ಶಿರ್ವ: ಪಾಳು ಬಿದ್ದ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯ


Team Udayavani, Jul 29, 2017, 8:05 AM IST

vasti-nilaya.jpg

ಶಿರ್ವ: ಸುಮಾರು ದಶಕಗಳ ಹಿಂದೆ ನಿರ್ಮಾಣಗೊಂಡ ಶಿರ್ವ ತೊಟ್ಲಗುರಿ ಬಂಗ್ಲೆ ಮೈದಾನದಲ್ಲಿರುವ ಜಿ.ಪಂ.ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾಕ ಇಲಾಖೆಯ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯವು ಇಂದು ಶಿರ್ವ ಗ್ರಾಮ ಪಂಚಾಯತ್‌ಆಡಳಿತದ ನಿರ್ಲಕ್ಷದಿಂದ ಶಿಥಿಲಗೊಂಡು ಪಾಳು ಬಿದ್ದಿದೆ.ಹಲವಾರು ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಈ ಹಾಸ್ಟೆಲ್‌ ಕಟ್ಟಡ ಪಾಳು ಬಿದ್ದಿರುವುದು ಮಾತ್ರ ದುರದೃಷ್ಟಕರ.

ಬಡ ವಿದ್ಯಾರ್ಥಿಗಳ ಆಶಾಕಿರಣ
ಶಿರ್ವ ಪರಿಸರ ಹಾಗೂ ದೂರದ ಊರುಗಳ ಹಲವಾರು ಬಡ ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿ ವಾಸ್ತವ್ಯ ಹೊಂದಿ ಪರಿಸರದ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಜನೆಗೈದು ದೇಶ ವಿದೇಶಗಳಲ್ಲಿ ಉದೋÂಗದಲ್ಲಿದ್ದಾರೆ. ದಶಕಗಳ ಹಿಂದೆ ಈ ವಸತಿ ನಿಲಯದಲ್ಲಿ ಸುಮಾರು 60 ರಿಂದ 80 ಸಂಖ್ಯೆಯ ವಿದ್ಯಾರ್ಥಿಗಳು ವಾಸ್ತವ್ಯವಿದ್ದು ಇಬ್ಬರು ವಾರ್ಡನ್‌ಗಳು ಮತ್ತು ಓರ್ವ ಅಡುಗೆಯವರು ಇದ್ದರು. ಬದಲಾದ ಕಾಲಘಟ್ಟದಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹದಿಂದಾಗಿ ಹಾಸ್ಟೆಲ್‌ನಲ್ಲಿದ್ದು ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದು ಕ್ರಮೇಣ ಮುಚ್ಚಲ್ಪಟ್ಟಿತ್ತು.

ಗ್ರಾ.ಪಂ.ಗೆ ಹಸ್ತಾಂತರ
2008ರಲ್ಲಿ ಜಿ.ಪಂ.ಅನುದಾನದಿಂದ ಹಳೆ ಕಟ್ಟಡದ ದುರಸ್ತಿ ಮಾಡಿ ಸುಣ್ಣಬಣ್ಣ ಬಳಿದು ಆವರಣ ಗೋಡೆ ನಿರ್ಮಿಸಿ ಬಾಲಕರ ಸುಸಜ್ಜಿತ ಶೌಚಾಲಯದೊಂದಿಗೆ ಹೊಸ ಆರ್‌ಸಿಸಿ ಕೋಣೆ ಸೇರ್ಪಡೆಗೊಂಡು ಸುಸ್ಥಿತಿಯಲ್ಲಿತ್ತು. ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಟ್ಟ ಹಾಸ್ಟೆಲ್‌ ಕಟ್ಟಡವನ್ನು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಶಿರ್ವ ಗ್ರಾ.ಪಂ.ಗೆ ಉಪಯೋಗವಾಗುವಂತೆ ಹಸ್ತಾಂತರಿಸಿದ್ದರು.ಸುಸ್ಥಿತಿಯಲ್ಲಿದ್ದ ಕಟ್ಟಡವನ್ನು ಉಪಯೋಗಿಸುವ ಬದ್ಧತೆ ತೋರದೆ ಗ್ರಾ.ಪಂ.ನಿರ್ಲಕ್ಷé ವಹಿಸಿದೆ.

ಸ್ಥಳೀಯಾಡಳಿತದ ನಿರ್ಲಕ್ಷ
ಹಸ್ತಾಂತರಗೊಂಡ ಹಾಸ್ಟೆಲ್‌ ಕಟ್ಟಡವನ್ನು ಉಪಯೋಗ ಮಾಡುವು ದಾಗಲೀ ಯಾ ಸದ್ರಿ ಸ್ಥಳದಲ್ಲಿ ಕಟ್ಟಡ ಕೆಡವಿ ಯಾವುದೇ ನೂತನ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಆಸಕ್ತಿ ತೋರದೆ ಗ್ರಾ.ಪಂ.ಸಂಪೂರ್ಣ ನಿರ್ಲಕ್ಷé ವಹಿಸಿದೆ. ಹಳೆ ಕಟ್ಟಡಕ್ಕೆ ಹೊಂದಿಕೊಂಡು ನಿರ್ಮಿಸಿರುವ  ಹೊಸ ಆರ್‌ಸಿಸಿ ಕಟ್ಟಡ‌ ಕೂಡಾ ಉಪಯೋಗಕ್ಕೆ ಬಾರದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಸುಮಾರು 25 ಲ.ರೂ.ಗಳ ಮೌಲ್ಯದ ಕಟ್ಟಡ ಸರಿಯಾದ ನಿರ್ವಹಣೆಯಿಲ್ಲದೆ ಸುತ್ತಮುತ್ತ ಪೊದೆ ಗಿಡ ಗಂಟಿ ಬೆಳೆದು ನಿರುಪಯುಕ್ತವಾಗಿದೆ. ಕಿಟಿಕಿ ಬಾಗಿಲುಗಳು ಮುರಿದಿದ್ದು, ಮಾಡಿನ ಹೆಂಚುಗಳು ಹಾರಿ ಹೋಗಿ ಮಳೆ ನೀರು ಬಿದ್ದು ಗೋಡೆಗಳು ಶಿಥಿಲಗೊಂಡು ಸಾರ್ವಜನಿಕರ ತೆರಿಗೆಯ ಹಣ ಪೋಲಾಗುತ್ತಿದೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ,ಚಟುವಟಿಕೆಯ ಕೇಂದ್ರವಾಗಿದ್ದ ಹಾಸ್ಟೆಲ್‌ ಕಟ್ಟಡ ಮತ್ತು ಧ್ವಜಸ್ತಂಭ ಪಾಳು ಬಿದ್ದು ಅನಾಥವಾಗಿದೆ.

ಅಕ್ರಮ ಚಟುವಟಿಕೆಗಳ ತಾಣ
ಸರಿಯಾದ ನಿರ್ವಹಣೆಯಿಲ್ಲದೆ ಕಟ್ಟಡದ ಕಿಟಿಕಿ ಬಾಗಿಲುಗಳು ಮುರಿದು ಹೋಗಿದ್ದು ಪಡ್ಡೆ ಹುಡುಗರ ಆಶ್ರಯ ತಾಣವಾಗಿದೆ. ಕಟ್ಟಡದ ಹಿಂಬದಿಯ ಬಾಗಿಲು ಮತ್ತು ಶೌಚಾಲಯದ ಬಾಗಿಲುಗಳು ಮುರಿದಿದ್ದು , ರಾತ್ರಿ ವೇಳೆಗೆ ಪಾಳು ಬಿದ್ದ ಕಟ್ಟಡ ಅನೈತಿಕ ಮತ್ತು ಅಕ್ರಮ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಿದೆ.

ಶಿರ್ವ ಗ್ರಾ.ಪಂ.ಗೆ ಉಪಯೋಗಕ್ಕೆ ಬಾರದ ಈ ಕಟ್ಟಡವನ್ನು ಹಾಳುಗೆಡವದೆ ಶಾಸಕರು / ಜನಪ್ರತಿನಿಧಿಗಳು/ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ಮುಂದಿನ ದಿನಗಳಲ್ಲಿ ಕಾಪು ತಾಲೂಕು ಕೇಂದ್ರವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ತಾಲೂಕು ಮಟ್ಟದ ಕಚೇರಿಗಳಿಗೆ ಅವಕಾಶ ಮಾಡಿಕೊಡಬೇಕೆಂಬುದು ಶಿರ್ವದ ನಾಗರಿಕರ ಆಶಯವಾಗಿದೆ.

ಕಟ್ಟಡದ ಬಗ್ಗೆ ಈಗಾಗಲೇ ಶಿರ್ವ ಗ್ರಾ.ಪಂ.ಆಡಳಿತದ ಗಮನಕ್ಕೆ ತಂದು ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು, ಪಂ.ಅ.ಅಧಿಕಾರಿ ಮತ್ತು ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲಿಸಿದೇªವೆ. ಹಳೇ ಕಟ್ಟಡದ ದುರಸ್ತಿ ಯಾ ಕೆಡವಿ ಬೇರೆ ಕಟ್ಟಡ  ಕಟ್ಟುವ ಬಗ್ಗೆ ಮತ್ತು ಹಳೆ ಕಟ್ಟಡಕ್ಕೆ ತಾಗಿ ನಿರ್ಮಿಸಿರುವ ಹೊಸ ಆರ್‌ಸಿಸಿ ಕಟ್ಟಡವನ್ನು ಉಳಿಸಿ ಗ್ರಾ.ಪಂ.ಗೋಡೌನ್‌ ಆಗಿ ಬಳಸುವಂತೆ ಸಲಹೆ ನೀಡಿದೇªನೆ.ಆದರೆ ಯಾವುದೇ ಸಲಹೆ ಈವರೆಗೆ ಕಾರ್ಯಗತವಾಗಿಲ್ಲ. ಕಟ್ಟಡಕ್ಕೆ ನೀರು ಸರಬರಾಜು ಆಗುತ್ತಿದ್ದ ಬಾವಿಯನ್ನು ಮುತುವರ್ಜಿ ವಹಿಸಿ ಶಾಸಕ ವಿನಯ ಕುಮಾರ್‌ ಸೊರಕೆಯವರ ಅನುದಾನದಿಂದ ದುರಸ್ತಿಗೊಳಿಸಿದೇªವೆ. ಪಂಪುಸೆಟ್‌, ಪೈಪ್‌ಲೈನ್‌ ಅಳವಡಿಸಿ ಸಾರ್ವಜನಿಕ ನೀರಿನ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸಿ ಶಿರ್ವ ಪೇಟೆಗೆ ಕುಡಿಯುವ ನೀರಿನ ಸರಬರಾಜು ಮಾಡಿ ಸಾರ್ವಜನಿಕರ ಉಪಯೋಗಕ್ಕಾಗಿ ಅವಕಾಶ ಕಲ್ಪಿಸಿ ಕೊಡಲಾಗಿದೆ.
– ವಿಲ್ಸನ್‌ ರೊಡ್ರಿಗಸ್‌, ಜಿ.ಪಂ.ಸದಸ್ಯರು,ಶಿರ್ವ ಕ್ಷೇತ್ರ

ಹಲವಾರು ವರುಷಗಳಿಂದ ನೆನೆಗುದಿಗೆ ಬಿದ್ದಿರುವ ಬಂಗ್ಲೆ ಮೈದಾನಕ್ಕೆ ಬರುವ ರಸ್ತೆಯನ್ನು ಡಾಮರೀಕರಣಗೊಳಿಸಿದರೆ ಉತ್ತಮ. ಈ ಪರಿಸರದಲ್ಲಿ  ಮಾಲಿನ್ಯರಹಿತ ವಾತಾವರಣವಿರುವುದರಿಂದ ಸುಸಜ್ಜಿತ ಪಾರ್ಕ್‌ ನಿರ್ಮಿಸಿ ಸಾರ್ವಜನಿಕರಿಗೆ/ಮಕ್ಕಳಿಗೆ ವಾಯುವಿಹಾರಕ್ಕಾಗಿ ಅವಕಾಶ ಕಲ್ಪಿಸಬಹುದು.
– ಹರೀಶ್‌ ಆಚಾರ್ಯ, ಸ್ಥಳೀಯ ನಿವಾಸಿ.

ಟಾಪ್ ನ್ಯೂಸ್

12-sirsi

Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

9

Udupi: ಬಿಎಸ್ಸೆನ್ನೆಲ್‌ ಟವರ್‌ ನಿರ್ವಹಣೆ ಹೊಣೆ ಪಂಚಾಯತ್‌ ಹೆಗಲಿಗೆ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

12-sirsi

Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.