ಬಸವನ ಹುಳುಗಳ ಉಪಟಳ: ರೈತರಿಗೆ ಸಲಹೆ
Team Udayavani, Jul 31, 2017, 7:10 AM IST
ಮಡಿಕೇರಿ: ಬಸವನ ಹುಳು ಎಂದರೆ ಹೊಸದೇನು ಅಲ್ಲ. ಕೊಡಗಿನಂಥ ಪರಿಸರದಲ್ಲಿ ಮಳೆಗಾಲದ ತೇವಾಂಶವಿರುವ ಜಮೀನಿನಲ್ಲಿ ಸ್ವಾಭಾವಿಕವಾಗಿ ಕಾಣುವಂತಹ ಒಂದು ಹುಳು.
ಇದು ವೈಜ್ಞಾನಿಕವಾಗಿ ಅಚಾಟಿನಿಡೇ ಕುಟುಂಬಕೆ ಸೇರಿದ್ದು ಅಚಾಟಿನಾ ನಾಮಾಂಕಿತದೊಂದಿಗೆ ಸಾಮಾನ್ಯವಾಗಿ ಜೈಂಟ್ ಆಫ್ರಿಕನ್ ಸ್ನೆ„ಲ್ ಎಂದು ಕರೆಯುತ್ತಾರೆ. ಹಿಂದೆ ಅವುಗಳಿಂದ ಅಂಥ ಹಾನಿಯ ಅನುಭವ ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪೂರಕ ವಾತಾವರಣದಿಂದ ಅವುಗಳ ಸಂತಾನೋತ್ಪತ್ತಿ ಹೆಚ್ಚಾಗಿ ರೈತ ರಲ್ಲಿ ಆತಂಕ ಮೂಡಿಸಿದೆ.
ಇದು ಒಂದು ಸ್ವಾಭಾವಿಕ ಕ್ರಿಯೆಯಿಂದ ಬರುವ ಹುಳವಾಗಿದ್ದು ಇದರ ಚಟುವಟಿಕೆ ಮಳೆಗಾಲದಿಂದ ಪ್ರಾರಂಭವಾಗಿ ಚಳಿಗಾಲದವರೆಗೂ ಇರುತ್ತದೆ. ಮಳೆಗಾಲದಲ್ಲಿ ಗಿಡ, ಎಲೆ, ಕಾಂಡಗಳು ತುಂಬಾ ಮೃದುವಾಗಿದ್ದು ಈ ಹುಳುಗಳು ಅವುಗಳ ಮೃದು ಭಾಗದಲ್ಲಿರುವ ಪತ್ರಹರಿತ್ತನ್ನು ಕೆರೆದು ತಿನ್ನುವುದರಿಂದ ಗಿಡಗಳಲ್ಲಿ ಆಹಾರ ತಯಾರಿಕೆಗೆ ಬೇಕಾದ ಕ್ಲೋರೋಫಿಲ್ ಅಂಶ ಕಡಿಮೆಯಾಗಿ ಗಿಡಗಳ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತದೆ.
ಅಧುನಿಕ, ವೈಜ್ಞಾನಿಕ ತೋಟಗಾರಿಕೆ ಪದ್ಧತಿ ಅಳವಡಿಕೆ ಸಂರ್ದರ್ಭದಲ್ಲಿ ಕೃಷಿ ಪರಿಕರಗಳ ಬೆಲೆ ಹೆಚ್ಚಾಗಿರುವುದರಿಂದ ಬೆಳೆಯ ಬೆಳವಣಿಗೆಯ ಖರ್ಚು ಅಧಿಕವಾಗುವ ಸಂಭವವಿದ್ದು ಎಲ್ಲ ವಿಧಗಳಲ್ಲೂ ವ್ಯವಹರಿಸಿ,
ವಿಚಾರಿಸಿ, ಚರ್ಚಿಸಿ, ಸಾಧ್ಯ ವಾದ ಮಟ್ಟಿಗೆ ಖರ್ಚು ಕಡಿಮೆ ಮಾಡಿ ಲಾಭ ಮಾಡುವುದು ತೋಟಗಾರಿಕೆ ಇಲಾಖೆಯ ಕರ್ತವ್ಯಗಳಲ್ಲೊಂದು.
ಕರ್ನಾಟಕ ರಾಜ್ಯಾದ್ಯಂತ ಈ ವರ್ಷದ ಜೂನ್‌ಜುಲೈ (ಮೊದಲನೇ ಎರಡು ವಾರ) ತಿಂಗಳ ಹವಾಮಾನ ಗಮನಿಸಿದಾಗ ಮೋಡ ಕವಿದ ವಾತಾವರಣವಿದ್ದು ಮನುಷ್ಯನಿಂದ ಹಿಡಿದು ಗಿಡಗಳವರೆಗೂ ಹಲವು ತರಹದ ರೋಗ ಹಾಗೂ ಕೀಟಗಳ ಅಭಿವೃದ್ಧಿಗೆ ಹೇಳಿಮಾಡಿಸಿದ ಹಾಗಿತ್ತು. ಸಾಮಾನ್ಯವಾಗಿ ಕೊಡಗು ಜಿಲ್ಲೆಯ ಹವಾಮಾನ ಈ ಎರಡು ತಿಂಗಳಲ್ಲಿ ಹೀಗೆಯೇ ಇರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆ ಪ್ರಯುಕ್ತ ಕೊಡಗಿನ ಹವಾಮಾನ ಆಧರಿಸಿ ಬಸವನ ಹುಳುವಿನ ಭಾದೆ ನಿಯಂತ್ರಿಸಲು ಈ ಕೆಳಗಿನ ಹತೋಟಿ ಕ್ರಮಗಳನ್ನು ತಿಳಿಸಲಾಗಿದೆ.
ಹತೋಟಿ ಕ್ರಮಗಳು: ಸರಿಯಾದ ಸಮಯಕ್ಕೆ ನೆರಳು ನಿಂಯತ್ರಣ ಮಾಡುವುದರಿಂದ ಸೂರ್ಯನ ಕಿರಣಗಳು ಒಳಹೊಕ್ಕು ರೋಗ ಹಾಗು ಕೀಟಗಳನ್ನು ನಿಂಯತ್ರಿಸುತ್ತದೆ. ಇವುಗಳಲ್ಲಿ ಕಂಬಳಿ ಹುಳು, ಬಸವನ ಹುಳು ಪ್ರಮುಖವಾಗಿವೆ.
ಕೈಯಿಂದ ತೆಗೆಯುವುದು ಹುಳಗಳನ್ನು ಹಾಗೂ ಅದರ ಚಿಪ್ಪುಗಳನ್ನು ಗುರುತಿಸಿ ಕೈಯಿಂದ ತೆಗೆದು ನಾಶ
ಪಡಿಸಬೇಕು. ಗೋಣಿಚೀಲಗಳನ್ನು ನೀರಿನಲ್ಲಿ ನೆನೆಸಿ ಅದನ್ನ ಕೀಟ ಬಾಧೆಯಿರುವ ತೋಟದ ವಿವಿಧ ಭಾಗ ಗಳಲ್ಲಿ ಹರಡಬೇಕು, ಪ್ರೌಢಾವಸ್ಥೆಯಲ್ಲಿರುವ ಕೀಟಗಳು ತೇವಾಂಶವನ್ನು ಇಷ್ಟಪಡುವುದರಿಂದ ತೇವಾಂಶ ಇರುವ ಚೀಲದ ಕೆಳಗೆ ಹೋಗಿ ಸೇರಿಕೊಳ್ಳುತ್ತದೆ. ಅನಂತರ ಅದನ್ನು ತೆಗೆದು ಸುಡಬೇಕು. ಕೆಲವೊಮ್ಮೆ ಬೆಳ್ಳುಳ್ಳಿ ರಸ ಅಥವಾ ಉಪ್ಪನ್ನು ನೀರಿನಲ್ಲಿ ಬೆರೆಸಿ ಸ್ಪ್ರೆà ಮಾಡುವುದರಿಂದ ಮೃದುವಾದ ಹುಳಗಳನ್ನು ನಾಶಪಡಿಸಬಹುದು.
ರಾಸಾಯನಿಕ ಹತೋಟಿ ಕ್ರಮ
ಮೆಟಾಲ್ಡಿಹೈಡ್ ಗುಳಿಗೆಗಳನ್ನು ತೋಟದ ವಿವಿಧ ಭಾಗಗಳಲ್ಲಿ ಇಡುವುದರಿಂದ ಹುಳುಗಳು ಅಲ್ಲಿಗೆ ಆಕರ್ಷಿತವಾಗುತ್ತದೆ. ಈ ಗುಳಿಗೆಗಳನ್ನು ಮಾರ್ಚ್ ಎಪ್ರಿಲ್ ತಿಂಗಳು ಅಥವಾ ಮಳೆಗಾಲ ಪ್ರಾರಂಭವಾಗುವ ಮುಂಚಿತವಾಗಿ ಅಥವಾ ಮಳೆಗಾಲ ಮುಗಿದ ಕೂಡಲೇ ಬಳಸುವುದರಿಂದ ಪ್ರೌಢಾವಸ್ಥೆಯಲ್ಲಿರುವ ಹುಳಗಳು ಮೊಟ್ಟೆ ಇಟ್ಟು ಸಂತಾನೋತ್ಪತ್ತಿಯಾಗುವುದನ್ನು ತಡೆಯಬಹುದು. ಸಮಸ್ಯೆ ಕಡಿಮೆ ಇದ್ದಲಿ ತಾಳ್ಮೆ ವಹಿಸಿದರೆ ಸಮಯ ಹಾಗೂ ವಾತಾವರಣ ಬದಲಾವಣೆಯಿಂದ ಕೂಡ ರೋಗ ಹಾಗೂ ಕೀಟಗಳ ನಿಯಂತ್ರಣ ಸಾಧ್ಯ.
ಸಂಪರ್ಕ ಮಾಹಿತಿ
ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ದೂ. ಸಂಖ್ಯೆ: 08272-228432, ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಮಡಿಕೇರಿ ದೂ: 08272-220555, ಹಾರ್ಟಿ ಕ್ಲಿನಿಕ್ (ಮಾಹಿತಿ ಮತ್ತು ಸಲಹಾ ಕೇಂದ್ರ) ದೂ: 08272-220232, ಹಿರಿಯ ಸಹಾಯಕ ತೊಟಗಾರಿಕೆ ನಿರ್ದೇಶಕರು (ಜಿಪಂ), ಸೋಮವಾರಪೇಟೆ ದೂ: 08276-281364, ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ), ಪೊನ್ನಂಪೇಟೆ ದೂ: 08274-249637 ರವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಮಾಹಿತಿ ಮತ್ತು ಸಲಹ ಕೇಂದ್ರದ ವಿಷಯ ತಜ್ಞರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.