ಸ್ವಾಸ್ಥ ಮಂಗಲ ಕಾರ್ಯಕ್ರಮ ಸಂಪನ್ನ
Team Udayavani, Jul 29, 2017, 7:10 AM IST
ಮುಳಿಯಾರು: ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ದಿಗªರ್ಶನದಲ್ಲಿರುವ ಮುಳ್ಳೇರಿಯ ಮಂಡಲಾಂತರ್ಗತ ಚಂದ್ರಗಿರಿ ಹವ್ಯಕ ವಲಯ ಮಾತೃ ವಿಭಾಗದ ಸಹಯೋಗದಲ್ಲಿ ಸ್ವಾಸ್ಥ ಮಂಗಲ ಮತ್ತು ಶ್ರೀ ಕಾರ್ಯಕರ್ತೆಯರ ಸಭಾ ಕಾರ್ಯಕ್ರಮವು ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಶ್ರೀ ಕ್ಷೇತ್ರ ಅರ್ಚಕರಾದ ಅನಂತ ಪದ್ಮನಾಭ ಮಯ್ಯ ಅವರು ದೀಪ ಜ್ವಲನ ಮಾಡಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಗುರುವಂದನೆ ಯೊಂದಿಗೆ ಕಾರ್ಯಕ್ರಮವು ಪ್ರಾರಂಭ ವಾಯಿತು. ಬಳಿಕ ಕುಂಕುಮಾರ್ಚನೆ ಮತ್ತು ಶಿವಪಂಚಾಕ್ಷರೀ ಸ್ತೋತ್ರ ಪಠಣ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನಪ್ರಸಾದದ ನಂತರ ಸಭಾಕಾರ್ಯಕ್ರಮ ನಡೆಯಿತು.
ಗೋವಿಂದ ಬಳ್ಳಮೂಲೆ ಸಂಘಟನೆ ಮತ್ತು ಅಂತರ್ಜಾಲದ ಸಮರ್ಥವಾದ ಸದ್ಬಳಕೆ ಮತ್ತು ಅನಿವಾರ್ಯತೆಯ ಬಗ್ಗೆ ಸಮಗ್ರ ಮಾಹಿತಿಗಳನ್ನು ನೀಡಿ ದರು. ವಲಯ ಸಹಾಯ ಪ್ರಧಾನ ಡಾ| ಶಿವಕುಮಾರ್ ಅಡ್ಕ ಅವರು ಶ್ರೀ ಮಠದ ಅಮೃತ ಸತ್ವದ ಯೋಕ್ಷ್ಮಯಂತೆ ಆಹಾರ ಆರೋಗ್ಯ ಎಂಬ ವಿಷಯ ವನ್ನು ಸಂವಾದದ ಮೂಲಕ ಪರಿಣಾಮ ಕಾರಿಯಾಗಿ ತಿಳಿಯಪಡಿಸಿದರು. ಮಂಡಲ ಮುಷ್ಠಿ ಅಕ್ಕಿ ಪ್ರಧಾನೆ ಗೀತಾಲಕ್ಷ್ಮಿ¾à ಮುಳ್ಳೇರಿಯ ಅವರು ಮಾತೃ ವಿಭಾಗದ ಕಾರ್ಯಯೋಜನೆ ಬಗ್ಗೆ ವಿವರಣೆಯನ್ನಿತ್ತರು. ಇತ್ತೀಚೆಗೆ ನಿಧನರಾದ ಸುಪ್ರಸಿದ್ಧ ವೈದ್ಯ ವೆಂಕಟ್ರಾಮ ದೈತೋಟ ಅವರ ಬಗ್ಗೆ ಸಭೆಯಲ್ಲಿ ಸಂತಾಪ ಸೂಚನೆಯನ್ನು ಮೌನ ಪ್ರಾರ್ಥನೆಯೊಂದಿಗೆ ವ್ಯಕ್ತಪಡಿಸ ಲಾಯಿತು. ವಲಯ ಕಾರ್ಯದರ್ಶಿ ರಾಜಗೋಪಾಲ ಕೈಪಂಗಳ ಅವರು ಪ್ರಸ್ತಾಪಿಸಿ, ಕಾರ್ಯಕ್ರಮ ನಿರೂಪಿಸಿ ದರು. ಕ್ಷೇತ್ರ ಮೆನೇಜರ್ ಸೀತಾರಾಮ ಬಳ್ಳುಳ್ಳಾಯ ಅವರು ಪೂರ್ಣ ಸಹಕಾರಗಳನ್ನಿತ್ತರು. ವಲಯ ಪದಾಧಿ ಕಾರಿಗಳು, ಗುರಿಕ್ಕಾರರು, ಶ್ರೀ ಕಾರ್ಯ ಕರ್ತೆ ಯರು ಉಪಸ್ಥಿತರಿದ್ದರು. ಸಾಂಘಿಕ ರಾಮ ಜಪ ಶಾಂತಿ ಮಂತ್ರ ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್; ಮಹಿಳೆಯರು ಸೇರಿ ಹಲವರ ಸಾವು
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.