“ಮಾಧ್ಯಮವಿಲ್ಲದ ಜಗತ್ತನ್ನು ಕಲ್ಪಿಸುವುದು ಕಷ್ಟ ‘
Team Udayavani, Jul 29, 2017, 7:30 AM IST
ಕಾರ್ಕಳ: ಮಾಧ್ಯಮವಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಜೀವನ ಶೈಲಿ ಬದಲಾಗಿಸುವ ಶಕ್ತಿ ಮಾಧ್ಯಮಕ್ಕಿದೆ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪತ್ರಿಕೋದ್ಯಮ ವಿಭಾಗದ ಸಂಯೋಜಕಿ ಡಾ| ಮೌಲ್ಯಾ ಜೀವನ್‌ರಾಮ್ ಹೇಳಿದ್ದಾರೆ.
ಕ್ರೆ„ಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜು ವತಿಯಿಂದ ಬುಧವಾರ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮ ಇತ್ತೀಚಿನ ದಿನಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ.ದಿನನಿತ್ಯ ಅಗುಹೋಗುಗಳ ಬಗ್ಗೆ ನಾವು ಕುಳಿತುಕೊಂಡೇ ಮಾಹಿತಿ ಪಡೆಯಲು ಮಾಧ್ಯಮಗಳ ಪಾತ್ರ ಮಹತ್ವದಾಗಿದೆ. 2015ರ ಆರ್‌ಎನ್‌ಐ ವರದಿಯಂತೆ ಭಾರತದಲ್ಲಿ ವಿವಿಧ ಭಾಷೆಯ ಒಟ್ಟು 1,05,000 ಪತ್ರಿಕೆಗಳಿವೆ. 600 ದೂರವಾಹಿನಿಗಳಿವೆ.
ಪ್ರತಿಯೊಂದು ಮಾಧ್ಯಮಗಳು ಸತ್ಯಾಧಾರಿತ ಸುದ್ದಿಗಳನ್ನು ಬಿತ್ತರಿಸಿ ಸುವ್ಯವಸ್ಥಿತವನ್ನು ಸಮಾಜವನ್ನು ಮುನ್ನಡೆಸುತ್ತಿದೆ. ಆದರೆ ಪ್ರಸ್ತುತ ಪ್ರಚಲಿತದಲ್ಲಿರುವ ಸಾಮಾಜಿಕ ಜಾಲತಾಣಗಳಾದ ಮೊಬೆ„ಲ್, ವಾಟ್ಸಪ್ ಮತ್ತು ಫೇಸ್‌ಬುಕ್‌ಗಳಿಂದ ಬರುವ ಸುದ್ದಿಗಳನ್ನು ನಂಬಿ ಮೋಸ ಹೋಗುವ ಪರಿಪಾಠ ಶುರುವಾಗಿದೆ, ಎಂದವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ನಾರಾಯಣ ಶೇಡಿಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಮಾಜದ ಬೆಳವಣಿಗೆಗಾಗಿ ಪತ್ರಕರ್ತರ ಸೇವೆ ಅನನ್ಯವಾದುದು ಎಂದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ವಸಂತ ಬೆಳ್ತಂಗಡಿ ಅವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮೆಡೋನಾ, ಆಡಳಿತಾಧಿಕಾರಿ ಕೆವಿನ್ ಡಿಮೆಲ್ಲೋ, ಪತ್ರಕರ್ತ ವಸಂತ ಬೆಳ್ತಂಗಡಿ ಉಪಸ್ಥಿತರಿದ್ದರು.
ಶಿಕ್ಷಕಿ ಉಮಾಶ್ರೀ ಸ್ವಾಗತಿಸಿದರು. ಶಿಕ್ಷಕಿ ವಿನಯ ಅತಿಥಿಗಳನ್ನು ಪರಿಚಯಿಸಿದರು, ಶಿಕ್ಷಕ ಉಮೇಶ್ ಬೆಳ್ಳಿಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.