“ಆಟಿಯ ಕಷ್ಟ ದಿನಗಳ ಅರಿವು ಮೂಡಿಸಿ’
Team Udayavani, Jul 31, 2017, 6:15 AM IST
ಬಪ್ಪಳಿಗೆ : ಹಿಂದಿನ ಕಾಲದ ಆಟಿ ಆಚರಣೆಗೂ ಇಂದಿಗೂ ತುಂಬಾ ವ್ಯತ್ಯಾಸವಿದೆ. ಅಂದಿನ ಕಷ್ಟ ಇಂದಿನ ಮಕ್ಕಳಿಗೆ ಗೊತ್ತಿಲ್ಲ. ಇದನ್ನು ತಿಳಿಹೇಳುವ ಜವಾಬ್ದಾರಿ ಹೆತ್ತವರಿಗೆ ಸೇರಿದ್ದು ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಹೇಳಿದರು.
ನಗರದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಬಿಲ್ಲವ ಮಹಿಳಾ ವೇದಿಕೆ ವತಿಯಿಂದ ರವಿವಾರ ನಡೆದ ಬಿರುವೆರ್ನ ಆಟಿಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೆಟ್ಟು- ಗಲಾಟೆಗೆ ಯುವಕರು ಬಲಿಯಾಗುವ ಪ್ರಸಂಗ ನಮ್ಮ ಕಣ್ಣ ಮುಂದೇ ಇದೆ. ಅದರಲ್ಲೂ ಬಿಲ್ಲವ ಸಮುದಾಯದ ಯುವಕರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದನ್ನು ನಿವಾರಿಸುವ ದೃಷ್ಟಿಯಿಂದ ಸಮಾಜ ಒಂದಾಗಬೇಕು. ಒಗ್ಗಟ್ಟಿನಿಂದ ಮುಂದು ವರಿದಾಗ ಯಶಸ್ಸು ಸಾಧ್ಯ ಎಂದರು.
ಬದುಕಿನ ಹೋರಾಟ
ಆಟಿ ವಿಷಯದ ಬಗ್ಗೆ ಮಾತನಾಡಿದ ಪತ್ರಕರ್ತ ನರೇಶ್ ಸಸಿಹಿತ್ಲು, ಆಟಿ ಆಚರಣೆ ಎನ್ನುವುದು ಬದುಕಿನ ಹೋರಾಟ. ತಿನ್ನಲು ಏನೂ ಇಲ್ಲದ ದಿನಗಳ ಚಿತ್ರಣವದು. ಆದರೆ ಇಂದು ಕಾಲ ಬದಲಾಗಿದೆ. ಬದುಕಿನ ನಿರ್ವ ಹಣೆಗೆ ಬೇಕಾದಷ್ಟು ಸಂಪತ್ತು ನಮ್ಮ ಬಳಿ ಇದೆ. ಹೀಗೆ ಬದುಕು ಬದಲಾಗುವಾಗ ಆಟಿ ಆಚರಣೆ ಇನ್ನೊಂದು ಮಗ್ಗುಲಿಗೆ ಹೊರಳಿದೆ ಎಂದರು.
ಹೆತ್ತವರೇ ಪರೋಕ್ಷ ಕಾರಣ
ಬಿಲ್ಲವರ ಸಂಘದ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತೇವೆ. ಬೆಳಗ್ಗೆ- ಸಂಜೆ ಓದುವಂತೆ ಒತ್ತಡ ತರುತ್ತೇವೆ. ಒಳ್ಳೆಯ ಶಿಕ್ಷಣ ಪಡೆದ ಮಕ್ಕಳು ಬಳಿಕ ಹೆತ್ತವರ ಕೈಗೆ ಸಿಗುವುದೇ ಇಲ್ಲ. ಇದು ದುರಂತ. ಆಧುನಿಕತೆಯಲ್ಲಿ ಮಕ್ಕಳು ದಾರಿ ತಪ್ಪಲು ಹೆತ್ತವರೇ ಪರೋಕ್ಷ ಕಾರಣರಾಗಿದ್ದಾರೆ. ಇದರ ಬಗ್ಗೆ ಎಚ್ಚೆತ್ತು ಕೊಳ್ಳುವ ಅಗತ್ಯವಿದೆ ಎಂದರು.
ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಪೂಜಾ ವಸಂತ್ ಅಧ್ಯಕ್ಷತೆ ವಹಿಸಿ ದ್ದರು. ಉಪ್ಪಿನಂಗಡಿ ವಲಯ ಅರಣ್ಯಾ ಧಿಕಾರಿ ಸಂಧ್ಯಾ ಸಚಿನ್, ಯುವ ವಾಹಿನಿ ಪುತ್ತೂರು ಘಟಕ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು, ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಜತ್ ಕುಮಾರ್ ಎನ್.ಎಸ್., ಮಹಿಳಾ ವೇದಿಕೆ ಅಧ್ಯಕ್ಷೆ ಪೂಜಾ ವಸಂತ್ ಉಪಸ್ಥಿತರಿದ್ದರು. ಮಹಿಳಾ ವೇದಿಕೆ ಸಂಚಾಲಕ ಸಂಜೀವ ಪೂಜಾರಿ ಕುರೆಮಜಲು ಅವರನ್ನು ಸಮ್ಮಾನಿ ಸಲಾ ಯಿತು. ಇದೇ ವೇಳೆ ಗ್ರಾಮ ಸಮಿತಿ ಅಧ್ಯಕ್ಷರನ್ನು ಗೌರವಿಸಲಾಯಿತು. ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಜಯಶ್ರೀ ಪೆರಿಯಡ್ಕ ಪ್ರಾಸ್ತಾವಿಸಿದರು. ನವ್ಯಾ ದಾಮೋದರ್ ಸ್ವಾಗತಿಸಿ, ಸಂಗೀತಾ ಬಪ್ಪಳಿಗೆ ವಂದಿಸಿದರು. ದೇವಕಿ, ಶಶಿಧರ್ ಕಿನ್ನಿಮಜಲು ನಿರೂಪಿಸಿದರು. ಬಳಿಕ ಆಟಿ ಕೂಟದ ಗೊಬ್ಬುಲು, ತುಳುನಾಡª ಜನಪದ ವೈವಿಧ್ಯ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.