ಬೊರಿವಲಿ ಮಹಿಷಮರ್ದಿನಿ ದೇಗುಲ: ನಾಗರ ಪಂಚಮಿ
Team Udayavani, Jul 30, 2017, 3:45 PM IST
ಮುಂಬಯಿ: ಬೊರಿವಲಿ ಪಶ್ಚಿಮದ ಜಯರಾಜ ನಗರದಲ್ಲಿನ ಕಾರಣಿಕ ಕ್ಷೇತ್ರ ಎಂದೇ ಬಿಂಬಿತವಾಗಿರುವ ಶ್ರೀ ಮಹಿಷಮರ್ದಿನಿ ದೇವ ಸ್ಥಾನ ದಲ್ಲಿ ನಾಗರ ಪಂಚಮಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 7.30 ರಿಂದ ತನು ತಂಬಿಲ, ಪವಮಾನ ಅಭಿಷೇಕ, ನಾಗ ದೇವರ ಮೂರ್ತಿಗೆ ಹಾಲು ಹಾಗೂ ಸೀಯಾಳ ಅಭಿಷೇಕ ನಡೆಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ. ಶೆಟ್ಟಿ ಮತ್ತು ಶಾಲಿನಿ ಪ್ರದೀಪ್ ಶೆಟ್ಟಿ ದಂಪತಿ ಹಾಗೂ ಶ್ರೀಕ್ಷೇತ್ರದ ಆನುವಂಶೀಯ ಮೊಕ್ತೇಸರ ಜಯರಾಜ ಶ್ರೀಧರ ಶೆಟ್ಟಿ ದಂಪತಿ, ಅಶೋಕ್ ಶೆಟ್ಟಿ ಮತ್ತು ಜಯಪಾಲಿ ಶೆಟ್ಟಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.
ಅರ್ಚಕ ವೃಂದದವರು ಶ್ರೀಕ್ಷೇತ್ರದ ನಾಗದೇವರಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮಹಿಷಮರ್ದಿನಿ ಭಜನ ಮಂಡಳಿಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೊರಿವಲಿ ಸೇರಿದಂತೆ ಇನ್ನಿತರ ಉಪನಗರಗಳ ನೂರಾರು ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ರಮೇಶ್ ಉದ್ಯಾವರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.