“ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತಕ ಚಟುವಟಿಕೆ ಪೂರಕ’
Team Udayavani, Jul 31, 2017, 7:35 AM IST
ಪುತ್ತೂರು : ಸಾಮೆತ್ತಡ್ಕ ಸುದಾನ ನ್ಪೋರ್ಟ್ಸ್ ಕ್ಲಬ್‌ನಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡ ಪುತ್ತೂರು, ಸುಳ್ಯ ಹಾಗೂ ಬಂಟ್ವಾಳ ತಾಲೂಕು ಮಟ್ಟದ ವಿವಿಧ ವಯೋಮಾನದ ಬಾಲಕ-ಬಾಲಕಿಯರ ಮತ್ತು ಮಹಿಳೆಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಮಾರೋಪ ಸಮಾರಂಭ ರವಿವಾರ ನಡೆಯಿತು.
ಸಮಾರೋಪದ ಸಮಾರಂಭದಲ್ಲಿ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಗೋವಿಂದೇಗೌಡ ಬಹುಮಾನ ವಿತರಿಸಿದರು. ಅನಂತರ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಕ್ರೀಡಾ ಕ್ಷೇತ್ರ ಉತ್ತಮ ಅವಕಾಶ ಒದಗಿಸುತ್ತದೆ ಎಂದು ಹೇಳಿದರು.
ಸಾಧಕರ ಅನುಭವ ಸ್ಫೂರ್ತಿಯಾಗಲಿ
ಪರಿಶ್ರಮದಿಂದ ಸಾಧನೆ ತೋರಲು ಸಾಧ್ಯವಾಗುತ್ತದೆ ಎನ್ನು ವುದಕ್ಕೆ ಸೈನಾ ನೆಹ್ವಾಲ್, ಪಿ.ವಿ. ಸಿಂಧೂ ಅವರಂತಹ ಸಾಧಕರು ಸಾಕ್ಷಿ ಎಂದ ಅವರು, ಗುರಿ ಸಾಧನೆಗೆ ಅಡಿಯಿಡಲು ಏಕಾಗ್ರತೆ, ಕಠಿನ ಅಭ್ಯಾಸ ಆವಶ್ಯಕತೆ ಇದ್ದು, ಸಾಧಕರ ಜೀವನ ಅನುಭವ ನಿಮಗೆಲ್ಲರಿಗೂ ಸ್ಫೂರ್ತಿಯಾಗಿರಲಿ. ಇಂತಹ ಕ್ರೀಡಾಕೂಟಗಳು ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ಕಲ್ಪಿಸುತ್ತದೆ. ಭವಿಷ್ಯದ ಬೆಳವಣಿಗೆಗೂ ಒಂದು ಅತ್ಯುತ್ತಮ ಅಡಿಪಾಯ ಆಗಬಲ್ಲುದು ಎಂದು ಹೇಳಿದರು.
ನಿರಂತರ ಪ್ರೋತ್ಸಾಹ
ಸಮಾರಂಭದ ಅಧ್ಯಕ್ಷತೆ ವಹಿಸಿದ ಸುದಾನ ನ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಭುಜಂಗ ಆಚಾರ್ಯ ಮಾತನಾಡಿ, ನ್ಪೋರ್ಟ್ಸ್ ಕ್ಲಬ್ ಮೂಲಕ ರಜಾ ದಿನಗಳಲ್ಲಿ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ. ಒಳಾಂಗಣ ಕ್ರೀಡೆಗೆ ಸಂಬಂಧಿಸಿ, ಇಲ್ಲಿ ನಿರಂತರ ಪ್ರೋತ್ಸಾಹ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮುಕ್ತ ಓಪನ್ ಪಂದ್ಯಾವಳಿ ಆಯೋಜಿಸುವ ಇರಾದೆ ಇದೆ ಎಂದರು.
ವಿಶೇಷ ಆಹ್ವಾನಿತರಾಗಿ ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ, ತರಬೇತುದಾರ ಪಿ.ಬಿ. ಪಾಪನ್ ಕುಮಾರ್ ಪಾಲ್ಗೊಂಡಿದ್ದರು. ಸುದಾನ ನ್ಪೋರ್ಟ್ಸ್ ಕ್ಲಬ್ ಕೋಶಾಧಿಕಾರಿ ಆಸ್ಕರ್ ಆನಂದ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೇಮಾನಂದ ಅವರು ವಂದಿಸಿದರು.
ಫಲಿತಾಂಶದ ವಿವರ
11 ವರ್ಷದೊಳಗಿನ ಸಿಂಗಲ್ಸ್ ಬಾಲಕಿಯರ ವಿಭಾಗ: ಅಪೂರ್ವ (ಪ್ರ.), ಹರ್ಷಿತಾ (ದ್ವಿ.) ಬಾಲಕರ ವಿಭಾಗ : ಮನ್ವಿತ್ (ಪ್ರ.), ಅಶ್ವಿನ್ (ದ್ವಿ.)13 ವರ್ಷದೊಳಗಿನ ಬಾಲಕಿಯರ ವಿಭಾಗ: ಸ್ಫೂರ್ತಿ ರೈ (ಪ್ರ.), ಬಿಂದು ಶ್ರೀ (ದ್ವಿ.)
15 ವರ್ಷದೊಳಗಿನ ಬಾಲಕಿಯರ ವಿಭಾಗ: ಸ್ಫೂರ್ತಿ (ಪ್ರ), ನಿಧಿ (ದ್ವಿ), ಬಾಲಕರು : ಬೆಲ್‌ಹರ್ಟ್ (ಪ್ರ.), ಶಾಹುಲ್ (ದ್ವಿ.)
18 ವರ್ಷದೊಳಗಿನ ಬಾಲಕರು: ಯಜ್ಞೆàಶ್ (ಪ್ರ.), ಅಬೂಬಕ್ಕರ್ (ದ್ವಿ.), ಬಾಲಕಿಯರು: ಹಸ್ತಾ ಜೈನ್ (ಪ್ರ.), ಸ್ಪೂರ್ತಿ (ದ್ವಿ.)
ಫಲಿತಾಂಶದ ವಿವರ
11 ವರ್ಷದೊಳಗಿನ ಸಿಂಗಲ್ಸ್ ಬಾಲಕಿಯರ ವಿಭಾಗ: ಅಪೂರ್ವ (ಪ್ರ.), ಹರ್ಷಿತಾ (ದ್ವಿ.) ಬಾಲಕರ ವಿಭಾಗ : ಮನ್ವಿತ್ (ಪ್ರ.), ಅಶ್ವಿನ್ (ದ್ವಿ.),
13 ವರ್ಷದೊಳಗಿನ ಬಾಲಕಿಯರ ವಿಭಾಗ: ಸ್ಫೂರ್ತಿ ರೈ (ಪ್ರ.), ಬಿಂದು ಶ್ರೀ (ದ್ವಿ.),
15 ವರ್ಷದೊಳಗಿನ ಬಾಲಕಿಯರ ವಿಭಾಗ: ಸ್ಫೂರ್ತಿ (ಪ್ರ), ನಿಧಿ (ದ್ವಿ), ಬಾಲಕರು : ಬೆಲ್‌ಹರ್ಟ್ (ಪ್ರ.), ಶಾಹುಲ್ (ದ್ವಿ.),
18 ವರ್ಷದೊಳಗಿನ ಬಾಲಕರು: ಯಜ್ಞೆàಶ್ (ಪ್ರ.), ಅಬೂಬಕ್ಕರ್ (ದ್ವಿ.), ಬಾಲಕಿಯರು: ಹಸ್ತಾ ಜೈನ್ (ಪ್ರ.), ಸ್ಪೂರ್ತಿ (ದ್ವಿ.).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.