ಉತ್ತರದ ಕಡೆ ತಲೆ ಹಾಕಿ ಏಕೆ ಮಲಗಬಾರದು?


Team Udayavani, Jul 31, 2017, 7:35 AM IST

vastu.jpg

ಈಗಾಗಲೇ ಹಲವು ವಾಸ್ತು ವಿಚಾರಗಳನ್ನು, ದಿಕ್ಕುಗಳು ಹಾಗೂ ಪಂಚಭೂತಗಳ ನೆಲೆಯಲ್ಲಿ ಈ ಅಂಕಣದಲ್ಲಿ ವಿವರಿಸಲಾಗಿದೆ. ಮಾನವನ ಸಂಬಂಧವಾಗಿ ಅವನ ಚೈತನ್ಯ ಲವಲವಿಕೆ ಉತ್ಸಾಹಗಳೆಲ್ಲ ವಾಸ್ತುವಿನ ಆವರಣದಲ್ಲಿ ತಮ್ಮ ಶಕ್ತಿ ಅಥವಾ ದೌರ್ಬಲ್ಯಗಳನ್ನು ಪಡೆಯುತ್ತದೆ. ಇಡೀ ವಿಶ್ವವು ಒಂದು ಶಕ್ತಿಯ ನಕಾರಾತ್ಮಕ, ಸಕಾರಾತ್ಮಕ ಹೊಯ್ದಾಟಗಳ ನಡುವೆ ಅಳಿವು ಉಳಿವುಗಳನ್ನು ರೂಪಿಸಿಕೊಳ್ಳುತ್ತ ಇರುತ್ತದೆ. ಹೀಗಾಗಿ ವಿಶ್ವವವೇ ತನ್ನ ಅಸ್ತಿತ್ವಕ್ಕಾಗಿ ನಿರಂತರವಾಗಿ ತನ್ನನ್ನು ವಿಕಸನಗೊಳಿಸಿಕೊಳಿಸುತ್ತಿರುವಾಗ ವಿಶ್ವದ ಭಾಗವೇ ಆದ ನಾವು ಮನುಷ್ಯರು ಸಾಧಕ ಬಾಧಕಗಳ ನಡುವೆ ನಮ್ಮನ್ನು ಸಂರಕ್ಷಿಸಿಕೊಳ್ಳಬೇಕು ಇದು ಅನಿವಾರ್ಯ.

ನೀವು ಮಹತ್ವದ ಅಧ್ಯಯನದ ಸಂದರ್ಭದಲ್ಲಿ, ಪರಿಣಾಮಕಾರಿಯಾದ ಬರಹಗಳ ಸಮಯದಲ್ಲಿ ಅಥವಾ ಹೊಸತೇನನ್ನೋ ಸಂಶೋಧಿಸುತ್ತಿರುವಾಗ ಉತ್ತರ ದಿಕ್ಕಿನ ಕಡೆ ಮುಖ ಮಾಡಿರುವುದು ಸೂಕ್ತ. ಪೂರ್ವವೂ ಕೂಡ ಇದಕ್ಕೆ ಸೂಕ್ತವೇ. ನಿಮ್ಮ ಬ್ಯುಸಿನೆಸ್‌ ಅಥವಾ ಇನ್ನೇನೇ ವ್ಯವಹಾರಿಕ ವಿಚಾರಗಳನ್ನು ನಿಮ್ಮ ಗ್ರಾಹಕರೊಡನೆ
ಮಾತನಾಡುವಾಗಲೂ ಇಷ್ಟಾರ್ಥ ಸಿದಿಟಛಿಗಾಗಿ ಉತ್ತರ ಹಾಗೂ ಪೂರ್ವ ದಿಕ್ಕುಗಳನ್ನು ಗಮನಿಸಿ, ಮುಖ ಮಾಡಿಯೇ ಮಾತನಾಡಬೇಕು. ಬೆಳಕಿನ ದಿಕ್ಕು ಪೂರ್ವವಾದುದರಿಂದ ಉತ್ತರದಲ್ಲಿ ಕ್ರಿಯಾಶೀಲತೆಯನ್ನು ಚಿಮ್ಮಿಸುವ
ಸ್ಪಂದನಗಳಿರುವುದರಿಂದ ಈ ದಿಕ್ಕುಗಳು ಸಕಾರಾತ್ಮಕ ಫ‌ಲಿತಾಂಶಗಳಿಗೆ ಒಳ್ಳೆಯದು ಎಂದೇ ಅನ್ನಬೇಕು.

ಯೋಗೀಶ್ವರ ಶಕ್ತಿಯ ಸಂಪನ್ನತೆಯು ಒಗ್ಗೂಡಿ ಬರಲು ಉತ್ತರ ಹಾಗೂ ಪೂರ್ವ ದಿಕ್ಕುಗಳ ಫ‌ಲವಂತಿಕೆಯೇ ಉತ್ತಮವಾಗಿದೆ. ಆದರೆ ಅಡುಗೆಯನ್ನು ಮಾಡುವಾಗ ಉತ್ತರದಿಕ್ಕನ್ನು ಮುಖ ಮಾಡ ಮಾಡಬಾರದು. ತಿನ್ನುವುದಿರಲಿ,
ಕುಡಿಯುವುದಿರಲಿ ಉತ್ತರದಿಕ್ಕು ನಿಷಿದಟಛಿ ಎಂಬುದನ್ನು ಗಮನಿಸಿ. ಪೂರ್ವದತ್ತ ಮುಖಮಾಡಿ ಉತ್ತಮ ಆಹಾರ ಸಂವರ್ಧನಾ ತಯಾರಿಕಾ ಪ್ರಗತಿ ಸಾಫ‌ಲ್ಯ, ರುಚಿ, ಪ್ರಸನ್ನತೆಗಳೆಲ್ಲ ಪೂರ್ವ ದಿಕ್ಕಿನ ಕಡೆಯಿಂದಲೇ ಲಭ್ಯ. ಉತ್ತಮ
ಜೀರ್ಣಕ್ರಿಯೆ ಆರೋಗ್ಯದ ಸಂವರ್ಧನೆಗಳಿಗೆಲ್ಲ ಇದು ಸೂಕ್ತ. ಒಲೆ, ಸ್ಟೌವ್‌, ಗ್ಯಾಸ್‌ ಬರ್ನರ್‌ ಇತ್ಯಾದಿಗಳೆಲ್ಲ
ಪೂರ್ವಕ್ಕೆ ಸಂಯೋಜನೆಗೊಂಡ ಆಗ್ನೇಯ ದಿಕ್ಕಿನಲ್ಲಿ ಸ್ಥಿತಿಗೊಳ್ಳಬೇಕು. ಈ ವಿಚಾರವನ್ನು ಅಳತೆಬದಟಛಿವಾಗಿ
ರೂಪಗೊಳಿಸಲು ಮನೆಯ ಖಾಲಿ ಇರುವ ಜಾಗ ಅಥವಾ ಉತ್ತರ ಮತ್ತು ಪೂರ್ವ ಭಾಗದಲ್ಲಿ ವಿಸ್ತರಿಸಿಕೊಂಡಿರಲಿ. ಹೆಚ್ಚಿನ ಸೂ¿ ುìಪ್ರಕಾಶ ಪೂರ್ವದಿಂದ ಹೊರಹೊಮ್ಮುವಂತಿದ್ದು ಶಾಖವು ಸೂಕ್ತವಾಗಿ ಹೊರಹೋಗುವಂತೆ ನೈಸರ್ಗಿಕ ವಾತಾಯನ ವ್ಯವಸ್ಥೆ ಮಾಡಿರಬೇಕು. ದೈಹಿಕ ಸಮೃದಿಟಛಿಗೆ, ಆರೋಗ್ಯ ಚಟುವಟಿಕೆಗಳ ಗಟ್ಟಿತನಗಳಿಗೆ
ಇದರಿಂದ ದಾರಿ ಲಭ್ಯ. ಮಾನಸಿಕ ನೆಮ್ಮದಿಗೂ ಇದರಿಂದ ದಾರಿ ಸಾಧ್ಯ.

ಮಲಗುವ ಮನೆಯಲ್ಲಿ ಎಲೆಕ್ಟ್ರಾನಿಕ್‌ ಗೂಡ್ಸ್‌ ಬೇಡ. ಟಿ.ವಿ, ಕಂಪ್ಯೂಟರ್‌, ಲ್ಯಾಪ್‌ ಟ್ಯಾಪ್‌ ಉಪಯೋಗಗಳನ್ನು ಮಲಗುವ ಕೋಣೆಯಲ್ಲಿ ನಿಷೇಧಿಸಿ. ಮಲಗುವ ಕೋಣೆಯ ಒಂದು ಕ್ರಿಯಾಶಕ್ತಿಗೆ ಎಲೆಕ್ಟ್ರಾನಿಕ್‌ ಉಪಕರಣಗಳ
ಕಿರಣದಿಂದ ತೊಂದರೆಗೆ ದಾರಿಯಾಗುತ್ತದೆ. ದಯಮಾಡಿ ಇವುಗಳ ಉಪಯೋಗ ಮಲಗುವ ಮನೆಯಲ್ಲಿ ಬೇಡ. ಇದ್ದರೂ ಒಂದು ಮಿತಿ ಇರಲಿ. ಮಿತಿಮೀರಿದ ಉಪಯೋಗವೇನೇ ಇದ್ದರೂ ನಿಯಂತ್ರಿಸಿ. ಇದರಿಂದ ಕ್ಷೇಮ. ಹಾಸಿಗೆಯ
ಎದುರಿಗೆ ಕನ್ನಡಿಯನ್ನು ನಿಷೇಧಿಸಿ. ಇದ್ದರೂ ಕನ್ನಡಿಯನ್ನು ಬಟ್ಟೆಯಿಂದ ರಾತ್ರಿ ಮುಚ್ಚಿಡಿ. ಮನೆಯ ಎಲ್ಲಾ ಗೋಡೆಗಳಿಗೂ ಒಂದೇ ಬಣ್ಣದ ಅಲಂಕಾರ ಬೇಡ. ತುಳಸಿ ಗಿಡಗಳು ಮನೆಯ ವಾಯು ಸಿದಿಟಛಿಗಾಗಿ ಈಶಾನ್ಯ ದಿಕ್ಕಿನಲ್ಲಿ ಬೆಳೆದಿರಲಿ. ಮನೆಗಳನ್ನು ಭಾರಿ ತೊಲೆಗಳು ಅಚ್ಚು ಅಥವಾ ಅಡ್ಡಪಟ್ಟಿಗಳಿರುವ ತಾರಸಿಯ ಕೆಳಗಡೆ ಮಲಗಬೇಡಿ. ಭಯಾನಕ ಕನಸುಗಳಿಗೆ ಖನ್ನತೆಗಳಿಗೆ ಇದರಿಂದ ದಾರಿಯಾಗುತ್ತದೆ. ಇದೇ ರೀತಿ ಲೋಹದ ಮಂಚಗಳು ಹಾಸಿಗೆ ಹಾಸಲು ಉಪಯೋಗಿಸಬಾರದು. ಹೃದಯ ವ್ಯಾಧಿಗೆ ಇದು ದಾರಿಯಾಗುತ್ತದೆ. ಮೆದುಳಿಗೂ ಬಾಧೆ. ಮಂಚಗಳು ಕಟ್ಟಿಗೆಯದೇ ಇದ್ದರೆ ಒಳಿತು. ಈಶಾನ್ಯದ ಕಡೆ ಗರ್ಭಿಣಿಯರು ಮಲಗಿರಲಿ. ಉತ್ತರದ ಕಡೆ ತಲೆ
ಇಡುವುದು ಬೇಡ. ಗರ್ಭಿಣಿಯರು ಎಂದೇ ಅಲ್ಲ, ಯಾರಿಗೂ ಉತ್ತರದಿಕ್ಕಿನತ್ತ ಮಲಗುವಿಕೆ ಬೇಡ. ಕಾಂತೀಯವಾದ ಉದ್ವಿಗ್ನ ತರಂಗಗಳು ಆಶಾಂತಿಗೆ ಅಪ್ರಸನ್ನತೆಗೆ ಉದ್ವಿಗ್ನ ಮನಸ್ಥಿತಿಗೆ ಕಾರಣವಾಗುತ್ತದೆ. ಉತ್ತರ ಮತ್ತು ಪೂರ್ವ
ದಿಕ್ಕಿನ ಕಿಟಕಿಗಳು ತೆರೆದಿರಲಿ. ಹೊರಗಿನ ಜನ ಕೈ ಹಾಕದಂತೆ ಸೂಕ್ತವಾದ ಜಾಲರಿ ಜೋಡಣೆ ಆಗಿರಲಿ.

– ಅನಂತಶಾಸ್ತ್ರಿ

ಟಾಪ್ ನ್ಯೂಸ್

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

1-kalinga

Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್‌ ಕಾಳಿಂಗ’:ಅಧಿಕೃತವಾಗಿ ಘೋಷಣೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.