ಮರ ತೆರವಿಗೆ ಪರ್ಯಾಯವಾಗಿ ಗಿಡ ನೆಡಲು 1.10 ಕೋ.ರೂ.


Team Udayavani, Jul 31, 2017, 8:30 AM IST

mara-teravu.jpg

ಪುತ್ತೂರು: ಬಂಟ್ವಾಳ- ಸಕಲೇಶಪುರ ಚತುಷ್ಪಥ ರಸ್ತೆ ಹಾದು ಹೋಗುವ ಪುತ್ತೂರು, ಬಂಟ್ವಾಳದ ರಸ್ತೆ ವಿಸ್ತರಿತ ಪ್ರದೇಶದ 3,113 ಮರಗಳ ತೆರವಿಗೆ ಪರಿಹಾರವಾಗಿ ಸಸಿ ನೆಡಲು ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ 1.10 ಕೋ.ರೂ. ಮೊತ್ತ ವನ್ನು ರಾಜ್ಯ ಅರಣ್ಯ ಇಲಾಖೆಗೆ ಪಾವತಿಸಿದೆ.

ಅಡ್ಡಹೊಳೆ-ಬಿ.ಸಿ.ರೋಡ್‌ ಚತುಷ್ಪಥ ಹೆದ್ಧಾರಿ ನಿರ್ಮಾಣದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ 10,197 ಮರ ಕಡಿಯಲು ಟೆಂಡರ್‌ ನೀಡಿದೆ. ಆದರೆ 2ನೇ ಸರ್ವೇ ವೇಳೆ ಮರಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಒಟ್ಟು 15,000 ಮರಗಳನ್ನು ಕಡಿಯಲು ಗುರುತು ಸಹಿತ ಟೆಂಡರ್‌ ನೀಡಿದೆ. ಇದರಲ್ಲಿ ಉಪ್ಪಿನಂಗಡಿ, ಪುತ್ತೂರು, ಪಂಜ, ಬಂಟ್ವಾಳ ವಲಯ ಅರಣ್ಯ ವ್ಯಾಪ್ತಿಯಲ್ಲಿ 3,113 ಮರಗಳು ಸೇರಿವೆ.

63 ಕಿ.ಮೀ. ರಸ್ತೆ
ಶಿರಾಡಿ ಅಡ್ಡಹೊಳೆಯಿಂದ ಬಂಟ್ವಾಳದ ತನಕ ಒಟ್ಟು 63.5 ಕಿ.ಮೀ. ರಸ್ತೆಯು ಚತುಷ್ಪಥಗೊಳ್ಳಲಿದ್ದು, ಈಗ ಗುಂಡ್ಯದಿಂದ ಉಪ್ಪಿನಂಗಡಿ ತನಕ ರಸ್ತೆಗೆ ಹೊಂದಿಕೊಂಡ ಮರಗಳ ತೆರವು ಕಾರ್ಯ ಪ್ರಗತಿಯಲ್ಲಿದೆ. ಸಕಲೇಶಪುರ ತಾಲೂಕಿನ 12 ಗ್ರಾಮ, ದ.ಕ. ಜಿÇÉೆಯ ಶಿರಾಡಿ, ಶಿರಿವಾಗಿಲು, ನೂಜಿಬಾಳ್ತಿಲ, ನೆಲ್ಯಾಡಿ, ಕೊನಾಲು, ಗೋಳಿತಟ್ಟು, ಬಜತ್ತೂರು, ಉಪ್ಪಿನಂಗಡಿ, ನೆಕ್ಕಿಲಾಡಿ, ಬೆಳ್ತಂಗಡಿ ತಾಲೂಕಿನ ರೆಖ್ಯಾ, ಬಂಟ್ವಾಳ ತಾಲೂಕಿನ ಬಿಳಿಯೂರು, ಪೆರ್ನೆ, ಕೆದಿಲ, ಮಾಣಿ, ಬಾಳ್ತಿಲ, ಗೋಳ್ತಮಜಲು, ಕಸಬಾ ಪಾಣೆಮಂಗಳೂರು, ನರಿಕೊಂಬು, ಬಿ.ಮೂಡ ಪ್ರದೇಶದಲ್ಲಿ ಮರ ಕಡಿಯಲು ಗಡಿ ಗುರುತಿಸಲಾಗಿದೆ.

1.10 ಕೋಟಿ ರೂ. ಪಾವತಿ
ಮರದ ಈಗಿನ ಧಾರಣೆ ಅಂಕಿ ಅಂಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 1.10 ಕೋ.ರೂ. ಅನ್ನು ಪಾವತಿಸಿದೆ. ಪಂಜ ವಲಯದ 75 ಮರಗಳಿಗೆ 2.78 ಲ.ರೂ., ಉಪ್ಪಿನಂಗಡಿ ವಲಯದ 610 ಮರಗಳಿಗೆ 24.64 ಲ.ರೂ., ಪುತ್ತೂರು ವಲಯದ ವ್ಯಾಪ್ತಿಯ 937 ಮರಗಳಿಗೆ 36.74 ಲ.ರೂ, ಬಂಟ್ವಾಳ ವಲಯ ವ್ಯಾಪ್ತಿಯ 1,491 ಮರಗಳಿಗೆ 46.27 ಲಕ್ಷ ರೂ. ಪಾವತಿಸಲಾಗಿದೆ.

ಪಾವತಿ ಮೊತ್ತದಲ್ಲಿ ಸಸಿ ನೆಡುವಿಕೆ
ಚೆನ್ನೈ ಹಸಿರು ಪೀಠ ಸ್ವಂತ ಜಾಗ ಸಹಿತ  ಅರಣ್ಯ ಪ್ರದೇಶದಲ್ಲಿ ಮರ ಕಡಿಯಲು ಅವಕಾಶ ಇಲ್ಲ ಎಂಬ ಆದೇಶ ಹೊರಡಿಸಿದೆ. ಒಂದು ವೇಳೆ ತೆರವು ಅನಿವಾರ್ಯ ಎಂದಾದರೆ, ಅದಕ್ಕೊಂದು ಅವಕಾಶ ಇದೆ. ಕಡಿದ ಒಂದು ಮರಕ್ಕೆ ಪರ್ಯಾಯವಾಗಿ ಹತ್ತು ಗಿಡ ನೆಡುವುದು ಇದರ ಪರಿಹಾರ ಕ್ರಮ. ಇದೇ ಅನ್ವಯ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಕಡಿದ ಮರದ ಪರಿಹಾರ ಮೊತ್ತವನ್ನು ಪ್ರಾಧಿಕಾರ ಅರಣ್ಯ ಇಲಾಖೆಗೆ ಪಾವತಿಸಿದೆ. ಈ ಮೊತ್ತದಲ್ಲಿ ಅರಣ್ಯ ಇಲಾಖೆ ತನ್ನ ಅರಣ್ಯ ಭೂಮಿಯಲ್ಲಿ ಹಾಗೂ ಸ್ಥಳ ಕೊರತೆ ಇದ್ದರೆ ಕಂದಾಯ ಇಲಾಖೆ ಗುರುತಿಸುವ ಸ್ಥಳದಲ್ಲಿ 1 ಮರದ ಬದಲಾಗಿ 15 ಸಸಿ ನೆಡಬೇಕು. ಅದಕ್ಕಾಗಿ 1.10 ಕೋ.ರೂ. ಬಳಸಬೇಕು.

ಲೆಕ್ಕಕ್ಕಿಂತ ಅಧಿಕ ಮರ ತೆರವು..!
ಆದರೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿದ ಅನುಮತಿಗಿಂತ ಅಧಿಕ ಮರಗಳನ್ನು ತೆರವು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಗೋಳಿತೊಟ್ಟು ಮೀಸಲು ಅರಣ್ಯ ಸಹಿತ  ಇತರ ಅರಣ್ಯ ಪ್ರದೇಶದಲ್ಲಿ 7,992 ಹಾಗೂ ಸರಕಾರಿ ಭೂಮಿಯಲ್ಲಿದ್ದ 4,870 ಮರಗಳನ್ನು ತೆರವು ಮಾಡಲಾಗುತ್ತಿದೆ. ಆದರೆ ಟೆಂಡರ್‌ ಪಡೆದವರು ಇಲಾಖೆ ಗುರುತು ಮಾಡಿದ ಮರಗಳ ಜತೆಗೆ ಇತರ ಮರಗಳನ್ನೂ ಕಡಿಯುತ್ತಿರುವುದು ಕಂಡುಬಂದಿದೆ. ನೆಲ್ಯಾಡಿ, ಗುಂಡ್ಯ, ಗೋಳಿತೊಟ್ಟು ವ್ಯಾಪ್ತಿಯಲ್ಲಿ ಹೆದ್ದಾರಿಯುದ್ದಕ್ಕೂ ಕಡಿದ ಮರಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂಬುದು ಪರಿಸರವಾದಿಗಳ ಆರೋಪ.

ಎಲ್ಲೆಲ್ಲಿ  ಎಷ್ಟೆಷ್ಟು..?
ಪಂಜ ವಲಯ ವ್ಯಾಪ್ತಿಯ ನೆಲ್ಯಾಡಿ, ನೂಜಿ ಬಾಳ್ತಿಲದಲ್ಲಿ 15 ಮರ, ಉಪ್ಪಿನಂಗಡಿ ವಲಯ ವ್ಯಾಪ್ತಿಯ ಉಪ್ಪಿನಂಗಡಿ, ಕೌಕ್ರಾಡಿ, ರೆಖ್ಯಾ ಗ್ರಾಮ, ಶಿರಾಡಿಯಲ್ಲಿ 237, ಪುತ್ತೂರು ವಲಯ ಅರಣ್ಯ ವ್ಯಾಪ್ತಿಯ ಗೋಳಿತೊಟ್ಟು, ಕರುವೇಲುವಿನಲ್ಲಿ 937, ಬಂಟ್ವಾಳ ವಲಯ ವ್ಯಾಪ್ತಿಯ ಪೆರ್ನೆ, ಕಡೇಶಿವಾಲಯ, ಕೆದಿಲ, ಪೆರಾಜೆ, ಮಾಣಿ, ಬಾಳ್ತಿಲದಲ್ಲಿ 957 ಮರಗಳ ತೆರವಿಗೆ ಒಪ್ಪಿಗೆ ಸೂಚಿಸಲಾಗಿತ್ತು.

- ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

1-dr

Veerendra Heggade 77ನೇ ವರ್ಷಕ್ಕೆ ಪಾದಾರ್ಪಣೆ: ಗಣ್ಯರಿಂದ ಶುಭ ಹಾರೈಕೆ

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.