ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಮುಂಬಯಿ ಪ್ರವಾಸ ಸಮಾರೋಪ 


Team Udayavani, Jul 30, 2017, 4:06 PM IST

28-Mum08b.jpg

ಮುಂಬಯಿ: ನಗರ ಮತ್ತು ಉಪನಗರಗಳಲ್ಲಿ ಕಳೆದ ಹಲವು ವರ್ಷ ಗಳಿಂದ ಮಳೆಗಾಲದಲ್ಲಿ ನಿರಂತರವಾಗಿ ಯಕ್ಷಗಾನ, ತಾಳಮದ್ದಳೆಗಳು ನಡೆಯುತ್ತಿದ್ದರೆ ಅದಕ್ಕೆ ಅಜೆಕಾರು ಕಲಾಭಿಮಾನಿ ಬಳಗ ಕಾರಣ ವಾಗಿದೆ. ತವರೂರಿನ ಪ್ರಸಿದ್ಧ ಕಲಾವಿದರನ್ನು ಮುಂಬಯಿಗೆ ಆಹ್ವಾನಿಸಿ ಅವರಿಗೆ ವೇದಿಕೆ ಕಲ್ಪಿಸಿಕೊಡುವುದರೊಂದಿಗೆ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪುರಸ್ಕರಿಸುವ ಬಳಗದ ಗುಣ ಅಭಿನಂದನೀಯ. ಅಜೆಕಾರು ಬಳಗದಿಂದ ಪ್ರತೀ ವರ್ಷ  ಹಲವಾರು ಕಲಾವಿದರಿಗೂ ಆರ್ಥಿಕ ನಿಧಿಯನ್ನಿತ್ತು ಸಹಕರಿಸುತ್ತಿರುವುದು ಅಭಿಮಾನವೆನಿಸುತ್ತಿದೆ. ಕಲೆ-ಕಲಾವಿದರನ್ನು ಗೌರವಿಸಿ, ಪ್ರೋತ್ಸಾಹಿಸು ವುದು ನಮ್ಮ ಕರ್ತವ್ಯವಾಗಿದೆ. ಬಳಗದ ಅನುಪಮ ಸೇವೆಗೆ ಕಲಾಮಾತೆ ಶಾರದೆಯ ಅನುಗ್ರಹ ಸದಾಯಿರಲಿ ಎಂದು  ಘನ್ಸೋಲಿ ಶ್ರೀ ಮೂಕಾಂಬಿಕಾ  ಮಂದಿರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ನುಡಿದರು.

ಜು. 26ರಂದು ರಾತ್ರಿ ಘನ್ಸೋಲಿ ಶ್ರೀ ಮೂಕಾಂಬಿಕಾ  ಮಂದಿರದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಆಶ್ರಯದಲ್ಲಿ ಮುಂಬಯಿ ಪ್ರವಾಸದಲ್ಲಿದ್ದ ಶ್ರೀ ಮಹಾಗಣಪತಿ ಮಕ್ಕಳ ಹಾಗೂ ಮಹಿಳಾ ಯಕ್ಷಗಾನ ಮಂಡಳಿ ಕಾಟಿಪಳ್ಳ ಸುರತ್ಕಲ್‌ ತಂಡದ ಸಮಾರೋಪ ಹಾಗೂ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಕ್ಷಗಾನ ಗಂಡು ಕಲೆ ಎಂದೇ ಪ್ರಸಿದ್ಧಿ ಪಡೆದಿದ್ದರೂ, ಮಹಿಳೆಯರು ಕೂಡ ಕಲಾರಂಗದಲ್ಲಿ ಮೇಳೈಸಲು ಸಾಧ್ಯವಿದೆ ಎಂಬುವುದನ್ನು ಮಹಿಳಾ ಯಕ್ಷಗಾನ ಮಂಡಳಿಯವರು ತೋರಿಸಿಕೊಟ್ಟಿದ್ದಾರೆ. ಅವರಿಗೆ ಕ್ಷೇತ್ರದ ದೇವಿಯ ಅನುಗ್ರಹ ಸದಾ ಇರಲಿ ಎಂದು ಅಣ್ಣಿ ಶೆಟ್ಟಿ ಅವರು ಹಾರೈಸಿ ಕಲಾವಿದರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಅಜೆಕಾರು ಕಲಾ ಭಿಮಾನಿ ಬಳಗದ ವತಿಯಿಂದ ಪನ್ವೇಲ್‌ ನಗರ ಸೇವಕ ಸಂತೋಷ್‌ ಜಿ. ಶೆಟ್ಟಿ ಹಾಗೂ ಬಳಗದ ಪ್ರಬುದ್ಧ ಕಲಾವಿದೆಯರಾದ ವಸುಂಧರಾ ಹರೀಶ್‌ ಶೆಟ್ಟಿ, ಸುಮಂಗಳಾ ರತ್ನಾಕರ್‌ ರಾವ್‌,  ಹಾಗೂ ಕು| ಸುಷ್ಮಾ ಮೈರ್ಪಾಡಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರದೊಂದಿಗೆ ಸತ್ಕರಿಸಲಾಯಿತು. ಶ್ರೀ ಮೂಕಾಂಬಿಕಾ ಮಂದಿರದ ವತಿಯಿಂದ ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿಯ ನಿರ್ದೇಶಕಿ, ಪ್ರಶಸ್ತಿ ಪುರಸ್ಕೃತ ಕಲಾವಿದೆ ಪೂರ್ಣಿಮಾ ಯತೀಶ್‌ ರೈ ಅವರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಿಂದ  ಮುಂಬಯಿಯಲ್ಲಿ ಪ್ರದರ್ಶನ ನೀಡಲು ಸಹಕರಿಸಿ, ಮಹಿಳಾ ಯಕ್ಷಗಾನದ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟು ಅವರ ಜನಪ್ರಿಯತೆಗೆ ಕಾರಣವಾಗಿರುವ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಶ್ರೀ ಮಹಾಗಣಪತಿ ಮಕ್ಕಳ ಹಾಗೂ ಮಹಿಳಾ ಯಕ್ಷಗಾನ ಮಂಡಳಿಯ ವತಿಯಿಂದ ಶಾಲು ಹೊದೆಸಿ, ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆಯೊಂದಿಗೆ ಚತುರ ಯಕ್ಷಕಲಾ ರಕ್ಷಕ ಬಿರುದು ಪ್ರದಾನಿಸಿ ಗೌರವಿಸಲಾಯಿತು.

ಸಮ್ಮಾನ ಸ್ವೀಕರಿಸಿದ ಮಾತನಾಡಿದ ನಗರ ಸೇವಕ ಸಂತೋಷ್‌ ಶೆಟ್ಟಿ ಅವರು, ಮುಂಬಯಿಯಲ್ಲಿ ಯಕ್ಷಗಾನ, ತಾಳಮದ್ದಳೆ ಯನ್ನು ಉಳಿಸಿ-ಬೆಳೆಸಿದ ಕೀರ್ತಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರಿಗೆ ಸಲ್ಲುತ್ತದೆ. ಈ ಯಕ್ಷಗಾನ ತಾಳಮದ್ದಳೆ  ಪ್ರದರ್ಶನಗಳಿಗೆ ಸ್ಥಳದ ಕೊರತೆಯಿತ್ತು. ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಸಂಪೂರ್ಣ ಪ್ರೋತ್ಸಾಹದ ನೆಲೆಯಲ್ಲಿ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ ವಿಪುಲ ಅವಕಾಶವನ್ನು ನೀಡಿದೆ. ವರ್ಷಕ್ಕೆ ಸುಮಾರು 80 ಕ್ಕಿಂತಲೂ ಅಧಿಕ ಯಕ್ಷಗಾನ ಪ್ರದರ್ಶನಗಳು ಇಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ನಿಮ್ಮೆಲ್ಲರ ಕಲಾಸೇವೆಗೆ ನನ್ನ ಪ್ರೋತ್ಸಾಹ ಸದಾಯಿದೆ ಎಂದರು.

ಬಳಗದ ಕಲಾವಿದರ ಪರವಾಗಿ ವಸುಂಧರಾ ಹರೀಶ್‌ ಶೆಟ್ಟಿ ಅವರು ಸಮ್ಮಾನ ಸ್ವೀಕರಿಸಿ ಮಾತನಾಡಿ, ಮುಂಬಯಿಯ ಪ್ರವಾಸ ನಮ್ಮ ಪಾಲಿಗೆ ಅವಿಸ್ಮರಣೀಯ. ಅದರ ಶ್ರೇಯಸ್ಸು ಅಜೆಕಾರು ಕಲಾಭಿಮಾನಿ ಬಳಗಕ್ಕೆ ಸೇರುತ್ತದೆ. ನಮ್ಮನ್ನು ಸದಾ ಪ್ರೋತ್ಸಾಹಿಸುತ್ತಿರುವ ತಂಡದ ನಿರ್ದೇಶಕಿ ಪೂರ್ಣಿಮಾ ಯತೀಶ್‌ ರೈ ಅವರಿಗೆ ಋಣಿಯಾಗಿದ್ದೇವೆ. ಮುಂಬಯಿಯ ಸಮಸ್ತ ಕಲಾರಸಿಕರಿಗೆ, ಕಲಾ ಸಂಘಟಕರ ಪ್ರೀತಿ, ಗೌರವಕ್ಕೆ ನಮನಗಳು ಎಂದು ಹೇಳಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಪಾಲ್ಗೊಂಡ ನವಿಮುಂಬಯಿ ಹೊಟೇಲ್‌ ಓನರ್ 
ಅಸೋಸಿಯೇಶನ್‌ ಅಧ್ಯಕ್ಷ ದಯಾನಂದ ಶೆಟ್ಟಿ, ಉಪಾಧ್ಯಕ್ಷ ಜಯಪ್ರಕಾಶ್‌ 
ಶೆಟ್ಟಿ, ಉದ್ಯಮಿ ಶಂಕರ್‌ ಶೆಟ್ಟಿ ಮೂರೂರು, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಗೌರವ ಕಾರ್ಯದರ್ಶಿ ಸಿಎ ಸುರೇಂದ್ರ ಶೆಟ್ಟಿ, ಉದ್ಯಮಿ ಸತೀಶ್‌ ಶೆಟ್ಟಿ ಕೊಟ್ರಾಡಿಗುತ್ತು, ತುಳುಕೂಟ ಐರೋಲಿ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ, ತುಳು-ಕನ್ನಡ ವೆಲ್ಫೆàರ್‌ ಅಸೋಸಿಯೇಶನ್‌ ಕಾಮೋಟೆ ಅಧ್ಯಕ್ಷ ಬೋಳ ರವಿ ಪೂಜಾರಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಉಪಾಧ್ಯಕ್ಷ ನಂದಿಕೂರು ಜಗದೀಶ್‌ ಶೆಟ್ಟಿ ಮೊದಲಾದವರು ಮಾತನಾಡಿ ಶುಭಹಾರೈಸಿದರು.
ಅತಿಥಿಗಳಾಗಿ ಉದ್ಯಮಿಗಳಾದ ನಾಗೇಶ್‌ ಶೆಟ್ಟಿ, ಜೀತು ಶರ್ಮಾ, ಮೋಹಿತ್‌ ಗಂಭೀರ್‌, ಬೊಂಬೆ ಬಂಟ್ಸ್‌ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ಶ್ಯಾಮ್‌ ಎನ್‌. ಶೆಟ್ಟಿ ಅವರ ಪತ್ನಿ ಶಾರದಾ ಎಸ್‌. ಶೆಟ್ಟಿ, ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳನ್ನು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಪುಷ್ಪಗುತ್ಛ
ರಣಿಕೆಯನ್ನಿತ್ತು ಗೌರವಿಸಿದರು. ಹಿಮ್ಮೇಳ-ಮುಮ್ಮೇಳ ಕಲಾ ವಿದರನ್ನು ಅಭಿನಂದಿಸಲಾಯಿತು.

ಕಲಾವಿದೆ ಸೌಜನ್ಯಾ ಶೆಟ್ಟಿ ಅವರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಸಮ್ಮಾನ ಪತ್ರ ವಾಚಿಸಿದರು. ಇತರ ಸಮ್ಮಾನಿತರ ಸಮ್ಮಾನ ಪತ್ರವನ್ನು ಅಶೋಕ್‌ ಪಕ್ಕಳ ಅವರು ವಾಚಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಲಾ ಸಂಘಟಕ ಕರ್ನೂರು ಮೋಹನ್‌ ರೈ ವಂದಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿ ಪ್ರವಾಸದ ಕೊನೆಯ ಪ್ರಸಂಗ ಜಾಂಬವತಿ ಕಲ್ಯಾಣ-ಅಗ್ರಪೂಜೆ ಯಕ್ಷಗಾನ ಪ್ರದರ್ಶನಗೊಂಡಿತು.

ಚಿತ್ರ : ಸುಭಾಷ್‌  ಶಿರಿಯಾ

ಟಾಪ್ ನ್ಯೂಸ್

Byndoor-Vahical

Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!

Aishwarya Rai  ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್‌

Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್‌

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Byndoor-Vahical

Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!

Aishwarya Rai  ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್‌

Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್‌

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.