ಚೀನಾ ವಸ್ತುಗಳನ್ನು ಬಹಿಷ್ಕರಿಸಲು ದೇಶವಾಸಿಗಳಿಗೆ ಒತ್ತಾಯ
Team Udayavani, Jul 30, 2017, 3:36 PM IST
ಹಾಸನ: ಭಾರತದ ಗಡಿ ಉಲ್ಲಂಸಿ ಯುದ್ಧಭೀತಿ ಸೃಷ್ಟಿಸುತ್ತಿರುವ ಚೀನಾ ದೇಶದ ವಸ್ತುಗಳನ್ನು ಭಾರತೀಯರು ತಕ್ಷಣದಿಂದಲೇ ಬಹಿಷ್ಕರಿಸಿ ದೇಶಪ್ರೇಮ ಮೆರೆಯಬೇಕು ಎಂದು ಹಿಂದೂ ಜನ ಜಾಗೃತಿ ಸಮಿತಿ ಮನವಿ ಮಾಡಿದೆ.
ಅಪರ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಅವರಿಗೆ ಶನಿವಾರ ಮನವಿ ಸಲ್ಲಿಸಿರುವ ಸಮಿತಿಯು ಚೀನಾವು ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗುತ್ತಿದ್ದ ಭಾರತೀಯ ನಾಗರಿಕರನ್ನು ನಾಥೂಲಾ ದರ್ರೆಯಿಂದ ಮುಂದೆ ಹೋಗದಂತೆ ತಡೆದಿದೆ. ಭೂತಾನ್-ಭಾರತ- ಚೀನಾ ಗಡಿಯಿಂದ ನುಗ್ಗಿ ಗಡಿ ದಾಟುವಾಗ ಕೃತ್ಯ ವೆಸಗಿದೆ ಹಾಗೂ ಭಾರತೀಯ ಬಂಕರ್‌ಗಳನ್ನು ನಾಶ ಮಾಡಿದೆ.
ಭಾರತಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಾ ಯುದ್ಧದ ಬೆದರಿಕೆ ಒಡ್ಡುವ ಚೀನಾಕ್ಕೆ ಪಾಠ ಕಲಿಸುವ ಸಮಯ ಬಂದಿದ್ದು, ಭಾರತದ ಅರ್ಥವ್ಯವಸ್ಥೆ ವೃದ್ಧಿಸಳು ಕೂಡಲೇ ಭಾರತೀಯರು ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸಬೇಕು ಹಾಗೂ ಭಾರತ ಸರ್ಕಾರವು ಚೀನಾಗೆ ಸಂಬಂಧಪಟ್ಟಂತೆ ತನ್ನ ವ್ಯಾಪಾರ ನೀತಿಯ ಬಗ್ಗೆ ಮುನರ್ ವಿಮರ್ಶೆ ಮಾಡಿ ಚೀನಾಕ್ಕೆ ಆರ್ಥಿಕ ಮುಗ್ಗಟ್ಟನ್ನು ಉಂಟುಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಭಯೋತ್ಪಾದನೆ: ನಕ್ಸಲರೊಂದಿಗೆ ಸಂಪರ್ಕ ಹೊಂದಿರುವ ದೆಹಲಿ ವಿಶ್ವ ವಿದ್ಯಾಲಯದ ಪ್ರೊ. ನಂದಿನಿ ಸುಂದರ್ ಹಾಗೂ ಬೆಲಾ ಭಾಟಿಯಾ ವಿರುದ್ಧ ಕಾರ್ಯಚರಣೆ ಆರಂಭಿಸಬೇಕು. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಆರೋಪಿ ಡಾ. ಜಾಕೀರ್ ನಾಯಕ್ ಹಾಗೂ ನಿರ್ಬಂಧಿತ ಸಂಸ್ಥೆ ಇಸ್ಲಾಮಿಕ್ ರಿಸರ್ಚ್ ಪೌಂಢೇಶನ್ ಫೇಸ್‌ಬುಕ್ ಅಕೌಂಟ್‌ನ್ನು ತಕ್ಷಣ ತಡೆಯಬೇಕೆಂದೂ ಮನವಿ ಮಾಡಿದ್ದಾರೆ.
ಆಕ್ರಮಣ: ಅಮರನಾಥ ಯಾತ್ರೆಗೆ ಬಿಗಿ ಭದ್ರತೆಯಿದ್ದರೂ ಜು.10 ರಂದು ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದನೆಯ ಆಕ್ರಮಣ ನಡೆಯಿತು. ಅದರಲ್ಲಿ 7 ಜನರು ಮೃತಪಟ್ಟಿದ್ದು, 19 ಜನರು ಗಾಯಗೊಂಡರು. ಈ ಘಟನೆಯು ಬಹಳ ಗಂಭೀರವಾದುದು.ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದರು.
ತನಿಖೆಗೆ ಒತ್ತಾಯ: ಬಂಟ್ವಾಳದ ಶರತ್ ಮಡಿವಾಳ ಹತ್ಯೆ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ನಡೆದ ಸರಣಿ ಹಿಂದೂ ನಾಯಕರ ಹತ್ಯಾಪ್ರಕರಣದ ತನಿಖೆಯನ್ನು ಎನ್‌ಐಎ ಗೆ ನೀಡಬೇಕು. ತ್ವರಿತಗತಿಯಲ್ಲಿ ಕೋರ್ಟ್‌ಗಳನ್ನು ಸ್ಥಾಪಿಸಿ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ನೀಡಬೇಕು.
ಜಿಹಾದಿ ಭಯೋತ್ಪಾದಕರು ಕರ್ನಾಟಕ ರಾಜ್ಯದಲ್ಲಿ ಕಳೆದ 2 ವರ್ಷದಲ್ಲಿ 24 ಹಿಂದೂ ನಾಯಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬೆಂಗಳೂರು ರುದ್ರೇಶ್ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ಮಾಡಿದಾಗ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಿಂದೆ ಮತಿಯ ಶಕ್ತಿಗಳ ಕೈವಾಡವಿದೆ ಎಂದಿತ್ತು. ಪಕ್ಕದ ಕೇರಳದಲ್ಲಿ ತರಬೇತಿಯನ್ನು ಸಹ ನೀಡಲಾಗುತ್ತಿದೆ ಎಂದು ಆರೋಪಿಸಿದರು
.
ಅಪರಾಧಿಗೆ ಶಿಕ್ಷೆ: ಈ ಎಲ್ಲಾ ಪ್ರಕರಣಗಳನ್ನು ಸೂಕ್ಷವಾಗಿ ಅವಲೋಕಿಸಿದಾಗ ರಾಜ್ಯದ ಕಾಂಗ್ರೆಸ್ ಸರ್ಕಾರವೇ ನೇರವಾಗಿ ಹಿಂದೂ ನಾಯಕರ ಪಿತೂರಿಯ ಹಿಂದೆ ಇದೆ ಎಂಬ ಸಂದೇಹ ಮೂಡುತ್ತಿದೆ. ಅದಕ್ಕಾಗಿ ಈ ಪ್ರಕರಣವು ಕೂಲಂಕಶವಾಗಿ ತನಿಖೆಯಾಗಬೇಕು ಮತ್ತು ಹಿಂದೂ ಮುಖಂಡರ ಹತ್ಯೆಯ ಹಿಂದಿನ ನಿಜವಾದ ಕೈವಾಡ ಹೊರಬರಬೇಕು ಹಾಗೂ ಸಂಬಂಧ ಪಟ್ಟವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
IRACON: ಸಂಧಿವಾತ ಸಮಸ್ಯೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ ಶರಣಪ್ರಕಾಶ್ ಪಾಟೀಲ್
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.