ಅನರ್ಹತೆ ಎಷ್ಟು ವರ್ಷ?


Team Udayavani, Jul 30, 2017, 5:05 AM IST

Nawaz-29-7.jpg

– ಪಾಕ್‌ ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಉಂಟಾಗಿದೆ ಗೊಂದಲ

– ರಾಜಕೀಯ, ಕಾನೂನು ತಜ್ಞರಿಗೆ ಸವಾಲಾದ ತೀರ್ಪು

– ಸಂವಿಧಾನದಲ್ಲಿ ಅನರ್ಹತೆ ಅವಧಿ ಉಲ್ಲೇಖೀಸಿಯೇ ಇಲ್ಲ

ಇಸ್ಲಾಮಾಬಾದ್‌/ಬೀಜಿಂಗ್‌: ಪಾಕಿಸ್ಥಾನ ಮಾಜಿ ಪ್ರಧಾನಿ ನವಾಜ್‌ ಷರೀಫ್ ಸಹೋದರ ಶಾಬಾಜ್‌ ಷರೀಫ್ ಪ್ರಧಾನಿಯಾಗಲು ಇನ್ನೂ 45 ದಿನಗಳ ಕಾಲಾವಕಾಶ ಇದೆ. ಅಲ್ಲಿಯವರೆಗೆ ಸರಕಾರದ ಸೂತ್ರ ನಡೆಸಲು ಹಂಗಾಮಿ ಪ್ರಧಾನಿ ಆಯ್ಕೆ ಮಾಡಲಾಗಿದೆ. ನಿಕಟಪೂರ್ವ ಸರಕಾರದಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ಶಾಹಿದ್‌ ಖಾನ್‌ ಅಬ್ಟಾಸಿ ಅವರನ್ನು ಆಯ್ಕೆ ಮಾಡಲಾಗಿದೆ. ಮತ್ತೂಂದು ಕುತೂಹಲಕಾರಿ ಅಂಶವೆಂದರೆ ಪಾಕಿಸ್ಥಾನ ಸುಪ್ರೀಂಕೋರ್ಟ್ ನವಾಜ್‌ ಷರೀಫ್ರನ್ನು ಎಷ್ಟು ವರ್ಷಗಳ ಕಾಲ ಅನರ್ಹಗೊಳಿಸಿದೆ ಎಂಬ ಬಗ್ಗೆ ಗೊಂದಲ ಮೂಡಿದೆ.

ತೀರ್ಪಿನ ಬಗ್ಗೆ ಗೊಂದಲ: ಪನಾಮಾ ದಾಖಲೆಗಳ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್ರನ್ನು ಅನರ್ಹಗೊಳಿಸಿ ಶುಕ್ರವಾರ ತೀರ್ಪು ನೀಡಿತ್ತು. ಅದು ಜೀವನ ಪರ್ಯಂತವೋ ಅಥವಾ ನಿಗದಿತ ಅವಧಿಗೋ ಎಂಬ ವಿಚಾರ ಇನ್ನೂ ಸ್ಪಷ್ಟಗೊಂಡಿಲ್ಲ. ಪಾಕ್‌ನಲ್ಲಿರುವ ಕಾನೂನು ಪಂಡಿತರು ಮತ್ತು ರಾಜಕೀಯ ವಿಶ್ಲೇಷಕರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ. ಆ ರಾಷ್ಟ್ರದ ಪ್ರಭಾವಿ ಪತ್ರಿಕೆ ‘ದ ಡಾನ್‌’ ವರದಿ ಪ್ರಕಾರ ಆ ವಿಚಾರವನ್ನು ಮೊದಲಾಗಿ ಪರಿಹರಿಸಬೇಕು ಎಂದು ಅಭಿಪ್ರಾಯಪಟ್ಟಿದೆ. 

ಪಾಕಿಸ್ಥಾನದ ಸುಪ್ರೀಂಕೋರ್ಟ್‌ ಬಾರ್‌ ಅಸೋಸಿಯೇಷನ್‌ ಮಾಜಿ ಅಧ್ಯಕ್ಷ ತಾರೀಖ್‌ ಮೆಹಮೂದ್‌ ‘ಡಾನ್‌’ ಪತ್ರಿಕೆ ಜತೆ ಮಾತನಾಡಿ ಹಿಂದಿನ ಸಂದರ್ಭಗಳಲ್ಲಿಯೂ ಸುಪ್ರೀಂಕೋರ್ಟ್‌ ಇಂಥ ಹಲವು ತೀರ್ಮಾನಗಳನ್ನು ನೀಡಿತ್ತು. ಅದರಲ್ಲಿ ಅನರ್ಹತೆಗೊಳಿಸಿದ್ದು ಶಾಶ್ವತವಾಗಿ ಎಂದು ಅವರು ಹೇಳಿದ್ದಾರೆ. ಆದರೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅನ್ವರ್‌ ಝಹೀರ್‌ ಜಮಾಲಿ ಸಂವಿಧಾನದ 62 ಮತ್ತು 63ರ ಅನ್ವಯ ಜೀವನ ಪರ್ಯಂತ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಸಾಧ್ಯವೇ ಇಲ್ಲ ಎಂದು ನಿಷೇಧ ಹೇರುವುದಾದರೂ ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಮಯ ಕಳೆದಂತೆ ವ್ಯಕ್ತಿಗಳು ಬದಲಾಗಿಯೇ ಆಗುತ್ತಾರೆ ಎಂದು ಅವ  ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಗೀಲಾನಿಗೆ 5 ವರ್ಷ: ಮಾಜಿ ಪ್ರಧಾನಿ ಯೂಸುಪ್‌ ಗೀಲಾನಿ ವಿರುದ್ಧ ಸುಪ್ರೀಂ ತೀರ್ಪು ನೀಡಿದ್ದ ವೇಳೆ 5 ವರ್ಷಗಳವರೆಗೆ ಮಾತ್ರ ನಿಷೇಧ ಹೇರಿತ್ತು ಎಂದು ಹಿರಿಯ ನ್ಯಾಯವಾದಿ ರಹೀಲ್‌ ಕಮ್ರಾನ್‌ ಶೇಕ್‌ ಹೇಳಿದ್ದಾರೆ. ಕುತೂಹಲಕಾರಿ ಅಂಶವೆಂದರೆ ನೆರೆಯ ರಾಷ್ಟ್ರದ ಸಂವಿಧಾನದ 62(1)(ಎಫ್)ನಲ್ಲಿ ಅನರ್ಹತೆಗೊಳಿಸುವ ಅಂಶ ಇದೆಯಾದರೂ ಎಷ್ಟು ವರ್ಷಕ್ಕೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲ. ಷರೀಫ್ರನ್ನು ಅನರ್ಹಗೊಳಿಸಿ ತೀರ್ಪು ನೀಡುವ ಸಂದರ್ಭದಲ್ಲಿ ಕಾಲಮಿತಿ ನಿಗದಿ ಮಾಡದೇ ಇದ್ದರೂ, ಮುಂದಿನ ದಿನಗಳಲ್ಲಿ ಅನರ್ಹಗೊಳ್ಳುವ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಲಿದೆ ಎಂಬ ಅಂಶವನ್ನು ಪರೋಕ್ಷವಾಗಿ ಎತ್ತಿಹಿಡಿದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.  ಜತೆಗೆ ಸುಪ್ರೀಂ ಕೋರ್ಟ್‌ ಹೆಚ್ಚಿನ ಅಧಿಕಾರ ಹೊಂದಲಿದೆ ಎಂಬಂತೆ ಭಾಸವಾಗುತ್ತಿದೆ ಎಂದೂ ಅವರು ಹೇಳಿದ್ದಾರೆ. 

ಹಂಗಾಮಿ ಪ್ರಧಾನಿ ಆಯ್ಕೆ: ನಿಕಟಪೂರ್ವ ಸರಕಾರದಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ಶಹೀದ್‌ ಖಾನ್‌ ಅಬ್ಟಾಸಿ ಅವರು ಹಂಗಾಮಿ ಪ್ರಧಾನಿಯಾಗಲಿದ್ದಾರೆ. ಈ ಬಗ್ಗೆ ಇಸ್ಲಾಮಾಬಾದ್‌ನಲ್ಲಿ ನಡೆದ ಪಾಕಿಸ್ಥಾನ ಮುಸ್ಲಿಂ ಲೀಗ್‌ – ನವಾಜ್‌ (ಪಿಎಂಎಲ್‌-ಎನ್‌)ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ನಿರ್ಧರಿಸಲಾಗಿದೆ. ಶೆಭಾಜ್‌ ಖಾನ್‌ ನ್ಯಾಶನಲ್‌ ಅಸೆಂಬ್ಲಿಯ ಸದಸ್ಯರಾಗುವವರೆಗೆ ಖಾನ್‌  ಪ್ರಧಾನಿ ಹುದ್ದೆಯಲ್ಲಿರುತ್ತಾರೆ. ನೇಮಕದ ಬಗ್ಗೆ ನವಾಜ್‌ ಷರೀಫ್ರೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಜ| ಪರ್ವೇಜ್‌ ಮುಷರ್ರಫ್ ಆ ರಾಷ್ಟ್ರದ ನೇತೃತ್ವ ವಹಿಸಿದ್ದ ವೇಳೆ ಚೌಧರಿ ಶುಜಾತ್‌  ಹುಸೇನ್‌ರನ್ನು ಹಂಗಾಮಿ ಪ್ರಧಾನಿಯನ್ನಾಗಿ ನೇಮಿಸಲಾಗಿತ್ತು. 

ಆರ್ಥಿಕ ಕಾರಿಡಾರ್‌ಗೆ ತೊಂದರೆಯಿಲ್ಲ 
ಷರೀಫ್ ರಾಜೀನಾಮೆಯಿಂದಾಗಿ ಪಾಕ್‌-ಚೀನ ಆರ್ಥಿಕ ಕಾರಿಡಾರ್‌ ಅನುಷ್ಠಾನಕ್ಕೆ ಹಿನ್ನಡೆಯಾಗಲಾರದು ಎಂದಿದೆ ಚೀನ. ಸುಪ್ರೀಂ ತೀರ್ಪು ಆ ದೇಶದ ಆಂತರಿಕ ವಿಚಾರ. ಪಾಕ್‌ ಜತೆಗಿನ ಬಾಂಧವ್ಯ ಮುಂದುವರಿಯಲಿದೆ ಎಂದು ಚೀನ ಹೇಳಿದೆ.

ಪಾಕ್‌ಗೆ ದಿಗ್ಬಂಧನ ವಿಧಿಸಿ
ವಾಷಿಂಗ್ಟನ್‌:
ಭಯೋತ್ಪಾದಕರಿಗೆ ಪಾಕಿಸ್ಥಾನ ಬೆಂಬಲ ನೀಡುತ್ತಿದೆ. ಹೀಗಾಗಿ ಅದರ ವಿರುದ್ಧ ಕಠಿನ ಕ್ರಮಕೈಗೊಳ್ಳಬೇಕು. ನಿಧಾನವಾಗಿ ಆ ದೇಶದ ಮೇಲೆ ರಾಜತಾಂತ್ರಿಕ, ಆರ್ಥಿಕ, ಮಿಲಿಟರಿ ದಿಗ್ಬಂಧನ ವಿಧಿಸಬೇಕು. ಅಫ್ಘಾನಿಸ್ಥಾನದಲ್ಲಿರುವ ಅಮೆರಿಕದ ಸೇನಾಪಡೆಗಳನ್ನು ಮತ್ತಷ್ಟು ಬಲಪಡಿಸಿ ಹಕ್ಕಾನಿ ನೆಟ್‌ವರ್ಕ್‌, ತಾಲಿಬಾನ್‌ ಸೇರಿ ಉಗ್ರ ಸಂಘಟನೆಗಳನ್ನು ನಾಶ ಮಾಡಬೇಕೆಂದು ಅಮೆರಿಕದ ಪ್ರಬಲ ಸೆನೆಟರ್‌ ಜಾನ್‌ ಮೆಕಿನ್‌ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಅಲ್ಲಿನ ಸಂಸತ್‌ನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯೊಂದನ್ನು ಮಂಡಿಸಿದ್ದಾರೆ. ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ 2018 (ನ್ಯಾಶನಲ್‌ ಡಿಫೆನ್ಸ್‌ ಅಥೊರೈಸೇಷನ್‌ ಆ್ಯಕ್ಟ್) ಸೆನೆಟರ್‌ ಜಾನ್‌ ಮೆಕಿನ್‌ ತಿದ್ದುಪಡಿ ಸೂಚಿಸಿ ಗುರುವಾರ ಸಂಸತ್‌ನಲ್ಲಿ ಮಂಡಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ದೀರ್ಘ‌ಕಾಲಕ್ಕೆ ಶಾಂತಿ ಸ್ಥಾಪಿಸಲು ಅನುವಾಗುವಂತೆ ಅದನ್ನು ರೂಪಿಸಲಾಗಿದೆ. ಪ್ರಾದೇಶಿಕ ಸಹಕಾರ ಬಲಪಡಿಸಲೂ ಅದರಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಟಾಪ್ ನ್ಯೂಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Chinese Zoo: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ…

China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-weewqe

Road roller ಅಡಿಯಲ್ಲಿ ಸಿಲುಕಿ ಇಬ್ಬರು ದಾರುಣ ಸಾ*ವು

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.