ಬೆಳೆ ವಿಮೆ ಪರಿಹಾರಕ್ಕೆ ಜೋಶಿ ಒತ್ತಾಯ


Team Udayavani, Jul 28, 2017, 11:49 AM IST

hub4.jpg

ಹುಬ್ಬಳ್ಳಿ: ಕೇಂದ್ರ ಸರಕಾರ ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯಡಿ ರಾಜ್ಯ ಸರಕಾರಕ್ಕೆ ತನ್ನ ಪಾಲಿನ ಹಣ ನೀಡಿದೆ. ಆದರೆ ರಾಜ್ಯ ಸರಕಾರ ರೈತರಿಗೆ ಬೆಳೆ ವಿಮಾ ಮೊತ್ತ ನೀಡುವಲ್ಲಿ ಉದಾಸೀನತೆ ತೋರುತ್ತಿದ್ದು, ಕೂಡಲೇ ಅದು ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಪರಿಹರಿಸಬೇಕೆಂದು ಸಂಸದ ಪ್ರಹ್ಲಾದ ಜೋಶಿ ಕೇಂದ್ರವನ್ನು ಒತ್ತಾಯಿಸಿದರು. 

ಧಾರವಾಡ ಜಿಲ್ಲೆಯು ಸತತ ಮೂರು ವರ್ಷಗಳಿಂದ ಬರಗಾಲಕ್ಕೊಳಗಾಗಿದ್ದು, ಈ ವರ್ಷವು ಕೂಡ ಮಳೆಯ ಕೊರತೆಯಿಂದ ಸಂಪೂರ್ಣ ಜಿಲ್ಲೆಯ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ರೈತರ ನೆರವಿಗಾಗಿ ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆಯಡಿ 2016ರ ಮುಂಗಾರಿನಲ್ಲಿ 86 ಸಾವಿರ ರೈತರು ನೋಂದಾಯಿಸಿಕೊಂಡಿದೆ.

ಅವರಿಗೆ 172 ಕೋಟಿ ರೂ. ವಿಮೆ ಮೊತ್ತ ನೀಡಲು ನಿಗದಿಯಾಗಿದ್ದು, ಕೇಂದ್ರ ಸರಕಾರವು ತನ್ನ ಪಾಲಿನ ಮೊತ್ತವನ್ನು ರಾಜ್ಯಕ್ಕೆ ನೀಡಿದೆ. ಈ ಯೋಜನೆಯ ಅನುಷ್ಠಾನ ನಿರ್ವಹಣೆಯು ರಾಜ್ಯ ಸರಕಾರದ್ದಾಗಿದೆ. ಆದರೆ ರಾಜ್ಯ ಸರಕಾರ ನೇಮಿಸಿರುವ ಟಾಟಾ ಎಐಜಿ ವಿಮಾ ಕಂಪನಿಯು ಧಾರವಾಡ ಜಿಲ್ಲೆಗೆ ಬರಬೇಕಾದ 172 ಕೋಟಿ ರೂ.ದಲ್ಲಿ ಕೇವಲ 61 ಕೋಟಿ ರೂ.ಗಳನ್ನು ಮಾತ್ರ ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ.

ಇನ್ನುಳಿದ 111 ಕೋಟಿ ರೂ.ಗಳಲ್ಲಿ 41.22 ಕೋಟಿ ರೂ.ಗಳು ರಾಜ್ಯ ಸರಕಾರ ರೈತರ ಬ್ಯಾಂಕ್‌ ಖಾತೆಯ ಸಂಪೂರ್ಣ ಮಾಹಿತಿ ನೀಡದಿರುವುದರಿಂದ 52 ಕೋಟಿ ರೂ. ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಗಳ ರೈತರಿಗೆ ಸಂದಾಯವಾಗಬೇಕಿದೆ. ವಿಮಾ ಕಂಪನಿಯು ತಾಂತ್ರಿಕ ಕಾರಣದ ನೆಪವೊಡ್ಡಿ ರೈತರಿಗೆ ವಿಮಾ ಮೊತ್ತ ಬಿಡುಗಡೆಗೊಳಿಸಿಲ್ಲ.

ಇನ್ನು 9.63 ಕೋಟಿ ರೂ. ಮೊತ್ತವು ಭತ್ತದ ಫಸಲಿನ ರೈತರಿಗೆ ಜಮಾ ಆಗಬೇಕಿದ್ದು, ಬೆಳೆ ಸಮೀಕ್ಷೆಯಲ್ಲಿ ಭತ್ತದ ಇಳುವರಿ ಪಡೆದು ವರದಿ ನೀಡಿದೆ. ಆದರೆ ಸರಕಾರ ವಿಮಾ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವಾಗ ಅಕ್ಕಿಯ ಇಳುವರಿ ಅನ್ವಯಿಸಿದೆ.

ಈ ರೀತಿಯ ದ್ವಂದ್ವ ನಿಲುವಿನಿಂದ ಭತ್ತದ ಬೆಳೆಗಾರರಿಗೆ ವಿಮೆ ಮೊತ್ತ ಪಾವತಿಸಲು ತಾಂತ್ರಿಕ ತೊಂದರೆಯಾಗುತ್ತಿದೆ ಎಂದು ವಿಮಾ ಕಂಪನಿಯು ಹೇಳುತ್ತಿದೆ. ಆದ್ದರಿಂದ ರಾಜ್ಯ ಸರಕಾರವು ಎಲ್ಲ ತಾಂತ್ರಿಕ ತೊಂದರೆ ಸರಿಪಡಿಸಿ ಕೂಡಲೇ ಸಂಕಷ್ಟದಲ್ಲಿರುವ ರೈತರ ಖಾತೆಗೆ ವಿಮೆ ಮೊತ್ತ ಜಮಾ ಮಾಡಲು ಕೇಂದ್ರ ಸರಕಾರವು ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.  

ಟಾಪ್ ನ್ಯೂಸ್

4-uv-fusion

Childhood Times: ಕಳೆದು ಹೋದ ಸಮಯ

Ekanath Shindhe

Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

8

Keerthy Suresh: ಮದುವೆ ಸುದ್ದಿ ಬೆನ್ನಲ್ಲೇ ಆಂಟೋನಿ ಜತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4

Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ

5-uv-fusion

Childhood: ಬಾಲ್ಯವೆಂಬ ನೆನೆದಷ್ಟು ಮುಗಿಯದ ಪಯಣ

3

Aranthodu: ಪ್ರಯಾಣಿಕ ತಂಗುದಾಣದ ದಾರಿ ಮಾಯ!

2

Vitla: ಅಭಿವೃದ್ಧಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

4-uv-fusion

Childhood Times: ಕಳೆದು ಹೋದ ಸಮಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.