ಕೊಂಕಣಿ ಸಿನೆಮಾಗಳಿಗೆ ಪ್ರೋತ್ಸಾಹ ಅಗತ್ಯ
Team Udayavani, Jul 30, 2017, 6:55 AM IST
‘ಅಂತು’ ಸಿನೆಮಾ ಧ್ವನಿಸುರುಳಿ ಬಿಡುಗಡೆಗೊಳಿಸಿ ಬಸ್ತಿ ವಾಮನ ಶೆಣೈ
ಮಂಗಳೂರು: ಕೊಂಕಣಿ ಸಿನೆಮಾಗಳಿಗೆ ಪ್ರೋತ್ಸಾಹ ಅಗತ್ಯ. ಸಾಂಸ್ಕೃತಿಕವಾಗಿ ಭಾಷಿಗರು ಹೆಚ್ಚಿನ ಸಾಧನೆಗಳನ್ನು ಮಾಡಬೇಕು ಎಂದು ಶಕ್ತಿನಗರ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಹೇಳಿದರು. ಶ್ರೀ ಮಹಾಮಾಯಿ ಸಿನೆ ಕ್ರಿಯೇಶನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾದ ‘ಅಂತು’ ಕೊಂಕಣಿ ಸಿನೆಮಾದ ಧ್ವನಿ ಸುರುಳಿಯನ್ನು ಶುಕ್ರವಾರ ನಗರದ ಪುರಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕೊಂಕಣಿಯಲ್ಲಿ ಚಿತ್ರ ಮಾಡುವುದು ಒಂದು ಸಾಹಸಪೂರ್ಣವಾದ ಕಾರ್ಯವಾಗಿದೆ. ‘ಅಂತು’ ಕೊಂಕಣಿ ಸಿನೆಮಾವನ್ನು ಯುವಕರೇ ಮಾಡಿರುವುದು ಶ್ಲಾಘನೀಯ. ಯುವಕರ ಕೆಲಸಕ್ಕೆ ಭಾಷಿಗರು ಸ್ಪಂದಿಸಬೇಕು ಎಂದರು.
ಐಡಿಯಲ್ ಐಸ್ಕ್ರೀಂ ಪಾಲುದಾರರಾದ ಜಯಾ ಪಿ. ಕಾಮತ್, ಪತ್ರಕರ್ತ ವೆಂಕಟೇಶ್ ಬಾಳಿಗ, ಚಿತ್ರದ ನಿರ್ದೇಶಕ ಕರೋಪಾಡಿ ಅಕ್ಷಯ ನಾಯಕ್, ಪ್ರವೀಣ್ ನಾಯಕ್, ವತ್ಸಲಾ ನಾಯಕ್ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ಎಂ.ಕೆ. ಮಠ, ಸಾಹಿತಿಗಳಾದ ಶ್ರೀನಿವಾಸ ಶೆಣೈ, ಓಂ ಗಣೇಶ್ ಕಾಮತ್ ಉಪ್ಪುಂದ, ಬಿ. ಆತ್ಮಾರಾಮ್ ನಾಯಕ್ ಪುತ್ತೂರು, ಹರೀಶ್ ಪಾಂಡವ್ ಮೈಸೂರು ಅವರನ್ನು ಈ ವೇಳೆ ಸಮ್ಮಾನಿಸಲಾಯಿತು. ಮರೋಳಿ ಸಬಿತಾ ಕಾಮತ್ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮುನ್ನ ಹರಿರಾಮ್ ಅವರಿಂದ ಸಂಗೀತ, ಅನಂತರ ಯೇಯಾ ಹಾಸಯಾ ಕೊಂಕಣಿ ಹಾಸ್ಯ ಸಂಜೆ ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.