ಬೆಂಗ್ಳೂರಲ್ಲಿದೆ ವಿಶ್ವದ ಅತಿ ದೊಡ್ಡ 16 ಅಡಿಯ ಮುಕ್ತಿನಾಗ!

Team Udayavani, Jul 29, 2017, 4:18 PM IST

6554.jpg

ನಿನ್ನೆ ತಾನೆ ನಾಗರ ಪಂಚಮಿ ಮುಗಿದಿದೆ. ಆದರೆ, ಭಕ್ತರ ಮನದೊಳಗೆ ನಾಗನ ಮೇಲಿನ ಭಕ್ತಿ ನಿರಂತರ ಪ್ರವಹಿಸುತ್ತಲೇ ಇರುತ್ತೆ. ನಾಗದೇವರು ಅಂದಾಕ್ಷಣ ಕುಕ್ಕೆ ಸುಬ್ರಮಣ್ಯವೇ ನೆನಪಾದರೂ, ಬೆಂಗ್ಳೂರಿನಲ್ಲಿ ವಿಶ್ವದ ಅತಿದೊಡ್ಡ ಮುಕ್ತಿನಾಗ ಮೂರ್ತಿಯನ್ನು ಕಾಣಬಹುದಾಗಿದೆ. ಈ ಮೂರ್ತಿಯ ವಿಗ್ರಹದ ಎತ್ತರವೇ ಬರೋಬ್ಬರಿ 16 ಅಡಿ!

ತಮಿಳುನಾಡಿನ ನಾಗರಕೋಯಿಲ್‌ ಹಾಗೂ ಸಿಂಗಾಪುರದಲ್ಲಿ 5 ಅಡಿ ಎತ್ತರದ ನಾಗವಿಗ್ರಹ ಇರುವುದು ಅನೇಕರಿಗೆ ಗೊತ್ತು. ಆದರೆ, ಬೆಂಗಳೂರಿನಲ್ಲಿನ ಮುಕ್ತಿನಾಗ ಕ್ಷೇತ್ರದ ವಿಗ್ರಹ ಅದಕ್ಕೂ ಮೂರು ಪಟ್ಟು ಎತ್ತರವಿದ್ದು, ಈ ಮೂರ್ತಿಯನ್ನು ಕೃಷ್ಣ ಶಿಲೆಯಲ್ಲಿ ನಿರ್ಮಿಸಲಾಗಿದೆ. ಅಲ್ಲದೆ, ಈ ಕ್ಷೇತ್ರದಲ್ಲಿ 1008 ಸಣ್ಣ ಸಣ್ಣ ನಾಗ ಮೂರ್ತಿಗಳ ಬನವೂ ಇದೆ.

ಇದಕ್ಕೂ ಒಂದು ಕತೆ!
ದೇಗುಲದ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ಶಾಸ್ತ್ರೀಗಳು, ತಿಂಗಳಿಗೊಮ್ಮೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿಬರುತ್ತಿದ್ದರಂತೆ. ಒಂದು ದಿನ ನಾಗದೇವರು ಇವರ ಕನಸಿನಲ್ಲಿ ಬಂದು ಇವರ ಕನಸಿನಲ್ಲಿ ಬಂದು, ರಾಮೋಹಳ್ಳಿಯ ಬಳಿ ಓಡಾಡಿದ ಹಾಗೆ ಕಾಣಿಸಿತಂತೆ. ಶಾಸ್ತ್ರೀಗಳು ರಾಮೋಹಳ್ಳಿಯ ದಾರಿಯಲ್ಲಿ ಸಾಗುವಾದ 16 ಅಡಿ ಇರುವ ಹಾವಿನ ಪೊರೆಯೊಂದು ಕಂಡಿದ್ದು, ಆ ಹಿನ್ನೆಲೆಯಲ್ಲಿ 16 ಅಡಿ ಎತ್ತರದ ನಾಗಮೂರ್ತಿಯನ್ನು ನಿರ್ಮಿಸಲು ತೀರ್ಮಾನಿಸಿದರಂತೆ.

ಸ್ಥಾಪನೆ ಹಿಂದಿನ ಸಾಹಸ
ಇಲ್ಲಿ ನಾಗ ವಿಗ್ರಹವನ್ನು ಗರ್ಭಗುಡಿಯಲ್ಲಿ ಸ್ಥಾಪಿಸಿದ್ದೇ ಒಂದು ಸಾಹಸಗಾಥೆ. ಈ ಮೂರ್ತಿಯನ್ನು ತಮಿಳುನಾಡಿನ ಕಾಂಚೀಪುರದ ಶಿಲ್ಪಿ ಪದ್ಮಶ್ರೀ ಗಣಪತಿಸ್ಥಪತಿ ಹಾಗೂ 15 ಮಂದಿ ಸಹ ಶಿಲ್ಪಿಗಳು ನಿರ್ಮಿಸಿದರು. ಈ ಮೂರ್ತಿಯನ್ನು ಬೆಗ್ಳೂರಿಗೆ 32 ಚಕ್ರದ ಬೃಹತ್‌ ಟ್ರಕ್ಕಿನಲ್ಲಿ ತರಲಾಯಿತು. 2010ರ, ಏಪ್ರಿಲ್‌ 4ರಂದು ಇಲ್ಲಿ ಪ್ರತಿಷ್ಠಾಪಿಸಲಾಯಿತು. ನಾಗದೋಷ ಪರಿಹಾರಕ್ಕೆ ಪ್ರಸಿದ್ಧವಾಗಿರುವ ಈ ಕ್ಷೇತ್ರದ ನಿರ್ಹಹಣೆಯನ್ನು ಗೌರಿ ಸುಬ್ರಹ್ಮಣ್ಯ ಹೊತ್ತಿದ್ದಾರೆ.

ಏನಿದು?: ಮುಕ್ತಿನಾಗ ಕ್ಷೇತ್ರ
ದರುಶನಕೆ ದಾರಿ: ಮೆಜೆಸ್ಟಿಕ್‌ನಿಂದ 18 ಕಿ.ಮೀ. ದೂರದ ದೊಡ್ಡ ಆಲದ ಮರದ ರಸ್ತೆಯಲ್ಲಿ 5 ಕಿ.ಮೀ. ಸಾಗಿದರೆ, ರಾಮೋಹಳ್ಳಿ ಸಿಗುತ್ತೆ. ಅಲ್ಲಿಂದ ಕೇವಲ 1 ಕಿ.ಮೀ.
ಸಂಪರ್ಕ: 9535383921, 8880936094

ಅನಿಲ್‌ ಕುಮಾರ್‌

ಟಾಪ್ ನ್ಯೂಸ್

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.