ನಗರ ಗತಿಯನ್ನು ನಿಯಂತ್ರಿಸುವ ಕ್ಷೇಮ


Team Udayavani, Jul 29, 2017, 7:25 AM IST

29-ANKANA-1.jpg

ವಾಹನ ನಿಲುಗಡೆ ಸಮಸ್ಯೆಯಾಗಿ ತೋರುತ್ತಿಲ್ಲ. ನಗರವೊಂದು ಬೇಕಾಬಿಟ್ಟಿ ಬೆಳೆಯದಿರದಂತೆ, ಅವ್ಯವಸ್ಥೆಯ ಗೂಡಾಗದಂತೆ ನಿಯಂತ್ರಿಸುವ ಪರಿಹಾರವಾಗಿ ಕಾಣುತ್ತದೆ. ಆ ನಿಟ್ಟಿನಲ್ಲೇ ಕಾರ್ಯ ಪ್ರವೃತ್ತವಾದರೆ ನಮ್ಮ ನಗರಗಳು ಹೊಗೆಗೂಡಾಗುವುದನ್ನು ತಪ್ಪಿಸಿದ ಪುಣ್ಯ ಬಂದೀತು. 

ಆಗಾಗ್ಗೆ ಎಷ್ಟೊಂದು ವಿಪರ್ಯಾಸವೆನಿಸುವುದುಂಟು. ಯಾಕೆಂದರೆ ಹಳ್ಳಿಯಂಥ ಕುಗ್ರಾಮದಲ್ಲಿನ ಅಸೌಲಭ್ಯಗಳನ್ನು ಕಂಡು ರೋಸಿ ಹೋಗಿ ಇಂದ್ರನ ಅಮರಾವತಿಯಂಥ ನಗರಗಳನ್ನು ಸೃಷ್ಟಿಸಲು ಹೊರಟವರು ನಾವು. ನಮಗೆ ಆಗ ಇದ್ದ ನಂಬಿಕೆಯೆಂದರೆ ಅಮರಾವತಿಯಲ್ಲಿ ಯಾವುದೇ ಕೊರತೆ ಇರದು. ಅಲ್ಲಿ ಎಲ್ಲವೂ ಪರಿಪೂರ್ಣ. ಆದ ಕಾರಣ, ಈ ಬಾಲಿಶವೆನಿಸುವ ಸಮಸ್ಯೆಗಳೆಲ್ಲ ಇರದೆಂದುಕೊಂಡಿದ್ದೆವು. ಅದಕ್ಕೇ ತಾನೇ ಮನುಷ್ಯನನ್ನು ಬದಿಗೆ ಸರಿಸುತ್ತಾ ಯಂತ್ರಗಳೊಂದಿಗೆ ವ್ಯವಹರಿಸುತ್ತಾ ನಗರವನ್ನು ನಿರ್ಮಿಸಿದ್ದು. 

ಇದರ ಪರಿಣಾಮವೇ ತಾನೇ, ಗಡಿ ಗಡಿಗೂ ಇಂದು ನಗರಗಳಲ್ಲಿ ಯಂತ್ರಗಳು ನಮ್ಮ ಸೇವಕರಂತೆ ನಿಂತಿರುವುದು? ಅದಕ್ಕೇ ತಾನೇ ಮನುಷ್ಯನನ್ನು ಕಡಿಮೆ ನಂಬುತ್ತಾ ಯಂತ್ರವನ್ನು ಹೆಚ್ಚು ಅವಲಂಬಿಸುತ್ತಾ ಹೋಗಿದ್ದು? ಮನುಷ್ಯನೊಳಗಿನ ಮನಸ್ಸು ಅವನನ್ನು ಭ್ರಷ್ಟಾಚಾರ, ಕೆಟ್ಟವನಾಗಿಸಿಬಿಡಬಹುದು. ಆದರೆ ಯಂತ್ರ ಆಗಲಿಕ್ಕೆ ಸಾಧ್ಯವೇ ಇಲ್ಲ; ಅದಕ್ಕೆ ಮನಸ್ಸಿಲ್ಲ ಎಂದುಕೊಂಡವಲ್ಲವೇ ಅಮರಾವತಿಯ ಬಾಗಿಲಿಗೆ ಬಂದು ನಿಂತಿದ್ದು. 

ಇವತ್ತು ನಾವಂದುಕೊಂಡ ಅಮರಾವತಿಗಳು, ಅದರ ಕನಸಿನಲ್ಲಿ ನಿರ್ಮಿಸಿದ ನಮ್ಮ ಅಮರಾವತಿಗಳೆಲ್ಲ ಸಮಸ್ಯೆಯ ಗೂಡೆಂದು ತೋರುತ್ತಿವೆ. ಕೆಲವೊಮ್ಮೆ ಕಂಫ‌ರ್ಟ್ಸ್ಗಳ ಸುರಂಗದಲ್ಲಿ ಕತ್ತಲಿನೆಡೆಗೆ ಸಾಗುತ್ತಿದ್ದೇವೆಯೋ ಎಂದೂ ಅನಿಸುವುದುಂಟು. ಸುರಂಗದೊಳಗೆ ಒಳ ಹೊಕ್ಕಾಗ ಕೃತಕ ದೀಪಗಳು (ನಾವೇ ಹಾಕಿದ ವಿದ್ಯುತ್‌ ದೀಪಗಳು) ದಾರಿ ತೋರಿಸುವುದುಂಟು. ಆದರೆ, ಮುಂದೆಲ್ಲೋ ಹೊರಗೆ ಸಹಜ ಬೆಳಕಿನ ಕಡೆಗೆ ಮುಟ್ಟುವುದು ಖಚಿತವೆಂಬ ನಂಬಿಕೆ ಇರುವ ಕಾರಣ ಅಥವಾ ನಂಬಿಕೆಯೊಂದಿಗೆ ಪ್ರಯಾಣ ಆರಂಭಿಸುವುದರಿಂದ ನಮಗೆ ಸುರಂಗದಲ್ಲಿ ನಡೆಯುವುದ ಕಷ್ಟವೆನಿಸದು. ಒಂದುವೇಳೆ ಹೊರ ಹೋಗುವ ದಾರಿ (ಎಕ್ಸಿಟ್‌) ಯೇ ಇಲ್ಲವೆಂದುಕೊಳ್ಳಿ ಅಥವಾ ಖಚಿತವಿಲ್ಲದೇ ಹೊರಟಿದ್ದೀರೆಂದುಕೊಂಡರೆ ಪ್ರಯಾಣಕ್ಕೆ ಉತ್ಸಾಹವೇ ಇರದು. ಕೃತಕ ಬೆಳೆಕಿನಲ್ಲಿ ಹೆಚ್ಚು ದೂರ ಸಾಗುವುದು ಕಷ್ಟ. ಹಾಗೇ ಹಾಗಿದೆ ಈಗಿನ ಸ್ಥಿತಿ.

ಈ ಹಿನ್ನೆಲೆಯಲ್ಲೇ ಹೇಳಿದ್ದು
ಇದನ್ನೇ ಹಿನ್ನೆಲೆಯನ್ನಾಗಿಟ್ಟುಕೊಂಡೇ ನಾವಿನ್ನೂ ಪಾರ್ಕಿಂಗ್‌ನಂಥ ಸಮಸ್ಯೆಗೆ ಪರಿಹಾರ ಹುಡುಕಿಕೊಂಡು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದದ್ದು. ನಮ್ಮೆದುರಿಗೆ ಸಮಸ್ಯೆಗೆ ಪರಿಹಾರವೆಂದರೆ ಈಗಿರುವುದಕ್ಕಿಂತ ಇನ್ನಷ್ಟು ಹೆಚ್ಚು ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಎಂದೇ ಅರ್ಥ. ಯಾಕೆಂದರೆ ಅದರಲ್ಲಿ ಕೋಟಿ ಕೋಟಿ ರೂ.ಗಳ ಲೆಕ್ಕಾಚಾರಗಳಿವೆ. ಹಾಗಾಗಿ ನಮಗೆ ಅಭಿವೃದ್ಧಿ ಎಂದರೂ ಅದು ಕೋಟಿಗಳ ಲೆಕ್ಕದಲ್ಲೇ ನಡೆಯಬೇಕು; ಪುಕ್ಕಟೆ ಅಥವಾ ಕಡಿಮೆ ಖರ್ಚಿನಲ್ಲಿ ಪರಿಹಾರ ಸಿಕ್ಕಿದರೆ ಬೇಡವೆನ್ನುವ ಮನೋಸ್ಥಿತಿಯಲ್ಲಿದ್ದೇವೆ. ಇದು ನಗರೀಕರಣದ ಹಿನ್ನೆಲೆಯಲ್ಲೇ, ಅದರ ಸ್ವಭಾವದ ನೆಲೆಯಲ್ಲೇ ಹುಟ್ಟಿಕೊಂಡ ಪ್ರವೃತ್ತಿ. ನಮಗೆ ಯಾವುದೇ ಪರಿಹಾರವಿದ್ದರೂ ದುಬಾರಿಯದ್ದಾಗಿರಬೇಕು. ಆಗ ಮಾತ್ರ ಒಳ್ಳೆಯದು, ಗುಣಮಟ್ಟದ್ದು ಎಂಬ ಅಪಾರ ನಂಬಿಕೆ. 

ಹಳ್ಳಿಯಲ್ಲಿದ್ದ ಹಳೇ ವೈದ್ಯರೊಬ್ಬರು 10 ರೂ.ಗೆ ಜ್ವರಕ್ಕೆ ಔಷಧಿ ಕೊಟ್ಟರೆ ನಮಗೆ ನಂಬಿಕೆಯಿಲ್ಲ. ಏನೋ, ಅವರು ಯಾವುದೋ ಹಳೆಯ ಔಷಧ ಕೊಟ್ಟರು, ಜ್ವರ ಕಡಿಮೆಯಾಗಿಲ್ಲ ಎನ್ನುತ್ತೇವೆ. ಬಳಿಕ ನಗರದ ವೈದ್ಯರಲ್ಲಿಗೆ ಹೋದಾಗ, ಪರೀಕ್ಷೆ ಮಾಡಿ ದೊಡ್ಡ ಮಾತ್ರೆ ಕೊಟ್ಟರು ಎಂದುಕೊಳ್ಳಿ, ಖುಷಿಯಿಂದ ಜ್ವರವನ್ನು ಕಡಿಮೆ ಮಾಡಿಕೊಳ್ಳುತ್ತೇವೆ. ಇದು ವೈದ್ಯರ ದೋಷ ಅಲ್ಲ; ನಮ್ಮ ಮನಸ್ಥಿತಿಯ ದೋಷ. ಖರ್ಚಿನ ಲೆಕ್ಕಾಚಾರದಲ್ಲಿ ಅಭಿವೃದ್ಧಿಯನ್ನು ಅಳೆಯುವ ಗುಣ ನಮಗೆ ಬಂದುಬಿಟ್ಟಿದೆ. 

ಸುಲಭ ಪರಿಹಾರವೇನು?
ದುಬಾರಿಯ ಮನಸ್ಥಿತಿಯಲ್ಲಿದ್ದವರಿಗೆ ಸರಳ ಮತ್ತು ಸುಲಭ ಪರಿಹಾರದತ್ತ ಯೋಚನೆ ಮಾಡುವಂಥದ್ದೇ ಆಗದ ಸ್ಥಿತಿ. ಅದರೂ, ಪ್ರಸ್ತುತ ಎಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳೂ ಇರುವ ಸೌಲಭ್ಯಗಳನ್ನು ಅನುಭವಿಸಲು ಕಲಿಯಿರಿ. ಹೊಸದೇನನ್ನೂ ಕಲ್ಪಿಸುವುದಿಲ್ಲ ಎನ್ನುತ್ತಿವೆ. ಅದಕ್ಕೇ ಪಾರ್ಕಿಂಗ್‌ ಶುಲ್ಕವನ್ನು ಹೆಚ್ಚಿಸುತ್ತಿವೆ. ಉದಾಹರಣೆಗೆ, ಇತ್ತೀಚೆಗೆ ಸಂಸ್ಥೆಯೊಂದು ನಡೆಸಿದ ಅಧ್ಯಯನ ಪ್ರಕಾರ ಅಮೆರಿಕ, ಜರ್ಮನಿ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ ನಗರಗಳಲ್ಲಿನ ವಾಹನಗಳ ಚಾಲಕರು ಪ್ರತಿ ವರ್ಷವೂ ಕೇವಲ ಪಾರ್ಕಿಂಗ್‌ ಶುಲ್ಕ ಮತ್ತು ಸುರಕ್ಷಿತ-ಸುಸಜ್ಜಿತ ಪಾರ್ಕಿಂಗ್‌ಗೆ ಬಿಲಿಯನ್‌ಗಟ್ಟಲೆ ಹಣವನ್ನು ಖರ್ಚು ಮಾಡುತ್ತಿದ್ದಾರಂತೆ. ಮೈಸೂರಿನ ದೇವರಾಜ ಅರಸ್‌ ರಸ್ತೆಯಲ್ಲಿ ಗಂಡ ಕಾರು ನಿಲ್ಲಿಸಲು ಪಾರ್ಕಿಂಗ್‌ಗೆ ಜಾಗ ಹುಡುಕುವಷ್ಟರಲ್ಲಿ ಹೆಂಡತಿ ಶಾಪಿಂಗ್‌ ಮುಗಿಸಿಕೊಂಡು ಬಂದಿರುತ್ತಾಳೆಂಬ ಪ್ರಸಂಗಗಳ ಮಧ್ಯೆ ಹಿಂದೆ ತಿಳಿಸಿದ್ದೆ. ಇದೇ ಪರಿಸ್ಥಿತಿ ಅಭಿವೃದ್ಧಿಗೊಂಡ ರಾಷ್ಟ್ರಗಳಲ್ಲೂ ಇವೆ. 

ಈ ರಾಷ್ಟ್ರಗಳಲ್ಲಿ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಿದಂತೆ (ಸಂಖ್ಯೆಗಳಲ್ಲಿ ಹೆಚ್ಚಳ) ವಾಹನ ಚಾಲಕರಿಗೆ ಪಾರ್ಕಿಂಗ್‌ ಎನ್ನುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಗರಗಳಲ್ಲಿ ಎಲ್ಲವೂ ಅವಕಾಶವೇ ಎಂಬ ಮಾತಿದೆ. ಅಂದರೆ ಅಲ್ಲಿ ನಡೆಯುವ ಘಟನೆಗಳನ್ನೂ ತಮ್ಮ ಅವಕಾಶವನ್ನಾಗಿ ಬಳಸಿಕೊಳ್ಳುವವರು, ದುಡಿಸಿಕೊಳ್ಳುವವರು ಇದ್ದಾರೆ. ಅದರಂತೆಯೇ, ನಿರ್ದಿಷ್ಟ ನಗರಗಳಲ್ಲಿ ಪಾರ್ಕಿಂಗ್‌ ಲಭ್ಯತೆಯನ್ನು ತಿಳಿಸಿಕೊಡಲೆಂದೇ ಆ್ಯಪ್‌ಗ್ಳು ಹುಟ್ಟಿಕೊಂಡಿವೆ. ಕೆಲವು ವಾಹನಗಳ ತಯಾರಿಕಾ ಕಂಪೆನಿಗಳೂ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ವಾಹನಗಳ ಪಾರ್ಕಿಂಗ್‌ ಸ್ಥಳ ಲಭ್ಯತೆಯನ್ನು ತಿಳಿಸುವಂತೆ ಸೌಲಭ್ಯವನ್ನು ವಾಹನಗಳಲ್ಲಿ ಕೊಡುವತ್ತ ಮುಖ ಮಾಡಿವೆ. ಬಿಎಂಡಬ್ಲ್ಯು ಕಾರು ಕಂಪೆನಿ, ಇತ್ತೀಚೆಗೆ ಅಮೆರಿಕದಂಥ ಕಡೆ ಬಿಡುಗಡೆಗೊಳಿಸಿದ ಕಾರುಗಳಲ್ಲಿ ಪಾರ್ಕಿಂಗ್‌ ಜಾಗವನ್ನು ಹುಡುಕುವ (ಟ್ರ್ಯಾಕರ್‌) ಸೌಲಭ್ಯವನ್ನು ಕಲ್ಪಿಸಿದೆಯಂತೆ. ಅಲ್ಲಿಗೆ ಸಮಸ್ಯೆಯ ತೀವ್ರತೆ ಎಷ್ಟಿದೆ ಎಂದು ಲೆಕ್ಕ ಹಾಕೋಣ. 

ಕಳೆದುಕೊಳ್ಳುತ್ತಿರುವುದು ಕಡಿಮೆಯಲ್ಲ
ಇನ್ರಿಕ್ಸ್‌ ಸಂಸ್ಥೆ ಬ್ರಿಟನ್‌, ಜರ್ಮನಿ ಮತ್ತು ಅಮೆರಿಕದಲ್ಲಿ ಸುಮಾರು 18 ಸಾವಿರ ಚಾಲಕರ ಪ್ರತಿಕ್ರಿಯೆ ಪಡೆದು ನಡೆಸಿದ ಸಂಶೋಧನೆ ಪ್ರಕಾರ, ವರ್ಷಕ್ಕೆ ಸಾಮಾನ್ಯವಾಗಿ ಒಬ್ಬ ಚಾಲಕ ಪಾರ್ಕಿಂಗ್‌ ಜಾಗ ಹುಡುಕಲೆಂದು ಮತ್ತು ಅದಕ್ಕಾಗಿ ವ್ಯಯಿಸಿದ ಇಂಧನದ ಲೆಕ್ಕ ಸುಮಾರು 345 ಡಾಲರ್‌. ಇದೇ ಬ್ರಿಟನ್‌ನಲ್ಲಿ ಹೆಚ್ಚುವರಿ ಅವಧಿಗಾಗಿ ಪಾವತಿಸುವ ಹಣ ಸುಮಾರು 209 ಪೌಂಡ್‌ಗಳು. ಜಾಗ ಹುಡುಕುತ್ತಾ ಕಳೆದ ಸಮಯ ಮತ್ತು ಇಂಧನದ ಲೆಕ್ಕ ಸುಮಾರು 733 ಪೌಂಡ್‌ಗಳು.  ಜರ್ಮನಿಯಲ್ಲಿ ಸುಮಾರು 98 ಯುರೋಗಳನ್ನು ಹೆಚ್ಚುವರಿಯಾಗಿ ಪಾವತಿಸಿದರೆ, ದಂಡ ಪಾವತಿಸುವ ಪ್ರಮಾಣವೂ ಬಹಳಷ್ಟಿದೆ. ಸುಮಾರು 896 ಯುರೋ ಗಳನ್ನು ಸೂಕ್ತ ಜಾಗವನ್ನು ಹುಡುಕುವುದಕ್ಕಾಗಿ ವ್ಯಯ ಮಾಡುತ್ತಾರೆ. 

ಇವೆಲ್ಲವನ್ನೂ ಲೆಕ್ಕ ಹಾಕಿದ ಮೇಲೆ ನಮ್ಮ ನಗರಗಳಲ್ಲಿನ ಕಥೆಗಳನ್ನು ನೋಡೋಣ. ಬಹಳಷ್ಟು ಕಡೆ ಪಾವತಿಸಿ ವಾಹನ ನಿಲುಗಡೆ ಮಾಡುವ (ಪೇ ಪಾರ್ಕ್‌) ಸೌಲಭ್ಯಗಳಿಲ್ಲ. ಆದ ಕಾರಣ, ನಮ್ಮ ಜೇಬಿನಿಂದ ಖರ್ಚಾಗುತ್ತಿಲ್ಲ. ಈಗ ಪ್ರತಿ ಸ್ಥಳೀಯ ಸರಕಾರ ಅಥವಾ ಆಡಳಿತ ಜನರಿಗೆ ವಾಹನ ನಿಲುಗಡೆಗೆ ಸೌಲಭ್ಯ ಕಲ್ಪಿಸಬೇಕು ಎಂದು ವಾದಿಸಲಾಗುತ್ತಿದೆ. ಈ ವಾದ ಯಾವ ಹಂತಕ್ಕೆ ತಲುಪುತ್ತಿದೆಯೆಂದರೆ, ಪ್ರತಿ ನಾಗರಿಕನ‌ ಮೂಲ ಹಕ್ಕೆಂಬಂತೆ ಪ್ರತಿಪಾದಿಸಲಾಗುತ್ತಿದೆ. ನಗರದಲ್ಲಿರುವ ವಾಹನಗಳಿಗೆ ಸೂಕ್ತ ನಿಲುಗಡೆ ಸೌಲಭ್ಯ ಕಲ್ಪಿಸದಿದ್ದರೆ ಆ ಸಂಬಂಧಪಟ್ಟ ಆಡಳಿತ ನಿಷ್ಕ್ರಿಯವಾಗಿದೆ ಎಂದು ವ್ಯಾಖ್ಯಾನಿಸುತ್ತಿದ್ದೇವೆ. 

ನಮ್ಮ ಸ್ಥಳೀಯ ಆಡಳಿತದ ಪಕ್ಷಗಳೂ ಬೆಳೆಯುವ ಬಾಲದ ಅಗಾಧತೆಯನ್ನು ಗ್ರಹಿಸದೇ, ತಮ್ಮ ಚುನಾವಣೆ ಪ್ರಣಾಳಿಕೆಗಳಲ್ಲಿ ಇಂಥ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡುತ್ತಿವೆ. ಅಧಿಕಾರಕ್ಕೆ ಬಂದ ಮೇಲೆ ಸಮಸ್ಯೆಯ ತೀವ್ರತೆ ಅರ್ಥವಾಗಿ ತಮ್ಮ ಅವಧಿಯಲ್ಲಿ ವಿಷಯವನ್ನು ಚರ್ಚೆಯ ಮುನ್ನೆಲೆಗೆ ತಾರದೇ ನುಣುಚಿಕೊಂಡು ಹೋಗುವ ಉದಾಹರಣೆಗಳೂ ಇವೆ.  ಆದರೆ, ಖಂಡಿತ ನಮ್ಮ ಪಕ್ಷಗಳು ಮತ್ತು ಆಳುವವರು ಗ್ರಹಿಸುವಷ್ಟು ಚಿಕ್ಕ ಸಮಸ್ಯೆಯಲ್ಲ. ನಗರದ ಎಲ್ಲ ಸಮಸ್ಯೆಗಳೂ ಹೀಗೆ, ನದಿಗಳಲ್ಲಿನ ಸುಳಿಯಂತೆಯೇ. ಚಿಕ್ಕದಾಗಿ ನಮ್ಮನ್ನು ಒಳಸೆಳೆದುಕೊಳ್ಳುವಂಥದ್ದು. ಇದೇ ಕಾರಣದಿಂದಲೇ, ನಗರಗಳ ಗತಿಯನ್ನು ನಿಯಂತ್ರಿಸುವುದೇ ಕ್ಷೇಮ ಹೊರತು ಬೇರೇನೂ ಅಲ್ಲ.

ಅರವಿಂದ ನಾವಡ

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.