ಕಲೆ, ಪ್ರಕೃತಿಯನ್ನು ವೈಭವೀಕರಿಸುವ ಚಂದ್ರಗಿರಿ ನದಿ ತಟ
Team Udayavani, Jul 30, 2017, 6:40 AM IST
ಕಾಸರಗೋಡು: ಏಶ್ಯಾದಲ್ಲೇ ವೀಕ್ಷಿಸಬೇಕಾದ ಹತ್ತು ಪ್ರವಾಸಿ ಸ್ಥಳಗಳಲ್ಲಿ ಗುರುತಿಸಿಕೊಂಡಿರುವ ಮಲ ಬಾರ್ ಪ್ರದೇಶದ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ಜಲಾಶಯ ವನ್ನು ಕೇಂದ್ರೀಕರಿಸಿ ಕಲೆ ಮತ್ತು ಪ್ರಕೃತಿಯನ್ನು ಜೊತೆಗೂಡಿಸಿ ಪ್ರವಾಸಿ ಯೋಜನೆಯನ್ನು ಅಭಿವೃದ್ಧಿ ಪಡಿಸಲಾಗುವುದು.
ಕಾಸರಗೋಡು ಜಿಲ್ಲೆಯ ಚಂದ್ರಗಿರಿ ಹೊಳೆ, ನೀಲೇಶ್ವರ, ತೇಜಸ್ವಿನಿ, ವಿಲಯ, ಪರಂಬಾತ್ ತಟಾಕ ಮತ್ತು ಕಣ್ಣೂರು ಜಿಲ್ಲೆಯ ವಳಪಟ್ಟಣಂ, ಕುಪ್ಪಂ, ಪೇರುಂಬ, ಅಂಜರಿಕಂಡಿ, ಮಾಹಿ, ತಲಶೆÏàರಿ ಜಲಾಶಯಗಳನ್ನು ಮತ್ತು ಸ್ಥಳೀಯ ಕಲೆಗಳನ್ನು, ಪ್ರಕೃತಿ ಸೌಂದರ್ಯವನ್ನು ಪರಿಚಯಿಸುವ ನದೀ ತಟ ಪ್ರವಾಸಿ ಯೋಜನೆಯನ್ನು ಸಾಕಾರಗೊಳಿಸುವ ಮೂಲಕ ಪ್ರವಾಸಿಗರನ್ನು ಹೆಚ್ಚೆಚ್ಚು ಕೈಬೀಸಿ ಕರೆಯಲು ಸಾಧ್ಯವಾಗಬಹುದೆಂದು ನಿರೀಕ್ಷಿಸಲಾಗಿದೆ. 197 ಕಿ.ಮೀ. ನೀಳದ ನದಿಯಲ್ಲಿ ದೋಣಿ ವಿಹಾರ, ಪ್ರತೀಯೊಂದು ನದಿ ತಟದಲ್ಲಿ ಆಯಾಯ ಪ್ರದೇಶದ ವಿಶೇಷ ಕಲೆ, ಕರಕುಶಲ ಮೊದಲಾದವುಗಳನ್ನು ಸೇರ್ಪಡೆಗೊಳಿಸಿ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಕಲಾ ರೂಪಕಗಳನ್ನು ಹಾಗು ಕರಕುಶಲ ಸಾಮಗ್ರಿಗಳನ್ನು ನಿರ್ಮಿಸುವ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ತೃತೀಯ ಸ್ಥಾನ: ಏಶ್ಯಾದಲ್ಲಿ ವೀಕ್ಷಿಸಬೇಕಾದ ಹತ್ತು ಪ್ರದೇಶಗಳ “ಲೋನ್ಲಿ ಪ್ಲಾನೆಟ್’ ಯಾದಿಯಲ್ಲಿ ಕಾಸರ ಗೋಡು ಜಿಲ್ಲೆಯ ಬೇಕಲಕೋಟೆ, ಚಂದ್ರಗಿರಿ ಕೋಟೆ ಮತ್ತು ಹೊಳೆ ಸಹಿತ ಕೇರಳದ ಉತ್ತರ ಭಾಗ (ಮಲಬಾರು ಪ್ರದೇಶ) ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಉತ್ತರ ಕೇರಳದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು 600 ಕೋಟಿ ರೂಪಾಯಿಯ ಯೋಜನೆಯನ್ನು ಸಾಕಾರ ಗೊಳಿಸಲು ಈ ವಿಶ್ವಮಟ್ಟದ ಮಾನ್ಯತೆ ಇನ್ನಷ್ಟು ಪ್ರೋತ್ಸಾಹ ಲಭಿಸಿದಂತಾಗಿದೆ.
ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರಗಳ ಪ್ರಕಟನೆಯಾಗಿ ರುವ “ಲೋನ್ಲಿ ಪ್ಲಾನೆಟ್’ ತಯಾರಿಸಿದ ವಾರ್ಷಿಕ ಯಾದಿಯಲ್ಲಿ ಚೈನಾದ ಗಾನ್‌ಶೂ ಪ್ರಥಮ ಸ್ಥಾನವನ್ನು ಪಡೆದಿದ್ದರೆ, ಜಪಾನ್‌ನ ಸೌತ್ ಟೋಕಿಯೋ ದ್ವಿತೀಯ ಸ್ಥಾನವನ್ನು ಪಡೆದಿದೆ. ಆ ಬಳಿಕ ಮೂರನೇ ಸ್ಥಾನವನ್ನು ಉತ್ತರ ಕೇರಳ ಪ್ರದೇಶ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಪ್ರವಾಸಿ ಲೇಖಕರು ಉತ್ತರ ಕೇರಳದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಇಲ್ಲಿನ ಪ್ರವಾಸಿ ಸ್ಥಳಗಳು ರಮ್ಯವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹದ್ದು ಎಂದು ನಮೂದಿಸಿದ್ದಾರೆ.
ಇದರಿಂದಾಗಿ ಇದೀಗ ಉತ್ತರ ಕೇರಳ ವಿಶ್ವ ಮಟ್ಟದಲ್ಲಿ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದಲು ಬಹಳಷ್ಟು ಸಾಧ್ಯತೆಗೆ ಕಾರಣವಾಗಿದೆ. ಕಳೆದ ಒಂದು ವರ್ಷದಲ್ಲಿ ಉತ್ತರ ಮಲಬಾರು ಪ್ರದೇಶದಲ್ಲಿರುವ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲು 600 ಕೋಟಿ ರೂಪಾಯಿಯ ಯೋಜನೆಗಳಿಗೆ ಕೇರಳ ಪ್ರವಾಸೋದ್ಯಮ ಇಲಾಖೆ ರೂಪು ನೀಡಿದೆ. ಮಲಬಾರ್ ಕ್ರೂಯಿಸ್ ಟೂರಿಸಂ ಯೋಜನೆಯ ಪ್ರಥಮ ಹಂತದಲ್ಲಿ ಪರಶ್ಶಿನಕಡವು ಮತ್ತು ಪಳಯಂಗಾಡಿಯಲ್ಲಿ ಬೋಟ್ ಜೆಟ್ಟಿಗಳನ್ನು ಹಾಗು ಹೊಳೆಗೆ ನದೀ ತಟ ಕಾಲು ದಾರಿ ನಿರ್ಮಿಸಲು 15 ಕೋಟಿ ರೂಪಾಯಿಯನ್ನು ಕೇರಳ ಸರಕಾರ ಮಂಜೂರು ಮಾಡಿದೆ.
ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾಕಾರಗೊಳ್ಳುವುದರೊಂದಿಗೆ ಉತ್ತರ ಕೇರಳದ ಪ್ರವಾಸೋದ್ಯಮ ಅಭಿವೃದ್ಧಿಗೆ ಬಹಳಷ್ಟು ಸಾಧ್ಯತೆಯ ಹಿನ್ನೆಲೆಯಲ್ಲಿ ಮಲಬಾರು ಪ್ರದೇಶದ ಪ್ರವಾಸೋದ್ಯಮ ಯೋಜನೆಗಳನ್ನು ಆವಿಷ್ಕರಿಸಲಾಗಿದೆ. ಉತ್ತರ ಕೇರಳದ ಬೀಚ್‌ಗಳು ಗೋವಾ ಬೀಚ್‌ಗಳಿಗಿಂತ ಅತ್ಯಂತ ಸೌಂದರ್ಯವನ್ನು ಪಡೆದು ಕೊಂಡಿವೆ ಮತ್ತು ಸ್ವತ್ಛವಾಗಿವೆ ಎಂದು ಲೋನ್ಲಿ ಪ್ಲಾನೆಟ್ ವರದಿಯಲ್ಲಿ ಹೇಳಿದೆ.
ಮುಳಪ್ಪಿಲಂಗಾಟ್ ಬೀಚ್‌ನಲ್ಲಿ ಸ್ವಾಧೀನಪಡಿಸಿಕೊಂಡಿರುವ 3.5 ಎಕರೆ ಸ್ಥಳದಲ್ಲಿ 43.20 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ರಿಸೋರ್ಟ್ ಗಳನ್ನು ನಿರ್ಮಿಸಲಾಗುವುದು. ಪಯ್ಯಂಬಲಂ ಬೀಚನ್ನು ಆಕರ್ಷಣೀಯವನ್ನಾಗಿ ಮಾಡಲಾಗುವುದು. ಅಲ್ಲದೆ ಮಲಬಾರು ಪ್ರದೇಶದ ಬೀಚ್ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲಾಗುವುದು.
ಲೋನ್ಲಿ ಪ್ಲಾನೆಟ್ ವಿಶೇಷವಾಗಿ ಗುರುತಿಸಿರುವ ವಯನಾಡು ಜಿಲ್ಲೆಯಲ್ಲಿ ಹತ್ತು ಹಲವು ಪ್ರವಾಸಿ ಯೋಜನೆ ಗಳಿಗೆ ರಾಜ್ಯ ಸರಕಾರ ಅನುಮತಿ ನೀಡಿದೆ. ಕಲ್ಪಟ್ಟದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಲು 4.5 ಕೋಟಿ ರೂಪಾಯಿ ಮಂಜೂರು ಮಾಡಿದೆ. ಸುಲ್ತಾನ್‌ಬತ್ತೇರಿಯಲ್ಲಿ ರೋಕ್ ಅಡ್ವಂಚರ್ ಯೋಜನೆ, ಪಯಶ್ಶಿ ಸ್ಮಾರಕ, ಕುರುವ ದ್ವೀಪ ಪ್ರದೇಶದಲ್ಲಿ ಗ್ರೀನ್ ಕಾಪೆìಟ್ ಯೋಜನೆಗೆ ಅನು ದಾನ ಕಾದಿರಿಸಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಧ್ಯತೆ ಅಧಿಕವಾಗಿದೆ.
ವಿಶ್ವಮಟ್ಟದಲ್ಲಿ ಗುರುತಿಸುವ ಸಾಧ್ಯತೆ
ಲೋನ್ಲಿ ಪ್ಲಾನೆಟ್‌ನಲ್ಲಿ ತೃತೀಯ ಸ್ಥಾನವನ್ನು ಪಡೆದಿರುವ ಮಲಬಾರು ಪ್ರದೇಶದಲ್ಲಿ ಪ್ರವಾಸೋದ್ಯಮ ಉತ್ತಮ ಮಟ್ಟದಲ್ಲಿ ಅಭಿವೃದ್ಧಿ ಸಾಧ್ಯವಾಗುವುದು. ವಿಶ್ವ ಮಟ್ಟದ ಮಾನ್ಯತೆಯಿಂದ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚೆಚ್ಚು ಹಣವನ್ನು ವ್ಯಯಿಸಲು ಪ್ರೋತ್ಸಾಹ ಲಭಿಸಿದೆ. ಕಾಸರಗೋಡು, ವಯನಾಡು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಎಲ್ಲ ಸಾಧ್ಯತೆಗಳಿವೆ.
– ಕಡಕಂಪಳ್ಳಿ ಸುರೇಂದ್ರನ್,
ಪ್ರವಾಸೋದ್ಯಮ ಸಚಿವ, ಕೇರಳ
– ಪ್ರದೀಪ್ ಬೇಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್ ಮೂಲಕ ನಕ್ಸಲ್ ಸೋಮನ್ ವಿಚಾರಣೆ
Kasaragod: 300 ಪವನ್ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ
Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು
Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.