಕ್ತಿಯಿಂದಲೇ ನಟನೆಯನ್ನು ರೂಢಿಸಿಕೊಂಡಿರುವ ಬಾಲಕ ಅನೂಪ್ ರಮಣ ಶರ್ಮ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ತನ್ನದೇ ಛಾಪು ಮೂಡಿಸುವ ಖುಷಿಯಲ್ಲಿದ್ದಾನೆ. ಸಾವಿರಗಟ್ಟಲೆ ಮಕ್ಕಳಲ್ಲಿ ಆಯ್ಕೆಗೊಂಡ ಮೂವತ್ತು ಮಂದಿಯಲ್ಲಿ ಒಬ್ಬನಾಗಿರುವ ಅನೂಪ್‌ನನ್ನು ಖುಷಿಗೊಳಿಸಿದ್ದು, ಇದೀಗ ಮುಂದಿನ ದಿನಗಳಲ್ಲಿ ಉತ್ತಮ ನಟನೆಯನ್ನು ಮಾಡುವ ಭರವಸೆಯನ್ನು ಹೊಂದಿದ್ದಾನೆ.
ಯಾವುದೇ ತರಬೇತಿ ಇಲ್ಲದೆ, ತನ್ನದೇ ಆಸಕ್ತಿಯಿಂದ ನಟನೆಯನ್ನು ಅಭ್ಯಸಿಸುತ್ತಿದ್ದಾನೆ. ಅನೂಪ್‌ನ ತಾಯಿ ಪದ್ಮ ಕೆ.ಕೆ ಮುಳ್ಳೇರಿಯ ಎ.ಯು.ಪಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವರು ನೃತ್ಯ, ಇನ್ನಿತರ ಕಲಾ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದು, ಪಠ್ಯೇತರ ಚಟುವಟಿಕೆಗಳಿಗೆ ತನ್ನ ಮಕ್ಕಳನ್ನೂ ಒಗ್ಗಿಕೊಳ್ಳುವಂತೆ ಪೊÅàತ್ಸಾಹ ನೀಡುತ್ತಿದ್ದಾರೆ. ಶಾಲೆಯಲ್ಲಿ ನಡೆಸುವ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಇದೀಗ ಡ್ರಾಮಾ ಜೂನಿ ಯರ್ಸ್‌ಗೆ ಆಯ್ಕೆಗೊಳ್ಳುವ ಮೂಲಕ ಕಾಸರಗೋಡಿನ ಹೆಸರನ್ನು ಮುಗಿಲೆತ್ತರಕ್ಕೆ ಕೊಂಡೊ ಯ್ಯುವ ಪ್ರಯತ್ನ ನಡೆಸಿದ್ದಾನೆ. ಮುಳ್ಳೇರಿಯಾ ಎಯುಪಿಎಸ್ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಯಾಗಿದ್ದು, ತಂದೆ ಮಹಾ ಲಿಂಗೇಶ್ವರ ಎನ್. ಇವರು ಎಸ್‌ಎನ್‌ಎಲ್‌ಪಿ ಶಾಲೆ ಪೆರ್ಲದ ಮುಖ್ಯ ಶಿಕ್ಷಕರಾಗಿರುವರು. ಇವರ ಪ್ರೋತ್ಸಾಹ ಮತ್ತು ರಂಗ ನಿರ್ದೇಶಕ ಉದಯ ಸಾರಂಗ್ ಅವರ ಪೊÅàತ್ಸಾಹವಿದೆ. ಕನ್ನಡದ ಡ್ರಾಮಾ ಜೂನಿಯರ್ಸ್‌ಗೆ ಅನೂಪ್ ಪ್ರವೇಶಿಸಿದ್ದು ಆತನಿಗೆ ಉತ್ತಮ ಭವಿಷ್ಯವಿರಲಿ ಎಂದು ಸಮಸ್ತ ಕನ್ನಡಿಗರ ಪ್ರಾರ್ಥನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್ ಮೂಲಕ ನಕ್ಸಲ್ ಸೋಮನ್ ವಿಚಾರಣೆ
Kasaragod: 300 ಪವನ್ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ
Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು
Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.