ಆ. 1ರಿಂದ ಕಟ್ಟುನಿಟ್ಟಿನ ಜಾರಿ: ಕೆ.ಎಲ್. ಪುಂಡರೀಕಾಕ್ಷ
Team Udayavani, Jul 30, 2017, 6:10 AM IST
ಕುಂಬಳೆ: ಕುಂಬಳೆ ಪೇಟೆ ಮತ್ತು ಬಸ್ ನಿಲ್ದಾಣ ಪ್ರದೇಶ ಕೇಂದ್ರೀಕರಿಸಿ ಆ. 1ರಿಂದ ಟ್ರಾಫಿಕ್ ಪರಿಷ್ಕರಣೆ ಜಾರಿಗೆ ತರಲಾಗುವುದು. ನಿರಂತರವಾಗಿ ವ್ಯಾಪಾರಿಗಳು ಹಾಗೂ ಮೀನು ಮಾರಾಟಗಾರರು ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ನಡೆಸುತ್ತಿರುವ ಮಾರಾಟ ಕ್ರಮಗಳಿಗೆ ನಿಯಂತ್ರಣ ಹೇರಲಾಗುವುದು ಹಾಗೂ ಅವರಿಗೆ ಒದಗಿಸಿದ ನಿಗದಿತ ಸ್ಥಳದಲ್ಲೇ ವ್ಯಾಪಾರ ವ್ಯವಹಾರ ನಡೆಸಬೇಕಿದ್ದು, ತಪ್ಪಿದರೆ ದಂಡ ವಿಧಿಸಲಾಗುವುದು ಎಂದು ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎಲ್. ಪುಂಡರೀಕಾಕ್ಷ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕುಂಬಳೆ ಸರ್ಕಲ್ ಸುತ್ತಮುತ್ತ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. ರಸ್ತೆಯಂಚಿನ ಬಿಳಿ ಗುರುತುಗಳನ್ನು ಮೀರಿ ಪಾರ್ಕ್ ಮಾಡಲಾಗುವ ವಾಹನಗಳಿಗೆ ದಂಡ ವಿಧಿಸಲಾಗುವುದು. ನಾಲ್ಕುಚಕ್ರ ವಾಹನಗಳು ಕಣಿಪುರ ಕ್ಷೇತ್ರ ಸಮೀಪದ ನಿಗದಿತ ಸ್ಥಳದಲ್ಲೇ ಪಾರ್ಕ್ ಮಾಡತಕ್ಕದ್ದು. ರೈಲ್ವೇ ನಿಲ್ದಾಣಕ್ಕೆ ತೆರಳುವ ವಿದ್ಯಾರ್ಥಿಗಳು ಮತ್ತು ಉದ್ಯೋಗಾರ್ಥಿಗಳಿಗೆ ಹೆದ್ದಾರಿ ಸಮೀಪ ನಿಗದಿತ ಸ್ಥಳ ಗುರುತಿಸಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗುವುದು. ಬಸ್‌ಗಳು ನಿಲ್ದಾಣದೊಳಗಡೆ ತೆರಳಲು ಐದು ನಿಮಿಷಗಳ ಮೊದಲು ಮಾತ್ರವೇ ಆಗಮಿಸಬಹುದಾಗಿದ್ದು, ಗಂಟೆಗಳಷ್ಟು ಹೊತ್ತು ನಿಲ್ದಾಣದೊಳಗಡೆ ಯಾವುದೇ ಬಸ್‌ಗಳು ಆಗಮಿಸು ವಂತಿಲ್ಲ. ಸೂಚನಾ ಫಲಕಗಳನ್ನು ಎಲ್ಲ ಸ್ಥಳಗಳಲ್ಲಿ ವ್ಯವಸ್ಥೆಗೊಳಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ನೂತನ ವ್ಯವಸ್ಥೆ ಜಾರಿಗೆ ಕುಂಬಳೆ ಪೊಲೀಸ್ ಠಾಣಾಧಿಕಾರಿಗಳು ಸಂಪೂರ್ಣ ಬೆಂಬಲ ನೀಡಲಿದ್ದು, ವ್ಯಾಪಾರಿಗಳು, ವಾಹನ ಚಾಲಕರು, ಸಾರ್ವಜನಿಕರು ಸಹಕರಿಸಬೇಕೆಂದು ಗ್ರಾ.ಪಂ. ಅಧ್ಯಕ್ಷರು ವಿನಂತಿಸಿದ್ದಾರೆ. ಈ ಬಗ್ಗೆ ಸ್ಥಳ ನಿಗದಿಪಡಿಸುವುದರ ಜೊತೆಗೆ ಪೊಲೀಸರೊಂದಿಗೆ ಚರ್ಚಿಸಿ ಯೋಜನೆ ಜಾರಿಗೊಳಿಸಲು ಶುಕ್ರವಾರ ಕುಂಬಳೆ ಪೇಟೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಪುಂಡರೀಕಾಕ್ಷ ಕೆ.ಎಲ್. ಅವರು ಸ್ಥಳ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್ ಮೂಲಕ ನಕ್ಸಲ್ ಸೋಮನ್ ವಿಚಾರಣೆ
Kasaragod: 300 ಪವನ್ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ
Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು
Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Madanthyar: ಬಾಲಕಿಯರ ಹಾಸ್ಟೆಲ್ ಕಟ್ಟಡ ಅನಾಥ!
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.