ಸ್ತ್ರೀಯರಿಗೆ ಇನ್ನೂ ಸಿಗದ ಸಂಪೂರ್ಣ ಸ್ವತಂತ್ರ
Team Udayavani, Jul 30, 2017, 3:36 PM IST
ಕೊಳ್ಳೇಗಾಲ: ಶಿಲಾಯುಗದಿಂದ ಹಿಡಿದು ರಾಜಮಹಾರಾಜರ ಆಳ್ವಿಕೆಯವರೆಗೂ ಮಹಿಳೆಯರಿಗೆ ಸ್ವತಂತ್ರ ಸಿಗದೆ ನಿರಂತರ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆಯರಿಗೆ ಇದುವರೆಗೂ ಸಂಪೂರ್ಣ ಸ್ವತಂತ್ರ ಬಂದಿಲ್ಲ ಎಂದು ದೆಹಲಿಯ ಭಾರತೀಯ ಅನೌಪಚಾರಿಕ ಕಾರ್ಮಿಕರ ಉಪಕ್ರಮದ ನಿರ್ದೇಶಕಿ ಎಲ್.ಚಂದ್ರಕಲಾ ಬಾಯಿ ತಿಳಿಸಿದರು.
ಪಟ್ಟಣದ ಅಕ್ಕನ ಬಳಗದ ವತಿಯಿಂದ ಏರ್ಪಡಿಸಿದ್ದ ಅಕ್ಕನ ಬಳಗದ 15ನೇ ವಾರ್ಷಿಕೋತ್ಸವ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಅಕ್ಕ ಮಹಾದೇವಿಯರು ಮಹಿಳೆಯರಿಗೆ ಸ್ವತಂತ್ರ ದೊರಕಿಸಿ ಕೊಟ್ಟಿದ್ದರು ಎಂದರು.
ಅರ್ಥಶಾಸ್ತ್ರಜ್ಞ ಕೌಟಿಲ್ಯ ತನ್ನ ಅರ್ಥಶಾಸ್ತ್ರವನ್ನು ಮಂಡಿಸಿದ್ದ ಸಂದರ್ಭದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಮತ್ತು ಇನ್ನಿತರ ಘಟನೆಗಳ ಬಗ್ಗೆ ಯಾವುದೇ ತರಹದ ಮೌಲ್ಯವನ್ನು ನೀಡುವಲ್ಲಿ ವಿಫಲರಾಗಿದ್ದು, ಅರ್ಥಶಾಸ್ತ್ರಜ್ಞ ಕೇವಲ ಲೆಕ್ಕಚಾರ ಹೊರತುಪಡಿಸಿದರೆ ಮಹಿಳೆಯರಿಗೆ ಅನುಕೂಲಕರವಾದ ಅರ್ಥಶಾಸ್ತ್ರವನ್ನು ಒದಗಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನುವಾದಿ ಕೂಡ ಮಹಿಳೆಯರಿಗೆ ಯಾವುದೇ ತರಹದ ಸ್ವತಂತ್ರ ನೀಡದೆ ಇರುವುದು ಅನೇಕ ಪುಸ್ತಕಗಳಲ್ಲಿ ಬರೆಯಲ್ಪಟ್ಟಿದೆ. ಅದೇ ರೀತಿ ರಾಮಾಯಣದ ಪುಟಗಳನ್ನು ನೋಡಿದಾಗಲೂ ಸೀತೆಯನ್ನು ರಾವಣ ಅಪಹರಣ ಮಾಡಿದ ಬಳಿಕ, ಅವಳನ್ನು ರಾಮ ಅಗ್ನಿಪ್ರವೇಶಕ್ಕೆ ಗುರಿ ದೂಡುತ್ತಾನೆ. ನಂತರ ಸತಿ-ಸಹಗಮನ ಪದ್ಧತಿಯಲ್ಲಿ ಪತಿ ಮೃತಪಟ್ಟ ವೇಳೆ ಪತ್ನಿ ಗಂಡನ ಚಿತೆಗೆ ಹಾರುವ ಅನಿಷ್ಟ ಪದ್ಧತಿಗಳು ಜಾರಿಯಲ್ಲಿದ್ದವು. ಆದರಿಂದ ಎಲ್ಲಾ ಇತಿಹಾಸ ಪುಟಗಳನ್ನು ತೆರೆದು ನೋಡಿದಾಗ ಸ್ತ್ರೀಯರಿಗೆ ಅಪಮಾನವೇ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿ ಮಹಿಳೆಯರಿಗಾಗಿ 36 ಕಾಯ್ದೆಗಳನ್ನು ಜಾರಿಗೆ ತಂದರು. ಆದರೂ ಆಡಳಿತಕ್ಕೆ ಬಂದ ಸರ್ಕಾರಗಳು ಪೂರ್ಣ ಸ್ವತಂತ್ರ ನೀಡುವಲ್ಲಿ ವಿಫಲರಾಗುತ್ತಿದ್ದು, ಮಹಿಳೆಯರು ಒಗ್ಗಟ್ಟಾಗಿ ಸಂವಿಧಾನದ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ವಾರ್ಷಿಕ ಪಕ್ಷಿ ನೋಟ ಬಿಡುಗಡೆ: ಇದೇ ಸಂದರ್ಭದಲ್ಲಿ ತಾಲೂಕು ವೀರಶೈವ ಮಹಾಸಭಾ ಗೌರವಾದ್ಯಕ್ಷ ಡಾ.ಶಿವರುದ್ರಸ್ವಾಮಿ ಅಕ್ಕನ ಬಳಗದ ವಾರ್ಷಿಕ ಪಕ್ಷನೋಟವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಅಕ್ಕನ ಬಳಗ ಮತ್ತಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತರಾಗಬೇಕು ಎಂದರು.
ತಾಲೂಕು ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಹಾಗೂ ವಕೀಲ ಶಶಿಬಿಂಬ ಮಾತನಾಡಿ, ಅಕ್ಕನ ಬಳಗ ವೃದ್ಧಾಶ್ರಮವೊಂದನ್ನು ಸ್ಥಾಪಿಸಲು ಮುಂದಾಗಿದ್ದು, ಸ್ಥಾಪನೆಗೆ ಹೆಚ್ಚು ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ಸಾಮಾಜಿಕ ಪರಿವರ್ತನೆಗೆ ಹಮ್ಮಿಕೊಳ್ಳುವ ಎಲ್ಲಾ ಕೆಲಸಗಳಿಗೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.
ಪದಗ್ರಹಣ: ಇದೇ ಸಂದರ್ಭದಲ್ಲಿ 2017-18 ನೇ ಸಾಲಿನ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಬಳಗದ ಗೌರವಾಧ್ಯಕ್ಷೆ ಪರಿಮಳನಾಗಪ್ಪ, ಸಂಸ್ಥಾಪಕ ಅಧ್ಯಕ್ಷೆ ವಿಮಲಾಮೂರ್ತಿ, ಅಧ್ಯಕ್ಷರಾಗಿ ಜಗದಾಂಬ, ಉಪಾಧ್ಯಕ್ಷರಾಗಿ ರೂಪಾ, ಕಾರ್ಯದರ್ಶಿಯಾಗಿ ವಾಣಿ, ಖಜಾಂಚಿ ರಾಜೇಶ್ವರಿ, ಸಹಕಾರ್ಯದರ್ಶಿ ಅಂಬಿಕಾ, ಸಂಚಾಲಕಿ ಅನುಪಮ, ಗೀತಾ, ನಿರ್ದೇಶಕರಾಗಿ ಮಾಲಾ, ಸುಮಾ, ಚಂದನಾ, ಪುಷ್ಪಾ$ಅವರಿಗೆ ಪದಗ್ರಹಣ ಮಾಡಿದರು.
ಅಭಿನಂದನೆ: ಅಕ್ಕನ ಬಳಗದ 2017-18 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ವೀರಶೈವದ ವಿವಿಧ ಸಂಘಟನೆಯ ಮುಖಂಡರು ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಪುಟ್ಟಮಲ್ಲಪ್ಪ, ಅಕ್ಕನ ಬಳಗದ ನಿಕಟಪೂರ್ವ ಅಧ್ಯಕ್ಷೆ ಚಂಪಾ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.